Thursday, May 14, 2026
Homeರಾಷ್ಟ್ರೀಯವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ತಮಿಳುನಾಡಿನ ನೂತನ ಶಾಸಕರು

ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ತಮಿಳುನಾಡಿನ ನೂತನ ಶಾಸಕರು

New Tamil Nadu MLAs take oath in assembly

ಚೆನ್ನೈ, ಮೇ 11 (ಪಿಟಿಐ) ಬರೊಬ್ಬರಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯ ಹೊಸದಾಗಿ ಆಯ್ಕೆಯಾದ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದರು.ಟಿವಿಕೆ ಮುಖ್ಯಸ್ಥ ಸಿ ಜೋಸೆಫ್‌ ವಿಜಯ್‌ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ವಿಜಯ್‌ ಸೇರಿದಂತೆ ಎಲ್ಲ ಶಾಸಕರುಗಳು ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿ ಸಿ ಜೋಸೆಫ್‌ ವಿಜಯ್‌‍, ಇತರ ಒಂಬತ್ತು ಸಚಿವರು, ಎಡಪ್ಪಾಡಿ ಕೆ ಪಳನಿಸ್ವಾಮಿ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಮತ್ತು ಹೊಸದಾಗಿ ಆಯ್ಕೆಯಾದ ಶಾಸಕರು ಇಂದು ತಮಿಳುನಾಡು ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂಗಾಮಿ ಸ್ಪೀಕರ್‌ ಎಂ ವಿ ಕರುಪ್ಪಯ್ಯ ಪ್ರಮಾಣ ವಚನ ಬೋಧಿಸಿದರು.ಶಾಸಕರ ಪ್ರಮಾಣ ವಚನ ಸ್ವೀಕಾರಕ್ಕಾಗಿ ವಿಧಾನಸಭೆಯ ಕಲಾಪ ಬೆಳಿಗ್ಗೆ 9.30 ಕ್ಕೆ ಹಂಗಾಮಿ ಸ್ಪೀಕರ್‌ ಅವರ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭವಾಯಿತು.

ಶಾಸಕರಾಗಿ ಮೊದಲು ಪ್ರಮಾಣ ವಚನ ಸ್ವೀಕರಿಸಿದವರು ಮುಖ್ಯಮಂತ್ರಿ ಮತ್ತು ಎನ್‌ ಆನಂದ್‌ ಮತ್ತು ಆಧವ್‌ ಅರ್ಜುನ ಸೇರಿದಂತೆ ಒಂಬತ್ತು ಸಚಿವರು ನಂತರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದರ ನಂತರ, ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌‍, ಮಾಜಿ ಮುಖ್ಯಮಂತ್ರಿಗಳಾದ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಎಂಕೆ ನಾಯಕ ಓ ಪನ್ನೀರ್‌ಸೆಲ್ವಂ, ಅಗ್ರಿ ಕೃಷ್ಣಮೂರ್ತಿ ಮತ್ತು ಕೆ ಪಿ ಅನ್ಬಳಗನ್‌ ಸೇರಿದಂತೆ ಎಐಎಡಿಎಂಕೆ ಸದಸ್ಯರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.

RELATED ARTICLES

Latest News