ನವದೆಹಲಿ, ಮೇ 15: ಕೇರಳಂ ಮುಖ್ಯಮಂತ್ರಿ ಆಯ್ಕೆಯಲ್ಲಿ ತಮ್ಮನ ವಿರುದ್ಧ ಅಕ್ಕ ಗೆದ್ದಿದ್ದಾರೆಂದು ದೇಶದಾದ್ಯಂತ ಮಾತುಗಳು ಹರಿದಾಡುತ್ತಿವೆ. ಕಳೆದ 10 ದಿನಗಳಿಂದ ಕೇರಳಂ ಮುಖ್ಯಮಂತ್ರಿ ಆಯ್ಕೆ ಕುರಿತು ಸಾಕಷ್ಟು ಹೈಡ್ರಾಮಾಗಳು ನಡೆದ ನಂತರ ಕೇರಳ ಸಿಎಂ ಆಗಿ ವಿ ಡಿ ಸತೀಶನ್ ಅವರನ್ನು ಆಯ್ಕೆ ಮಾಡಿ ಘೋಷಿಸಿರುವುದರ ಹಿಂದೆ ಪ್ರಿಯಾಂಕ ವಾದ್ರಾರವರ ಹಠ ಕಾರಣ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್‌ನ ನಾಯಕರ ಆಪ್ತರಾಗಿದ್ದ ವೇಣುಗೋಪಾಲ್ ಪರ ಹಲವಾರು ಶಾಸಕರು ಇದ್ದರೂ ಕೂಡ ಅದನ್ನು ಲೆಕ್ಕಕ್ಕೆ ಪಡೆಯದೇ ಸಂಸದೆಯೂ ಆಗಿರುವ ಪ್ರಿಯಾಂಕ ವಾದ್ರಾ ಒಂದೇ ಮಾತಿನಲ್ಲಿ ಸತೀಶನ್ ಪರ ಸಿಎಂ ಆಗಬೇಕೆಂದು ಪಟ್ಟು ಹಿಡಿದಿದ್ದರಂತೆ.!! ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಾಕಷ್ಟು ಮಾತುಕತೆ ನಡೆಸಿ ಮನವೊಲಿಕೆ ಪ್ರಯತ್ನ ನಡೆಸಿದ್ದರೂ ಕೂಡ ಕೇರಳದ ವೈನಾಡು ಪ್ರದೇಶವನ್ನು ಪ್ರತಿನಿಧಿಸುತ್ತಿರುವ ತನ್ನ ಮಾತೇ ಅಂತಿಮ ಎಂದು ಹೇಳಿದ್ದಾರೆ.
ಮುಂದೊಂದು ದಿನ ಪ್ರಿಯಾಂಕ ಕೇರಳದ ಮುಖ್ಯಮಂತ್ರಿಯಾದರೂ ಕೂಡ ಅಚ್ಚರಿ ಪಡಬೇಕಾಗಿಲ್ಲ. ಆದರೆ ರಾಹುಲ್ ಗಾಂಧಿಗೆ ಇದು ಅಕ್ಕ ನೀಡಿದ ದೊಡ್ಡ ಪೆಟ್ಟು ಎಂದು ಹೇಳಲಾಗುತ್ತಿದೆ. ವೇಣುಗೋಪಾಲ್ ಅವರು ಕೊನೆ ಕ್ಷಣದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ನವದೆಹಲಿಯಲ್ಲಿದ್ದಾಗಲೇ ದಿಢೀರನೇ ಸತೀಶನ್ ಅವರ ಹೆಸರನ್ನು ಘೋಷಿಸಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ. ಅಕ್ಕನ ಮುಂದೆ ಈಗ ತಮನ ಆಟ ನಡೆಯಲಿಲ್ಲ, ಸೋತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
