Homeಅಂತಾರಾಷ್ಟ್ರೀಯಮೋದಿ-ಮೆಲೋನಿ ಫೇಮಸ್‌‍ ಕಪಲ್‌ ಅಂತೆ..!

ಮೋದಿ-ಮೆಲೋನಿ ಫೇಮಸ್‌‍ ಕಪಲ್‌ ಅಂತೆ..!

"We're Most Famous Couple": Giorgia Meloni To PM Modi At G7 Summit

ಪ್ಯಾರಿಸ್‌‍, ಜೂ.17- ಮೋದಿ ಮತ್ತು ನಾನು ಫೇಮಸ್‌‍ ಕಪಲ್‌ ಇದ್ದ ಹಾಗೇ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.ಕೆಲ ದಿನಗಳ ಹಿಂದೆ ಇಟಲಿ ಪ್ರವಾಸಕ್ಕೆ ತೆರಳಿದ್ದ ಮೋದಿ ಅವರು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕೊಲೇಟ್‌ ಗಿಫ್ಟ್ ಕೊಟ್ಟಿದ್ದರು.

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಿ7 ಶೃಂಗದಲ್ಲಿ ಮತ್ತೆ ಈ ಇಬ್ಬರು ಜಾಗತಿಕ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಫ್ರಾನ್‌್ಸನ ಏವಿಯನ್‌‍-ಲೆ-ಬೈನ್ಸ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಮೆಲೋನಿ ಅವರು ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್‌‍ ಕಪಲ್‌ ಅಂತ ಹೇಳಿದ್ದಾರೆ. ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿರುವ ವಿಡಿಯೋ ಮೆಲೋಡಿ ಬಝ್‌‍ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಮೆರಿಕ ಇರಾನ್‌ ನಡುವಿನ ಮಹತ್ವದ ಒಪ್ಪಂದ ಸ್ವಾಗತಿಸಲು ಫ್ರಾನ್ಸ್ ನ ಎವಿಯನ್‌‍-ಲೆಸ್‌‍-ಬೇನ್ಸ್ ನಲ್ಲಿ 7 ರಾಷ್ಟ್ರಗಳ ಒಕ್ಕೂಟ (ಜಿ7) ನಾಯಕರು ಒಂದೆಡೆ ಸೇರಿದ್ದಾರೆ. ಈ ಮಧ್ಯೆ ಮೆಲೋನಿ ಮೋದಿ ನಡುವಿನ ಸಂಕ್ಷಿಪ್ತ ಮಾತುಕತೆ ಸಖತ್‌ ವೈರಲ್‌ ಆಗಿದೆ.

RELATED ARTICLES
spot_img

Latest News