Homeರಾಷ್ಟ್ರೀಯಭಾರತ-ರಷ್ಯಾ ಸಂಬಂಧ ಅಭಾಧಿತ : ಎಸ್‌‍. ಜೈಶಂಕರ್

ಭಾರತ-ರಷ್ಯಾ ಸಂಬಂಧ ಅಭಾಧಿತ : ಎಸ್‌‍. ಜೈಶಂಕರ್

ನವದೆಹಲಿ, ಅ.14- ಯುರೋಪ್‌ನೊಂದಿಗಿನ ಸಂಬಂಧದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾ (ಮಾಸ್ಕೋ) ಏಷ್ಯಾದತ್ತ ಹೆಚ್ಚು ಒಲವು ತೋರುತ್ತಿರುವಾಗ, ಭಾರತವು ಅದಕ್ಕೆ ಒಂದು ಸ್ವಾಭಾವಿಕ ಆಯ್ಕೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಹೇಳಿದ್ದಾರೆ.

ಕಳೆದ ಎಂಟು ದಶಕಗಳಿಂದ ಮಾಸ್ಕೋದೊಂದಿಗೆ ಭಾರತ ಹೊಂದಿರುವ ದೀರ್ಘಕಾಲೀನ ಸಂಬಂಧಗಳು ಸ್ಥಿರವಾಗಿ ಉಳಿದುಕೊಂಡಿವೆ ಮತ್ತು ಈ ಪ್ರದೇಶದಲ್ಲಿ ಅಧಿಕಾರದ ಸಮತೋಲನವನ್ನು ಕಾಯ್ದುಕೊಳ್ಳಲು ಕೊಡುಗೆ ನೀಡುತ್ತಿವೆ ಎಂದು ಅವರು ಪ್ರತಿಪಾದಿಸಿದರು.

ಬ್ಲೂಮ್‌ಬರ್ಗ್‌ ನ್ಯೂ ಎಕಾನಮಿ ಫೋರಂನ ಪ್ರಧಾನ ಸಂಪಾದಕ ಜಾನ್‌ ಮಿಕ್ಲ್ ಥ್‌ವೇಟ್‌‍ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಜೈಶಂಕರ್‌ ಅವರು, ರಷ್ಯಾ-ಉಕ್ರೇನ್‌ ಯುದ್ಧದ ನಂತರ ರಷ್ಯಾ ಮತ್ತು ಯುರೋಪ್‌ ನಡುವಿನ ಸಂಬಂಧವು ಹದಗೆಟ್ಟಿದೆ ಮತ್ತು ಇದು ರಷ್ಯಾವನ್ನು ಏಷ್ಯಾ, ಅದರಲ್ಲೂ ವಿಶೇಷವಾಗಿ ಚೀನಾದತ್ತ ಹೆಚ್ಚು ಒಲವು ತೋರುವಂತೆ ಮಾಡಿದೆ ಎಂದು ಹೇಳಿದರು.

ನಾನು ಅದನ್ನು ಅಲ್ಲಗಳೆಯುತ್ತಿಲ್ಲ… ಇಂದು ರಷ್ಯಾ ಮತ್ತು ಯುರೋಪ್‌ ನಡುವೆ ಸಂಬಂಧವು ಬಹುತೇಕ ಮುರಿದುಬಿದ್ದಿದೆ ಮತ್ತು ಕಹಿಯಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಐತಿಹಾಸಿಕವಾಗಿ, ರಷ್ಯಾ ಯಾವಾಗಲೂ ತನ್ನನ್ನು ತಾನು ಯುರೋಪಿಯನ್‌ ದೇಶವೆಂದು ಪರಿಗಣಿಸಿದೆ. ಅದು ಯಾವಾಗಲೂ ಯುರೋಪ್‌ ಮತ್ತು ಅಮೆರಿಕದೊಂದಿಗಿನ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಿದೆ.

ಉಕ್ರೇನ್‌ ಯುದ್ಧದ ಪರಿಣಾಮವಾಗಿ, ರಷ್ಯಾ ಅನಿವಾರ್ಯವಾಗಿ ಏಷ್ಯಾದತ್ತ ಹೆಚ್ಚು ಮುಖ ಮಾಡಿದೆ. ಏಷ್ಯಾದಲ್ಲಿ, ಅದರ ಗಮನವು ಹೆಚ್ಚಾಗಿ ಚೀನಾದ ಮೇಲಿದೆ. ಆದರೆ ರಷ್ಯಾವು ಅನೇಕ ಆಯ್ಕೆಗಳನ್ನು ಹೊಂದಿರುವುದು ಹಾಗೂ ಏಷ್ಯಾದಲ್ಲಿ ಇತರ ಪ್ರಮುಖ ಮತ್ತು ಮಹತ್ವದ ಸಂಬಂಧಗಳನ್ನು ಹೊಂದಿರುವುದು ನಮ್ಮ ಮತ್ತು ಜಗತ್ತಿನ ಹಿತದೃಷ್ಟಿಯಿಂದ ಒಳ್ಳೆಯದು ಎಂದು ನಾನು ನಂಬುತ್ತೇನೆ, ಎಂದು ಅವರು ಹೇಳಿದರು.

RELATED ARTICLES
spot_img

Latest News