Tuesday, April 14, 2026
Homeರಾಷ್ಟ್ರೀಯಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

Govt cuts excise duty to Rs 3 a litre on petrol, to nil on diesel amid Middle East tensions

ನವದೆಹಲಿ, ಮಾ.27 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾದ ಒತ್ತಡವನ್ನು ಎದುರಿಸಲು ಎಚ್‌ಪಿಸಿಎಲ್‌,ಬಿಪಿಸಿಎಲ್‌ ಮತ್ತು ಐಒಸಿಎಲ್‌ ಸೇರಿದಂತೆ ತೈಲ ಮಾರಾಟ ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸುದೆ.

ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3ಕ್ಕೆ ಇಳಿಸಿದ್ದು, ಡೀಸೆಲ್‌ ಗೆ ಸಂಪೂರ್ಣವಾಗಿ ಸುಂಕದಿಂದ ವಿನಾಯಿತಿ ನೀಡಿದೆ. ಹಣಕಾಸು ಸಚಿವಾಲಯವು ಮಾ.26ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು ಹಿಂದಿನ 13ರಿಂದ 3ಕ್ಕೆ ಇಳಿಸಲಾಗಿದೆ. ಅದೇ ವೇಳೆ, ಡೀಸೆಲ್‌ ಮೇಲಿನ 10 ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ಈ ಕಡಿತಗಳು ತಕ್ಷಣದಿಂದಲೇ ಜಾರಿಯಾಗುತ್ತವೆ ಎಂದು ಸಚಿವಾಲಯ ತಿಳಿಸಿದೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಿದ ನಂತರ ಜಾಗತಿಕ ತೈಲದ ಬೆಲೆಗಳು ಸುಮಾರು 50% ಏರಿಕೆಯಾದರೂ, ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಬೆಲೆಗಳು ಸ್ಥಿರವಾಗಿದ್ದರಿಂದ ತೈಲ ಕಂಪನಿಗಳು ಆರ್ಥಿಕ ಒತ್ತಡ ಅನುಭವಿಸುತ್ತಿವೆ.

ರೇಟಿಂಗ್‌ ಏಜೆನ್ಸಿ ಪ್ರಕಾರ, ಕಚ್ಚಾ ತೈಲದ ಸರಾಸರಿ ಬೆಲೆ 100-105 ಪ್ರತಿಬ್ಯಾರೆಲ್‌ ಮಟ್ಟಕ್ಕೆ ಏರಿದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದಲ್ಲಿ ಕ್ರಮವಾಗಿ ಲೀಟರ್‌ಗೆ 11 ಮತ್ತು 14 ನಷ್ಟ ಉಂಟಾಗಬಹುದು.ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ತೈಲದ ಬೆಲೆ 119 ಪ್ರತಿಬ್ಯಾರೆಲ್‌ ತಲುಪಿದ್ದರೂ, ಈಗ ಅದು ಸುಮಾರು 100 ಮಟ್ಟದಲ್ಲಿ ಇದೆ.

ರಾಜಧಾನಿ ಪೆಟ್ರೋಲ್‌ ಲೀಟರ್‌ಗೆ 94.77 ಮತ್ತು ಡೀಸೆಲ್‌ 87.67 ದರದಲ್ಲಿವೆ.ಭಾರತ ತನ್ನ ಕಚ್ಚಾ ತೈಲದ ಅವಶ್ಯಕತೆಯ ಸುಮಾರು 88% ಮತ್ತು ಪ್ರಕೃತಿಕ ಅನಿಲದ ಅರ್ಧದಷ್ಟು ಆಮದು ಮಾಡಿಕೊಳ್ಳುತ್ತದೆ.

ಸಂಘರ್ಷ ತೀವ್ರಗೊಂಡಂತೆ ಇರಾನ್‌ ಈ ಜಲಸಂಧಿಯನ್ನು ತಡೆದು, ವಿಮಾ ಕಂಪನಿಗಳು ಕವರೆಜ್‌ ಹಿಂತೆಗೆದುಕೊಂಡ ಪರಿಣಾಮ, ತೈಲ ಸಾಗಣೆ ಬಹುತೇಕ ಸ್ಥಗಿತಗೊಂಡಿತ್ತು. ಭಾರತದ 102,075 ಪೆಟ್ರೋಲ್‌ ಬಂಕ್‌ಗಳಲ್ಲಿ 6,967ನ್ನು ನಡೆಸುವ ನಯಾರಾ ಎನರ್ಜಿ ತನ್ನ ಇನ್‌ಪುಟ್‌‍ ವೆಚ್ಚದ ಏರಿಕೆಯ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ.

ಅದರ ಬಂಕ್‌ಗಳಲ್ಲಿ ಪೆಟ್ರೋಲ್‌ 100.71 ಮತ್ತು ಡೀಸೆಲ್‌ 91.31 ದರದಲ್ಲಿದೆ.ಇನ್ನೊಂದೆಡೆ,ಜಿಯೋ-ಬಿಪಿ ತನ್ನ 2,185 ಔಟ್ಲೆಟ್‌ಗಳಲ್ಲಿ ಬೆಲೆಗಳನ್ನು ಇನ್ನೂ ಏರಿಸಿಲ್ಲ, ಆದರೂ ಕಂಪನಿಗೆ ನಷ್ಟ ಉಂಟಾಗಿದೆ.ರಾಜ್ಯಕ್ಕೆ ಸೇರಿದ ತೈಲ ಕಂಪನಿಗಳು ಮಾರುಕಟ್ಟೆಯ ಸುಮಾರು 90% ಹಂಚಿಕೆಯನ್ನು ಹೊಂದಿದ್ದು, ಅವುಗಳು ಇನ್ನೂ ಬೆಲೆಗಳನ್ನು ಸ್ಥಿರವಾಗಿಯೇ ಇಟ್ಟಿವೆ.

RELATED ARTICLES

Latest News