Homeರಾಷ್ಟ್ರೀಯಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿಗೆ ಯೋಗಿ ಅಭಿನಂದನೆ

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿಗೆ ಯೋಗಿ ಅಭಿನಂದನೆ

ಲಕ್ನೋ, ಅ. 7 (ಪಿಟಿಐ): ಕಳೆದ 25 ವರ್ಷಗಳಿಂದ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಭಿನಂದಿಸಿದರು.ಮೋದಿಯವರ ಜೀವನ ಮತ್ತು ನಾಯಕತ್ವವು ಸಾರ್ವಜನಿಕ ಸೇವೆ ಹಾಗೂ ರಾಷ್ಟ್ರವೇ ಮೊದಲು ಎಂಬ ತತ್ವದ ಬಗೆಗಿನ ಅಚಲ ಬದ್ಧತೆಯಿಂದ ಕೂಡಿದೆ ಎಂದು ಅವರು ಬಣ್ಣಿಸಿದರು.

2001ರ ಅ.7ರಿಂದ ಮೋದಿ ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ; ಮೊದಲು ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಮತ್ತು ನಂತರ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದ ಬಳಿಕ ಭಾರತದ ಪ್ರಧಾನ ಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವೈಭವಯುತ ವರ್ಷಗಳನ್ನು ಪೂರೈಸಿರುವುದು ಎಲ್ಲರಿಗೂ ಅತ್ಯಂತ ಸಂತೋಷದ ವಿಷಯ ಎಂದು ಆದಿತ್ಯನಾಥ್‌ ಎಕ್‌್ಸ ಮಾಡಿದ್ದಾರೆ.
ಭಾರತದ ಅಸ್ಮಿತೆ, ಸ್ವಾಭಿಮಾನ ಮತ್ತು ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ನಿರಂತರವಾಗಿ ಸಮರ್ಪಣಾ ಭಾವದಿಂದ ಶ್ರಮಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮೋದಿಯವರ 25 ವರ್ಷಗಳ ರಾಷ್ಟ್ರ ಸೇವೆಗೆ ಸಮರ್ಪಣೆಯು ಅವರ ಸಾರ್ವಜನಿಕ ಸೇವೆಯ ಬದ್ಧತೆ, ದೃಢ ಸಂಕಲ್ಪ, ದೂರದೃಷ್ಟಿಯ ನಾಯಕತ್ವ ಮತ್ತು ರಾಷ್ಟ್ರಕ್ಕೆ ಆದ್ಯತೆ ನೀಡುವ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಆದಿತ್ಯನಾಥ್‌ ಹೇಳಿದರು. ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಮತ್ತು ಸಬಲ ಭಾರತವನ್ನು ನಿರ್ಮಿಸಲು ಪ್ರಧಾನಿಯವರ ಜೀವನವು ದೇಶದ ಜನರಿಗೆ ಸ್ಫೂರ್ತಿ ನೀಡುತ್ತದೆ, ಎಂದು ಅವರು ಹೇಳಿದರು.

ರಾಷ್ಟ್ರಕ್ಕೆ ಅವಿರತ ಸೇವೆಯ ಹಾದಿಯಲ್ಲಿ 25 ವರ್ಷಗಳನ್ನು ಪೂರೈಸಿದ ಮೋದಿ ಅವರಿಗೆ ಮುಖ್ಯಮಂತ್ರಿ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಆದಿತ್ಯನಾಥ್‌ ಅವರ ಪೋಸ್ಟ್‌ನೊಂದಿಗೆ 25 (ಸೇವೆಯ 25 ವರ್ಷಗಳು) ಎಂಬ ಹ್ಯಾಶ್‌ಟ್ಯಾಗ್‌‍ ಅನ್ನು ಬಳಸಲಾಗಿತ್ತು.

RELATED ARTICLES
spot_img

Latest News