Thursday, April 16, 2026
Homeರಾಷ್ಟ್ರೀಯಹಾರ್ಮುಜ್‌ ಜಲಸಂಧಿ ತೆರೆಯುವಂತೆ ಇರಾನ್‌ಗೆ ಭಾರತ ಮನವಿ

ಹಾರ್ಮುಜ್‌ ಜಲಸಂಧಿ ತೆರೆಯುವಂತೆ ಇರಾನ್‌ಗೆ ಭಾರತ ಮನವಿ

India urges de-escalation as Strait of Hormuz blockade disrupts shipping

ನವದೆಹಲಿ,ಏ.3-ಮುಚ್ಚಿರುವ ಹಾರ್ಮುಜ್‌ ಜಲಸಂಧಿ ತೆರೆಯುವಂತೆ ಭಾರತ ಇರಾನ್‌ಗೆ ಮನವಿ ಮಾಡಿಕೊಂಡಿದೆ.ಸಂಘರ್ಷ ಪೀಡಿತ ಜಲಮಾರ್ಗದಲ್ಲಿ ಹಲವಾರು ದೇಶಿಯ ನಾಗರಿಕರನ್ನು ಕಳೆದುಕೊಂಡ ಏಕೈಕ ದೇಶ ನಮದಾಗಿದೆ ಎಂದು ಭಾರತ ಹೇಳಿದೆ.

ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ಯುಕೆ ಕರೆದ ಬಹುಪಕ್ಷೀಯ ಸಭೆಯಲ್ಲಿ, ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಭಾರತವು ಒತ್ತಿ ಹೇಳಿದೆ.

60 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ವರ್ಚುವಲ್‌ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ, ನಡೆಯುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕತೆಯು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವಾಗಿದೆ ಎಂಬ ಭಾರತದ ಅಧಿಕೃತ ನಿಲುವನ್ನು ಪುನರುಚ್ಚರಿಸಿದರು.

ಭಾರತದ ಇಂಧನ ಭದ್ರತೆಯ ಮೇಲೆ ಬಿಕ್ಕಟ್ಟಿನ ಪರಿಣಾಮ ಮತ್ತು ಕೊಲ್ಲಿಯಲ್ಲಿ ವ್ಯಾಪಾರಿ ಹಡಗುಗಳ ಮೇಲಿನ ದಾಳಿಯಲ್ಲಿ ನಾವಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತವಾಗಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ಸುಮಾರು 10 ಮಿಲಿಯನ್‌ ಭಾರತೀಯ ನಾಗರಿಕರು ಗಲ್‌್ಫ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ರಾಷ್ಟ್ರಗಳಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ೆಎಂಟು ಭಾರತೀಯ ನಾಗರಿಕರು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಭಾರತವು ಇರಾನ್‌ನಿಂದ 204 ಪ್ರಜೆಗಳಿಗೆ ಭೂ ಗಡಿಯ ಮೂಲಕ ಅಜೆರ್ಬೈಜಾನ್‌ಗೆ ನಿರ್ಗಮಿಸಲು ಅನುಕೂಲ ಮಾಡಿಕೊಟ್ಟಿದೆ , ಮುಂಬರುವ ದಿನಗಳಲ್ಲಿ ಹೆಚ್ಚಿನವರು ಮರಳುವ ನಿರೀಕ್ಷೆಯಿದೆ.

ಹಾರ್ಮುಜ್‌ ಜಲಸಂಧಿಯ ಪರಿಸ್ಥಿತಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಭಾರತಕ್ಕೆ ಭರವಸೆ ನೀಡಿದೆ. ಹಾರ್ಮುಜ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳು ಸುರಕ್ಷಿತವಾಗಿರುತ್ತದೆ ಮತ್ತು ಭಾರತ ಶಾಂತವಾಗಿರಬೇಕು ಎಂದು ಇರಾನ್‌ ಭಾರತಕ್ಕೆ ಭರವಸೆ ನೀಡಿದೆ.

ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದವು , ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ ಜಾಗತಿಕ ವ್ಯಾಪಾರಕ್ಕೆ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ.

RELATED ARTICLES

Latest News