Tuesday, May 5, 2026
Homeರಾಷ್ಟ್ರೀಯಅಂಗ, ಬಂಗ, ಕಳಿಂಗದಲ್ಲಿ ಬಿಜೆಪಿ ಜಯಭೇರಿ : ನಿಜವಾದ ಅಮಿತ್‌ ಶಾ ಭವಿಷ್ಯ

ಅಂಗ, ಬಂಗ, ಕಳಿಂಗದಲ್ಲಿ ಬಿಜೆಪಿ ಜಯಭೇರಿ : ನಿಜವಾದ ಅಮಿತ್‌ ಶಾ ಭವಿಷ್ಯ

BJP's Bengal win completes 'Anga-Banga-Kalinga' political corridor

ನವದೆಹಲಿ,ಮೇ 5- ಅತ್ಯಂತ ಕ್ಲಿಷ್ಟಕರ ಎನಿಸಿದ್ದ ಪ.ಬಂಗಾಳದಲ್ಲಿ ಮೊದಲ ಬಾರಿಗೆ ಭಾರೀ ಬಹುಮತ ಪಡೆದು ಬಿಜೆಪಿ ಅಧಿಕಾರ ಗದ್ದುಗೆ ಹಿಡಿದಿರುವುದು ಚುನಾವಣಾ ಚಾಣಕ್ಯ ಅಮಿತ್‌ ಶಾ ಭವಿಷ್ಯ ವಾಣಿ ನುಡಿದಿದ್ದಕ್ಕೂ ಸಾಮ್ಯತೆ ಇದೆ.

ಶತಾಯಗತಾಯ ಪ.ಬಂಗಾಳವನ್ನು ಗೆಲ್ಲಲೇಬೇಕೆಂದು ವಿಶೇಷ ರಣತಂತ್ರ ರೂಪಿಸಿದ್ದ ಅಮಿತ್‌ ಶಾ ಅವರು ಕಳೆದ ಆರು ತಿಂಗಳಿನಿಂದ ಸದ್ದಿಲ್ಲದ ದೀದಿ ಸಾಮ್ರಾಜ್ಯವನ್ನು ಕೆಡವಲು ತಮದೇ ಆದ ವಿಶೇಷವಾದ ರಣತಂತ್ರ ರೂಪಿಸಿದ್ದರು.

ಅಮಿತ್‌ ಶಾ ಅವರು ಪ.ಬಂಗಾಳವನ್ನು ಬಿಜೆಪಿ ಗೆಲ್ಲಲಿದೆ ಎಂದು ಎಷ್ಟು ಕರಾರುವಕ್ಕಾಗಿ ನುಡಿದಿದ್ದರು ಎಂದರೆ ಕಳೆದ ಏ.24 ರಂದು ಕೋಲ್ಕತ್ತಾದಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ಅಂಗ, ಬಂಗ ಮತ್ತು ಕಳಿಂಗ ರಾಜ್ಯದಲ್ಲಿ ನಾವು ಅಧಿಕಾರ ಹಿಡಿದೇ ತೀರುತ್ತೇವೆ ಎಂದು ಅಚಲ ವಿಶ್ವಾಸದಲ್ಲಿ ನುಡಿದಿದ್ದರು.

ಅವರು ಹೇಳಿದ್ದ ಒಂದೊಂದು ಮಾತುಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಅಮಿತ್‌ ಶಾ ನಡೆಗೆ ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿದೆ.ಈ ಹಿಂದೆ ಬಿಹಾರದಲ್ಲೂ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದರು. ಅವರು ನುಡಿದಂತೆಯೇ ರಾಜ್ಯದಲ್ಲಿ ಮೈತ್ರಿಕೂಟ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು.

ಕಳೆದ ಮೇ 4ರಂದು ಅಮಿತ್‌ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಮುಂಜಾನೆ ಮತ ಎಣಿಕೆ ಆರಂಭವಾಗಲಿದೆ. 9 ಗಂಟೆಯ ವೇಳೆಗೆ ಮೊದಲ ಸುತ್ತು, 10 ಗಂಟೆಗೆ ಎರಡನೇ ಸುತ್ತು ಮುಗಿಯುತ್ತದೆ. ಮಧ್ಯಾಹ್ನ 1 ಗಂಟೆಗೆ ಬಹುತೇಕ ಎಣಿಕೆ ಕಾರ್ಯ ಮುಗಿದಿರುತ್ತದೆ. ಅದು ದೀದಿಗೆ ಟಾಟಾ ಬೈ ಬೈ ಆಗಿರುತ್ತದೆ- ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆಗೆ ಮುನ್ನ ಏ.22ರಂದು ವಿವಿಧ ರಾಜಕೀಯ ರ್ಯಾಲಿಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಮೇಲಿನಂತೆ ಭವಿಷ್ಯ ನುಡಿದಿದ್ದರು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಳ್ವಿಕೆ ಕೊನೆಗೊಳಿಸಿ ಟಿಎಂಸಿ ಭದ್ರಕೋಟೆಯನ್ನು ಭೇದಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮುಖಂಡರ ಈ ಭವಿಷ್ಯವಾಣಿ ಕುರಿತ ವಿಡಿಯೋಗಳು ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿವೆ. ಅಂತೆಯೇ ಈ ಚುನಾವಣೆ ಮುಗಿದ ಬಳಿಕ ಬಿಜೆಪಿ ಆಡಳಿತ ಅಂಗ, ಬಂಗ ಮತ್ತು ಕಳಿಂಗ (ಬಿಹಾರ, ಬಂಗಾಳ, ಒಡಿಶಾ) ಪ್ರದೇಶಗಳಿಗೆ ವ್ಯಾಪಿಸಿರುತ್ತದೆ ಎಂದು ಶಾ ಹೇಳಿದ್ದು ಇದೀಗ ನಿಜವಾಗಿದೆ.

ಅಮಿತ್‌ ಶಾ ಹೇಳಿಕೆಯ ಬೆನ್ನಲ್ಲೇ ಕಾರ್ಯಕರ್ತರು ಬೆಂಬಲಿಗರು ಈ ಬಾರಿ ಬಿಜೆಪಿ ಗೆಲುವಿನ ವಿಶ್ವಾಸ ಹೊಂದಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್‌‍ ಪಕ್ಷ 1970ರ ದಶಕದಲ್ಲಿ ಈ ಮೂರು ಪೂರ್ವರಾಜ್ಯಗಳಲ್ಲಿ ಅಧಿಕಾರ ಹೊಂದಿತ್ತು. ತುರ್ತು ಪರಿಸ್ಥಿತಿ ಬಳಿಕ ನಡೆದ ಬಂಗಾಳ ಚುನಾವಣೆಯಲ್ಲಿ ಎಡಪಕ್ಷಗಳ ವಿರುದ್ಧ ಸೋಲು ಅನುಭವಿಸಿತ್ತು. ಕಾಂಗ್ರೆಸ್‌‍ ಕ್ರಮೇಣ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್‌‍ ಯುಗ ಅಂತ್ಯವಾಯಿತು.

ಬಿಜೆಪಿ ಮುಖ್ಯಸ್ಥರಾದ ಮೊದಲ ದಿನದಿಂದಲೇ ಟಿಎಂಸಿ ವಿರುದ್ಧ ತಳಹಂತದ ಅಭಿಯಾನ ಕೈಗೊಂಡಿದ್ದರು. ಈ ಪ್ರಯತ್ನ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಿಲ್ಲಲಿಲ್ಲ. 2021ರ ಚುನಾವಣೆಯಲ್ಲಿ ನಿರಾಸೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸಂಸದರ ಸಂಖ್ಯೆ 18 ರಿಂದ 12ಕ್ಕೆ ಇಳಿದರೂ ಎದೆಗುಂದದೇ ಪಕ್ಷ ಸಂಘಟನೆಯನ್ನು ನಿರಂತರವಾಗಿ ಮಾಡಿಕೊಂಡು ಬಂದ ಶಾ ಈ ಬಾರಿ ಅದರ ಫಲ ಸಿಗುವ ವಿಶ್ವಾಸದಲ್ಲಿದ್ದು, ರ್ಯಾಲಿಗಳಲ್ಲಿ ಆತವಿಶ್ವಾಸದಿಂದ ಬೈ ದೀದಿ ಪ್ರತಿಪಾದನೆ ಮಾಡುತ್ತಾ ಬಂದಿದ್ದರು.

RELATED ARTICLES

Latest News