Thursday, April 16, 2026
Homeರಾಷ್ಟ್ರೀಯಪೆಟ್ರೋಕೆಮಿಕಲ್‌ ಉತ್ಪನ್ನಗಳಿಗೆ ಕಸ್ಟಮ್ಸೌ ಸುಂಕ ವಿನಾಯಿತಿ

ಪೆಟ್ರೋಕೆಮಿಕಲ್‌ ಉತ್ಪನ್ನಗಳಿಗೆ ಕಸ್ಟಮ್ಸೌ ಸುಂಕ ವಿನಾಯಿತಿ

Centre grants full customs duty exemption on critical petrochemical products

ನವದೆಹಲಿ, ಏ.2- ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಸರಬರಾಜು ಸರಪಳಿಯಲ್ಲಿ ಉಂಟಾದ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಮುಖ ಪೆಟ್ರೋಕೆಮಿಕಲ್‌ ಉತ್ಪನ್ನಗಳ ಆಮದು ಮೇಲಿನ ಕಸ್ಟಮ್ಸೌ ಸುಂಕವನ್ನು ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.

ಈ ವಿನಾಯಿತಿ ಜೂನ್‌ 30ರವರೆಗೆ ಜಾರಿಯಲ್ಲಿದ್ದು, ಪ್ಲಾಸ್ಟಿಕ್‌‍, ಪ್ಯಾಕೇಜಿಂಗ್‌‍, ವಸ್ತ್ರ, ಔಷಧ, ರಾಸಾಯನಿಕ, ವಾಹನ ಭಾಗಗಳು ಸೇರಿದಂತೆ ವಿವಿಧ ಉತ್ಪಾದನಾ ಕ್ಷೇತ್ರಗಳಿಗೆ ಪ್ರಯೋಜನಕಾರಿ ಯಾಗಲಿದೆ. ಹಣಕಾಸು ಸಚಿವಾಲಯ ಪ್ರಕಟಣೆ ಪ್ರಕಾರ, ದೇಶೀಯ ಕೈಗಾರಿಕೆಗಳಿಗೆ ಅಗತ್ಯವಿರುವ ಪೆಟ್ರೋಕೆಮಿಕಲ್‌ ಮೂಲ ಪದರಗಳ ಲಭ್ಯತೆ ನಿರಂತರವಾಗಿರಲು, ಕೆಳಮಟ್ಟದ ಕ್ಷೇತ್ರಗಳ ಮೇಲಿನ ವೆಚ್ಚದ ಒತ್ತಡ ಕಡಿಮೆ ಮಾಡಲು ಮತ್ತು ಸರಬರಾಜು ಸ್ಥಿರತೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಇದರಿಂದ ಅಂತಿಮ ಉತ್ಪನ್ನಗಳ ಗ್ರಾಹಕರಿಗೂ ಪರಿಹಾರ ಸಿಗಲಿದೆ ಎಂದು ತಿಳಿಸಲಾಗಿದೆ.ವಿನಾಯಿತಿ ನೀಡಲಾದ ಉತ್ಪನ್ನಗಳಲ್ಲಿ ಮೆಥನಾಲ್‌‍, ಅನೈಡ್ರಸ್‌‍ ಅಮೋನಿಯಾ, ಟೋಲ್ಯೂಯಿನ್‌‍, ಸ್ಟೈರಿನ್‌‍, ಡೈಕ್ಲೋರೋಮಿಥೇನ್‌ (ಮೆಥಿಲಿನ್‌ ಕ್ಲೋರೈಡ್‌‍), ವಿನೈಲ್‌ ಕ್ಲೋರೈಡ್‌ ಮೊನೋಮರ್‌ ಪಾಲಿ ಬುಟಾಡೈನ್‌‍, ಸ್ಟೈರಿನ್‌ ಬುಟಾಡೈನ್‌ ಮತ್ತು ಅನ್‌ಸ್ಯಾಚ್ಯುರೇಟೆಡ್‌‍ ಪಾಲಿಯೆಸ್ಟರ್‌ ರೆಸಿನ್‌ ಸೇರಿವೆ.

ಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮ ಸಾಗರ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿ ರಾಸಾಯನಿಕ ಗೊಬ್ಬರ, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಆಮದು ಕುರಿತು ಆತಂಕ ವ್ಯಕ್ತವಾಗಿದೆ.

ಭಾರತವು ಇವುಗಳ ಪ್ರಮುಖ ಆಮದುದಾರ ದೇಶವಾಗಿದೆ.ಅಮೆರಿಕ ಮತ್ತು ಇಸ್ರೇಲ್‌ ಫೆಬ್ರವರಿ 28ರಂದು ಇರಾನ್‌ ಮೇಲೆ ದಾಳಿ ನಡೆಸಿದ ನಂತರ ಜಾಗತಿಕ ಕಚ್ಚಾ ತೈಲ ಬೆಲೆಗಳು ಸುಮಾರು 50% ಏರಿಕೆಯಾಗಿದೆ.ಇದಕ್ಕೂ ಮುನ್ನ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ. 10ರಷ್ಟು ಕಡಿತಗೊಳಿಸಿ ಗ್ರಾಹಕರಿಗೆ ಪರಿಹಾರ ನೀಡಿತ್ತು.

ಜೊತೆಗೆ ಡೀಸೆಲ್‌ ಮೇಲೆ ಲೀಟರ್‌ಗೆ ರೂ. 21.50 ಮತ್ತು ಏವಿಯೇಷನ್‌ ಟರ್ಬೈನ್‌ ಫ್ಯುಯೆಲ್‌ (ಎಟಿಎಫ್‌‍) ಮೇಲೆ ರೂ. 29.50 ರಷ್ಟು ರಫ್ತು ಸುಂಕ ವಿಧಿಸಲಾಗಿದೆ.ಪ್ರಸ್ತುತ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕ ರೂ. 3 ಮತ್ತು ಡೀಸೆಲ್‌ ಮೇಲಿನದು ಶೂನ್ಯವಾಗಿದೆ.

RELATED ARTICLES

Latest News