Homeಅಂತಾರಾಷ್ಟ್ರೀಯಸೊಳ್ಳೆ ಗಾತ್ರ ಡ್ರೋನ್‌ ಅಭಿವೃದ್ಧಿಪಡಿಸಿದ ಚೀನಾ

ಸೊಳ್ಳೆ ಗಾತ್ರ ಡ್ರೋನ್‌ ಅಭಿವೃದ್ಧಿಪಡಿಸಿದ ಚೀನಾ

China develops mosquito-sized drone

ಬೀಜಿಂಗ್‌, ಜೂ.17- ತಂತ್ರಜ್ಞಾನದಲ್ಲಿ ಭಾರಿ ಮುನ್ನಡೆಯಲ್ಲಿರುವ ಚೀನಾ ಇದೀಗ ಸೊಳ್ಳೆ ಗಾತ್ರದ ಡ್ರೋನ್‌ ಉತ್ಪಾದಿಸಿ ವಿಶ್ವದ ಗಮನ ಸೆಳೆದಿದೆ.ಚೀನಾದ ಹುನಾನ್‌ ಪ್ರಾಂತ್ಯದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ರೊಬೊಟಿಕ್ಸ್ ಪ್ರಯೋಗಾಲಯ ರಹಸ್ಯ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಸೊಳ್ಳೆ ಗಾತ್ರದ ಡ್ರೋನ್‌ ಅಭಿವೃದ್ಧಿಪಡಿಸಿದೆ.

ಚೀನಾ ಅಭಿವೃದ್ಧಿಪಡಿಸಿದ ಮೈಕ್ರೋ-ಡ್ರೋನ್‌ ಗಾತ್ರ ಮತ್ತು ವಿನ್ಯಾಸ ಎರಡರಲ್ಲೂ ಸೊಳ್ಳೆಯನ್ನು ಹೋಲುತ್ತದೆ. ಇದು ಎರಡು ಸಣ್ಣ ಎಲೆ ಆಕಾರದ ರೆಕ್ಕೆಗಳು ಮತ್ತು ಮೂರು ಕೂದಲು ಗಾತ್ರದ ತೆಳುವಾದ ಕಾಲುಗಳನ್ನು ಹೊಂದಿದೆ. ಕೋಲು ಆಕಾರದ ದೇಹವನ್ನು ಹೊಂದಿದೆ.

ಈ ಡ್ರೋನ್‌ನ್ನು ಸ್ಮಾರ್ಟ್‌ಫೋನ್‌‍ ಬಳಸಿ ನಿಯಂತ್ರಿಸಬಹುದು. ಡ್ರೋನ್‌ ತುಂಬಾ ಚಿಕ್ಕದಾಗಿದ್ದು ಅದನ್ನು ಎರಡು ಬೆರಳುಗಳ ನಡುವೆ ಹಿಡಿದಿಟ್ಟುಕೊಳ್ಳಬಹುದಾಗಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌‍ ವರದಿ ಮಾಡಿದೆ.

ಸೊಳ್ಳೆಯಂತಹ ರೋಬೋಟ್‌ ಯುದ್ಧಭೂಮಿಯಲ್ಲಿ ಮಾಹಿತಿ ಕಲೆಹಾಕಲು ಮತ್ತು ವಿಶೇಷ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಣ್ಣ ಗಾತ್ರದಿಂದ ಅದೊಂದು ಡ್ರೋನ್‌ ಎಂದು ಊಹಿಸಲು ಕಷ್ಟಸಾಧ್ಯ. ಈ ಪುಟ್ಟ ಡ್ರೋನ್‌ ದೊಡ್ಡ ಡ್ರೋನ್‌ಗಳನ್ನು ಸುಲಭವಾಗಿ ಪತ್ತೆಹಚ್ಚುತ್ತದೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ರಹಸ್ಯ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಕಲೆಹಾಕಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿ ಲಿಯಾಂಗ್‌ ಹೆಕ್ಸಿಯಾಂಗ್‌ ಹೇಳಿಕೊಂಡಿದ್ದಾನೆ.

ಈ ಡ್ರೋನ್‌ ಏಕೆ ಮಹತ್ವದ್ದಾಗಿದೆ?ಇಷ್ಟು ಸಣ್ಣ ಪ್ರಮಾಣದಲ್ಲಿ ಡ್ರೋನ್‌ ಅನ್ನು ಅಭಿವೃದ್ಧಿಪಡಿಸುವುದು ಎಂಜಿನಿಯರ್‌ಗಳಿಗೆ ಭಾರೀ ಸವಾಲುಗಳನ್ನು ಒಡ್ಡುತ್ತದೆ. ಸಂವೇದಕಗಳು, ಬ್ಯಾಟರಿಗಳು, ನಿಯಂತ್ರಣ ಸರ್ಕ್‌ಯೂಟ್‌ಗಳು ಮತ್ತು ಸಂವಹನ ವ್ಯವಸ್ಥೆಗಳಂತಹ ಅಗತ್ಯ ಘಟಕಗಳು ಅತ್ಯಂತ ಸೀಮಿತ ಜಾಗದಲ್ಲಿ ಹೊಂದಿಕೊಳ್ಳಬೇಕಾಗುತ್ತದೆ. ಹಾರಾಟದ ಸ್ಥಿರತೆ ಮತ್ತು ನಿಯಂತ್ರಣವನ್ನು ಕಾಯ್ದುಕೊಳ್ಳುವಾಗ ಕೀಟಗಳಂತಹ ಚಲನೆಯನ್ನು ಅದಕ್ಕೆ ಒದಗಿಸಲು ಮೈಕ್ರೋ-ಎಂಜಿನಿಯರಿಂಗ್‌‍, ಮೆಟೀರಿಯಲ್‌ ಸೈನ್ಸ್ ಮತ್ತು ಬಯೋನಿಕ್ಸ್ ಸೇರಿದಂತೆ ಬಹು ವಿಭಾಗಗಳ ಪರಿಣತಿ ಅಗತ್ಯವಿದೆ.

ಸೊಳ್ಳೆ ಗಾತ್ರದ ಡ್ರೋನ್‌ ಅಭಿವೃದ್ಧಿಯಲ್ಲಿ ಚೀನಾ ಮಾತ್ರ ಮುಂದಿಲ್ಲ. ಅಮೆರಿಕದ ಟೆಲಿಡೈನ್‌ ಡಿಫೆನ್‌್ಸ ಸಹ ಬ್ಲ್ಯಾಕ್‌ ಹಾರ್ನೆಟ್‌ 4 ಎಂಬ ಪುಟ್ಟ ಡ್ರೋನ್‌ ಅಭಿವೃದ್ಧಿ ಪಡಿಸಿದೆ. ಈ ಡ್ರೋನ್‌ ನೇರ ದೃಶ್ಯಗಳು ಮತ್ತು ಡೇಟಾವನ್ನು ಸಶಸ್ತ್ರ ಪಡೆಗಳಿಗೆ ರವಾನಿಸುತ್ತದೆ. ಬ್ಲ್ಯಾಕ್‌ ಹಾರ್ನೆಟ್‌ 4 ಅಮೆರಿಕದ ಸೇನೆಯಲ್ಲಿ ಬಳಕೆಯಲ್ಲಿದೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ರೋಬೋ ಬೀ ಎಂಬ ರೋಬೋಟ್‌ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಕೀಟದಂತೆ ಕಾಣುವ ಮೈಕ್ರೋ ರೋಬೋಟ್‌ ಆಗಿದೆ. ಇವು ನೀರಿನ ಆಳದಲ್ಲಿ ಈಜುತ್ತವೆ. ಅಲ್ಲದೇ ಕೀಟಗಳಂತೆ ಹಾರುವ ಸಾಮರ್ಥ್ಯ ಹೊಂದಿವೆ.ಮಿಲಿಟರಿ ಕೃಷಿಗಾಗಿ ಮೈಕ್ರೋ ರೋಬೋಟಿಕ್ಸ್ ಚೀನಾದ ಸೊಳ್ಳೆ ಗಾತ್ರದ ಡ್ರೋನ್‌ ಸೇನೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿದೆ.

ಉದ್ದೇಶಿತ ಔಷಧ ವಿತರಣೆ, ಸಣ್ಣ ಶಸ್ತ್ರಚಿಕಿತ್ಸೆ, ರೋಗನಿರ್ಣಯ ಮತ್ತು ವೈದ್ಯಕೀಯ ಉಪಯೋಗಕ್ಕಾಗಿ ಪುಟ್ಟ ರೋಬೋಟ್‌ಗಳನ್ನು ಅನ್ಷೇಷಿಸುತ್ತಿದ್ದಾರೆ. ಪರಿಸರ ಮೇಲ್ವಿಚಾರಣೆ ಮತ್ತು ಕೃಷಿ ಸಂಶೋಧನೆಗೂ ಈ ತಂತ್ರಜ್ಞಾನ ಬಳಕೆಗೆ ಚೀನಾ ಮುಂದಾಗಿದೆ.

RELATED ARTICLES

Latest News