ಮುಂಬೈ,ಏ.8- ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಸೈನಿಕ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ ಘೋಷಿಸಿದ ನಂತರ, ಇಂದು ಬೆಳಗಿನ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಡಾಲರ್ ಎದುರು 50 ಪೈಸೆ ಏರಿ 92.56ಕ್ಕೆ ತಲುಪಿತು.
ವಿದೇಶಿ ವಿನಿಮಯ (ಫಾರೆಕ್ಸ್ ) ವ್ಯಾಪಾರಿಗಳ ಪ್ರಕಾರ, ಈ ಯುದ್ಧ ವಿರಾಮ ಘೋಷಣೆಯಿಂದ
ಖರೀದಿ ಹೆಚ್ಚಾಯಿತು. ಏಷ್ಯನ್ ಷೇರುಗಳು, ಡೌ ಫ್ಯೂಚರ್ಸ್, ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾದರೆ, ಬ್ರೆಂಟ್ ಕ್ರೂಡ್ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಕ್ಕಿಂತ ಕಡಿಮೆಯಾಗಿ 96ಕ್ಕೆ ಇಳಿಯಿತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೂಪಾಯಿ 92.56 ಮಟ್ಟಕ್ಕೆ ಬಲಗೊಂಡಿದೆ. ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 92.92ಕ್ಕೆ ತೆರೆಯಲ್ಪಟ್ಟು ನಂತರ 92.56 ಮಟ್ಟಕ್ಕೆ ಏರಿತು. ಮಂಗಳವಾರ ರೂಪಾಯಿ 93.06 ಮಟ್ಟದಲ್ಲಿ ಮುಚ್ಚಿತ್ತು.ಈಗ ಮಾರುಕಟ್ಟೆಯ ಗಮನವು ಹಣಕಾಸು ವರ್ಷದ 2026-27ರ ಆರ್‌ಬಿಐ ಮೊದಲ ಹಣಕಾಸು ನೀತಿ ಸಮಿತಿ ಸಭೆಯ ಮೇಲೆ ಕೇಂದ್ರೀಕೃತವಾಗಿದೆ.
ದರ ಏರಿಕೆ ಆರ್ಥಿಕ ಬೆಳವಣಿಗೆ , ಜಾಗತಿಕ ಅನಿಶ್ಚಿತತೆ ಮತ್ತು ಕರೆನ್ಸಿ ಸ್ಥಿರತೆ ಕುರಿತು ನಿಲುವು ಮುಖ್ಯವಾಗಿರಲಿದೆ. ಸಿಆರ್ -ಪೋಇರೆಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಅವರ ಪ್ರಕಾರ, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ನೀತಿಯ ಧೋರಣೆ ಬಹಳ ಗಮನ ಸೆಳೆಯಲಿದೆ ಎಂದಿದ್ದಾರೆ.
ತೈಲ, ಷೇರು ಮತ್ತು ಕರೆನ್ಸಿ ಮಾರುಕಟ್ಟೆಗಳಲ್ಲಿ ದೊಡ್ಡ ಮಟ್ಟದ ಚಲನೆ ಕಂಡುಬಂದಿದೆ.ಮುಂದಿನ ದಿನಗಳಲ್ಲಿ ರೂಪಾಯಿ 92.50 ರಿಂದ 93.50 ನಡುವೆ ಅಲ್ಪ ಅಸ್ಥಿರತೆಯೊಂದಿಗೆ ಚಲಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ದೇಶೀಯ ಷೇರು ಮಾರುಕಟ್ಟೆಯಲ್ಲಿ, ಸೆನ್ಸೆಕ್‌್ಸ 2,527.47 ಅಂಕಗಳು (3.39%) ಏರಿ 77,144.05ಕ್ಕೆ ತಲುಪಿದರೆ, ನಿಫ್ಟಿ 767.25 ಅಂಕಗಳು (3.32%) ಏರಿ 23,890.90 ಮಟ್ಟದಲ್ಲಿ ವಹಿವಾಟಾಗುತ್ತಿತ್ತು.
