ಬೆಂಗಳೂರು, ಜು.28-ನಿರಂತರ ಮೂರು ದಿನಗಳ ಏರಿಕೆಯ ನಂತರ ಮತ್ತೆ ಚಿನ್ನ-ಬೆಳ್ಳಿ ದರಗಳು ಕುಸಿತ ಕಂಡಿವೆ. ಕಳೆದ ಹತ್ತು ದಿನಗಳಲ್ಲೇ ಕಡಿಮೆ ದರಕ್ಕೆ ಚಿನ್ನ ಇಳಿಕೆಯಾಗಿದೆ. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಬೆಳ್ಳಿ ಒಂದು ಕೆ.ಜಿ.ಗೆ 5 ಸಾವಿರ ರೂಪಾಯಿ ಇಳಿಕೆಯಾಗಿದ್ದು, 2.35 ಲಕ್ಷ ರೂಪಾಯಿಯಷ್ಟಿದೆ. ಅದೇ ರೀತಿ ಚಿನ್ನವೂ ಇಳಿಕೆಯಾಗಿದೆ.
ಜು.19ರಂದು 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು 14,329 ರೂ. ನಷ್ಟಿತ್ತು. ಅನಂತರ ದರದಲ್ಲಿ ಏರಿಳಿತವಾಗಿ ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನವು 172 ರೂ. ನಷ್ಟು ಕಡಿಮೆಯಾಗಿದ್ದು, 14,417 ರೂ.ನಷ್ಟಿದೆ.
22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 155ರೂ. ನಷ್ಟು ಇಳಿಕೆಯಾಗಿದ್ದು, 13,215 ರೂ.ಗೆ ತಲುಪಿದೆ. ಜು.19ರಂದು 13,150 ರೂ. ನಷ್ಟಿತ್ತು. ಇಂದು ಅದಕ್ಕಿಂತ 120 ರೂ. ಹೆಚ್ಚಿನ ದರವಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 126 ರೂ. ನಷ್ಟು ಕಡಿಮೆಯಾಗಿದ್ದು, 10, 813 ರೂ. ನಷ್ಟಿದೆ.
ಜುಲೈ 20 ರಿಂದ ಮೂರು ದಿನಗಳ ಕಾಲ ಸತತ ಏರಿಕೆಯಾಗಿದ್ದ ಚಿನ್ನವು ಜುಲೈ 23 ಮತ್ತು 24ರಂದು ಇಳಿಕೆಯಾಗಿತ್ತು, ಮತ್ತೆ ಜುಲೈ 25 ಹಾಗೂ 27 ರಂದು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಪ್ಲಾಟಿನಂ ದರದಲ್ಲಿ ಕುಸಿತವಾಗಿದ್ದು, 10 ಗ್ರಾಂಗೆ 720 ರೂ. ಕಡಿಮೆಯಾಗಿದ್ದು, 49,320 ರೂ. ನಷ್ಟಿದೆ.
ಜುಲೈ 20, ಜುಲೈ 22ರಂದು ಏರಿಕೆಯಾಗಿದ್ದ ಬೆಳ್ಳಿಯು ಜು.24ರಂದು ಕುಸಿತವಾಗಿ ಮತ್ತು 25ರಂದು ಏರಿಕೆಯಾಗಿತ್ತು. ನಿನ್ನೆ ಸ್ಥಿರವಾಗಿದ್ದ ಬೆಳ್ಳಿಯ ದರವು ಇಂದು ಕೆ.ಜಿ.ಗೆ ಐದು ಸಾವಿರ ರೂ. ಕಡಿಮೆಯಾಗಿದ್ದು, 2.35 ಲಕ್ಷ ರೂಪಾಯಿಗೆ ತಲುಪಿದೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ದರಗಳು ಸ್ಥಿರವಾಗಿರದೇ ಪದೇ ಪದೇ ಏರಿಳಿತಕ್ಕೆ ಒಳಗಾಗುತ್ತಿವೆ. ಆದರೆ, ಕಳೆದ ವರ್ಷದಂತೆ ಭಾರಿ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆಯಾಗುತ್ತಿಲ್ಲ.
