Wednesday, April 15, 2026
Homeರಾಷ್ಟ್ರೀಯಜಲಿಯನ್‌ವಾಲಾಬಾಗ್‌ ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು ನಮನ

ಜಲಿಯನ್‌ವಾಲಾಬಾಗ್‌ ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು ನಮನ

President Murmu, PM Modi pay tribute to Jallianwala Bagh martyrs

ನವದೆಹಲಿ, ಏ. 13 (ಪಿಟಿಐ) ಕಳೆದ 1919 ರ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡದಲ್ಲಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಗೌರವ ಸಲ್ಲಿಸಿದರು ಮತ್ತು ರಾಷ್ಟ್ರವು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತದೆ ಎಂದು ಹೇಳಿದರು.

ಅವರ ದೇಶಭಕ್ತಿಯ ಮನೋಭಾವವು ಸಮರ್ಪಣೆ ಮತ್ತು ನಿಷ್ಠೆಯೊಂದಿಗೆ ರಾಷ್ಟ್ರೀಯ ಸೇವೆಯ ಹಾದಿಯಲ್ಲಿ ಮುಂದುವರಿಯಲು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಮುರ್ಮು ಎಕ್ಸ್ ಮಾಡಿದ್ದಾರೆ.

ವಸಾಹತುಶಾಹಿ ಆಡಳಿತಕ್ಕೆ ದಮನಕಾರಿ ಅಧಿಕಾರವನ್ನು ನೀಡಿದ ರೌಲತ್‌ ಕಾಯ್ದೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನೂರಾರು ಜನರನ್ನು 1919 ರ ಈ ದಿನದಂದು ಪಂಜಾಬ್‌ನ ಅಮೃತಸರದ ಜಲಿಯನ್‌ ವಾಲಾ ಬಾಗ್‌ನಲ್ಲಿ ಬ್ರಿಟಿಷ್‌ ಪಡೆಗಳು ಯಾವುದೇ ಪ್ರಚೋದನೆಯಿಲ್ಲದೆ ಗುಂಡಿಕ್ಕಿ ಕೊಂದಿದ್ದವು.

ಜಲಿಯನ್‌ ವಾಲಾ ಬಾಗ್‌ನಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಎಲ್ಲಾ ಅಮರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ನನ್ನ ವಿನಮ್ರ ಗೌರವವನ್ನು ಸಲ್ಲಿಸುತ್ತೇನೆ. ಈ ಘಟನೆಯು ದೇಶವಾಸಿಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೊಸ ಪ್ರಜ್ಞೆ ಮತ್ತು ದೃಢ ಸಂಕಲ್ಪವನ್ನು ಹುಟ್ಟುಹಾಕಿತು. ರಾಷ್ಟ್ರವು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

RELATED ARTICLES

Latest News