Friday, November 7, 2025
Home Blog Page 1882

ಅತ್ತೆಯನ್ನು ಕೊಂದ ಸೊಸೆ ಹಾಗೂ ಪ್ರಿಯಕರ ಸೇರಿ ಮೂವರ ಬಂಧನ

ಬೆಂಗಳೂರು, ಅ.17- ಹಣಕಾಸು ಮತ್ತು ಸಾಂಸಾರಿಕ ವಿಚಾರದಲ್ಲಿ ತೊಂದರೆ ನೀಡುತ್ತಿದ್ದ ಅತ್ತೆಯನ್ನೇ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದ ಪ್ರಕರಣವನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇದಿಸಿ ಸೊಸೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಸೊಸೆ ರಶ್ಮೀ, ಪ್ರಿಯಕರ ಅಕ್ಷಯ್ ಮತ್ತು ಈತನ ಸ್ನೇಹಿತ ಪುರುಷೋತ್ತಮ್ ಬಂಧಿತ ಆರೋಪಿಗಳು.

ಮಂಜುನಾಥ ಎಂಬುವರ ಪತ್ನಿ ರಶ್ಮೀ ತನ್ನ ಕಟ್ಟಡದ 1ನೇ ಮಹಡಿಯಲ್ಲಿ ವಾಸವಿದ್ದ ಅಕ್ಷಯ್ ಎಂಬುವನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡು ಅತ್ತೆ ಲಕ್ಕಮ್ಮ (52) ಅವರನ್ನು ಕೊಲೆ ಮಾಡಲು ಸಂಚು ರೂಪಿಸಿ, ಅಕ್ಟೋಬರ್ 5ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಊಟಕ್ಕೆ ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆಗಳನ್ನು ಬೆರಸಿ ಲಕ್ಕಮ್ಮರವರಿಗೆ ನೀಡಿದ್ದಾರೆ.

ಊಟವಾದ ನಂತರ ಲಕ್ಕಮ್ಮವರು ಮನೆಯ ಹಾಲ್‍ನಲ್ಲಿ ಮಲಗಿದ್ದು, ಆಗ ಅಕ್ಷಯ್ ತನ್ನ ಸ್ನೇಹಿತನೊಂದಿಗೆ ಬಂದು ಲಕ್ಕಮ್ಮ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸಂಜೆ ರಶ್ಮೀ ಹೃದಯಾಘಾತದಿಂದ ಅತ್ತೆ ಲಕ್ಕಮ್ಮ ಮರಣ ಹೊಂದಿರುವುದಾಗಿ ಬಿಂಬಿಸಿದ್ದು, ಅದನ್ನು ನಂಬಿದ ಪತಿ ಮಂಜುನಾಥ ಅವರು ಸಂಬಂಧಿಕರಿಗೆ ವಿಷಯ ತಿಳಿಸಿ ನಂತರ ಶವವನ್ನು ತೆಗೆದುಕೊಂಡು ಹೋಗಿ ತಮ್ಮ ಊರಾದ ಕುಣಿಗಲ್ ತಾಲ್ಲೂಕಿನ ಮುದಿಗೆರೆ ಶೆಟ್ಟಿಪಾಳ್ಯದ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಿರುತ್ತಾರೆ.

ಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಇದಾದ 9 ದಿನಗಳ ನಂತರ ತನ್ನ ತಾಯಿಯನ್ನು ಪತ್ನಿ ರಶ್ಮೀ, ಆಕೆಯ ಪ್ರಿಯಕರ ಅಕ್ಷಯ್ ಮತ್ತು ಅವನ ಸ್ನೇಹಿತ ಪುರುಷೊತ್ತಮ್ ರವರು ಸೇರಿ ಕೊಲೆ ಮಾಡಿದ್ದಾರೆಂದು ಅಕ್ಷಯ್‍ನ ಸ್ನೇಹಿತ ರಾಘವೇಂದ್ರನಿಂದ ಗೊತ್ತಾಗಿದೆ.ವಾಟ್ಸಾಪ್ ಚಾಟ್‍ಗಳನ್ನು ನೋಡಿ ಅನುಮಾನ ಬಂದ ಮೇರೆಗೆ ಮಂಜುನಾಥರವರು ತನ್ನ ತಾಯಿಯನ್ನು ಕೊಲೆ ಮಾಡಲಾಗಿದೆ. ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರಾದ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಹೆಚ್.ಎಸ್. ಪರಮೇಶ್ವರ್ ಅವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದರು.

ಸದರಿ ತಂಡದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಪುಟ್ಟ ಓಬಳರೆಡ್ಡಿ ಮತ್ತು ಶಶಿಧರ್ ಈ.ವಣ್ಣೂರ ಮತ್ತು ಸಿಬ್ಬಂದಿಯವರಾದ ರಾಜಣ್ಣ, ಮಹೇಶ, ಅಭಿಷೇಕ್, ರಮ್ಯ, ಆಶಾ ಮತ್ತು ಮಾಬು ಬೈರವಾಡಗಿ ಅವರು ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಲಕ್ಕಮ್ಮ ಅವರು ಹಣಕಾಸಿನ ವಿಚಾರದಲ್ಲಿ ಮತ್ತು ಸಾಂಸಾರಿಕ ವಿಚಾರದಲ್ಲಿ ತೊಂದರೆ ನೀಡುತ್ತಿದ್ದರಿಂದ ಸೊಸೆ ರಶ್ಮೀಯು ಆರೋಪಿ ಅಕ್ಷಯ್‍ನೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡು ಕೊಲೆಗೆ ಸಂಚು ರೂಪಿಸಿ, ಅವರ ಪೂರ್ವ ನಿಯೋಜಿತ ಸಂಚಿನಂತೆ ಊಟದಲ್ಲಿ ನಿದ್ದೆಮಾತ್ರೆಗಳನ್ನು ಹಾಕಿದ್ದು, ಆನಂತರ ಆರೋಪಿ ಅಕ್ಷಯ್‍ನು ತನ್ನ ಸ್ನೇಹಿತ ಆರೋಪಿ ಪುರುಷೋತ್ತಮ್‍ನೊಂದಿಗೆ ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.

ಮನೆಗಳ್ಳತನ ಪ್ರಕರಣದಲ್ಲಿ ಕಾನ್‍ಸ್ಟೆಬಲ್ ಬಂಧನ

ಬೆಂಗಳೂರು,ಅ.17- ಮನೆಗಳ್ಳತನ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಲೇಔಟ್, ಚಿಕ್ಕಜಾಲ, ಬನಶಂಕರಿ ಸೇರಿದಂತೆ ಹಲವೆಡೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಕಳ್ಳರಿಗೆ ಸಹಕಾರ ನೀಡಿದ ಆರೋಪದ ಮೇಲೆ ಕಾನ್‍ಸ್ಟೆಬಲ್ ಯಲ್ಲಪ್ಪ ಅವರನ್ನು ಬಂಧಿಸಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಕಾನ್‍ಸ್ಟೆಬಲ್‍ನನ್ನು
ಅಮಾನತುಗೊಳಿಸಿದ್ದಾರೆ. ಚಂದ್ರಲೇಔಟ್‍ನಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಯಲ್ಲಪ್ಪ ಶಾಮೀಲಾಗಿರುವುದು ಗೊತ್ತಾಗಿ ಪೊಲೀಸರೇ ಶಾಕ್ ಆಗಿದ್ದಾರೆ.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತನಿಖೆ ಚುರುಕುಗೊಳಿಸಿದಾಗ ಕಳ್ಳರೊಂದಿಗೆ ಇವರು ಕೂಡ ಭಾಗಿಯಾಗಿರುವುದು ಗೊತ್ತಾಗಿದೆ. ಕಳವು ಮಾಲ್‍ಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದ್ದು, ಪ್ರಸ್ತುತ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಯಲ್ಲಪ್ಪ ಅವರು ಬನಶಂಕರಿ ಠಾಣೆಯಲ್ಲಿ ಅಪರಾಧ ವಿಭಾಗದ ಕಾನ್‍ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಈ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಗ್ಯಾರಂಟಿ ಸರ್ಕಾರಕ್ಕೆ ಗಂಡಾಂತರವಾಗುತ್ತಾ ಬೆಳಗಾವಿ ರಾಜಕಾರಣ..?

ಬೆಂಗಳೂರು,ಅ.17- ಹಿಂದಿನ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಿದ್ದ ಬೆಳಗಾವಿ ರಾಜಕಾರಣ ಮತ್ತೊಮ್ಮೆ ಗರಿಗೆದರಿದ್ದು, ಒಳಬೇಗುದಿಗೆ ಕಾರಣವಾಗಿದೆ. ರಾಜ್ಯ ರಾಜಕಾರಣದಲ್ಲಿ ಜಿಲ್ಲಾವಾರು, ಪ್ರಾದೇಶಿಕವಾರು ಹಾಗೂ ಕುಟುಂಬವಾರು ಪ್ರಾಬಲ್ಯ ಹೆಚ್ಚಾಗಿದ್ದು, ಪದೇ ಪದೇ ಪ್ರಭಾವ ಬೀರುತ್ತಲೇ ಇರುತ್ತದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿವಾದಕ್ಕೀಡಾಗಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಯವರ ವೈಯಕ್ತಿಕ ಪ್ರತಿಷ್ಠೆ ಸರ್ಕಾರವನ್ನೇ ಬುಡಮೇಲು ಮಾಡುವ ಮಟ್ಟಕ್ಕೆ ಉಲ್ಬಣಗೊಂಡಿತ್ತು.

ತಮ್ಮ ಬಣದ ನಾಯಕನನ್ನೇ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಪಟ್ಟು ಹಿಡಿದಿದ್ದರು. ಅದಕ್ಕೆ ಆಗಿನ ಸಚಿವರೂ ಹಾಗೂ ಪ್ರಭಾವಿ ನಾಯಕರಾಗಿದ್ದ ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲವಾಗಿದ್ದರು. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ರೊಚ್ಚುಗೆದ್ದಿದ್ದರು. ಅದಕ್ಕೆ ಸಚಿವರಾಗಿದ್ದ ಸಹೋದರ ಸತೀಶ್ ಜಾರಕಿಹೊಳಿ ಕೈಜೋಡಿಸಿದ್ದರು.ಸಹೋದರರ ಸವಾಲಿಗೆ ಪಾಟಿ ಸವಾಲುವೊಡ್ಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಮೇಲ್ಗೈ ಸಾಧಿಸಿ ತಮ್ಮ ಬೆಂಬಲಿಗನನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡರು.

ಇದು ಮೇಲ್ನೋಟಕ್ಕೆ ರಾಜಿಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥವಾದಂತೆ ಕಂಡರೂ ಒಳಬೇಗುದಿ ಜೀವಂತವಾಗಿತ್ತು. ಅದು ನಿಧಾನವಾಗಿ ಹೊಗೆಯಾಡಿ ಆಪರೇಷನ್ ಕಮಲದಂತಹ ಜ್ವಾಲಾಮುಖಿಗೆ ಕಾರಣವಾಯಿತಲ್ಲದೆ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಆನಂತರ ಮೂರು ಮುಕ್ಕಾಲು ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಆದರೂ ಬೆಳಗಾವಿ ರಾಜಕಾರಣ ಮತ್ತೆ ಮುನ್ನಲೆಗೆ ಬಂದಿದ್ದು, ಒಳಬೇಗುದಿಗೆ ಕಾರಣವಾಗಿದೆ.ಇನ್ನೊಮ್ಮೆ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಮೇಲ್ನೋಟಕ್ಕೆ ಇಬ್ಬರೂ ಹೊಂದಾಣಿಕೆಯಿಂದಲೇ ಕೆಲಸ ಮಾಡಿದಂತೆ ಕಂಡುಬಂದರೂ ಅಧಿಕಾರಿಗಳ ವರ್ಗಾವಣೆ, ಸ್ಥಳೀಯ ಮಟ್ಟದ ಪಕ್ಷ ಸಂಘಟನೆಯಲ್ಲಿ ಪರಸ್ಪರ ಜಿದ್ದಿಗೆ ಬಿದ್ದಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಂದಿನಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷ ಇರುವುದು ಜಾರಕಿಹೊಳಿ ಕುಟುಂಬಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.ಇತ್ತೀಚೆಗೆ ಸಂಪುಟ ವಿಸ್ತರಣೆಯಲ್ಲೂ ಎಲ್ಲ ಮಹಿಳಾ ನಾಯಕಿಯರನ್ನು ಹಿಂದಿಕ್ಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವಕಾಶ ಗಿಟ್ಟಿಸಿದ್ದರು. ಅದಕ್ಕೆ ಪ್ರಭಾವಿಗಳ ಬೆಂಬಲವೇ ಕಾರಣ ಎಂಬ ಗುಸುಗುಸು ವ್ಯಾಪಕವಾಗಿತ್ತು.

ಸತೀಶ್ ಜಾರಕಿಹೊಳಿಯವರು ಇತ್ತೀಚೆಗೆ ಕುಟುಂಬದ ಸಹೋದರರನ್ನು ಮೀರಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅದರ ಪರಿಣಾಮ ಕಳೆದ ಲೋಕಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಗಳಿಸಿತ್ತು. ವಿಧಾನಪರಿಷತ್‍ನ ಚುನಾವಣೆಯಲ್ಲೂ ಗೆಲುವು ಸಾಧಿಸಿತ್ತು. ವಿಧಾನಸಭೆ ಚುನಾವಣೆಗಳಲ್ಲೂ ಗಣನೀಯ ಮುನ್ನಡೆಗೆ ಸತೀಶ್ ಜಾರಕಿಹೊಳಿ ಅವರ ಪ್ರಾಮಾಣಿಕ ಪ್ರಯತ್ನ ಕಾರಣ ಎಂಬ ವ್ಯಾಖ್ಯಾನಗಳಿದ್ದವು.
ಜಾರಕಿಹೊಳಿ ಕುಟುಂಬದ ಹಿಡಿತವನ್ನು ಜಿಲ್ಲಾ ರಾಜಕೀಯದಲ್ಲಿ ತಪ್ಪಿಸಲು ನಾನಾ ರೀತಿಯ ತಂತ್ರಗಾರಿಕೆಗಳು ನಡೆಯುತ್ತಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕಾಂಗ್ರೆಸ್ ಹೊರತಾಗಿ ಬಿಜೆಪಿಯ ನಾಯಕರು ಕೂಡ ಬೆಂಬಲ ನೀಡುತ್ತಿರುವುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಅದರ ಜೊತೆಗೆ ಪ್ರಭಾವಿಗಳ ಸಹಕಾರವೂ ಇರುವುದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಪಿಎಲ್‍ಡಿ ಬ್ಯಾಂಕ್‍ನ ಹಿಡಿತ ಸಾಧಿಸಲು ಮತ್ತೊಮ್ಮೆ ಹವಣಿಸುತ್ತಿದ್ದಾರೆ.

ಇದರ ವಿರುದ್ಧ ಬಹಿರಂಗವಾಗಿ ಮಾತನಾಡಲಾಗದೆ ಸಿಡಿಮಿಡಿಗೊಳ್ಳುತ್ತಿರುವ ಸತೀಶ್ ಜಾರಕಿಹೊಳಿಯವರು 20ಕ್ಕೂ ಹೆಚ್ಚು ಮಂದಿ ಶಾಸಕರ ಮೋಜಿನ ಪ್ರವಾಸದ ತಯಾರಿ ನಡೆಸಿದರು ಎಂದು ಹೇಳಲಾಗಿದೆ.ಒಂದೆಡೆ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ , ಜೆಡಿಎಸ್ ತೆರೆಮರೆಯ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಕಾಂಗ್ರೆಸ್ ಒಳ ಬೇಗುದಿಗಳು ಮಗ್ಗಲು ಮುಳ್ಳಾಗಿವೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಮೂಲಕ ಸಂಧಾನದ ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪ ತಗ್ಗದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಬೇರೆ ಸ್ವರೂಪದಲ್ಲಿರುತ್ತದೆ ಎಂದು ಎಚ್ಚರಿಕೆ ರವಾನೆಯಾಗಿದೆ ಎಂಬ ವದಂತಿಗಳಿವೆ.

478 ಕೋಟಿ ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ

ಬೆಂಗಳೂರು,ಅ.17- ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ 478.46 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅವುಗಳಲ್ಲಿ 161 ತಾಲ್ಲೂಕುಗಳಲ್ಲಿ ತೀವ್ರ ಬರವಿದ್ದು, 34 ತಾಲ್ಲೂಕುಗಳಲ್ಲಿ ಸಾಧಾರಣ ಪರಿಸ್ಥಿತಿ ಇದೆ. ಮನ್ರೇಗಾ ಯೋಜನೆಯ ಮೂಲ ಉದ್ದೇಶವೇ ಗ್ರಾಮೀಣ ಜಾಗದಲ್ಲಿ ದುಡಿಯುವ ಜನರಿಗೆ ಉದ್ಯೋಗ ಕಲ್ಪಿಸಿ ನಗರದತ್ತ ವಲಸೆ ಬರುವುದನ್ನು ತಪ್ಪಿಸಬಹುದಾಗಿದೆ.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಬರದ ಸನ್ನಿವೇಶದಲ್ಲಿ ಗ್ರಾಮೀಣ ಭಾಗದವರು ನಗರದತ್ತ ವಲಸೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಆ.30ರಂದು ಅನುದಾನ ಬಳಕೆಯ ಪ್ರಮಾಣ ಪತ್ರವನ್ನು ಹಾಗೂ ಸೆ.22ರಂದು ವಾರ್ಷಿಕ ಲೆಕ್ಕಪತ್ರಗಳ ವರದಿಯನ್ನು ಕೇಂದ್ರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ 24ರಂದು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿಗೆ ಸಂಬಂಧಿಸಿದಂತೆ 1.55 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆ.29ರಿಂದಲೂ ಈವರೆಗೂ ಮನ್ರೇಗಾ ಯೋಜನೆಯಡಿ 478.46 ಕೋಟಿ ರೂ.ಗಳ ಬಾಕಿ ಇದ್ದು, ಅದನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿಯವರು ಹಿಮಾಲಯದ ಎತ್ತರದವರೆಗೂ ಹಗರಣ ಮಾಡಿದ್ದಾರೆ : ಡಿಸಿಎಂ

ಬೆಂಗಳೂರು,ಅ.17- ರಾಜ್ಯದಲ್ಲಿ ಲೂಟಿ ಹಗರಣಗಳ ಬಗ್ಗೆ ತನಿಖೆಯಾಗಬೇಕು. ನಾವು ಕೂಡ ಅದಕ್ಕೆ ಸಿದ್ದರಿದ್ದೇವೆ. ಬಿಜೆಪಿಯವರನ್ನು ಒಳಗೊಂಡಂತೆ ತನಿಖೆಯಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಿಮಾಲಯದ ಎತ್ತರದವರೆಗೂ ಹಗರಣ ಮಾಡಿದ್ದಾರೆ. 2000 ಕೋಟಿ ರೂ.ಗಳು ಹರಿದುಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.

ಆರ್.ಅಶೋಕ್, ಲೂಟಿ ರವಿ, ನಕಲಿ ಸ್ವಾಮಿ, ಬ್ಲಾಕ್‍ಮೇಲ್ ಸ್ವಾಮಿ ಇವರೆಲ್ಲ ಇದ್ದಾರೆ. ಇವರೆಲ್ಲ ಏನು ನಡೆಸಿದ್ದಾರೆ ಎಂದು ತನಿಖೆ ನಡೆಸಲಿ. ಮೊದಲು ತನಿಖೆಯಾಗಬೇಕು. ನಾವು ಕೂಡ ಅದನ್ನೇ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದೇ ಬಿಜೆಪಿ. ಆದಾಯ ತೆರಿಗೆ ದಾಳಿಯ ಬಗ್ಗೆ ನಾವು ಮಾತನಾಡದೆ ಮೌನವಾಗಿದುದ್ದಕ್ಕೆ ಕಾರಣ ಮೊದಲು ಇಲಾಖೆ ಮಾಹಿತಿ ನೀಡಲಿ ಎಂಬುದಾಗಿತ್ತು. ನಿನ್ನೆ ಮಾಹಿತಿ ಹೊರಬಂದಿದೆ. ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಎಲ್ಲವೂ ಅವರ ಬಳಿಯೇ ಇದೆ ತನಿಖೆ ಮಾಡಲಿ ಯಾರು ಬೇಡ ಎಂದಿದ್ದಾರೆ. ಅದೆನೋ ಬಿಚ್ಚುತ್ತಾರೋ ಬಿಚ್ಚಲಿ ಎಂದು ಸವಾಲು ಹಾಕಿದರು.

ಕಲೆಕ್ಷನ್ ಮಾಸ್ಟರ್ ಎಂದು ಬಿಜೆಪಿಯವರು ಪೋಸ್ಟರ್ ಹಾಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಮಾಲಯ ಪರ್ವತದ ಮೇಲೂ ಇವರು ಭ್ರಷ್ಟಾಚಾರ ಮಾಡಿದ್ದಾರೆ. ಇಡೀ ದೇಶದಲ್ಲಿ ಹಿಮಾಲಯದವರೆಗೂ ಹಗರಣಗಳಾಗಿವೆ. ಹಿಂದೆ 2000 ಕೋಟಿ ರೂ. ಹೋಗಿದೆಯಂತೆ. ಮುಖ್ಯಮಂತ್ರಿ ಕಚೇರಿಯಲ್ಲೇ ಇದೆಲ್ಲ ನಡೆದಿತ್ತು. ಎಷ್ಟೆಷ್ಟು ಪರ್ಸಂಟೇಜ್ ಹೋಗಿತ್ತು ಎಂದು ಶಾಸಕರು ಮತ್ತು ಮಾಜಿ ಸಚಿವರಿಂದಲೇ ಹೇಳಿಸಲು ಸಿದ್ದನಿದ್ದೇನೆ. ಸದ್ಯಕ್ಕೆ ಈಗ ಬೇಡ. ಸಮಯ ಬರುತ್ತದೆ ಆಗ ಮಾತನಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದೇ ಭ್ರಷ್ಟಾಚಾರದ ಕಾರಣಕ್ಕಾಗಿ. ಆದಾಯ ತೆರಿಗೆ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೆ ಬಿಜೆಪಿ ನಾಯಕರ ಸಂಪರ್ಕವಿದೆ. ಕಾಂಗ್ರೆಸ್‍ಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆದಾರರು ಕಮೀಷನನ್ನು ಬಿಜೆಪಿ ಪರವಾಗಿಯೇ ವಸೂಲಿ ಮಾಡಿದ್ದಾರೆ. ಈ ಭ್ರಷ್ಟಾಚಾರ ಬಿಜೆಪಿಯ ಕೂಸು. ಆದಾಯ ತೆರಿಗೆ ದಾಳಿಯಲ್ಲಿ ಜಪ್ತಿ ಮಾಡಲಾಗಿರುವ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ. ಅದು ಹೊರಬರಬೇಕು ಎಂದು ಆಗ್ರಹಿಸಿದರು.

ವಿದ್ಯೆ ಕೇವಲ ಸರ್ಟಿಫಿಕೇಟ್ ಆಗಿರಬಾರದು, ಸಂಸ್ಕಾರ ಒಳಗೊಂಡಿರಬೇಕು : ಎಚ್‍ಡಿಡಿ

ಬೆಂಗಳೂರು, ಅ.17- ವಿದ್ಯೆ ಹಣ ಗಳಿಕೆಯ ಸಾಧನವಾಗದೆ ವ್ಯಕ್ತಿತ್ವ ರೂಪಿಸುವ ಸಾಧನವಾದಾಗ ಮಾತ್ರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲು ಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು. ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೊತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯೆ ಕೇವಲ ಕಾಗದದ ಸರ್ಟಿಫಿಕೇಟ್ ಆಗಿರಬಾರದು. ಅದು ಸಂಸ್ಕಾರವನ್ನು ಸಹ ಒಳಗೊಂಡಿರಬೇಕು ಎಂದರು.

ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಹಾಗೂ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಅಂತಹ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯ ನೀಡುತ್ತಿದೆ ಎಂದು ಹೇಳಿದರು. ವಿದ್ಯೆ ಮತ್ತು ಸಂಸ್ಕಾರ ಬದುಕಿನ ಬೇರುಗಳಿದ್ದಂತೆ. ಈ ಎರಡೂ ಒಟ್ಟಿಗೆ ಬೆಳೆದಾಗ ಮಾತ್ರ ಬದುಕಿಗೊಂದು ಸಾರ್ಥಕತೆ ಸಿಗುತ್ತದೆ. ಶಿಕ್ಷಣ ಅಂದರೆ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರವಲ್ಲ ಮನಸ್ಸಿಗೆ ಸಂಸ್ಕಾರವನ್ನು ಕೊಡುವುದೂ ಸಹ ಶಿಕ್ಷಣದ ಭಾಗ, ಬುದ್ದಿಯ ವಿಕಾಸದೊಂದಿಗೆ ಹೃದಯವಂತಿಕೆಯನ್ನೂ ಬೆಳೆಸಬೇಕು ಎಂದು ತಿಳಿಹೇಳಿದರು.

ವಿದ್ಯೆ ವಿನಯವನ್ನು ನೀಡುತ್ತದೆ. ವಿನಯದಿಂದ ಮನಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ವ್ಯಕ್ತಿಯಿಂದ ಹಣ ಸಂಪಾದನೆ ಆಗುತ್ತದೆ. ಸಂಪಾದಿಸಿದ ಹಣದಿಂದ ಧರ್ಮ ಕಾರ್ಯಗಳನ್ನು ನಡೆಸಿದಾಗ ಮಾತ್ರ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದರು.

ವಿದ್ಯಾರ್ಥಿ ಜೀವನ ಒಂದು ತಪಸ್ಸು ಇದ್ದಂತೆ. ಪ್ರತಿ ವಿದ್ಯಾರ್ಥಿಯ ಜೀವನ ಕ್ರಮ ಶಿಸ್ತಿಗೆ ಒಳಪಡಬೇಕು. ವಿದ್ಯೆ ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ ಒಂದು ದೇಶದ ಬೆಳವಣಿಗೆಯನ್ನೂ, ದೇಶದ ಸಂಸ್ಕೃತಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತದೆ. ಒಟ್ಟಾರೆ ಹೇಳಬೇಕೆಂದರೆ ವಿದ್ಯೆ ಸಂಪತ್ತು ಹೌದು, ಸಂಸ್ಕಾರವೂ ಹೌದು ಎಂದು ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಭಂಡಾರ, ವಿದ್ಯಾರ್ಥಿಗಳಿಗೆ ನೈತಿಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಧಾರೆ ಎರೆಯುತ್ತಿರುವ ಜ್ಞಾನಾಲಯ, ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಸುತ್ತಿರುವ ವಿಶ್ವವಿದ್ಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.

ಈ ಸಂಧರ್ಭದಲ್ಲಿ ಇಸ್ರೋದ ಅಧ್ಯಕ್ಷರಾದ ಎಸ್ ಸೋಮನಾಥ್ ಅವರಿಗೆ ನಾನು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಶಸ್ವಿ ಚಂದ್ರಯಾನ-3ರ ರೂವಾರಿ ಆಗಿರುವ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಇಸ್ರೋ ಸಂಸ್ಥೆ ಇವತ್ತು ನಮ್ಮ ಭಾರತ ದೇಶವನ್ನು ಬಾಹ್ಯಾಕಾಶದ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ ನಮಗೆಲ್ಲಾ ಹೆಮ್ಮೆ ತಂದಿದೆ. ಈ ಸಂದರ್ಭದಲ್ಲಿ ಎಲ್ಲಾ ವಿಜ್ಞಾನಿಗಳು ಅಭಿನಂದಿಸುತ್ತೇನೆ ಎಂದರು.

ಹೊರ ರಾಜ್ಯದ ವಾಹನಗಳಿಗೆ ವಿನಾಯತಿ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು ವಿಶ್ವವಿದ್ಯಾನಿಲಯ ನನಗೆ ನೀಡಿರುವ ಗೌರವ ಡಾಕ್ಟರೇಟ್‍ನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಗೌಡರು ಹೇಳಿದರು. ಇಸ್ರೋದ ಅಧ್ಯಕ್ಷರಾದ ಎಸ್. ಸೋಮನಾಥ್ ಮಾತನಾಡಿ, ಬಾಹ್ಯಾಕಾಶ ಸಂಸ್ಥೆಯ ಪ್ರತಿನಿಯಾಗಿ ನನಗೆ ಲಭಿಸಿರೋ ಈ ಗೌರವ ಅತೀವ ಸಂತಸ ತಂದಿದೆ. ನೂತನ ತಂತ್ರಜ್ಞಾನಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ವೇದಿಕೆಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ದೇವೇಗೌಡರು ಹಿರಿಯ ರಾಜಕಾರಣಿ, ರಾಜಕೀಯ ವಿಶ್ಲೇಷಕ ಮಾತ್ರವಲ್ಲದೇ ಜನರ ಪ್ರಧಾನಿಯಾಗಿದ್ದವರು. ನನಗೆ ನೀಡಿದ ಗೌರವ ಡಾಕ್ಟರೇಟ್‍ಅನ್ನು ಚಂದ್ರಯಾನದ ಪ್ರತಿಯೊಬ್ಬ ವಿಜ್ಞಾನಿ ಹಾಗು ತಂತ್ರಜ್ಞಾನಿಗೂ ಅರ್ಪಿಸುತ್ತೇನೆ ಎಂದರು.

ನಾವು ಅನೇಕ ಬಾಹ್ಯಾಕಾಶ ವಿಚಾರದಲ್ಲಿ ಇಂದಿಗೂ ಅನ್ವೇಷಣೆ ನಡೆಸುತ್ತಲೇ ಇದ್ದೇವೆ. ಭಾರತದ ಶಕ್ತಿಯನ್ನು ಮತ್ತೊಮ್ಮೆ ಚಂದ್ರಯಾನ ಮುಖಾಂತರ ಸಾಬೀತು ಮಾಡಿದ್ದೇವೆ ಎಂದು ಅವರು ಹೇಳಿದರು. ಸೋಮನಾಥ್ ಅವರ ಅನುಪಸ್ಥಿತಿಯಲ್ಲಿ ಅವರ ಸಂದೇಶದ ವಿಡಿಯೋವನ್ನು ಘಟಿಕೋತ್ಸವದಲ್ಲಿ ಪ್ರದರ್ಶಿಸಲಾಯಿತು.

ಬೆಂಗಳೂರು ವಿಶ್ವ ವಿದ್ಯಾಲಯದ ಕುಲಾಪತಿಗಳಾದ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್, ಝರೋದಾ ಸಹ ಪ್ರಾಧ್ಯಾಕರಾದ ನಿಖಿಲ್ ಕಾಮತ್, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಜಯಕರ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಘಟಿಕೋತ್ಸವದಲ್ಲಿ ಒಟ್ಟು 299 ಚಿನ್ನದ ಪದಕ ಹಾಗೂ 113 ನಗದು ಬಹುಮಾನಗಳನ್ನು ಒಟ್ಟು 193 ವಿದ್ಯಾರ್ಥಿಗಳಿಗೆ ನೀಡಲಾಯಿತು. 204 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಗಿದೆ.

ಎಟಿಎಂ ಯಂತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಅ.17- ಉದ್ಯಮಿಗಳು ಹಾಗೂ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೂರು ಎಟಿಎಂ ಯಂತ್ರಗಳನ್ನು ಹಿಡಿದುಕೊಂಡು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಆರ್. ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಶಾಸಕರು ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಕೈಯಲ್ಲಿ ಮೂರು ಎಟಿಎಂ ಮಿಷನ್‍ಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾನಿರತರು ನೋಟುಗಳನ್ನು ಹಾಕಿ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‍ಗೆ ಕರ್ನಾಟಕ ಎಟಿಎಂ ಆಗಿದೆ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಒಂದು ಕಡೆ ಕತ್ತಲೆ ಭಾಗ್ಯ,ಇನ್ನೊಂದು ಕಡೆ ಉಚಿತ ಸ್ಕೀಂ ಎಂದು ಕೈ ಎತ್ತಿದ್ದಾರೆ. ಮಕ್ಕಳು ಕುಡಿಯುವ ಹಾಲು ಹಾಲ್ಕೋಹಾಲ್ ಎರಡರ ಹಣ ಹೆಚ್ಚಾಗಿದೆ. ಈ ಸರ್ಕಾರದ ಅವಯಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತಿದೆ. ಹೀಗಾಗಿ ಈ ಸರ್ಕಾರ ತೊಲಗಬೇಕೆಂಬುದು ಜನರ ಭಾವನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರದ ಮೇಲೆ 40% ಕಮಿಷನ್ ಎಂದು ಆರೋಪ ಮಾಡಿದ್ದರು. ಸಾಕ್ಷಿ ಕೇಳಿದಾಗ ಸಾಕ್ಷಿ ಕೊಡಲಿಲ್ಲ. ತನಿಖೆ ಮಾಡಿ ಎಂದು ಹೇಳಿದ್ದೆವು. ಈಗ ಅವರದೇ ಸರ್ಕಾರದ ಅವಧಿಯಲ್ಲಿ ಸಾಕ್ಷಿ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ಕೊಟ್ಟ ಅಶೋಕ್, ಇದೇ ಪಕ್ಷದಲ್ಲಿ 40 ವರ್ಷ ಇದ್ದು ಈಗ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ. ಪಕ್ಷದ ಎಲ್ಲಾ ಸ್ಥಾನಗಳನ್ನು ಅನುಭವಿಸಿದ್ದಾರೆ. ಈಗ ಹೋಗಿ 4 ತಿಂಗಳಿಗೆ ಕಾಂಗ್ರೆಸ್ ಪಕ್ಷವನ್ನು ಇಷ್ಟು ಹೊಗಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಹೊಟೇಲ್ ನಲ್ಲಿ ಊಟ ತಿಂಡಿಗೆ ರೇಟ್ ಲೀಸ್ಟ್ ಇರತ್ತದೆ. ಆದರೆ ಈ ಸರ್ಕಾರದಲ್ಲಿ ಚಟ್ನಿ ಸಾಂಬಾರ್‍ಗೂ ರೇಟ್ ಲೀಸ್ಟ್ ಮಾಡಿದ್ದಾರೆ. ಈ ಮಾತನ್ನು ಹಿರಿಯರೊಬ್ಬರು ನನಗೆ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಂಪಣ್ಣನವರು ಐಟಿ ರೈಡ್ ಆದ ಮನೆಗೆ ಹೋಗಿದ್ದರು. ಅಂಬಿಕಾಪತಿ ಯಾಕೆ ಹೋಗಿದ್ದರು ಎಂದು ಹೇಳಬೇಕು. ಮಾಧ್ಯಮದ ಮುಂದೆ ಹೇಳಿಕೆ ಕೊಡಬೇಕು ಅವರು ಒತ್ತಾಯಿಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅದಕ್ಕಾಗಿ ಭೇಟಿ ಮಾಡಿದರೋ, ಮಾರ್ಗದರ್ಶನ ಪಡೆಯುವುದಕ್ಕೆ ಹೋಗಿದ್ದರೋ, ಮಾರ್ಗದರ್ಶನ ಮಾಡುವುದಕ್ಕೋ? ಪ್ರಕರಣ ಮುಚ್ಚಿ ಹಾಕುವ ಯತ್ನ ಇದು ಪರದೇಕೆ ಪೀಚೆ ಏನೋ ನಡೆಯುತ್ತಿದೆ ಇದೆ, ಅದು ಬಯಲಾಗಬೇಕು. ಹೀಗಾಗಿ ಸಿಬಿಐ ಸ್ವಮೋಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಅಶ್ವಥ್ ನಾರಾಯಣ ಮಾತನಾಡಿ, ಕೆಲವು ನಾಮಾಕಾವಸ್ತೆ ಭಾಗ್ಯಗಳನ್ನು ಜನರಿಗೆ ತೋರಿಸಿದ್ದಾರೆ. ತಮಗಾಗಿ ಅತೀ ದೊಡ್ಡ ಭಾಗ್ಯ ಲೂಟಿ ಭಾಗ್ಯ ಜಾರಿ ಮಾಡಿದ್ದಾರೆ. ಸರ್ಕಾರದ ಅಧಿಕಾರಿಗಳು ಲೂಟಿ ಭಾಗ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

ಈ ಸರ್ಕಾರದವರು ಗುತ್ತಿಗೆದಾರರಿಂದ, ಬಿಲ್ಡರ್‍ಗಳಿಂದ ಹಣ ಪಡೆದು ಸರ್ಕಾರಿ ಸೇವೆ ಕೊಡುತ್ತಿದ್ದಾರೆ. ಈ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರದ ಆರೋಪ ಮಾಡಿದಾಗ ಸಾಕ್ಷಿ ಎಲ್ಲಿದೆ ಅಂದರು. ಈಗ ಸಾಕ್ಷಿ ಸಿಕ್ಕಿದೆ, ಆದರೆಇದು ನಮ್ಮದಲ್ಲ, ಇವರೆಲ್ಲ ಬಿಜೆಪಿ ಗುತ್ತಿಗೆದಾರರು ಎನ್ನುತ್ತಿದ್ದಾರೆ. ಆಗಲಿ ತನಿಖೆ ಮಾಡಿ ಅಂದರೂ ಮಾಡಲ್ಲ ಎನ್ನುತ್ತಿದ್ದಾರೆ. ಇದು ಯಾರ ಹಣ ಅಂತ ಸಿಎಂಗೆ ಉತ್ತರಿಸಲು ಆಗ್ತಿಲ್ಲ, ಮಾತು ಬರುತ್ತಿಲ್ಲ. ಸಿದ್ದರಾಮಯ್ಯ ಭಂಡತನ ತೋರಿಸುತ್ತಿದ್ದಾರೆ. ಪಂಚೆ ಎತ್ಕೊಂಡು ನಮ್ಮ ವಿರುದ್ಧ ಪೇಸಿಎಂ ಆರೋಪ ಮಾಡಿದ್ದರೀ ಈಗ ಎಲ್ಲಿ ಉಡುಗಿಹೋಗಿದೆ ನಿಮ್ಮ ದನಿ ಎಂದು ಪ್ರಶ್ನಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪಂಚರಾಜ್ಯ ಚುನಾವಣೆ, ಲೋಕಸಭಾ ಚುನಾವಣೆ ಇದೆ. ಸಮಯ ಕಡಿಮೆ ಇದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಕಲೆಕ್ಷನ್ ಬ್ಯಾಟಿಂಗ್ ಶುರುಮಾಡಿದ್ದಾರೆ. ಕಂಟ್ರ್ಯಾಕ್ಟರ್‍ಗಳಿಗೆ ಹಣ ಬಿಡುಗಡೆ ಮಾಡಿ, ಏಜೆಂಟರ್ ಬಿಟ್ಟು ಕಲೆಕ್ಷನ್ ಮಾಡುತ್ತಾರೆ ಎಂದು ಆರೋಪಿಸಿದರು.
ಮಂಚದ ಕೆಳಗೆ 42 ಕೋಟಿ ರೂ. ಮಲಗಿತ್ತು. ಐಟಿ ರೈಡ್ ಮಾಡಿ ಹಿಡಿದಿದ್ದಾರೆ. ವಾರಸುದಾರರು ಯಾರು ಎಂದು ಹೇಳುತ್ತಿಲ್ಲ. ಬಿಜೆಪಿ ಬಳಿ ಹಣವೇ ಇರಲಿಲ್ಲ, ಆದರೂ 40% ಕಮಿಷನ್ ಆರೊಪ ಮಾಡಿದರು. ನಾವು ಸುಳ್ಳು ಹೇಳಿದ್ದೀವಿ ಎಂದು ಡಿ.ಕೆ.ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ.

ಕೆಂಪಣ್ಣನವರನ್ನ ಏಜೆಂಟ್ ಮಾಡಿಕೊಂಡು ಸುಳ್ಳು ಹೇಳಿಸಿದರು. ಈಗ ಅಬಕಾರಿ ಇಲಾಖೆಯಡಿ ಬಾರ್- ರೆಸ್ಟೋರೆಂಟ್‍ನವರಿಂದ ಸುಲಿಗೆ ಆಗುತ್ತಿದೆ. ದಸರಾದಲ್ಲಿ ಕಲಾವಿದರಿಂದ ಕಮಿಷನ್ ಕೇಳಿದ್ದಾರೆ. 5 ಲಕ್ಷ ರೂ. ನಲ್ಲಿ 3 ಲಕ್ಷ ರೂ. ವಾಪಸ್ ಕೊಡಬೇಕು ಎಂದು ಕಮಿಷನ್ ಕೇಳಿದ್ದಾರೆ. ಅಂದರೆ ಇದು 60% ಸರ್ಕಾರ ಎಂದು ತಿರುಗೇಟು ಕೊಟ್ಟರು.

ತೋಟಗಾರಿಕೆ, ಕೃಷಿ ಇಲಾಖೆ ಅಕಾರಿಗಳೇ ಪತ್ರ ಬರೆದರು. ಅಕಾರಿಗಳ ವರ್ಗಾವಣೆಗೆ ದರ ಫಿಕ್ಸ್ ಆಗಿದೆ. ಕಾಂಗ್ರೆಸ್ ಖಜಾನೆಗೆ ಹಣ ಹೋಗುವುದು ಫಿಕ್ಸ್ ಆಗಿದೆ. ಪ್ಲಾನ್ ಸೆಂಕ್ಷನ್ ಗೆ ಪ್ರತಿ ಅಡಿಗೆ 100 ರೂ. ಫಿಕ್ಸ್ ಮಾಡಿ, 25% ಡಿಸ್ಕೌಂಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಬಿಹಾರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು

ಪಾಕಿಸ್ಥಾನದಲ್ಲಿ ಇರುವಂತ ಪರಿಸ್ಥಿತಿ ರಾಜ್ಯಕ್ಕೆ ಬರಲಿದೆ. ಈ ಸರ್ಕಾರ ಅಂತ ಸ್ಥಿತಿ ತಂದಿಟ್ಟಿದೆ. ಆರೋಪ ಮಾಡಿದವರ ಮೇಲೆ ಎಫ್‍ಐಆರ್ ಹಾಕುತ್ತಾರೆ. ಹೋರಾಟ ನಮ್ಮ ಹಕ್ಕು. ಅದನ್ನ ಕಿತ್ತುಕೊಳ್ಳಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಕೂಡಲೇ ಕೊಡಬೇಕು ಎಂದು ಆಗ್ರಹಿಸಿದರು.

ಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟ ಶರವಣ

ಬೆಂಗಳೂರು, ಅ.17-ಸಮಾನ ಮನಸ್ಕರ ಚಿಂತನ-ಮಂಥನ ಸಭೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷರು ನಡೆಸಿದ್ದು, ಅದು ಸಮಾನ ದುಖಃಸ್ಥರ ಸಭೆ ಎಂದೆನಿಸತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂತನ- ಮಂಥನ ಸಭೆಯಲ್ಲಿ ಪಕ್ಷದ ವರಿಷ್ಠರು ಇರಬೇಕಾಗಿತ್ತು. ಇದನ್ನು ಪಕ್ಷದ ವೇದಿಕೆ ಎಂದು ಕರೆಯಬಹುದೆ ಎಂದು ಪ್ರಶ್ನಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ..ದೇವೇಗೌಡರು ಚಿಂತನ- ಮಂಥನ ಸಭೆಗೆ ಅನುಮತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. ದೇವೇಗೌಡರ ಕಣ್ಮುಂದೆ ಇರುವು ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದು. ಕಷ್ಟದ ಸಮಯದಲ್ಲಿ ನಾವು ಜೊತೆಯಲ್ಲಿ ಇದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಏನು ಮಾಡಬೇಕು ಎಂಬ ಚರ್ಚೆಯಲ್ಲಿ ಇದ್ದೇವೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರು ನಡೆಸಿರುವ ಸಭೆ ವಿಚಾರವಾಗಿ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪಕ್ಷದ ವರಿಷ್ಠರು ಮೈತ್ರಿಗೂ ಮುನ್ನ ಸಭೆ ಕರೆದು ಚರ್ಚಿಸಿದ್ದಾರೆ. ಮೈತ್ರಿ ಬಗ್ಗೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ. ನಾವೆಲ್ಲಾ ಒಪ್ಪಿದ ಮೇಲೆಯೇ ಅವರು ಮುಂದುವರೆದಿದ್ದು. ಒಳಗೊಂದು ಹೊರಗೊಂದು ಮಾತಾಡೋದು ಸರಿಯಲ್ಲ. ಅವರು ಕೂಡ ಹಿರಿಯರಿದ್ದಾರೆ ಎಂದು ಅವರು ಹೇಳಿದರು.

ಟ್ರಕ್‍ಗೆ ಬೆಂಕಿ, ನಾಲ್ವರ ಸಜೀವ ದಹನ

ನಿನ್ನ ನಡೆದ ಘಟನೆ ನಮಗೂ ನೋವಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದೆಹಲಿಗೆ ದೇವೇಗೌಡರ ಅನುಮತಿ ಪಡೆದೇ ಹೋಗಿದ್ದರು. ಶಾಸಕಾಂಗ ಸಭೆ ಕರೆದಾಗ ಎಲ್ಲರೂ ಬಂದಿದ್ದರು. ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರೆ ಜೊತೆಗೆ ಇರುತ್ತೇವೆ ಅಂದಿದ್ದಾರೆ. ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬುದು ಗಾಳಿಯಲ್ಲಿ ಗುಂಡು ಅಷ್ಟೆ ಎಂದರು.

ದೇವೇಗೌಡರಿಗೆ ಇನ್ನೂ ನೋವು ಕೊಡಬೇಡಿ. ನನಗೂ ಸೇರಿ ಪಕ್ಷದ ಪ್ರಮುಖರಿಗೆ ಕರೆ ಮಾಡಿದ್ದರು.ಆದರೆ ನಾವ್ಯಾರೂ ಸಭೆಗೆ ಹೋಗಿಲ್ಲ. ನೋವಿನಿಂದ ಆ ಸಭೆ ಮಾಡಿದ್ದಾರೆ ಅಷ್ಟೆ. ಇಲ್ಲಿ ಬ್ಲಾಕ್ ಮೇಲ್ ಏನೂ ಬರೋದಿಲ್ಲ ಎಂದು ಅವರು ಹೇಳಿದರು.

ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಇಬ್ರಾಹಿಂ ದೊಡ್ಡವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಕೊಟ್ಟಿರು ಹೇಳಿಕೆಯನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಯಾರ್ಯಾರನ್ನ ಕರೆಸಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಮುಂಬೈ, ಅ17 (ಪಿಟಿಐ)- ಹೂಡಿಕೆದಾರರಿಗೆ ದೇಶದೊಂದಿಗೆ ಪಾಲುದಾರರಾಗಲು ಅವಕಾಶವಿದೆ ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ನ ಭಾಗವಾಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇಲ್ಲಿನ ಗ್ಲೋಬಲ್ ಮ್ಯಾರಿಟೈಮ್ ಇಂಡಿಯಾ ಶೃಂಗಸಭೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಜಿ-20 ಶೃಂಗಸಭೆಯಲ್ಲಿ ಭಾರತವು ಕಾರಿಡಾರ್ ಕುರಿತು ಒಮ್ಮತವನ್ನು ರೂಪಿಸಲು ಮುಂದಾಳತ್ವ ವಹಿಸಿದೆ ಎಂದು ಹೇಳಿದರು.

ಕೆಲವೇ ದೇಶಗಳು ಅಭಿವೃದ್ಧಿ, ಜನಸಂಖ್ಯಾಶಾಸ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯಿಂದ ಆಶೀರ್ವದಿಸಲ್ಪಟ್ಟಿವೆ ಎಂದು ಮೋದಿ ಹೇಳಿದರು ಮತ್ತು ಭಾರತದ ಬೆಳವಣಿಗೆಯ ಪ್ರಯಾಣದ ಭಾಗವಾಗಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು.

ಇತಿಹಾಸದಲ್ಲಿ ಭಾರತದ ಕಡಲ ಸಾಮಥ್ರ್ಯವು ಪ್ರಬಲವಾಗಿದೆ ಎಂದ ಅವರು, ದೇಶ ಮತ್ತು ಪ್ರಪಂಚವು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಮತ್ತು ಕಳೆದ 9-10 ವರ್ಷಗಳಲ್ಲಿ ತಮ್ಮ ಸರ್ಕಾರವು ಕಡಲ ಕ್ಷೇತ್ರವನ್ನು ಬಲಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಶೃಂಗಸಭೆಯ ಮೂರನೇ ಆವೃತ್ತಿಯಲ್ಲಿ 18,800 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಂದರು ಸಂಬಂ„ತ ಯೋಜನೆಗಳಿಗೆ ಪ್ರಧಾನಿ ಮೋದಿ ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ಮಾಡಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‍ಗೆ ಸಹಾಯ ಮಾಡಲು ಅಭಿವೃದ್ಧಿಪಡಿಸಲಾಗುತ್ತಿರುವ ಗುಜರಾತ್‍ನ ದೀನದಯಾಳ್ ಬಂದರು ಪ್ರಾ„ಕಾರದಲ್ಲಿ ರೂ 4,539 ಕೋಟಿ ವೆಚ್ಚದ ಟ್ಯೂನ ಟೆಕ್ಕ್ರಾ ಆಲ-ವೆದರ್ ಡೀಪ್ ಡ್ರಾ-ï್ಟ ಟರ್ಮಿನಲ್‍ಗೆ ಅವರು ಶಂಕುಸ್ಥಾಪನೆಯನ್ನು ನೆರವೇರಿಸಿದರು.

ನಾಳೆ ಇಸ್ರೇಲ್‍ಗೆ ಅಮೆರಿಕ ಅಧ್ಯಕ್ಷ ಬಿಡನ್ ಭೇಟಿ

ಟೆಲ್ ಅವಿವ್, ಅ.17- ಹಮಾಸ್ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡನ್ ಬುಧವಾರ ಇಸ್ರೇಲ್‍ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಗಾಜಾಕ್ಕೆ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ಮತ್ತು ವಾಷಿಂಗ್ಟನ್ ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

ಅ 7 ರಂದು ಹಮಾಸ್ ದಾಳಿಯ ನಂತರ ಯುಎಸ್ ರಾಜತಾಂತ್ರಿಕರ ಎರಡನೇ ಭೇಟಿಯ ಕುರಿತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ರಕ್ಷಣಾ ಸಚಿವಾಲಯದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಭೇಟಿಯಾದ ನಂತರ ಬ್ಲಿಂಕನ್ ಮಾತನಾಡಿದರು.

ನಾಳೆ ನಾನು ಹಮಾಸ್‍ನ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸಲು ಒಗ್ಗಟ್ಟಿನಿಂದ ನಿಲ್ಲಲು ಇಸ್ರೇಲ್‍ಗೆ ಪ್ರಯಾಣಿಸುತ್ತೇನೆ. ನಂತರ ನಾನು ತೀವ್ರ ಮಾನವೀಯ ಅಗತ್ಯಗಳನ್ನು ಪರಿಹರಿಸಲು ಜೋರ್ಡಾನ್‍ಗೆ ಪ್ರಯಾಣಿಸುತ್ತೇನೆ, ನಾಯಕರನ್ನು ಭೇಟಿ ಮಾಡುತ್ತೇನೆ ಮತ್ತು ಹಮಾಸ್ ಪ್ಯಾಲೆಸ್ಟೀನಿಯರ ಸ್ವ-ನಿರ್ಣಯದ ಹಕ್ಕಿಗಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದು ಬಿಡೆನ್ ಹೇಳಿದ್ದಾರೆ ಎಂದು ಬ್ಲಿಂಕೆನ್ ತಿಳಿಸಿದ್ದಾರೆ.

ನಿಂತಿದ್ದ ಬೈಕ್‍ಗೆ ಟ್ಯಾಂಕರ್ ಡಿಕ್ಕಿ, ಅವಳಿ ಸಹೋದರಿಯರ ಸಾವು

ಹಮಾಸ್ ಮತ್ತು ಇತರ ಭಯೋತ್ಪಾದಕರಿಂದ ತನ್ನ ಜನರನ್ನು ರಕ್ಷಿಸಲು ಮತ್ತು ಭವಿಷ್ಯದ ದಾಳಿಯನ್ನು ತಡೆಯಲು ಇಸ್ರೇಲ್ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ಬ್ಲಿಂಕನ್ ಹೇಳಿದರು. ಬಿಡೆನ್ ಆ ಅಗತ್ಯಗಳನ್ನು ಪೂರೈಸಲು ನಾವು ಕಾಂಗ್ರೆಸ್‍ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದರಿಂದ ತನ್ನ ಜನರನ್ನು ರಕ್ಷಿಸಲು ಏನು ಬೇಕು ಎಂದು ಇಸ್ರೇಲ್‍ನಿಂದ ಕೇಳುತ್ತಾರೆ ಎಂದು ಅವರು ಹೇಳಿದರು.