Friday, November 7, 2025
Home Blog Page 1884

ಮಾಜಿ ಸಿಎಂ ಬೊಮ್ಮಾಯಿ ಆಸ್ಪತ್ರೆಗೆ ದಾಖಲು

ಬೆಂಗಳೂರು,ಅ.17-ಮೊಣಕಾಲು ನೋವಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದು, ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸದ್ಯ ವೈದ್ಯರು ಅವರ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸದ್ಯ ಬೊಮ್ಮಾಯಿ ಆರೋಗ್ಯವಾಗಿದ್ದು, ಅವರನ್ನು ವೈದ್ಯರು ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಕೆಲ ವರ್ಷಗಳಿಂದ ಬೊಮ್ಮಾಯಿಯವರು ತೀವ್ರ ಮಂಡಿ ನೋವಿನಿಂದ ಬಳಲುತ್ತಿದ್ದರು. ನಡೆದಾಡುವಾಗ ಸಮಸ್ಯೆ ಎದುರಿಸುತ್ತಿದ್ದರು. ಆದರೂ ಸಹ ಅವರು ಕುಂಟುತ್ತಾ ರಾಜಕೀಯ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊನೆಗೆ ನೋವು ಹೆಚ್ಚಾಗಿದ್ದರಿಂದ ಅವರು ಸಿಎಂ ಸ್ಥಾನದಲ್ಲಿರವಾಗಲೇ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು.

ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವು

ಒಂದು ವೇಳೆ ಆಪರೇಷನ್ ಮಾಡಿಸಿಕೊಂಡರೇ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತದೆ ಎಂದು ಆಪರೇಷನ್ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಬದಲಿಗೆ ಬಸವರಾಜ ಬೊಮ್ಮಾಯಿ ಮಂಡಿ ನೋವಿಗೆ ಮೈಸೂರಿನ ಮೂಲದ ಖ್ಯಾತ ನಾಟಿ ವೈದ್ಯ ಲೋಕೇಶ್ ಟೇಕ್ ಅವರಿಂದ ಚಿಕಿತ್ಸೆ ಪಡೆದುಕೊಂಡಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸರ್ಕಾರದ ಚುಕ್ಕಾಣಿ ಹಿಡಿದ ವೇಳೆ ಮಂಡಿ ನೋವು ಉಲ್ಬಣಿಸಿತ್ತು. ಉಪಚುನಾವಣಾ ಪ್ರಚಾರದ ವೇಳೆ ವಿಶ್ರಾಂತಿ ರಹಿತ ಪ್ರವಾಸದ ಕಾರಣದಿಂದ ಮಂಡಿ ನೋವು ಮತ್ತಷ್ಟು ಹೆಚ್ಚಾಗಿ ಅಕ್ಷರಶಃ ಕುಂಟುತ್ತಾ ನಡೆಯುವಂತಾಗಿತ್ತು.

ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಷ್ಟು ಸಮಯವೂ ಮಂಡಿ ಚಿಕಿತ್ಸೆಗೆ ಮುಂದಾಗಿರಲಿಲ್ಲ. ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಹಲವು ದಿನಗಳ ವಿಶ್ರಾಂತಿ ಅಗತ್ಯವಿರುತ್ತದೆ ಎಂದು ಆಪರೇಷನ್ ಮಾಡಿಸಿಕೊಳ್ಳುವುದನ್ನು ಕೈಬಿಟ್ಟಿದ್ದರು. ಕುಂಟುತ್ತಲೇ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮಂಡಿ ಶಸ್ತ್ರಚಿಕಿತ್ಸೆ ಆಗಲೇಬೇಕು ಎಂದು ವೈದ್ಯರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ಬೊಮ್ಮಾಯಿ ಅವರು ಶೀಘ್ರಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಫೋಸ್ಟ್ ಮಾಡಿದ್ದಾರೆ.

ವಿಶ್ವಸಂಸ್ಥೆಗೆ ಭಾರತದ ರಾಯಭಾರಿಯಾಗಿ ಅರಿಂದಮ್ ಬಾಗ್ಚಿ ನೇಮಕ

ನವದೆಹಲಿ, ಅ. 17-ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರನ್ನು ವಿಶ್ವಸಂಸ್ಥೆ (ಯುಎನ್) ಮತ್ತು ಜಿನೀವಾದಲ್ಲಿರುವ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಖಾಯಂ ಪ್ರತಿನಿಧಿಯಾಗಿ ಕೇಂದ್ರ ಸರ್ಕಾರ ನೇಮಿಸಿದೆ.

1995ರ ಬ್ಯಾಚ್‍ನ ಭಾರತೀಯ ವಿದೇಶಾಂಗ ಸೇವೆ (ಐಎಫ್‍ಎಸ್) ಅಧಿಕಾರಿಯಾಗಿರುವ ಬಾಗ್ಚಿ ಅವರು ಮಾರ್ಚ್ 2021 ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿ ಅಧಿಕಾರ ವಹಿಸಿಕೊಂಡರು ಮತ್ತು ಪೂರ್ವ ಲಡಾಖ್ ಗಡಿ, ಭಾರತದಲ್ಲಿ ಕೋವಿಡ್ ನಿಯಂತ್ರಣ ಸೇರಿದಂತೆ ಹಲವಾರು ನಿರ್ಣಾಯಕ ಸಮಸ್ಯೆಗಳನ್ನು ಬಹಳ ಚತುರತೆಯಿಂದ ನಿಭಾಯಿಸಿದರು.ಭಾತರದ ಜಿ-20 ಅಧ್ಯಕ್ಷೀಯ ಕಾರ್ಯಭಾರದಲ್ಲಿ ಯಶಸ್ಸಿನ ಪಾಲು ಇದೆ.

ಪ್ರಸ್ತುತ ಜಿನೀವಾದಲ್ಲಿ ಇಂದ್ರ ಮಣಿ ಪಾಂಡೆಯ ಅವರು ನವದೆಹಲಿಗೆ ಮರಳಲಿದ್ದು ಅವರ ಉತ್ತರಾಧಿಕಾರಿಯಾಗಿ ಬಾಗ್ಚಿ ನಿಯೋಜನೆಗೊಂಡಿದ್ದಾರೆ. ಅರಿಂದಮ್ ಬಾಗ್ಚಿ ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದು ಈಗ ಅವರು ಜಿನೀವಾದಲ್ಲಿ ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಮುಂದಿನ ರಾಯಭಾರಿ/ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ ಎಂದು ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.ಅವರು ಶೀಘ್ರದಲ್ಲೇ ಅಕಾರ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

ಎಂಇಎ ವಕ್ತಾರ ಹುದ್ದೆಗೆ ಜಂಟಿ ಕಾರ್ಯದರ್ಶಿ (ಜಿ20) ನಾಗರಾಜ್ ನಾಯ್ಡು ಕಾಕನೂರ್ ಮತ್ತು ಮಾರಿಷಸ್‍ನ ಹೈಕಮಿಷನರ್ ಕೆ ನಂದಿನಿ ಸಿಂಗ್ಲಾ ಸೇರಿದಂತೆ ಸುಮಾರು ನಾಲ್ವರು ಹಿರಿಯ ರಾಜತಾಂತ್ರಿಕರ ಹೆಸರು ಕೇಳಿಬಂದಿದೆ.

20 ಶಾಸಕರ ಜೊತೆ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಪ್ಲಾನ್!

ಈ ಹಿಂದೆ, ಬಾಗ್ಚಿ ಕ್ರೊಯೇಷಿಯಾಕ್ಕೆ ರಾಯಭಾರಿಯಾಗಿ ಮತ್ತು ಶ್ರಿಲಂಕಾಕ್ಕೆ ಡೆಪ್ಯುಟಿ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ನಿರ್ದೇಶಕರಾಗಿ ಮತ್ತು ನ್ಯೂಯಾರ್ಕ್‍ನ ಯುಎನ್‍ನಲ್ಲಿ ಭಾರತದ ಖಾಯಂ ಮಿಷನ್‍ನಲ್ಲಿಯೂ ಸಹ ಕಾರ್ಯ ನಿರ್ವಹಿಸಿದ ಅನುಭವವಿದೆ.

ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವು

ದರ್ಭಾಂಗಾ (ಬಿಹಾರ), ಅ.17 – ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತಿಬ್ಬರು ಅಸ್ವಸ್ಥರಾಗಿದ್ದಾರೆ. ಎಲ್ಲಾ ಸಂತ್ರಸ್ತ ಜನರು ರುಸ್ತಂಪುರ ಗ್ರಾಮದ ನಿವಾಸಿಗಳಾಗಿದ್ದು, ಭಾನುವಾರ ಅವರು ನಕಲಿ ಮದ್ಯ ಸೇವಿಸಿದ್ದಾರೆ ಎಂಬ ಕುಟುಂಬ ಸದಸ್ಯರ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ದರ್ಭಾಂಗದ ಹಿರಿಯ ಪೊಲೀಸ್ ಅಧೀಕ್ಷಕ ಅವಕಾಶ್ ಕುಮಾರ್ ತಿಳಿಸಿದ್ದಾರೆ.

ಮೃತಪಟ್ಟ ಇಬ್ಬರನ್ನು ಸಂತೋಷ್ ದಾಸ್ ಮತ್ತು ಭೂಖ್ಲಾ ಸಾಹ್ನಿ ಎಂದು ಗುರುತಿಸಲಾಗಿದ್ದು ಅವರ ನಿಧನರಾದ ಕೂಡಲೇ ಕುಟುಂಬ ಸದಸ್ಯರು ಅಂತ್ಯಸಂಸ್ಕಾರ ಮಾಡಿದ್ದಾರೆ ಆದ್ದರಿಂದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಲಿಲ್ಲ, ಆದರೂ ನಾವು ಕುಟುಂಬದವರ ಹೇಳಿಕೆಗಳನ್ನು ದಾಖಲಿಕೊಂಡಿದೇವೆ ಎಂದು ತಿಳಿಸಿದರು.

20 ಶಾಸಕರ ಜೊತೆ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಪ್ಲಾನ್!

ಮೃತರ ಜೊತೆಗೆ ಮದ್ಯ ಸೇವಿಸಿದ್ದಾರೆ ಎನ್ನಲಾದ ಲಾಲ್ತುನ್ ಸಾಹ್ನಿ ಮತ್ತು ಅರ್ಜುನ್ ದಾಸ್ ಅವರ ಹೇಳಿಕೆಗಳನ್ನು ಪಡೆಯಲಾಗಿದೆ ಪ್ರಸ್ತುತ ಅವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ನಕಲಿ ಮದ್ಯದ ವ್ಯವಹಾರದಲ್ಲಿ ಭಾಗಿಯಾಗಿರುವವರನ್ನು ಶೀಘ್ರದಲ್ಲೆ ಪತ್ತೆ ಹಚ್ಚಲಾಗುವುದು ಅವಕಾಶ್ ಕುಮಾರ್ ತಿಳಿಸಿದ್ದಾರೆ ಕಳೆದ 2016 ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-10-2023)

ನಿತ್ಯ ನೀತಿ : ಎಲ್ಲಿ ಪ್ರೇಮವಿರುವುದೋ ಅಲ್ಲಿ ಸ್ವಾರ್ಥವಿರಬಾರದು. ಅಹಂಕಾರವಿರಬಾರದು. ಪರಿಶುದ್ಧವಾದ ಭಗವತ್ಪ್ರೇಮವಿರಬೇಕು.

ಪಂಚಾಂಗ ಮಂಗಳವಾರ 17-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಋತು: ಶರದ್ / ಮಾಸ:ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ಬಿದಿಗೆ / ನಕ್ಷತ್ರ: ಸ್ವಾತಿ / ಯೋಗ: ವಿಷ್ಕಂಭ / ಕರಣ: ಬಾಲವ

ಸೂರ್ಯೋದಯ : ಬೆ.06.11
ಸೂರ್ಯಾಸ್ತ : 5.59
ರಾಹುಕಾಲ : 3.00-4.300
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

ರಾಶಿ ಭವಿಷ್ಯ
ಮೇಷ
: ಹಿರಿಯ ಅಧಿಕಾರಿಗಳು, ಕುಟುಂಬ ದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ವೃಷಭ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ಮಿಥುನ: ಅಧಿಕಾರಿಗಳೊಂದಿಗಿನ ವೈಮನಸ್ಯ ದೂರ ಮಾಡಿಕೊಂಡರೆ ವೃತ್ತಿಪರ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅನುಕೂಲವಾಗಿರುತ್ತದೆ.

ಕಟಕ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ಸಿಂಹ: ಕೆಲಸ-ಕಾರ್ಯಗಳು ಸಂಪೂರ್ಣವಾಗಿ ಕಾರ್ಯಗತ ಗೊಳ್ಳಬಹುದು ಮತ್ತು ಅವು ನಿಮಗೆ ಅನುಕೂಲಕರ ಫಲಿತಾಂಶ ತಂದು ಕೊಡಲಿವೆ.
ಕನ್ಯಾ: ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.

ತುಲಾ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹಲವಾರು ಪ್ರಯೋಜನವಾಗಲಿವೆ.
ಧನುಸ್ಸು: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.

ಮಕರ: ಕಾರ್ಯಸಾಧನೆಗಾಗಿ ಪ್ರಯಾಣ ಮಾಡಬೇಕಾಗಬಹುದು. ಅಧಿಕ ಖರ್ಚು
ಕುಂಭ: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.
ಮೀನ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.

20 ಶಾಸಕರ ಜೊತೆ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಪ್ಲಾನ್!

ಬೆಂಗಳೂರು, ಅ.16- ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಾಸಕರ ಹಾಗೂ ಆಪ್ತಬಣದ ಪ್ರವಾಸ ಆಯೋಜನೆ ಮಾಡಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ.

ಈ ಮೊದಲು ಸತೀಶ್ ಜಾರಕಿಹೊಳಿ ಅವರು ಮೈಸೂರು ದಸರಾ ನೋಡಲು 20 ಕ್ಕೂ ಹೆಚ್ಚು ಮಂದಿ ಶಾಸಕರನ್ನು ಗುಂಪು ಕಟ್ಟಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಅದು ತಪ್ಪಿದೆ. ಆಪ್ತ ಶಾಸಕರ ಜೊತೆ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ ಅವರು ವಿವಿಧ ಪಕ್ಷಗಳ ಶಾಸಕರುಗಳು ಹಲವು ಕಡೆ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ಕೂಡ ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಹೇಳಿದರು.

ವಿರಾಟ್‍ಕೊಹ್ಲಿ ವಿಶ್ವದಲ್ಲೇ ಅತ್ಯಂತ ಉತ್ತಮ ಆಟಗಾರ

ಇದು ಬಣ ರಾಜಕೀಯವಲ್ಲ. ಕಾಂಗ್ರೆಸ್‍ನ ಶಾಸಕರು ಮಾತ್ರವೇ ಹೋಗುತ್ತೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿಯೇ ಪ್ರವಾಸ ಮಾಡುತ್ತೇವೆ. ಮೈಸೂರು ದಸರಾ ನೋಡಲು ಬನ್ನಿ ಎಂದು ಆ ಭಾಗದ ಶಾಸಕರು ಆಹ್ವಾನ ನೀಡಿದ್ದರು. ಅದರಂತೆ ನಮ್ಮ ಆಪ್ತರು, ನಮ್ಮ ಭಾಗದ ಶಾಸಕರು, ಸಮಾನ ಮನಸ್ಕರು ಹೋಗಲು ನಿರ್ಧರಿಸಿದ್ದೆವು. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ನಮ್ಮ ಭಾಗದಲ್ಲೇ ಕೆಲವು ಹಬ್ಬಗಳಿರುವುದರಿಂದ ಎಲ್ಲರಿಗೂ ಸಮಯ ಆಗಲಿಲ್ಲ. ಆದರೆ ಮುಂದೊಂದು ದಿನ ಸಮಯ ನಿಗದಿ ಮಾಡಿಕೊಂಡು ಪ್ರವಾಸ ಮಾಡುತ್ತೇವೆ ಎಂದರು.

ರಮಾನುಲ್ಲಾ ನಮ್ಮ ಮೇಲೆ ಒತ್ತಡ ಹೇರಿದ್ದರು

ನವದೆಹಲಿ, ಅ.16- ಆಫ್ಘಾನಿಸ್ತಾನದ ಆರಂಭಿಕ ಆಟಗಾರ ರಮಾನುಲ್ಲಾ ಗುರ್ಬಾಜ್ (80 ರನ್) ಸ್ಪೋಟಕ ಆಟ ಪ್ರದರ್ಶಿಸುವ ಮೂಲಕ ತಮ್ಮ ಮೇಲೆ ಒತ್ತಡ ಹಾಕಿದ್ದೆ ವಿಶ್ವಕಪ್ ಪಂದ್ಯ ಸೋಲಿಗೆ ಕಾರಣ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹೇಳಿದ್ದಾರೆ.

ಆಫ್ಘಾನಿಸ್ತಾನ ನೀಡಿದ 285 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 215 ರನ್ ಗಳಿಸಿ 65 ರನ್‍ಗಳಿಂದ ಐತಿಹಾಸಿಕ ಸೋಲು ಅನುಭವಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಮೊದಲ ವಿಕೆಟ್‍ಗೆ ಇಮ್ರಾಹಿಂ ಜರ್ದಾನ್ ಹಾಗೂ ರಮಾನುಲ್ಲಾ ಗುರ್ಬಾಜ್ ಅವರು 114 ರನ್‍ಗಳ ಜೊತೆಯಾಟ ನೀಡುವ ನಮ್ಮ ತಂಡದ ಮೇಲೆ ಒತ್ತಡ ಹೇರಿದ್ದರು ಎಂದು ಜೋಸ್ ಬಟ್ಲರ್ ಹೇಳಿದ್ದಾರೆ. ಇದರಿಂದ ಎದುರಾಳಿ ತಂಡವು 284 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಲು ಸಹಕಾರಿಯಾಯಿತು ಎಂದು ಬಟ್ಲರ್ ತಿಳಿಸಿದ್ದಾರೆ.

ನಾವು ಪಂದ್ಯದಲ್ಲಿ ಉತ್ತಮ ಆರಂಭ ಮಾಡಲಿಲ್ಲ, ಪಂದ್ಯದ ಮೊದಲ ಎಸೆತವನ್ನು ನಾನು ತಪ್ಪಿಸಿಕೊಂಡೆ ಮತ್ತು ಅದು ಮೊದಲ 10 ಓವರ್‍ಗಳಿಗೆ ಟೋನ್ ಅನ್ನು ಹೊಂದಿಸಿದೆ, ನಾವು ಬಯಸಿದ ಪ್ರದೇಶಗಳನ್ನು ನಾವು ಹೊಡೆದಿಲ್ಲ ಮತ್ತು ಗುರ್ಬಾಜ್‍ಗೆ ಮನ್ನಣೆ ನೀಡಿದ್ದೇವೆ . ಅವರು ನಮ್ಮನ್ನು ಸಾಕಷ್ಟು ಒತ್ತಡಕ್ಕೆ ಒಳಪಡಿಸಿದಂತೆ, ಕೆಲವು ಉತ್ತಮ ಹೊಡೆತಗಳನ್ನು ಆಡಿದರು, ಆದರೆ ಕೆಲವು ಸುಲಭವಾದ ಬೌಂಡರಿಗಳು ಇರಬಹುದು ಎಂದು ಹೇಳಿದರು.

ಜೆಡಿಎಸ್ ಸಮಾನಮನಸ್ಕರ ಸಭೆಯ ಬ್ಯಾನರ್‌ನಲ್ಲಿ ಹೆಚ್‌ಡಿಕೆ ಫೋಟೋಗೆ ಕೊಕ್

ಆಟಕ್ಕೆ ಪ್ರವೇಶಿಸಲು ನಮಗೆ ಸ್ವಲ್ಪ ಸಮಯ ತೆಗೆದುಕೊಂಡಿತು, ಮತ್ತು ನಾವು ಚೆನ್ನಾಗಿ ಹಿಂತಿರುಗಿದೆವು, ಮತ್ತು ನಂತರ ಅವರು ಕೊನೆಯಲ್ಲಿ ಇನ್ನೂ ಹೆಚ್ಚಿನದನ್ನು ಪಡೆಯಲು ಅವಕಾಶ ಮಾಡಿಕೊಡಬಹುದು ಎಂದು ಬಟರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೌದು, ಇದು ನಿಸ್ಸಂಶಯವಾಗಿ ದೊಡ್ಡ ಹಿನ್ನಡೆಯಾಗಿದೆ. ಪಂದ್ಯಾವಳಿ ಪ್ರಾರಂಭವಾಗುವ ಮೊದಲು ನೀವು ಮೊದಲ ಮೂರು ಪಂದ್ಯಗಳು ಹೇಗೆ ಹೊರಹೊಮ್ಮುತ್ತವೆ ಎಂಬುದರ ಕುರಿತು ವಿಭಿನ್ನವಾದ ಕಲ್ಪನೆಯನ್ನು ಹೊಂದಿದ್ದೀರಿ. ನಾವು ಸಾಕಷ್ಟು ಪಾತ್ರವನ್ನು ತೋರಿಸಬೇಕಾಗಿದೆ, ತಂಡದೊಳಗೆ ಸಾಕಷ್ಟು ಸ್ಥಿತಿಸ್ಥಾಪಕತ್ವ ಮತ್ತು ಎಲ್ಲಕ್ಕಿಂತ ಹೆಚ್ಚಿನ ನಂಬಿಕೆ. ಅಲ್ಲಿ ಸಾಕಷ್ಟು ಅತ್ಯುತ್ತಮ ಆಟಗಾರರಿದ್ದರು ಮತ್ತು ನಾವು ಇಂದು ಸಾಕಷ್ಟು ಉತ್ತಮವಾಗಿ ಆಡಿಲ್ಲ ಆದರೆ ನಾವು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಎಂದು ಅವರು ಹೇಳಿದರು.

ವಿರಾಟ್‍ಕೊಹ್ಲಿ ವಿಶ್ವದಲ್ಲೇ ಅತ್ಯಂತ ಉತ್ತಮ ಆಟಗಾರ

ಬೆಂಗಳೂರು, ಅ. 16- ಇಡೀ ವಿಶ್ವದಲ್ಲೇ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಆಫ್ಘಾನಿಸ್ತಾನ ತಂಡದ ನಾಯಕ ಶಹಿಡಿ ಅವರು ಗುಣಗಾಣ ಮಾಡಿದ್ದಾರೆ. ನವದೆಹಲಿಯ ಅರುಣ್‍ಜೇಟ್ಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ವಿರುದ್ಧ 69 ರನ್‍ಗಳ ಐತಿಹಾಸಿಕ ಗೆಲುವು ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಫ್ಘಾನಿಸ್ತಾನ ತಂಡದ ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕನ ಬ್ಯಾಟಿಂಗ್ ಕೌಶಲ್ಯವನ್ನು ಕೊಂಡಾಡಿದ್ದಾರೆ.

`ವಿರಾಟ್ ಕೊಹ್ಲಿ ಅವರು ಆಧುನಿಕ ಕ್ರಿಕೆಟ್ ಜಗತ್ತಿನ ಅತ್ಯಂತ ಅತ್ಯುತ್ತಮ ಬ್ಯಾಟ್ಸ್‍ಮನ್ ಆಗಿದ್ದಾರೆ. ಅವರ ತಾಳ್ಮೆ ಹಾಗೂ ತಂಡದೊಂದಿಗೆ ಅವರು ತಮ್ಮನ್ನು ತೊಡಗಿಸಿಕೊಳ್ಳುವ ರೀತಿ ಅತ್ಯಮೋಘವಾಗಿದೆ. ಅವರು ಮಾಡಿರುವ ದಾಖಲೆಗಳನ್ನು ನಾವು ಸುಲಭವಾಗಿ ಅಂದಾಜಿಸಬಹುದು. ಆದರೆ ಅವರು ಮಾಡಿರುವ ದಾಖಲೆಯ ಹಿಂದೆ ಅಡಗಿರುವ ಅಪಾರವಾದ ಶ್ರಮವು ಅಪಾರವಾಗಿದೆ. ಕಿಂಗ್ ಕೊಹ್ಲಿ 47 ಶತಕ ಬಾರಿಸಿದ್ದಾರೆ ಎಂದು ಹೇಳುವುದು ಸುಲಭ. ಆದರೆ ಅವರು ಈ ಸಾಧನೆ ಮಾಡಲು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ’ ಎಂದು ಶಹಿಡಿ ಹೇಳಿದ್ದಾರೆ.

ಜೆಡಿಎಸ್ ಸಮಾನಮನಸ್ಕರ ಸಭೆಯ ಬ್ಯಾನರ್‌ನಲ್ಲಿ ಹೆಚ್‌ಡಿಕೆ ಫೋಟೋಗೆ ಕೊಕ್

ಆಫ್ಘಾನಿಸ್ತಾನದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕೇವಲ ಅವರ ಆಟದಿಂದ ಮಾತ್ರ ಗುಣಗಾಣ ಮಾಡಿಲ್ಲ , ವಿಶ್ವದೆಲ್ಲೆಡೆ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೂ ಅವರು ತಮ್ಮ ಹಾಗೂ ಇತರ ತಂಡಗಳ ಆಟಗಾರರಲ್ಲಿ ಸೂರ್ತಿ ತುಂಬಿದ್ದಾರೆ. ಕ್ರಿಕೆಟ್ ಎಂಬುದು ಕೇವಲ ಆಟವಾಗಿ ಉಳಿಯದೆ ಗಡಿ, ಸಂಸ್ಕøತಿ, ಭಾಷೆಯನ್ನು ಮೀರಿ ನಿಂತಿದೆ ಎಂದು ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧ 69 ರನ್‍ಗಳ ಗೆಲುವು ಸಾಧಿಸುವ ಮೂಲಕ ಆಫ್ಘಾನಿಸ್ತಾನ ವಿಶ್ವಕಪ್ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.

ವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಟನೆ ಕೊಟ್ಟ ಬೆಸ್ಕಾಂ

ಬೆಂಗಳೂರು, ಅ.16- ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ದರದಲ್ಲಿ ಮೊದಲಿಗಿಂತಲೂ ಶೇ. 14 ಪೈಸೆಯಷ್ಟು ಕಡಿತವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಮೊದಲು ಆಗಸ್ಟ್‍ನಲ್ಲಿ ಪ್ರತಿ ಯುನಿಟ್‍ಗೆ 1.15 ರೂಪಾಯಿ ವಿದ್ಯುತ್ ಮತ್ತು ಇಂಧನ ಖರೀದಿ ಹೊಂದಾಣಿಕೆ ವೆಚ್ಚ ನಿಗದಿಯಾಗಿತ್ತು. ಸೆಪ್ಟೆಂಬರ್‍ನಲ್ಲಿ ಅದನ್ನು ಕೆಇಆರ್‌ಸಿ ಪರಿಷ್ಕರಣೆ ಮಾಡಿದ್ದು, 14 ಪೈಸೆ ಕಡಿಮೆ ಮಾಡಿದೆ. ಹೀಗಾಗಿ ಪ್ರತಿ ಯುನಿಟ್‍ಗೆ ಪ್ರಸ್ತುತ 1.1 ಪೈಸೆ ನಿಗದಿಯಾಗಿದೆ. ಇದರ ಲಾಭವನ್ನು ಬೆಸ್ಕಾಂಗಳು ಗ್ರಾಹಕರಿಗೆ ತಲುಪಿಸುತ್ತಿವೆ.

ಪ್ರತಿಯೊಂದು ಬಿಲ್‍ನಲ್ಲೂ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ದರದ ಮೇಲೆ ಶುಲ್ಕ ನಿಗದಿಯಾಗುತ್ತದೆ. ಇದನ್ನು ಗ್ರಾಹಕರಿಂದಲೇ ಸಂಗ್ರಹಿಸಬೇಕೆಂಬುದು ಕೇಂದ್ರ ಸರ್ಕಾರದ ಅಧಿಸೂಚನೆಯಾಗಿದೆ.
ಇತ್ತೀಚೆಗೆ ಕಲ್ಲಿದ್ದಲ ಸಾಗಾಣಿಕೆ ಹಾಗೂ ಇತರ ವೆಚ್ಚಗಳು ತಗ್ಗಿದ್ದರಿಂದಾಗಿ ವಿದ್ಯುತ್ ಖರೀದಿ ದರ ಕಡಿಮೆಯಾಗಿದೆ. ಇದನ್ನು ಪರಿಗಣಿಸಿರುವ ಕೆಇಆರ್‍ಸಿ ಹೊಂದಾಣಿಕೆ ದರವನ್ನೂ ಕಡಿಮೆಗೊಳಿಸುವಂತೆ ಆದೇಶಸಿದೆ.

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಇದರ ಲಾಭ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಯಾವುದೇ ರೀತಿಯ ವಿದ್ಯುತ್ ಶುಲ್ಕ ಏರಿಕೆಯಾಗಿಲ್ಲ ಎಂದು ಬೆಸ್ಕಾಂ ಮೂಲಗಳು ಸ್ಪಷ್ಟಪಡಿಸಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಪರಿಷ್ಕರಣೆಯಾಗುತ್ತದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿಗದಿಯಾಗಿರುವ 1.1 ರೂ.ಗಳ ದರ ಮುಂದಿನ ಜನವರಿಯ ವೇಳೆ ಮತ್ತೊಮ್ಮೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

ಜೆಡಿಎಸ್ ಸಮಾನಮನಸ್ಕರ ಸಭೆಯ ಬ್ಯಾನರ್‌ನಲ್ಲಿ ಹೆಚ್‌ಡಿಕೆ ಫೋಟೋಗೆ ಕೊಕ್

ಬೆಂಗಳೂರು,ಅ.16- ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಪಾಲ್ಗೊಂಡಿದ್ದರು. ಮಹಿಮ ಪಾಟೀಲ್ ಪಾಲ್ಗೊಂಡಿರುವುದರಿಂದ ಇಬ್ರಾಹಿಂ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿಯೊಂದಿಗಿನ ಮೈತ್ರಿಯ ಬಗ್ಗೆ ಅಸಮಾಧನ ವ್ಯಕ್ತಪಡಿಸಿ ಸಮಾನ ಮನಸ್ಕರ ಅಭಿಪ್ರಾಯ ಸಂಗ್ರಹಿಸಲು ಇಬ್ರಾಹಿಂ ಚಿಂತನ-ಮಂಥನ ಸಭೆ ಕರೆದಿದ್ದರು. ಸಭೆಯ ಬ್ಯಾನರ್‍ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿ.ಎಂ.ಇಬ್ರಾಹಿಂ ಫೋಟೋ ಮಾತ್ರ ಇತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬೇರೆ ಯಾವ ನಾಯಕರ ಫೋಟೋವು ಕೂಡ ಇರಲಿಲ್ಲ.

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಯದ್ ಸಬಿವುಲ್ಲಾ ಸಾಹೇಬ್ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಮಹಿಮ ಪಟೇಲ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಬಿಜೆಪಿಗೆ ಸೇರಿದ್ದರು. ಆಗ ಫರ್ನಾಂಡಿಸ್ ಅವರು ಪ್ರಧಾನಿಯಾಗಲಿದ್ದಾರೆ ಸಹಕಾರ ಕೊಡಿ ಎಂದು ನಮ್ಮ ತಂದೆ ಜೆ.ಎಚ್.ಪಟೇಲ್ ಅವರು ಸಮ್ಮತಿಸಿದ್ದರು ಎಂದರು.

ಸಿದ್ದಾಂತದ ಮೂಲಕ ಮತ ಯಾಚಿಸಬೇಕೇ ಹೊರತು ಹಣ, ಜಾತಿ ಆಧಾರದ ಮೇಲೆ ಕೇಳಿದರೆ ಅದು ದಂಧೆಯಾಗಲಿದೆ. ಈಗಾಗಲೇ ರಾಜಕಾರಣಿಗಳ ಬಗ್ಗೆ ಗೌರವ ಕಡಿಮೆಯಾಗಿದೆ. 2004ರಲ್ಲಿ ಜೆಡಿಎಸ್‍ನಿಂದ ಚೆನ್ನಗಿರಿ ಕ್ಷೇತ್ರದಿಂದ ಚುನಾಯಿತನಾಗಿದ್ದೆ. ಆಗ ಇಬ್ರಾಹಿಂ ಹಾಗೂ ಸಿದ್ದರಾಮಯ್ಯನವರು ನಾವು ಯಾರ ಜೊತೆಯೂ ಹೋಗುವುದಿಲ್ಲ ಎಂದಿದ್ದರು. ನಮ್ಮ ಅಭಿಪ್ರಾಯವನ್ನು ಯಾರೂ ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಅಮೆರಿಕ ಪ್ರವಾಸದಲ್ಲಿದ್ದಾಗ ದೇವೇಗೌಡರು ಫೋನ್ ಮಾಡಿ ಮಾನ ಮರ್ಯಾದೆ ಹೋಗಿದೆ ಎಂದರು. ಅಲ್ಲಿಂದ ಬರುವಷ್ಟರಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.
ಹೊಸ ಹಾದಿಯ ಬಗ್ಗೆ ಇಬ್ರಾಹಿಂ ಹಾಗೂ ನಾಡಗೌಡರು ಯೋಚಿಸುತ್ತಿದ್ದಾರೆ. ಮತ್ತೆ ಜನತಾದಳದವರು ಸೇರುವ ಸಮಯ ಬಂದಿದೆ. ಇಬ್ರಾಹಿಂ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಮುಂದಿನ ವಿಧಾನಸಭೆ ಚುನಾವಣೆ ನೇತೃತ್ವವನ್ನು ಇಬ್ರಾಹಿಂ ಅವರೇ ವಹಿಸಬೇಕು ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಾಳೆ ಗೌರವ ಡಾಕ್ಟರೇಟ್ ಪ್ರದಾನ

ಬೆಂಗಳೂರು,ಅ.16-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇಸ್ರೋ ಅಧ್ಯಕ್ಷ ಹಾಗೂ ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಸೋಮನಾಥ್.ಎಸ್ ಅವರಿಗೆ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವವು ನಾಳೆ ಬೆಳಗ್ಗೆ 10.30ಕ್ಕೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದ್ದು, ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

ಘಟಿಕೋತ್ಸವದಲ್ಲಿ ಒಟ್ಟು 299 ಚಿನ್ನದ ಪದಕ ಹಾಗೂ 113 ನಗದು ಬಹುಮಾನಗಳನ್ನು ಒಟ್ಟು 193 ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಜಯಕರ.ಎಚ್.ಎಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

204 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಿದ್ದು, ಚಿನ್ನದ ಪದಕಗಳನ್ನು 25 ಗ್ರಾಂ ಬೆಳ್ಳಿಯ ನಾಣ್ಯಕ್ಕೆ 18 ಕ್ಯಾರೆಟ್‍ನ 1.3 ಗ್ರಾಂ ಚಿನ್ನದ ಎಂಬೋಜ್ ಮಾಡಲಾಗಿದೆ. ಚಿನ್ನಪದಕ ವಿಜೇತ ವಿದ್ಯಾರ್ಥಿಗಳಿಗೆ ಈ ಪದಕಗಳನ್ನು ಈ ಬಾರಿ ನೀಡಲಾಗುವುದು ಎಂದರು.

ಘಟಿಕೋತ್ಸವದಲ್ಲಿ 28,881 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, ಅವರಲ್ಲಿ 13,707 ವಿದ್ಯಾರ್ಥಿಗಳು ಹಾಗೂ 15,164 ವಿದ್ಯಾರ್ಥಿನಿಯರಿದ್ದಾರೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ರಾಜ್ಯಪಾಲ ಥಾವರ್‍ಚಂದ್ ಗೆಲ್ಹೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಉದ್ಯಮಿ ಘೆರಾದ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ರಾಜ್ಯದ ಕರಾವಳಿ, ಒಳನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

ವಿನೂತರಿಗೆ 8 ಚಿನ್ನದ ಪದಕ:
ಸ್ನಾತಕೋತ್ತರ ವಿಭಾಗದಲ್ಲಿ ಆಕ್ಸಫರ್ಡ್ ವಿಜ್ಞಾನ ಮತ್ತು ಕಲಾ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ವಿನೂತ.ಕೆ 8 ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನ ಪಡೆಯಲಿದ್ದಾರೆ. ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತ ಉದಯಕುಮಾರ ಮುರಗೋಡ ಅವರು 8 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರು ವಿವಿಯ ಭೌತಶಾಸ್ತ್ರ ವಿಭಾಗದ ಅಸೀನಬಾನು.ಡಬ್ಲ್ಯು, ಗಣಿತ ಶಾಸ್ತ್ರ ವಿಭಾಗದ ದಿವ್ಯಾ.ಟಿ.ಎಂ, ಪ್ರಾಣಿಶಾಸ್ತ್ರ ಶಾಸ್ತ್ರ ವಿಭಾಗದ ನರ್ಮತಾ.ಎ, ಸಂಸ್ಕøತ ಶಾಸ್ತ್ರ ವಿಭಾಗದ ಭವಿಷ್ಯ ತಲಾ ಆರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸ್ನಾತಕ ವಿಭಾಗದಲ್ಲಿ ಎಎಸ್‍ಪಿ ಪದವಿ ಕಾಲೇಜಿನ ದೀಕ್ಷಿತ.ಆರ್ ನಾಯಕ್ ಹಾಗೂ ವಿಶ್ವಚೇತನ ಪದವಿ ಕಾಲೇಜಿನ ರವಿಕುಮಾರ.ಎಸ್.ಎಂ, ಯುವಿಸಿಯ ಮೆಕಾನಿಕಲ್ ಇಂಜಿನಿಯರ್ ವಿಭಾಗದ ಯೋಗೇಶ್ವರನ್ ಪಡೆದುಕೊಂಡಿದ್ದಾರೆ.

ಜಿಂದಾಲ್ ಮಹಿಳಾ ಕಾಲೇಜಿನ ಚೈತ್ರ.ಎಸ್, ಬೆಂಗಳೂರು ವಿವಿ ಗಣಿತ ಶಾಸ್ತ್ರ ವಿಭಾಗದ ದಿವ್ಯಾ.ಟಿ.ಎಂ, ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತ ಉದಯಕುಮಾರ ಮುರಗೋಡ ಅವರು ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಈ ಬಾರಿ ಪದವಿ ಪ್ರಮಾಣಪತ್ರವನ್ನು ವಿದ್ಯಾರ್ಥಿಗಳು ಡಿಜಿ ಲಾಕರ್ ಮತ್ತು ಮ್ಯಾಡ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ವಿವಿಯು ಸಂಪೂರ್ಣ ಡಿಜಟಲೀಕರಣಗೊಂಡಿದ್ದು, ಪರೀಕ್ಷೆ ಮುಗಿದ ಒಂದು ವಾರದೊಳಗೆ ಫಲಿತಾಂಶ ನೀಡಿ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕುಲಪತಿ ಹೇಳಿದರು. 26,056 ಪ್ರಥಮ ಶ್ರೇಣಿ, 4807 ಪ್ರಥರ್ಮ ದರ್ಜೆ, 874 ದ್ವಿತೀಯ ದರ್ಜೆ ಹಾಗೂ 137 ಪದವಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಶೇಖ್ ಲತೀಫ್, ಪ್ರೊ.ಸಿ.ಶ್ರೀನಿವಾಸ್ (ಮೌಲ್ಯಮಾಪನ), ವಿತ್ತಾಕಾರಿ ಡಾ.ಎಂ.ಸುನಿತ ಉಪಸ್ಥಿತರಿದ್ದರು.