Tuesday, May 5, 2026
Homeರಾಷ್ಟ್ರೀಯಹೆಣ್ಣು ಮಕ್ಕಳ ಕೋಪಕ್ಕೆ ಬಲಿಯಾದ ಟಿಎಂಸಿ, ಡಿಎಂಕೆ, ಎಡಪಕ್ಷಗಗಳು

ಹೆಣ್ಣು ಮಕ್ಕಳ ಕೋಪಕ್ಕೆ ಬಲಿಯಾದ ಟಿಎಂಸಿ, ಡಿಎಂಕೆ, ಎಡಪಕ್ಷಗಗಳು

Women Reservation Bill

ಬೆಂಗಳೂರು,ಮೇ 5- ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿದ ಪಕ್ಷಗಳು ಹೆಣ್ಣು ಮಕ್ಕಳ ಜ್ವಾಲಾಗ್ನಿಗೆ ಭಸ ಆಗಿವೆ ಎಂದು ಕೇಂದ್ರ ಜಲ ಶಕ್ತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿರವರು ಮಹಿಳಾ ನಾರಿ ಶಕ್ತಿಗೆ ಅಧಿಕಾರ ಕೊಡಲು ಸಂಸತ್‌ ಮಹಿಳಾ ಮೀಸಲಾತಿ ಕಾಯ್ದೆಯನ್ನು ತಂದಿದ್ದರು. ಅದನ್ನು ಕಾಂಗ್ರೆಸ್‌‍ ಜೊತೆ ಸೇರಿ ವಿರೋಧಿಸಿದ ಟಿಎಂಸಿ, ಡಿಎಂಕೆ, ಎಡಪಕ್ಷ ಸೇರಿ ವಿರೋಧ ಪಕ್ಷಗಳಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ಪಟ್ಟ ಶ್ರಮ ಯಶಸ್ವಿಯಾಗಿದೆ. 206 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜನ ಸಂಘ ಸ್ಥಾಪನೆ ಮಾಡಿದ ಶ್ಯಾಮಾ ಪ್ರಸಾದ್‌ ಮುಖರ್ಜಿ ಅವರ ಕನಸು ನನಸಾಗಿದೆ.

ಮಮತಾ ಬ್ಯಾನರ್ಜಿ ಅವರ ದುರಾಡಳಿತದ ಪಾಪದ ಕೊಡ ತುಂಬಿದೆ. ಬಾಂಗ್ಲಾ ನುಸುಳಿಕೋರರಿಗೆ ಜಾಗ ಕೊಟ್ಟು ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದರು. ಬಂಗಾಳದಲ್ಲಿ ನಿರುದ್ಯೋಗ, ಮಹಿಳೆಯರಿಗೆ ಸುರಕ್ಷತೆ ಇಲ್ಲದೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದ್ದವು.

ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂ ಕಿಸಾನ್‌ ಯೋಜನೆ, ಜಲ್‌ ಜೀವನ್‌ ಮಿಷನ್‌ ಸಮಗ್ರ ಶಿಕ್ಷಣ ನೀತಿ, ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡದೇ ಕೇಂದ್ರದ ಅನುದಾನ ಗಳನ್ನೂ ದುರುಪಗೋಗಪಡಿಸಿಕೊಂಡು ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇನ್ನು ತಮಿನಾಡಿನಲ್ಲಿ ಕಾಂಗ್ರೆಸ್‌‍ ಜೊತೆ ಸೇರಿಕೊಂಡು ಡಿಎಂಕೆ ಮಾಡುತ್ತಿದ್ದ ವಂಶ ಪಾರಂಪರ್ಯ ರಾಜಕಾರಣಕ್ಕೆ ಮತದಾರರು ಬುದ್ಧಿ ಕಲಿಸಿದ್ದಾರೆ. ಹಿಂದೂ ವಿರೋಧಿ ಡಿಎಂಕೆಗೆ ತಕ್ಕ ಶಾಸ್ತಿ ಆಗಿದೆ ಎಂದರು.

ಪುಣ್ಯ ಪುರುಷರಾದ ಸ್ವಾಮಿ ವಿವೇಕಾನಂದ, ಬಂಕಿಮ ಚಂದ್ರ ಚಟರ್ಜಿ, ಶ್ಯಾಮಾ ಪ್ರಸಾದ್‌ ಮುಖರ್ಜಿ, ರವೀಂದ್ರನಾಥ ಠಾಕೂರರುರವರ ಭೂಮಿಯಲ್ಲಿ ಈಗ ಬಿಜೆಪಿ ಅಡಳಿತ ಪ್ರಾರಂಭ ವಾಗಿದೆ. ಶೇಕಡಾ 92ರಷ್ಟು ಮತದಾನ ಮಾಡುವ ಮೂಲಕ ಮೋದಿ ಕನಸಿನ ವಿಕಸಿತ ಭಾರತಕ್ಕೆ ಅಲ್ಲಿನ ಜನ ಬೆಂಬಲ ನೀಡಿದ್ದಾರೆ.

ವಿಕಸಿತ ಭಾರತದ ಪರಿಕಲ್ಪನೆ ಇವತ್ತಿನಿಂದಲೇ ಪಶ್ಚಿಮ ಬಂಗಾಳದಲ್ಲಿ ಜಾರಿ ಆಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌‍ ಸರ್ಕಾರದ ಅಧಿಕಾರ ಮತ್ತು ಹಣದಿಂದ ಗೆಲವು ಸಾಧಿಸಿದೆ. ನಮಲ್ಲಿನ ಅತಿಯಾದ ಆತ ವಿಶ್ವಾಸ ಮತ್ತು ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕಾಂಗ್ರೆಸ್‌‍ನಲ್ಲಿ ಒಳ ಜಗಳವಿಲ್ಲ, ಹೊರ ಜಗಳ, ಅವರು ಬೀದಿ ಬೀದಿಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಅನುಭವ ನಿಷ್ಕ್ರಿಯವಾಗಿದೆ. ಕರ್ನಾಟಕ, ತೆಲಂಗಾಣ, ಕೇರಳಂ ಗೆದ್ದಾಗ ಇವಿಎಂ ಬಗ್ಗೆ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಲ್ಲ, ಅವರು ಸೋತರೆ ಮಾತ್ರ ಇವಿಎಂ ದೋಷವಾಗುತ್ತೆ, ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿಗೆ ಬುದ್ಧಿ ಭ್ರಮಣೆಯಾಗಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳದಂತೆ ರಾಜ್ಯವೂ ಕಾಂಗ್ರೆಸ್‌‍ ಮುಕ್ತವಾಗುತ್ತದೆ ಎಂದರು.

RELATED ARTICLES

Latest News