Thursday, November 6, 2025
Home Blog Page 1814

ಇಸ್ರೇಲ್-ಹಮಾಸ್ ಬಿಕ್ಕಟ್ಟ ನಿವಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಅಂಗೀಕಾರ

ವಿಶ್ವಸಂಸ್ಥೆ, ನ.16- ಸಂಘರ್ಷ ಪೀಡಿತ ಗಾಜಾದಾದ್ಯಂತ ಮಾನವೀಯ ನೆರವುಗಳ ಪೂರೈಕೆಗೆ ಅಡೆತಡೆ ಇಲ್ಲದಂತೆ ಕಾರಿಡಾರ್‍ಗಳ ನಿರ್ಮಾಣಕ್ಕೆ ಅನುಮತಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕರೆ ನೀಡಿದೆ. ಅಂತಿಮವಾಗಿ ತಿಂಗಳಿನಿಂದಲೂ ಚಾಲ್ತಿಯಲ್ಲಿದ್ದ ಇಸ್ರೇಲ್-ಹಮಾಸ್ ಬಿಕ್ಕಟ್ಟನ್ನು ನಿವಾರಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.

15-ರಾಷ್ಟ್ರಗಳ ಕೌನ್ಸಿಲ್ ಬುಧವಾರದಂದು ಸಭೆ ಸೇರಿ ನಿರ್ಣಯ ಅಂಗೀಕರಿಸಿವೆ. ಹಮಾಸ್ ಮತ್ತು ಇತರ ಗುಂಪುಗಳು ಎಲ್ಲಾ ಒತ್ತೆಯಾಳಗಳನ್ನು ಅದರಲ್ಲೂ ವಿಶೇಷವಾಗಿ ಮಕ್ಕಳು, ಮಹಿಳೆಯರನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು, ತಕ್ಷಣದ ಮಾನವೀಯ ನೆರವಿನ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

ರಷ್ಯಾ, ಅಮೆರಿಕಾ ಮತ್ತು ಇಂಗ್ಲೆಂಡ್ ಸೇರಿ ಮೂರು ರಾಷ್ಟ್ರಗಳ ಗೈರು ಹಾಜರಿ ಹೊರತಾಗಿಯೂ, 12 ಮತಗಳು ಮಾಲ್ಟಾ-ಕರಡು ನಿರ್ಣಯದ ಪರವಾಗಿ ಚಲಾವಣೆಗೊಂಡಿವೆ. ನಿರ್ಣಯದ ವಿರುದ್ಧ ಯಾವ ರಾಷ್ಟ್ರಗಳು ಮತ ಚಲಾವಣೆ ಮಾಡಿಲ್ಲ. ಗಾಜಾ ಪಟ್ಟಿಯಾದ್ಯಂತ ಸಾಕಷ್ಟು ದಿನಗಳವರೆಗೆ ತುರ್ತು ಮತ್ತು ವಿಸ್ತೃತ ಮಾನವೀಯ ವಿರಾಮಗಳಿಗಾಗಿ ಕಾರಿಡಾರ್‍ಗಳನ್ನು ಸಕ್ರಿಯಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ಪೂರ್ಣ, ತ್ವರಿತ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಮಾನವೀಯ ಪ್ರವೇಶವನ್ನು ಒದಗಿಸಲು ವಿಶ್ವಸಂಸ್ಥೆ ಕರೆ ನೀಡಿದೆ. ಅಗತ್ಯ ಸರಕುಗಳು, ಸೇವೆಗಳ ನಿರಂತರ, ಅಡೆತಡೆಯಿಲ್ಲದ ನಿಬಂಧನೆಯನ್ನು ಸುಲಭಗೊಳಿಸಲು ಪಾಲುದಾರರನ್ನು ಅನುಷ್ಠಾನಗೊಳಿಸುವುದು ಈ ನಿರ್ಣಯದ ಉದ್ದೇಶವಾಗಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಉಗ್ರಗಾಮಿ ಗುಂಪು ದಾಳಿ ಮಾಡಿತ್ತು, ನಂತರ ಇಸ್ರೇಲ್-ಹಮಾಸ್ ಸಂಘರ್ಷ ಭುಗಿಲೆದ್ದಿದೆ. ಮಾನವೀಯ ಪ್ರವೇಶವನ್ನು ಅನುಮತಿಸುವ ಕುರಿತು ಕ್ರಮ ತೆಗೆದುಕೊಳ್ಳಲು ಕಳೆದ ತಿಂಗಳು ನಾಲ್ಕು ವಿಫಲ ಪ್ರಯತ್ನಗಳನ್ನು ನಡೆಸಲಾಗಿದೆ. ನಂತರ ಕೌನ್ಸಿಲ್‍ನಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.

ಭಯೋತ್ಪಾದನಾ ಕೃತ್ಯಗಳಿಂದ ಉಂಟಾದ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸದಸ್ಯ ರಾಷ್ಟ್ರಗಳ ಹಕ್ಕನ್ನು ದೃಢಪಡಿಸುವ ವಿಶ್ವಸಂಸ್ಥೆ ನಿರ್ಣಯವನ್ನು ರಷ್ಯಾ ಮತ್ತು ಚೀನಾ ವೀಟೋ ಮಾಡಿತು.

ಮಾಸ್ಕೋದ ಎರಡು ನಿರ್ಣಯಗಳು ಸಾಕಷ್ಟು ಮತಗಳನ್ನು ಪಡೆಯುವಲ್ಲಿ ವಿಫಲವಾದಾಗ, ಬ್ರೆಜಿಲ್ ಪಠ್ಯವು ಗಾಜಾ ಪಟ್ಟಿಗೆ ಸಹಾಯಕ್ಕಾಗಿ ಸಂಪೂರ್ಣ ಪ್ರವೇಶವನ್ನು ಅನುಮತಿಸಲು ನಿರ್ಣಯಿಸಲಾಯಿತು. ಹಮಾಸ್ ಮತ್ತು ಇತರ ಗುಂಪುಗಳು ಹೊಂದಿರುವ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವ ನಿರ್ಣಯದ ಕರೆಯನ್ನು ವಾಷಿಂಗ್ಟನ್ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅಮೆರಿಕಾ ರಾಯಭಾರಿ ತಿಳಿಸಿದ್ದಾರೆ.

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಬೆಂಕಿ, 19 ಮಂದಿ ಸಾವು

ಬೀಜಿಂಗ್, ನ.16- ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿ ಕಂಪನಿಯ ಕಟ್ಟಡದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಅಕೃತ ಮಾಧ್ಯಮಗಳು ವರದಿ ಮಾಡಿವೆ. ಲ್ಯುಲಿಯಾಂಗ್ ನಗರದ ಲಿಶಿ ಜಿಲ್ಲೆಯಲ್ಲಿರುವ ಐದು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗುರುವಾರ ಬೆಳಗ್ಗೆ ಬೆಂಕಿಯಲ್ಲಿ ಹತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಸ್ಥಳೀಯ ಅಕಾರಿಗಳ ಪ್ರಕಾರ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈ ಕಟ್ಟಡವು ಖಾಸಗಿ ಯೋಂಗ್ಜು ಕಲ್ಲಿದ್ದಲು ಗಣಿ ಕಂಪನಿಗೆ ಸೇರಿದ್ದು, ವರ್ಷಕ್ಕೆ 120 ಟನ್ ಕಲ್ಲಿದ್ದಲು ಉತ್ಪಾದನಾ ಸಾಮಥ್ರ್ಯವನ್ನು ಹೊಂದಿದೆ.

ಪಂಚರಾಜ್ಯಗಳ ಚುನಾವಣೆ : ನಾಳೆ ಮಧ್ಯಪ್ರದೇಶದಲ್ಲಿ ಮತದಾನ

ಬೆಂಗಳೂರು, ನ.16-ಮಿನಿ ಮಹಾಸಮರವೆಂದೇ ಬಿಂಬಿಸಲಾಗಿರುವ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶಕ್ಕೆ ನಾಳೆ ಮತದಾನ ನಡೆಯಲಿದೆ. 230 ಕ್ಷೇತ್ರಗಳನ್ನು ಹೊಂದಿರುವ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದು ಮರಳಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹವಣಿಸುತ್ತಿದೆ.

ಬಿಜೆಪಿ, ಕಾಂಗ್ರೆಸ್ ಸ್ವತಂತ್ರವಾಗಿ 230 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಎಸ್‍ಪಿ, ಗೊಂಡವಾನ ಗಣತಂತ್ರ ಪಕ್ಷದ ಮೈತ್ರಿಕೂಟವು ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಮಾಜವಾದಿ ಪಕ್ಷ, ಅಜಾದ್ ಸಮಾಜ್ ಪಕ್ಷಗಳು ತಲಾ -80, ಅಮ್‍ಆದ್ಮಿ -69, ಸಿಪಿಐ-9, ಜೆಡಿಯು-5 ಕ್ಷೇತ್ರಗಳಲ್ಲಿ ಸ್ರ್ಪಧಿಸಿವೆ.

ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‍ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಸೇರಿದಂತೆ ಬಿಜೆಪಿ ಅತಿರಥ ಮಹಾರಥರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ಹಲವಾರು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಮಿಶ್ರ ಫಲಿತಾಂಶ ಕೇಳಿಬಂದಿದೆ. ಕಳೆದ ಜೂನ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಇತ್ತು.
ಅಕ್ಟೋಬರ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವರದಿಯಾಗಿದ್ದರೆ, ನವೆಂಬರ್‍ನಲ್ಲಿ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ಪರವಾದ ಒಲವು ವ್ಯಕ್ತವಾಗಿತ್ತು. ಇತ್ತೀಚಿನ ವರದಿಗಳು ಮತ್ತೆ ಕಾಂಗ್ರೆಸ್‍ನಲ್ಲಿ ನಿರೀಕ್ಷೆಗಳನ್ನು ಹುಟ್ಟಿಸಿವೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸಿವೆ. ಕಾಂಗ್ರೆಸ್ ಎಂದಿನಂತೆ ಗ್ಯಾರಂಟಿ ಯೋಜನೆಗಳ ಮೊರೆ ಹೋಗಿದೆ. ಎರಡು ಲಕ್ಷ ರೂ.ವರೆಗೂ ಕೃಷಿ ಸಾಲ ಮನ್ನಾ, ಉಚಿತ ಶಾಲಾ ಶಿಕ್ಷಣ, 100 ಯುನಿಟ್ ವರೆಗೆ ಉಚಿತ ಹಾಗೂ 200 ಯುನಿಟ್ ವರೆಗೆ ರಿಯಾಯ್ತಿ ಘೋಷಿಸಿದೆ.

500 ರೂ.ಗೆ ಸಿಲಿಂಡರ್ ಪೂರೈಕೆ, ಒಬಿಸಿ ಶೇ.25ರಷ್ಟು ಮೀಸಲಾತಿ, ಜಾತಿಜನಗಣತಿ, ಮಹಿಳೆಯರಿಗೆ, ಯುವಕರಿಗೆ ಮಾಶಾಸನ ಘೋಷಣೆ ಮಾಡಿದ್ದರೆ, ಬಿಜೆಪಿ ಕೂಡಾ ಉಚಿತ ವಿದ್ಯುತ್, 450 ರೂ.ಗೆ ಸಿಲಿಂಡರ್ ಪೂರೈಕೆ, ಬಡವರಿಗೆ 5 ವರ್ಷ ಉಚಿತ ಪಡಿತರ ಸೇರಿದಂತೆ ಹಲವು ಗ್ಯಾರಂಟಿಗಳನ್ನು ಪ್ರಕಟಿಸಿದೆ.
ಏಕಕಾಲಕ್ಕೆ ಎಲ್ಲಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಪ್ರಜಾಪ್ರಭುತ್ವದ ಪ್ರಭುಗಳು ಯಾರ ಪರವಾಗಿ ಒಲವು ವ್ಯಕ್ತಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪಂಚ ರಾಜ್ಯಗಳ ಪೈಕಿ ಮಿಜೋರಾಂಗೆ ನ.7ರಂದು ಏಕಕಾಲಕ್ಕೆ 40 ಕ್ಷೇತ್ರಗಳಿಗೂ ಚುನಾವಣೆ ನಡೆದರೆ, 90 ಕ್ಷೇತ್ರಗಳಿರುವ ಛತ್ತೀಸ್‍ಗಢಕ್ಕೆ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಮೊದಲ ಹಂತದ ಮತದಾನ ನ.7ರಂದು 20 ಕ್ಷೇತ್ರಗಳಿಗೆ ನಡೆದಿದ್ದು, ನಾಳೆ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

200 ಕ್ಷೇತ್ರಗಳಿರುವ ರಾಜಸ್ಥಾನಕ್ಕೆ ನ.23ರಂದು, 119 ಕ್ಷೇತ್ರಗಳಿರುವ ತೆಲಂಗಾಣಕ್ಕೆ ನ.30ರಂದು ಮತದಾನ ನಡಯಲಿದೆ. ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಡಿ.3ರಂದು ಆಯಾ ರಾಜ್ಯಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು, ನ.16- ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಬೆಂಗಳೂರು-ಬೆಳಗಾವಿ ನಡುವೆ ಸಂಚರಿಸಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದು ಬೆಂಗಳೂರು-ಧಾರಾವಾಡ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಬೆಳಗಾವಿಯವರೆಗೂ ವಿಸ್ತರಿಸಲು ಮನವಿ ಮಾಡಿದ್ದರು, ಇದನ್ನು ಪರಿಣಿಸಿ ಬೆಂಗಳೂರು-ಧಾರಾವಾಡ ಮೂಲಕ ಬೆಳಗಾವಿಗೆ ರೈಲು ಸಂಚಾರ ನಡೆಸಲಿದೆ.

ರೈಲು ಸಂಖ್ಯೆ 20661 ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 20662ಬೆಳಗಾವಿಯಿಂದ ಮಧ್ಯಾಹ್ನ 2ಕ್ಕೆ ಹೊರಟು ರಾತ್ರಿ 10.10ಕ್ಕೆ ಬೆಂಗಳೂರು ತಲುಪಲಿದೆ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ : ಹೆಚ್‌ಡಿಕೆ ಟೀಕೆ

ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಯಾವ ದಿನಾಂಕದಿಂದ ಸಂಚಾರ ವಿಸ್ತರಣೆಯಾಗಲಿದೆಯೆಂದು ತಿಳಿಸಿಲ್ಲವಾದರೂ ಅತಿ ಶೀಘ್ರದಲ್ಲೇ ಪ್ರಯಾಣಿಕರಿಗೆ ಇದರ ಉಪಯೋಗವಾಗಲಿದೆ. ಮನವಿಯನ್ನು ಪುರಷ್ಕರಿಸಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಂಸದ ಈರಣ್ಣ ಕಡಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಗುಂಡಿನ ಚಕಮಕಿ : ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್

ಮಡಿಕೇರಿ, ನ.16-ಕೇರಳ ಎಸ್‍ಟಿಎಫ್ ಪೊಲೀಸ್ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಘಟನೆಯಲ್ಲಿ ಕೆಲ ನಕ್ಸಲರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಅವರು ರಕ್ಷಣೆಗಾಗಿ ಕರ್ನಾಟಕದ ಕೊಡಗು ಅರಣ್ಯ ವ್ಯಾಪ್ತಿಗೆ ಬರಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಹಲವೆಡೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ : ಹೆಚ್‌ಡಿಕೆ ಟೀಕೆ

ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ನಕ್ಸಲರ ಬಳಿಯಿದ್ದ 3 ರೈಫಲ್‍ಗಳು ಮೊಬೈಲ್ ಫೋನ್‍ಗಳು ವಶಪಡಿಸಿಕೊಳ್ಳಲಾಗಿದೆ. ಕೊಡಗಿನ ಸುಮಾರು 5 ಕಿ.ಮೀ. ದೂರದಲ್ಲಿ ಈ ಗುಂಡಿನ ಚಕಮಕಿ ನಡೆದಿದೆಯೆಂದು ಮೂಲಗಳು ತಿಳಿಸಿದೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದು ನಾಟಕವಾಡಿದ್ದ ಉಪನ್ಯಾಸಕ ಅರೆಸ್ಟ್

ಮಂಡ್ಯ, ನ.16-ಆಸ್ತಿಯ ಆಸೆಗಾಗಿ ಕೈಹಿಡಿದ ಪತ್ನಿಯನ್ನೆ ಕೊಲೆ ಮಾಡಿದ್ದ ಪ್ರಾಧ್ಯಾಪಕನನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಟಿ ಎನ್ ಸೋಮಶೇಖರ್ (41) ಬಂಧಿತ ಆರೋಪಿಯಾಗಿದ್ದಾನೆ. ಮಂಡ್ಯದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಮೈಸೂರು ಮೂಲದ ಶೃತಿ ಎಂಬುವವರನ್ನು ವಿವಾಹವಾಗಿ ವಿವಿ ನಗರ ಬಡಾವಣೆಯಲ್ಲಿ ವಾಸವಾಗಿದ್ದರು.

ಇತ್ತೀಚೆಗೆ ಶೃತಿ ಅವರ ತಂದೆ -ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶೃತಿ ಅವರ
ಸಹೋದರಿ ಸುಸ್ಮಿತಾ ಕಳೆದ ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿ ಮೈಸೂರಿನಲ್ಲಿದ್ದ ಸುಮಾರು 10 ಕೋಟಿಗೂ ಹೆಚ್ಚು ಮೌಲ್ಯದ ವಾಣಿಜ್ಯ ಕಟ್ಟಡಗಳು, ಮನೆ ಹಾಗೂ ನಿವೇಶನಗಳು ಶೃತಿ ಅವರ ಹೆಸರಿಗೆ ನೋಂದಣಿ ಆಗಿತ್ತು.

ಈ ಆಸ್ತಿಯ ಮೇಲೆ ಕಣ್ಣು ಹಾಕಿದ ಸೋಮಶೇಖರ್ ಕೆಲವನ್ನು ಮಾರಲು ಪತ್ನಿ ಶೃತಿಗೆ ಒತ್ತಾಯಿಸುತ್ತಿದ್ದ, ಅದಕ್ಕೆ ಆಕೆ ನಿರಾಕರಿಸಿದ್ದಳು. ಕಳೆದ ಶನಿವಾರ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ತಡರಾತ್ರಿ ಶೃತಿ ಅವರು ಮಲಗಿದ್ದಾಗ ಕ್ರೂರಿ ಸೋಮಶೇಖರ ದಿಂಬು ಹಾಗೂ ಬೆಡ್‍ಶೀಟ್‍ನಿಂದ ಮುಖಮುಚ್ಚಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ : ಹೆಚ್‌ಡಿಕೆ ಟೀಕೆ

ಮರುದಿನ ಪತ್ನಿ ಶೃತಿ ಒತ್ತಡದಲ್ಲಿ ಪಲ್ಸ್‍ರೇಟ್ ಕಡಿಮೆ ಆಗಿ ಮೃತಪಟ್ಟಿದ್ದಾಳೆಂದು ಬಿಂಬಿಸಿ ನಾಟಕವಾಡಿದ್ದ, ಇದರಿಂದ ಅನುಮಾನಗೊಂಡ ಶೃತಿ ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಮರಣೋತ್ತರ ಪರೀಕ್ಷೆ ಮಾಡಿದ ಸಂದರ್ಭದ ವರದಿಯಲ್ಲಿ ಉಸಿರುಗಟ್ಟಿಸಿ ಸಾಯಿಸಿರುವುದು ತಿಳಿದು ಬಂದಿದೆ.

ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ಬಂಸಿ ವಿಚಾರಣೆ ಮಾಡಿದ್ದಾಗ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಆತನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಡ್ಯ ಪಶ್ಚಿಮ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಬಿಜೆಪಿ ಪರ ಪ್ರಚಾರ ನಡೆಸಿದ ರಾಜ್ಯಪಾಲರ ವಜಾಕ್ಕೆ ಆಗ್ರಹ

ಗುವಾಹಟಿ, ನ.16- ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಆರೋಪದ ಮೇಲೆ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ವಜಾಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಅಸ್ಸಾಂ ಘಟಕಗಳು ಒತ್ತಾಯಿಸಿವೆ.

ಈ ವಿಷಯದ ಬಗ್ಗೆ ಕಟಾರಿಯಾ ಅಥವಾ ಅಸ್ಸಾಂ ಗವರ್ನರ್ ಕಚೇರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆಗಳು ದೊರೆತಿಲ್ಲ. ಸಾಂವಿಧಾನಿಕ ಹುದ್ದೆ ರಾಜ್ಯಪಾಲರಾಗುವ ಮೊದಲು ರಾಜಕೀಯ ಪಕ್ಷದ ಎಲ್ಲಾ ಹೊಣೆಗಾರಿಕೆಗಳನ್ನು ತ್ಯಜಿಸಿರಬೇಕಾಗುತ್ತದೆ. ಆದರೆ ಗುಲಾಬ್ ಚಂದ್ ಕಟಾರಿಯಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವುದು ಸಂವಿಧಾನ ಬಾಹಿರವಗಿದೆ, ಅವರನ್ನು ಹುದ್ದೆಯಿಂದ ವಜಾಗೊಳಿಸಲು ರಾಷ್ಟ್ರಪತಿ ಮತ್ತು ಭಾರತೀಯ ಚುನಾವಣಾ ಆಯೋಗದ ಮಧ್ಯಪ್ರವೇಶ ಮಾಡಬೇಕು ಎಂದು ಉಭಯ ಪಕ್ಷಗಳು ಆಗ್ರಹಿಸಿವೆ.

ಗುಲಾಬ್ ಚಂದ್ ಕಟಾರಿಯಾ ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ನಿರತರಾಗಿದ್ದರು, ಇದು ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ, ಭಾರತೀಯ ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಸ್ಸಾಂ ಟಿಎಂಸಿ ಅಧ್ಯಕ್ಷ ರಿಪುನ್ ಬೋರಾ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂವಿಧಾನದ ಪಾಲಕರಾಗಿದ್ದರೂ ಕಟಾರಿಯಾ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಬೋರಾ ಆಗ್ರಹಿಸಿದ್ದಾರೆ.

ದೇಶ ತೊರೆಯಲು ಭಾರತೀಯ ಪಡೆಗಳಿಗೆ ಮಾಲ್ಡೀವ್ಸ್ ಸೂಚನೆ

ಸಂವಿಧಾನ ಹುದ್ದೆಯ ಘನತೆ ಮರೆತು ಬಿಜೆಪಿ ಅಭ್ಯರ್ಥಿ ತಾರಾಚನ್ ಜೈನ್ ಪರ ಪ್ರಚಾರ ನಡೆಸಿ ಚುನಾವಣಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಟಿಎಂಸಿ ಆಕ್ರೋಶ ವ್ಯಕ್ತ ಪಡಿಸಿದೆ. ಅಸ್ಸಾಂನ ಟಿಎಂಸಿ ಘಟಕ ಪತ್ರಿಕಾ ಹೇಳಿಕೆ ನೀಡಿ, ಕೆಲವು ದಿನಗಳ ಹಿಂದೆ ಅಸ್ಸಾಂ ವಿಧಾನಸಭೆಯ ಉಪ ಸ್ಪೀಕರ್ ನುಮಲ್ ಮೊಮಿನ್ ಮಿಜೋರಾಂನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು. ಈಗ ಕಟಾರಿಯಾ ಸರದಿಯಾಗಿದೆ.

ಇದು ಸಾಂವಿಧಾನಿಕ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ರಾಜ್ಯದ ಮುಖ್ಯಸ್ಥರಾಗಿ, ರಾಜ್ಯಪಾಲರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಬಾರದಿತ್ತು. ನಿರಂಕುಶ ಮತ್ತು ಪ್ರಜಾಪ್ರಭುತ್ವ ವಿರೋಧಿ ಸರ್ಕಾರವನ್ನು ನಡೆಸಲು ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ಈ ಎರಡು ಉದಾಹರಣೆಗಳು ತೋರಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಎಎಪಿ ಅಸ್ಸಾಂ ಸಂಯೋಜಕ ಭಾಬೆನ್ ಚೌಧರಿ ಮಾತನಾಡಿ, ರಾಜ್ಯಪಾಲರು ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಸಂವಿಧಾನವನ್ನು ಎತ್ತಿಹಿಡಿಯಬೇಕು ಮತ್ತು ರಾಜಕೀಯದಿಂದ ದೂರವಿರಬೇಕು. ಆದಾಗ್ಯೂ, ಕಟಾರಿಯಾ ಅವರು ಚುನಾವಣೆಯಲ್ಲಿ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದು ರಾಜ್ಯಪಾಲರ ಹುದ್ದೆಯನ್ನು ಕೀಳಾಗಿ ಮಾಡಿದೆ. ಇದು ಭಾರತದ ರಾಜಕೀಯವನ್ನು ಕರಾಳಗೊಳಿಸಿದೆ ಎಂದು ಅವರು ಹೇಳಿದ್ದು, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಪಕ್ಷ ನಾಯಕನ ಆಯ್ಕೆಗೆ ನಾಳೆ ಬಿಜೆಪಿ ಶಾಸಕರ ಸಭೆ

ಬೆಂಗಳೂರು, ನ.16- ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ನಾಳೆ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತು ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ಸುಮಾರು ಆರು ತಿಂಗಳಿಂದ ಬಾಕಿ ಉಳಿದಿರುವ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿಯ ಕೇಂದ್ರ ಘಟಕದಿಂದ ವೀಕ್ಷಕರು ಆಗಮಿಸಲಿದ್ದಾರೆ. ಅವರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ಹೊರುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾಳೆ (ನ.17) ಸಂಜೆ 6 ಗಂಟೆಗೆ ನಗರದ ಐಟಿಸಿ ಗಾರ್ಡೇನಿಯಾ ಹೋಟೆಲ್‍ನಲ್ಲಿ ಶಾಸಕಾಂಗ ಪಕ್ಷದ ಸಭೆ ನಿಗದಿಪಡಿಸಿದ್ದು, ಪಕ್ಷದ ಎಲ್ಲ ಶಾಸಕರು ಮತ್ತು ಪರಿಷತ್ ಸದಸ್ಯರು ತಪ್ಪದೇ ಭಾಗವಹಿಸಬೇಕೆಂದು ಸೂಚಿಸಲಾಗಿದೆ.

ಡಿಸೆಂಬರ್ 4ರಂದು ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕೂ ಮೊದಲೇ ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚೊಚ್ಚಲ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಶಾಸಕರ ಸಭೆಗೆ ದೆಹಲಿಯಿಂದ ಹೈಕಮಾಂಡ್ ಪ್ರತಿನಿಗಳಾಗಿ ಇಬ್ಬರು ನಾಯಕರು ವೀಕ್ಷಕರಾಗಿ ಆಗಮಿಸಲಿದ್ದಾರೆ. ಯಾವ ನಾಯಕರನ್ನು ಕಳುಹಿಸಲಿದ್ದಾರೆ ಎನ್ನುವ ಮಾಹಿತಿ ಇನ್ನು ರಾಜ್ಯ ಘಟಕಕ್ಕೆ ಬಂದಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇರುವ ನಾಯಕರನ್ನೇ ಕಳುಹಿಸಿಕೊಡುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.

ದೇಶ ತೊರೆಯಲು ಭಾರತೀಯ ಪಡೆಗಳಿಗೆ ಮಾಲ್ಡೀವ್ಸ್ ಸೂಚನೆ

ಹೈಕಮಾಂಡ್ ಸಂದೇಶ ಹೊತ್ತು ಬರುವ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸೂಚನೆ ತಿಳಿಸಿ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮುಗಿಸಲಿದ್ದಾರೆ. ಸದನದಲ್ಲಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅದೇ ರೀತಿ ಪರಿಷತ್‍ನಲ್ಲೂ ಆಡಳಿತ ಪಕ್ಷವನ್ನು ಎದುರಿಸಬಲ್ಲ ವ್ಯಕ್ತಿಗೆ ಅವಕಾಶ ನೀಡಲಾಗುತ್ತದೆ.

ಇನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಶಾಸಕರನ್ನು ಉದ್ದೇಶಿಸಿ ಮೊದಲ ಭಾಷಣ ಮಾಡಲಿದ್ದಾರೆ. ಶಾಸಕರ ಸಹಕಾರ ಕೋರಲಿದ್ದಾರೆ. ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸುವ ಪೂರ್ವದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹೆಜ್ಜೆ ಇರಿಸಲು ಶಾಸಕರ ಜೊತೆ ಮಾತುಕತೆ ನಡೆಸಿ, ಅವರ ಅಭಿಪ್ರಾಯ ಆಲಿಸಲಿದ್ದಾರೆ.

ನಂತರ ರಾಜ್ಯ ಪ್ರವಾಸ, ಕಾರ್ಯಕಾರಿ ಸಮಿತಿಯಲ್ಲಿ ಮಾರ್ಪಾಡು ಮಾಡುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಶುಕ್ರವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು, ಪುದುಚೇರಿಯಲ್ಲಿ ರಣಮಳೆ

ರೇಸ್‍ನಲ್ಲಿ ಯಾರೆಲ್ಲಾ ಇದ್ದಾರೆ?
ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಭರ್ಜರಿ ಪೈಪೋಟಿಯೇ ಇದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ್, ಆರ್ ಅಶೋಕ್ ಮುಂಚೂಣಿಯಲ್ಲಿದ್ದಾರೆ. ಇತ್ತ ಶಾಸಕ ಸುನೀಲ್ ಕುಮಾರ್ ಹಿಂದುಳಿದ ವರ್ಗ ಪರವಾಗಿ ಪರಿಗಣಿಸಬೇಕು ಎನ್ನುತ್ತಾರೆ. ಉಳಿದಂತೆ ಇತರೆ ನಾಯಕರಲ್ಲಿಯೂ ಕೂಡ ಆಕಾಂಕ್ಷಿಗಳಿದ್ದು ಹೈಕಮಾಂಡ್ ತೀರ್ಮಾನ ಏನು ಎಂಬುದನ್ನು ಕಾದುನೋಡಬೇಕಿದೆ.

ಆದರೆ, ನಾಳೆ ಹೆಸರನ್ನು ಘೋಷಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ವೀಕ್ಷಕರು ಇಲ್ಲಿ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾದ ಬಳಿಕ ವರಿಷ್ಠರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಇದೇ ವೇಳೆ ವಿಜಯೇಂದ್ರ ಅವರು ಮುಂದಿನ ವಾರ ದೆಹಲಿಗೆ ತೆರಳುವುದರಿಂದ ಅವರು ವಾಪಸಾದ ಬಳಿಕ ಅಂತಿಮಗೊಳ್ಳುವ ಸಂಭವವೂ ಇದೆ ಎನ್ನಲಾಗಿದೆ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ : ಹೆಚ್‌ಡಿಕೆ ಟೀಕೆ

ಬೆಂಗಳೂರು, ನ.16-ಕಾಸಿಗಾಗಿ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮಿಂದ( ಮುಖ್ಯಮಂತ್ರಿ) ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ? ನೈತಿಕ ಮೌಲ್ಯಗಳಂತೂ ದುಪ್ಪಟ್ಟು ಜಾಸ್ತಿ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದಾರೆ.

ಕಾಸಿಗಾಗಿ ಹುದ್ದೆ ಉರುಫ್ ಕ್ಯಾಶ್ ಫಾರ್ ಪೋಸ್ಟಿಂಗ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ ನಡೆದಿದೆ ಎನ್ನುವುದಕ್ಕೆ ವಿಡಿಯೋ ತುಣುಕೇ ಸಾಕ್ಷಿ. ರಾಜ್ಯ ಕಾಂಗ್ರೆಸ್ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ.

ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, ನಾನು ಹೇಳಿದವರಷ್ಟನ್ನೇ ಮಾಡಿ ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೊಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ಒಳ ವಸೂಲಿ ಸಚಿವಾಲಯದ ಸಚಿವರಾ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 6 ತಿಂಗಳಿಗೊಬ್ಬ ಸಿಎಂ ಗ್ಯಾರಂಟಿ : ಕೆ.ಟಿ.ರಾಮರಾವ್

ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ? ಎಂದು ಕೇಳಿದ್ದಾರೆ.


ಈಗ ಹೇಳಿ ಸಿದ್ದರಾಮಯ್ಯನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? ಎಂದು ಆರೋಪಿಸಿದ್ದಾರೆ. ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ.

ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ ಸುಲಿಗೆಪುತ್ರ ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ. ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದಿದ್ದಾರೆ.

ರೈಲಿನಲ್ಲಿ ಸ್ಪೋಟ, ನಾಲ್ವರಿಗೆ ಗಾಯ

ಸಮಸ್ತಿಪುರ್, ನ.16 – ರೈಲಿನ ಬೋಗಿಯೊಂದರಲ್ಲಿ ಸ್ಪೋಟ ಸಂಭವಿಸಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಬಿಹಾರದ ಸಮಸ್ತಿಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರ ಬ್ಯಾಗ್‍ನೊಳಗಿದ್ದ ಗನ್‍ಪೌಡರ್‍ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಸ್ಪೋಟ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡು, ಪುದುಚೇರಿಯಲ್ಲಿ ರಣಮಳೆ

ಭಾಗಲ್ಪುರ್-ದರ್ಬಂಗಾ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಸಮಸ್ತಿಪುರ ರೈಲು ನಿಲ್ದಾಣದ ಹೊರ ಸಿಗ್ನಲ್‍ನಲ್ಲಿದ್ದಾಗ ಸ್ಪೋಟ ಸಂಭವಿಸಿದೆ. ಆರ್‍ಪಿಎಫ್ ಮತ್ತು ಜಿಆರ್‍ಪಿ ಸಿಬ್ಬಂದಿಯ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಲಗುವ ಸ್ಥಳದ ಮೇಲೆ ಇರಿಸಲಾಗಿದ್ದ ಬ್ಯಾಗ್‍ನಿಂದ ಹೊಗೆ ಕಾಣಿಸಿಕೊಂಡಿತು.

ಮತ್ತು ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಈ ಬೋಗಿಯಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮಧುಬನಿ ಜಿಲ್ಲೆಯ ನಿವಾಸಿಗಳಾದ ಅರವಿಂದ್ ಮಂಡಲ್ ಮತ್ತು ನವೆಂದು ಮಂಡಲ್ ಎಂಬ ಇಬ್ಬರು ಪ್ರಯಾಣಿಕರು ಪಟಾಕಿ ತಯಾರಿಸಲು ಗನ್‍ಪೌಡರ್‍ನ ಬ್ಯಾಗ್‍ನೊಂದಿಗೆ ರೈಲಿಗೆ ಹತ್ತಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.ಇಬ್ಬರನ್ನೂ ಬಂಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.