Homeರಾಷ್ಟ್ರೀಯದಿನಕ್ಕೆ 12 ಗಂಟೆ ಕೆಲಸ, 300 ರೂ. ಗಳಿಕೆ : ಮುಂಬೈನ ವೃದ್ಧ ಬೀದಿವ್ಯಾಪಾರಿ ವಿಡಿಯೋ...

ದಿನಕ್ಕೆ 12 ಗಂಟೆ ಕೆಲಸ, 300 ರೂ. ಗಳಿಕೆ : ಮುಂಬೈನ ವೃದ್ಧ ಬೀದಿವ್ಯಾಪಾರಿ ವಿಡಿಯೋ ವೈರಲ್

Mumbai man, 82, earns Rs 300 a day selling snacks. His struggle is heartbreaking

ಮುಂಬೈ,ಜೂ.17- ಮುಂಬೈನ ವೃದ್ಧ ಬೀದಿವ್ಯಾಪಾರಿಯೊಬ್ಬರ ಹೃದಯಸ್ಪರ್ಶಿವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿದ್ದು, ಇಳಿ ವಯಸ್ಸಿನಲ್ಲೂ ಮಧ್ಯರಾತ್ರಿವರೆಗೂ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೃದ್ಧನ ಹುಮಸ್ಸು ಯುವಕರಿಗೆ ಸ್ಪೂರ್ತಿ ನೀಡುತ್ತಿದೆ.

82 ವರ್ಷದ ಮನ್ಸುಖ್‌ ಕಾಕಾ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ತನ್ನ ವಯಸ್ಸು ಮತ್ತು ಸಾಧಾರಣ ಗಳಿಕೆಯ ಹೊರತಾಗಿಯೂ ಪ್ರತಿದಿನ ಪಾದಚಾರಿ ಮಾರ್ಗದಲ್ಲಿ ಮನೆಯಲ್ಲಿ ತಯಾರಿಸಿದ ತಿಂಡಿ ಪಾಕೆಟ್‌ಗಳನ್ನು ದಿನದಲ್ಲಿ ದೀರ್ಘ ಗಂಟೆಗಳ ಮಾರಾಟ ಮಾಡುತ್ತಿದ್ದಾರೆ.

ಮನ್ಸುಖ್‌ ಕಾಕಾ ದಶಕಗಳ ಕಾಲ ಸೀರೆ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್‌ -19 ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ತಮ ಕೆಲಸವನ್ನು ಕಳೆದುಕೊಂಡಿದ್ದರು. ಅವರನ್ನು ನೋಡಿಕೊಳ್ಳಲು ಮಗ ಕೂಡ ತೊರೆಯಬೇಕಾಗಿತ್ತು. ಚೇತರಿಸಿಕೊಂಡ ನಂತರ ಮನ್ಸುಖ್‌ ಕಾಕಾ ತಮ ಕುಟುಂಬವನ್ನು ಪೋಷಿಸಲು ತಮ ಮನೆಯ ಬಳಿ ಒಂದು ಸಣ್ಣ ತಿಂಡಿ ಅಂಗಡಿಯನ್ನು ತೆರೆದಿದ್ದು, ಗ್ರಾಹಕರ ಬರುವಿಕೆಯನ್ನೇ ತಾಳೆಯಿಂದ ಕಾಯುವ ವೃದ್ಧ ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.

ವೈರಲ್ಲಾದ ವಿಡಿಯೋದಲ್ಲಿ ಫರ್ಸಾನ್‌ ಪ್ಯಾಕೆಟ್‌ಗಳನ್ನು ಜೋಡಿಸುವುದು, ಗ್ರಾಹಕರನ್ನು ಸ್ವಾಗತಿಸುವುದು ಮತ್ತು ಗಮನಾರ್ಹ ಸಮರ್ಪಣೆಯೊಂದಿಗೆ ತಮ ವ್ಯವಹಾರವನ್ನು ನಿರ್ವಹಿಸುವುದು ಕಂಡುಬಂದಿದೆ.

ಸಾಮಾಜಿಕ ಕಳಕಳಿಯುಳ್ಳ ಆರಾಧನಾ ಚಟರ್ಜಿ ಎಂಬುವರು ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಮನ್ಸುಖ್‌ ಕಾಕಾ ಅವರ ಸಹೋದರಿ ಈ ತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸಿ ಕೊಡುತ್ತಾರೆ. ನಂತರ ಅವುಗಳನ್ನು ಪ್ರತಿದಿನ ಪ್ಯಾಕ್‌ ಮಾಡಿ ಅಂಗಡಿಗೆ ತರುತ್ತಾರೆ. ಅವರ ಪರಿಶ್ರಮ ಮತ್ತು ದೀರ್ಘ ಸಮಯದ ಹೊರತಾಗಿಯೂ, ದೈನಂದಿನ ಗಳಿಕೆ ಸರಾಸರಿ 300 ರೂ. ಮಾತ್ರ.

ವಯಸ್ಸಾದ ವೃದ್ಧ ಪ್ರತಿ ವಹಿವಾಟಿನ ಕೈಬರಹದ ದಾಖಲೆಯನ್ನು ಸಣ್ಣ ಡೈರಿಯಲ್ಲಿ ಎಚ್ಚರಿಕೆಯಿಂದ ಬರೆದಿಡುತ್ತಾರೆ. ಈ ವಯಸ್ಸಿನಲ್ಲೂ, ತುಂಬಾ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ತನ್ನ ಅಂಗಡಿಯನ್ನು ನಡೆಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಟಾಲ್‌ ಇರುವ ಸ್ಥಳದ ಬಗ್ಗೆ ವಿವರಗಳನ್ನು ಕೋರಿದ್ದು, ತಮ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ಖರೀದಿಸಿ ಅವರ ಜೀವನೋಪಾಯಕ್ಕೆ ಕೊಡುಗೆ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

RELATED ARTICLES
spot_img

Latest News