Wednesday, April 15, 2026
Homeಅಂತಾರಾಷ್ಟ್ರೀಯಇರಾನ್‌ ಮಾತುಕತೆಗೆ ಬರದಿದ್ದರೆ ನಮಗೆ ನಷ್ಟವಿಲ್ಲ ; ಟ್ರಂಪ್‌

ಇರಾನ್‌ ಮಾತುಕತೆಗೆ ಬರದಿದ್ದರೆ ನಮಗೆ ನಷ್ಟವಿಲ್ಲ ; ಟ್ರಂಪ್‌

Trump Weighs Limited Strikes Against Iran After Peace Talks Collapse

ವಾಷಿಂಗ್ಟನ್‌, ಏ. 13- ಇರಾನ್‌ ಮತ್ತು ಮಾತುಕತೆಗೆ ಬರುತ್ತದೆಯೋ ಅಥವಾ ಹಾಗೇ ಇರುತ್ತದೋ ಅನ್ನುವ ಬಗ್ಗೆ ನಮಗೆ ಯಾವುದೇ ಕಾಳಜಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಗುಡುಗಿದ್ದಾರೆ.

ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಅಮೆರಿಕ-ಇರಾನ್‌ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಬೆನ್ನಲ್ಲೇ ಟ್ರಂಪ್‌ ಅವರು ಈ ಬೆದರಿಕೆ ಹಾಕಿದ್ದಾರೆ. ಫ್ಲೋರಿಡಾದಿಂದ ಹಿಂದಿರುಗಿದ ನಂತರ ಜಂಟಿ ಬೇಸ್‌‍ ಆಂಡ್ರ್ಯೂಸ್‌‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಇರಾನ್‌ ಮಾತುಕತೆಯ ಮೇಜಿಗೆ ಮರಳುತ್ತದೆಯೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಅವರು ಬರದಿದ್ದರೆ ನನಗೇನು ನಷ್ಟವಿಲ್ಲ, ಏನೇ ಆದರೂ ಅಂತಿಮವಾಗಿ ನಾವೇ ಗೆಲ್ಲುತ್ತೇವೆ ಎಂದು ಅವರು ಪ್ರತಿಪಾದಿಸಿದರು.

ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆಯಲ್ಲಿ ಇರಾನ್‌ ಇನ್ನೂ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಆಸಕ್ತಿ ಹೊಂದಿದೆ ಎಂಬುದು ಸಾಬೀತಾಗಿದೆ. ಆದರೆ, ಇರಾನ್‌ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್‌ ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್‌್ಸ ನೇತೃತ್ವದ ನಿಯೋಗವು ಮೊಹಮ್ಮದ್‌ ಬಘರ್‌ ಗಾಲಿಬಾಫ್‌ ನೇತೃತ್ವದ ಇರಾನಿನ ತಂಡದೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ವಿವರಗಳು ಈಗ ಹೊರಬರುತ್ತಿವೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಗಳು ಮತ್ತು ಹಾರ್ಮುಜ್‌ ಜಲಸಂಧಿಯ ಬಿಕ್ಕಟ್ಟು ಈಗಾಗಲೇ ಕದನ ವಿರಾಮದ ಮೇಲೆ ಭಾರಿ ಒತ್ತಡ ಹೇರಿವೆ.

ಮಾತುಕತೆಗಳ ಕುಸಿತವು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ, ಇದು ಜಾಗತಿಕ ಆರ್ಥಿಕತೆಯ ಮೇಲೂ ಕರಾಳ ನೆರಳು ಬೀರಿದೆ. ಈ ಜಲಸಂಧಿಯನ್ನು ಮತ್ತೆ ತೆರೆಯುವ ಮೂಲಕ ತೈಲ ಬೆಲೆಗಳನ್ನು ಸ್ಥಿರಗೊಳಿಸಬಹುದು ಎಂಬ ಭರವಸೆ ಈಗ ಮಸುಕಾಗಿದೆ.

ಅಮೆರಿಕವು ಇರಾನ್‌ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತೆ ಯಾವಾಗ ಆರಂಭಿಸಬಹುದು ಎಂಬ ಅನಿಶ್ಚಿತತೆ ಈಗ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ.
ಇನ್ನೊಂದೆಡೆ, ಇರಾನ್‌ ಅಧ್ಯಕ್ಷರು ತಮ್ಮ ದೇಶವು ಸಮತೋಲಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಮಾತ್ರ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಅಮೆರಿಕದ ಷರತ್ತುಗಳನ್ನು ತಳ್ಳಿಹಾಕಿದ್ದಾರೆ.

ಡೊನಾಲ್ಡ್ ಟ್ರಂಪ್‌ ಅವರ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಮತ್ತು ಇರಾನ್‌ನ ಪಟ್ಟು ಸದ್ಯಕ್ಕೆ ಯಾವುದೇ ಶಾಂತಿಯ ಮುನ್ಸೂಚನೆ ಕೊಡುತ್ತಿಲ್ಲ, ಎರಡು ವಾರಗಳ ಈ ದುರ್ಬಲ ಕದನ ವಿರಾಮವು ಶೀಘ್ರದಲ್ಲೇ ದೊಡ್ಡ ಮಟ್ಟದ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆಯಾಗಿದೆ.

RELATED ARTICLES

Latest News