Thursday, April 16, 2026
Homeರಾಷ್ಟ್ರೀಯಪೊಲೀಸ್‌‍ ಸಿಬ್ಬಂದಿಯ ಚಿನ್ನದ ಸರ ಎಗರಿಸಿದ್ದ ಸರಗಳ್ಳ ಫಿರೋಜ್‌ ಖಾನ್‌ ಅರೆಸ್ಟ್

ಪೊಲೀಸ್‌‍ ಸಿಬ್ಬಂದಿಯ ಚಿನ್ನದ ಸರ ಎಗರಿಸಿದ್ದ ಸರಗಳ್ಳ ಫಿರೋಜ್‌ ಖಾನ್‌ ಅರೆಸ್ಟ್

Thief Feroz Khan arrested for snatching policeman's gold chain

ಥಾಣೆ, ಫೆ.20- ಪೊಲೀಸ್‌‍ ಸಿಬ್ಬಂದಿ ಕೊರಳಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನುಮಹಾರಾಷ್ಟ್ರದ ಥಾಣೆ ಪೊಲೀಸರು ಬಂಧಿಸಿದ್ದಾರೆ. ಥಾಣೆಯ ಮುಂಬ್ರಾ ಪ್ರದೇಶದ ನಿವಾಸಿ ಸೈಫ್‌ ಫಿರೋಜ್‌ ಖಾನ್‌ (23) ಬಂಧಿತ ಚೋರನಾಗಿದ್ದಾನೆ.

ಕಳೆದ ಜ.31ರ ರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ವಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪೊಲೀಸ್‌‍ ಸಿಬ್ಬಂದಿಯ ಕುತ್ತಿಗೆಯಿಂದ ಚಿನ್ನದ ಸರವನ್ನುಕಸಿಯಲಾಗಿತ್ತು.

ಘಟನೆ ನಡೆದು ಆರು ದಿನಗಳ ನಂತರ, ಈ ಪ್ರದೇಶದಲ್ಲಿ ವೃದ್ಧರೊಬ್ಬರನ್ನು ಇದೇ ರೀತಿ ಗುರಿಯಾಗಿಸಿ ಚಿನ್ನದ ಸರ ಸುಲಿಗೆ ಮಾಡಲಾಗಿತ್ತು ಎಂದು ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ. ಒ್ರಕೆಣ ದಾಖಲಿಸಿ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ, ಆರೋಪಿ ಸೈಫ್‌ ಫಿರೋಜ್‌ ಖಾನ್‌ನನ್ನು ಬಂಧಿಸಲಾಗಿದೆ.

ಸುಲಿಗೆ ಮಾಡಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದ್ದು, ಆತನ ಸಹಚರನನ್ನು ನೌಶಾದ್‌ ಖಾನ್‌ ತಲೆಮೆರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News