Homeರಾಷ್ಟ್ರೀಯಯುದ್ಧ ವಿರಾಮ ಘೋಷಣೆ ಬೆನ್ನಲ್ಲೀ ಕಚ್ಚಾ ತೈಲ ಬೆಲೆ ಇಳಿಕೆ

ಯುದ್ಧ ವಿರಾಮ ಘೋಷಣೆ ಬೆನ್ನಲ್ಲೀ ಕಚ್ಚಾ ತೈಲ ಬೆಲೆ ಇಳಿಕೆ

Crude oil prices fall after ceasefire announcement.

ನವದೆಹಲಿ, ಜೂ. 15 – ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧಕ್ಕೆ ಬ್ರೇಕ್‌ ಬಿದ್ದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ. ಯುದ್ಧ ವಿರಾಮದ ಘೋಷಣೆ ಮತ್ತು ಉಭಯ ದೇಶಗಳ ನಡುವೆ ಒಪ್ಪಂದದ ನಿರೀಕ್ಷೆಯಿಂದಾಗಿ ಬ್ರೆಂಟ್‌ ಕ್ರೂಡ್‌ ಆಯಿಲ್‌ ಬೆಲೆ ಒಂದೇ ದಿನದಲ್ಲಿ ಶೇಕಡಾ 4ರಷ್ಟು ಕುಸಿತ ಕಂಡು 80 ಡಾಲರ್‌ಗೆ ಕುಸಿದಿದೆ.

ಈ ಹಿಂದೆ ಯುದ್ಧದ ಭೀತಿಯಿಂದಾಗಿ ಕಚ್ಚಾ ತೈಲ ಬೆಲೆ ಗಗನಕ್ಕೇರಿ, ಪೆಟ್ರೋಲ್‌‍, ಡೀಸೆಲ್‌‍, ಸಿಎನ್‌ಜಿ ಹಾಗೂ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರು ಆತಂಕದಲ್ಲಿದ್ದರು.
ಇದೀಗ ಹಾರ್ಮುಝ್‌ ಜಲಸಂಧಿ ಮುಕ್ತವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಘೋಷಣೆ ಮಾಡಿದ್ದು, ಹಡಗುಗಳ ಸಂಚಾರ ಸುಗಮವಾಗಲಿದೆ.

.ಜಾಗತಿಕ ಮಟ್ಟದಲ್ಲಿ ನಿರ್ಮಾಣವಾಗಿದ್ದ ಆರ್ಥಿಕ ತಲ್ಲಣ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಗೋಚರಿಸಿದ್ದು, ಇಂಧನ ಬೆಲೆ ಇಳಿಕೆಯಾಗುವ ನಿರೀಕ್ಷೆ ದಟ್ಟವಾಗಿದೆ. ಪೆಟ್ರೋಲ್‌‍, ಡೀಸೆಲ್‌ ಬೆಲೆ ಇಳಿಕೆಯ ನಿರೀಕ್ಷೆ ಮೂಡಿದೆ. ಇದು ವ್ಯಾಪಾರಸ್ಥರು, ವಾಹನ ಸವಾರರು ಮತ್ತು ಗೃಹ ಬಳಕೆಯ ಅನಿಲ ಬಳಸುವವರಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡಲಿದೆ.

RELATED ARTICLES

Latest News