ದುಬೈ, ಮಾ.27: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ತಮ್ಮ ಗಡುವನ್ನು ಏಪ್ರಿಲ್ 6 ರವರೆಗೆ ವಿಸ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಟಂಪ್ ಈ ಹೇಳಿಕೆ ನೀಡಿದ್ದಾರೆ.
ಇರಾನ್‌ನ ಇಂಧನ ಸ್ಥಾವರಗಳ ಮೇಲೆ ಬಾಂಬ್ ದಾಳಿ ಮಾಡುವುದನ್ನು ಕೂಡ ನಿಲ್ಲಿಸುವುದಾಗಿ ಅವರು ಹೇಳಿದರುಎರಡೂ ದೇಶಗಳು ಕದನ ವಿರಾಮ ಮಾತುಕತೆಗಳ ನಡುವೆ ತಮ ಸ್ಥಾನಗಳನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಸಾವಿರಾರು ಅಮೆರಿಕ ಪಡೆಗಳು ಇರಾನ್ ಸುತ್ತುವರೆದಿದ್ದು , ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹೆಜ್ಬೊಲ್ಲಾ ವಿರುದ್ಧ ಹೋರಾಡಲು ಇಸ್ರೇಲ್ ದಕ್ಷಿಣ ಲೆಬನಾನ್‌ಗೆ ಹೆಚ್ಚಿನ ಸೈನ್ಯವನ್ನು ಸೇರಿಸಿದೆ .
ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಇದರ ನಡುವೆ ಇರಾನಿನ ಕ್ಷಿಪಣಿಗಳ ದಾಳಿಯ ಬಗ್ಗೆ ಇಸ್ರೇಲ್‌ನಲ್ಲಿ ಸೈರನ್‌ಗಳು ಮೊಳಗಿವೆ ಮತ್ತು ಗಲ್‌್ಫ ರಾಷ್ಟ್ರಗಳು ದಾಳಿಯನ್ನು ತಡೆಯಲು ಸಿದ್ದತೆ ಮಾಡಿದೆ ಇರಾನ್‌ನ ರಾಜಧಾನಿ ಮತ್ತು ಇತರ ನಗರಗಳಲ್ಲಿ ಭಾರೀ ದಾಳಿಗಳು ವರದಿಯಾಗಿವೆ.ಇರಾನ್‌ನಲ್ಲಿ ಅಹಾರ ಕೊರತೆ ಉಂಟಾದರೆ ಹಲವಾರು ದೇಶಗಳು ತೈಲ ಸಂಕಷ್ಟಕ್ಕೆ ಒಳಗಾಗಿದೆ.
