ನವದೆಹಲಿ,ಮೇ.4- ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ, ಪ್ರಧಾನಿ ಮೋದಿ ಇಂದು ಸಂಜೆ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ. ಹಿಂದಿನ ಚುನಾವಣಾ ಜಯಗಳ ಸಂದರ್ಭಗಳಂತೆ, ಈ ಬಾರಿ ಕೂಡ ಪ್ರಧಾನಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ.
ಮೋದಿ ಅವರು ಇಂದು ಸಂಜೆ 6 ಗಂಟೆಗೆ ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಲಿದ್ದಾರೆಎಂದು ಬಿಜೆಪಿ ಮುಖ್ಯ ವಕ್ತಾರ ಅನೀಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ದಿಗ್ವಿಜಯ ಮತ್ತು ಅಸ್ಸಾಂ ಜೊತೆಗೆ,ಪುದುಚೇರಿಯಲ್ಲಿಯೂ ಅಧಿಕಾರವನ್ನು ಉಳಿಸಿಕೊಳುತ್ತಿದೆ.
ಇನ್ನೊಂದೆಡೆ, ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಜೊತೆ ಹೊಂದಾಣಿಕೆ ಸಾಧ್ಯತೆಯೂ ಇದೆ.
