Homeರಾಷ್ಟ್ರೀಯಉತ್ತರ ಪ್ರದೇಶ : ವ್ಯಾನ್‌ಗೆ ಟ್ರಕ್‌ ಅಪ್ಪಳಿಸಿ 6 ಮಂದಿ ದುರ್ಮರಣ

ಉತ್ತರ ಪ್ರದೇಶ : ವ್ಯಾನ್‌ಗೆ ಟ್ರಕ್‌ ಅಪ್ಪಳಿಸಿ 6 ಮಂದಿ ದುರ್ಮರಣ

ಕುಶಿನಗ, ನ. 2 (ಪಿಟಿಐ): ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ತಡರಾತ್ರಿ ವ್ಯಾನ್‌ ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಅಪ್ರಾಪ್ತ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಟಾ ಪೊಲೀಸ್‌‍ ಠಾಣೆಯ ಎಸ್‌‍ಎಚ್‌ಒ ಧರ್ಮೇಂದ್ರ ಸಿಂಗ್‌ ಮಾತನಾಡಿ, ಭಾನುವಾರ ರಾತ್ರಿ 11.00 ಗಂಟೆ ಸುಮಾರಿಗೆ ಹಟಾ-ಪಿಪ್ರೈಚ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ವ್ಯಾನ್‌ನಲ್ಲಿದ್ದವರು ತಿಲಕ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ವ್ಯಾನ್‌ ಸಂಪೂರ್ಣವಾಗಿ ಜಖಂಗೊಂಡಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೃತರನ್ನು ಕನ್ಹಯ್ಯ ಪ್ರಸಾದ್‌ (40), ರಾಮ್‌ವಿಲಾಸ್‌‍ (65), ರಾಮ್‌ ಮಿಲನ್‌ (35), ಮೃದುಲ್‌ ಮಿಶ್ರಾ (35), ರಂಜಯ್‌ ಗುಪ್ತಾ (32) ಮತ್ತು ಮಿಥಶ್‌ ಗುಪ್ತಾ (22) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಕುಶಿನಗರ ಜಿಲ್ಲೆಯವರೇ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಯನ್‌ (16) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕುಶಿನಗರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದ ನಂತರ ಸ್ಥಳದಿಂದ ಪರಾರಿಯಾದ ಟ್ರಕ್‌ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News