Home Blog Page 1886

ಬಿಜೆಪಿಯವರು ಸುಳ್ಳು ಆರೋಪಗಳ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ : ಸತೀಶ್ ಜಾರಕಿಹೊಳಿ

ಬೆಂಗಳೂರು, ಅ.16- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಕಮಿಷನ್ ಸೇರಿದಂತೆ ಭ್ರಷ್ಟಾಚಾರದ ಆರೋಪಗಳ ತೂಗು ಕತ್ತಿ ಇದ್ದೇ ಇರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ಆದ ಕ್ಷಣ ಆರೋಪ ಮಾಡುವುದು ಸಹಜ. ಬಿಜೆಪಿಯವರು ಅದನ್ನೇ ಕಾದು ಕುಳಿತಿರುತ್ತಾರೆ. ಆದರೆ ಅವರು ಮಾಡಿದ ಎಲ್ಲಾ ಆರೋಪಗಳು ಸಾಬೀತಾಗುವುದಿಲ್ಲ ಎಂದರು.

ಈ ಹಿಂದೆ ಡಿ.ಕೆ.ರವಿ, ಗಣಪತಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪ ಮಾಡಿದರು. ಸಿಬಿಐ ತನಿಖೆ ನಡೆದು ಸತ್ಯ ಹೊರಬಂದ ಬಳಿಕ ಬಾಯಿ ಮುಚ್ಚಿಕೊಂಡರು. ಇನ್ನು ಮಂಗಳೂರಿನಲ್ಲಿ ಪರೇಶ್ ಮೆಸ್ತಾ ಸಹಜ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಗಲಾಟೆ ಮಾಡಿದರು. ಆ ಆರೋಪ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಸೋಲುವಂತೆ ಮಾಡಿತು. ತನಿಖೆಯಲ್ಲಿ ಅದೂ ಕೂಡ ಸುಳ್ಳು ಎಂದು ಸಾಬೀತಾಗಿದೆ ಎಂದು ಹೇಳಿದರು.

ಬಿಜೆಪಿಯವರು ಹಲವಾರು ಬಾರಿ ಸುಳ್ಳು ಆರೋಪದ ಮೂಲಕವೇ ದಿಕ್ಕು ತಪ್ಪಿಸುತ್ತಾರೆ. ಆದಾಯ ತೆರಿಗೆ ದಾಳಿಯಲ್ಲಿ ಕೋಟ್ಯಂತರ ರೂ. ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರ ಬಳಿ ಕೋಟ್ಯಂತರ ರೂ. ಹಣ ಇರುತ್ತದೆ. ಇಲ್ಲಿ ಭೂಮಿಗೆ ಭಾರೀ ಬೆಲೆಯಿದೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಅಷ್ಟು ದೊಡ್ಡ ಲಾಭದಾಯಕವಲ್ಲ. ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಇಟ್ಟುಕೊಂಡಿರುವುದು ಆಶ್ಚರ್ಯದ ವಿಚಾರವಲ್ಲ ಎಂದು ತಿಳಿಸಿದರು.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ಆದಾಯ ತೆರಿಗೆ ಕೇಂದ್ರ ಸರ್ಕಾರದ ಅೀಧಿನದಲ್ಲಿದೆ. ಯಾರ ಹಣ, ಹೇಗೆ ಅಕ್ರಮ ಎಂಬುದನ್ನು ಸಾಬೀತುಪಡಿಸಬೇಕಾಗಿರುವುದು ದಾಳಿ ಮಾಡಿದವರ ಕರ್ತವ್ಯ. ಎಲ್ಲಾ ಆರೋಪಗಳು ನಿಜವಾಗುವುದಿಲ್ಲ ಎಂದು ಹೇಳಿದರು. ಈಗಾಗಲೇ ದಾಳಿಗೆ ಒಳಗಾದವರು ಹಣ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ತನಿಖೆಯಲ್ಲಿ ಎಲ್ಲವೂ ಬಯಲಾಗುತ್ತದೆ. ರಾಜಕೀಯಕ್ಕಾಗಿ ಆರೋಪ ಮಾಡುವುದು ಸಹಜ. ನಾವು ವಿರೋಧ ಪಕ್ಷದಲ್ಲಿದ್ದಾಗ ಆರೋಪ ಮಾಡುತ್ತಿದ್ದೆವು, ಈಗ ಅವರು ಮಾಡುತ್ತಿದ್ದಾರೆ. ಇದು ಸಹಜ ಪ್ರಕ್ರಿಯೆ ಎಂದರು.

ಪಂಚರಾಜ್ಯಗಳ ಚುನಾವಣೆಗೆ ಹಣ ಸಂಗ್ರಹ ಮಾಡಿಕೊಡಬೇಕೆಂದು ಯಾರೂ ಸಚಿವರುಗಳಿಗೆ ಸೂಚನೆ ನೀಡಿಲ್ಲ. ಈ ರೀತಿಯ ಆರೋಪಗಳು ನಿರಾಧಾರ ಎಂದು ಹೇಳಿದರು. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ನಾವು ಶೇ. 40 ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಆರೋಪ ಮಾಡಿದ್ದೆವು. ಅದನ್ನೇ ಸಮರ್ಥಿಸಿಕೊಳ್ಳಲು ಬಿಜೆಪಿಯವರಿಗೆ ಆಗುತ್ತಿಲ್ಲ. ಇನ್ನು ನಮ್ಮ ಮೇಲೆ ಆರೋಪ ಮಾಡುತ್ತಾರೆಯೆ ಎಂದು ತಿರುಗೇಟು ನೀಡಿದರು.

ಬೆಂಗಳೂರಿನಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಸಭೆ ನಡೆದಿರುವುದು ನಿಗಮಮಂಡಳಿಗಳ ನೇಮಕಾತಿಗೆ ಸಂಬಂಧಪಟ್ಟಂತೆ. ಶಾಸಕರು ಹಾಗೂ ಕಾರ್ಯಕರ್ತರು ಮೊದಲಿನಿಂದಲೂ ಒತ್ತಡ ಮಾಡುತ್ತಿದ್ದಾರೆ. ಈ ಕುರಿತು ಚರ್ಚೆಗಳಾಗಿವೆ ಎಂದರು. ಪರಿಶಿಷ್ಟ ಪಂಗಡಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದೇವೆ. ಆದರೆ ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ವಿಚಾರಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಗಮನದಲ್ಲಿರುತ್ತದೆ ಎಂದು ಹೇಳಿದರು.

ಗುತ್ತಿಗೆ ಕಾಮಗಾರಿಗಳ ಬಿಲ್ ಬಾಕಿ ಉಳಿಯಲು ನಮ್ಮ ಸರ್ಕಾರ ಕಾರಣ ಅಲ್ಲ. ಹಿಂದಿನ ಸರ್ಕಾರ ಅನುದಾನ ಪ್ರಮಾಣವನ್ನು ಮೀರಿ ಯೋಜನೆಗಳನ್ನು ಮಂಜೂರು ಮಾಡಿದೆ. ಅದಕ್ಕಾಗಿ ವಿಳಂಬವಾಗಿದೆ. ಹಿಂದಿನ ಸರ್ಕಾರದ ಯಾವ ಕಾಮಗಾರಿಗಳನ್ನೂ ನಿಲ್ಲಿಸಿಲ್ಲ. ಮುಂದುವರೆಸಿವೆ. ಬಿಲ್‍ಗಳ ಪಾವತಿಯೂ ಹಂತಹಂತವಾಗಿ ನಡೆಯುತ್ತಿದೆ. ನಾವು ಹೊಸದಾಗಿ ಯಾವ ಕಾಮಗಾರಿಗಳನ್ನು ಆರಂಭಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನಿತಾರಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ಖುಲಾಸೆ

ಅಲಹಾಬಾದ್,ಅ.16- ನಿತಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಕೋಲಿಯನ್ನು 12 ಪ್ರಕರಣಗಳಲ್ಲಿ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ವಿಶೇಷವೆಂದರೆ ಇದೇ ಪ್ರಕರಣದಲ್ಲಿ ಆರೋಪಿ ಸುರೇಂದ್ರ ಕೋಲಿಗೆ ವಿಚಾರಣಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು. ಈ ಪ್ರಕರಣದ ಮತ್ತೋರ್ವ ಆರೋಪಿ ಮೋನಿಂದರ್ ಸಿಂಗ್ ಪಾಂಡೇರ್ ಅವರನ್ನು ಸಹ ಎರಡು ಪ್ರಕರಣದಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಈ ಎರಡು ಪ್ರಕರಣದಲ್ಲೂ ಇದೇ ಆರೋಪಿಗೆ ವಿಚಾರಣಾ ನ್ಯಾಯಾಲವು ಮರಣದಂಡನೆ ಶಿಕ್ಷೆ ನೀಡಿತ್ತು. ಉತ್ತರಪ್ರದೇಶದ ನೋಯ್ಡಾದಲ್ಲಿ 2005ರಿಂದ 2006ರವರೆಗೆ ಹಲವಾರು ಮಕ್ಕಳ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸುರೇಂದ್ರ ಕೋಲಿ ಮತ್ತು ಮೊನಿಂದರ್ ಸಿಂಗ್ ಪಂಡೇರ್ ಅವರುಗಳ ಕೈವಾಡ ಇರುವುದು ತನಿಖೆಯಿಂದ ಸಾಬೀತಾಗಿತ್ತು.

ಎಲ್ಲಾ ಮಾದರಿಯ ಏರ್‌ಫೀಲ್ಡ್ ಬಳಸುವ ಸಾಮರ್ಥ್ಯ ಅಭಿವೃದ್ಧಿಪಡಿಸುತ್ತಿದ್ದೇವೆ : ಧನ್‍ಕರ್

ಈ ಪ್ರಕರಣವು ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ನೋಯ್ಡಾದ ಹೊರವಲಯದ ಮನೆಯೊಂದರ ಚರಂಡಿಯಲ್ಲಿ ಹಲವಾರು ಮಕ್ಕಳ ಮೃತದೇಹಗಳು ಸಿಕ್ಕಿಬಿದ್ದಿದ್ದವು. ಮಕ್ಕಳಿಗೆ ಸಿಹಿತಿನಿಸುಗಳು, ಚಾಕಲೇಟ್ ಕೊಡುವ ನೆಪದಲ್ಲಿ ಅದರಲ್ಲಿ ಮತ್ತುಬರಿಸಿ ಈ ಇಬ್ಬರು ಕೊಲೆ ಮತ್ತು ಅತ್ಯಾಚಾರ ನಡೆಸುತ್ತಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿತ್ತು. ಸುೀಧಿರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮಕ್ಕಳ ಅತ್ಯಾಚಾರ ಮತ್ತು ಕೊಲೆ ಮಾಡಿರುವುದು ಕಂಡುಬಂದಿರುವುದರಿಂದ ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು, ಅ.16- ಆದಾಯ ತೆರಿಗೆ ದಾಳಿಗೂ, ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜಕೀಯ ಪ್ರೇರಿತ ಹೇಳಿಕೆಗಳು, ಆರೋಪಗಳು, ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆದಾಯ ತೆರಿಗೆ ದಾಳಿಯನ್ನು ನೆಪ ಮಾಡಿಕೊಂಡು ಬಿಜೆಪಿಯವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಯಾರದೋ ಮನೆಯಲ್ಲಿ ಹಣ ಸಿಕ್ಕರೆ ಅದನ್ನು ರಾಜಕೀಯಕ್ಕೆ ಸಂಪರ್ಕಿಸುವುದು ಉಚಿತವಲ್ಲ ಎಂದರು.

ಗುತ್ತಿಗೆದಾರರಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯವರು ಎಂಬ ವರ್ಗಗಳಿರುವುದಿಲ್ಲ. ಆದಾಯ ತೆರಿಗೆ ದಾಳಿಗೊಳಗಾದವರನ್ನು ಕಾಂಗ್ರೆಸ್ ಗುತ್ತಿಗೆದಾರರು ಎಂದು ಬಿಜೆಪಿಯವರು ಹೇಳುವುದಾದರೆ, ನಾನು ಅವರನ್ನು ಬಿಜೆಪಿಯ ಗುತ್ತಿಗೆದಾರರು ಎಂದು ಹೇಳುತ್ತೇನೆ, ಅದನ್ನು ಒಪ್ಪುತ್ತಾರಾ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ದಾಳಿಗಳು ನಡೆಯುತ್ತಿವೆ. ಬಿಜೆಪಿಯವರು ಇದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ ಎಂದರು.

ಆದಾಯ ತೆರಿಗೆ ದಾಳಿ ಮಾಡಿದ ಅಕಾರಿಗಳೇ ತನಿಖೆ ಮಾಡುತ್ತಾರೆ. ರಾಜ್ಯಸರ್ಕಾರ ಅದರಲ್ಲಿ ಪ್ರತ್ಯೇಕವಾಗಿ ತನಿಖೆ ಮಾಡುವುದೇನಿದೆ. ಜೆಡಿಎಸ್, ಬಿಜೆಪಿಯವರ ಆಗ್ರಹಗಳಿಗೆ ಏನಾದರೂ ಅರ್ಥವಿದೆಯೇ. ಬಿಜೆಪಿ ಹೇಳಿದಾಕ್ಷಣಕ್ಕೆ ತನಿಖೆ ಮಾಡಬೇಕೆ. ಆದಾಯ ತೆರಿಗೆ ತನಿಖೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಲಾ ಒಂದು ಸಾವಿರ ಕೋಟಿ ರೂ. ಸಂಗ್ರಹ ಮಾಡಲು ಕಾಂಗ್ರೆಸ್ ಹೈಕಮಾಂಡ್ ಗುರಿ ನೀಡಲಾಗಿದೆ ಎಂದು ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇದು ಎಲ್ಲಾದರೂ ಸಾಧ್ಯವೇ, ಸಾವಿರ ಕೋಟಿ ರೂ. ಕೊಡಿ ಎಂದು ಹೈಕಮಾಂಡ್ ಕೇಳುತ್ತದೆಯೇ, ಸಿ.ಟಿ.ರವಿ ಬರೀ ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಾರೆ. ಹೈಕಮಾಂಡ್ ಈವರೆಗೂ ನಮಗೆ 5 ಪೈಸೆಯನ್ನೂ ಕೊಡಿ ಎಂದು ಕೇಳಿಲ್ಲ.

ಬಿಜೆಪಿ ಆರೋಪ ಆಧಾರರಹಿತ. ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಾಗ ನಾವು ಯಾರ ಬಳಿಯೂ ದುಡ್ಡು ಕೇಳುವುದಿಲ್ಲ. ಹಾಗೆ ಪಂಚರಾಜ್ಯಗಳ ಚುನಾವಣೆಯಲ್ಲೂ ಯಾರೂ ನಮ್ಮ ಬಳಿ ದುಡ್ಡು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

2 ಸಾವಿರ ಮೆಗಾವ್ಯಾಟ್ ಕೊರತೆ :
ಐದು ವರ್ಷ ಆಡಳಿತ ನಡೆಸಿದ ಜೆಡಿಎಸ್, ಬಿಜೆಪಿ ಸರ್ಕಾರಗಳು ಒಂದೇ ಒಂದು ಯುನಿಟ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿರಲಿಲ್ಲ. ಈ ಹಿಂದೆ ನಮ್ಮ ಸರ್ಕಾರ ಮಾಡಿದಂತಹ ಯೋಜನೆಗಳಷ್ಟೇ ಉಳಿದಿವೆ. ಇತ್ತೀಚೆಗೆ ಬರ ಹಾಗೂ ಮಳೆ ಕೊರತೆಯಿಂದ ವಿದ್ಯುತ್ ಬೇಡಿಕೆ ತೀವ್ರವಾಗಿದೆ. ಹಿಂದೆಲ್ಲಾ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿತ್ತು. ಈಗ ಅದು 16 ಸಾವಿರ ಮೆಗಾವ್ಯಾಟ್‍ಗೆ ಹೆಚ್ಚಾಗಿದೆ. ಏಕಾಏಕಿ 6 ಸಾವಿರ ಮೆಗಾವ್ಯಾಟ್ ಹೆಚ್ಚಾಗಿದ್ದುದ್ದರಿಂದ ಸಮಸ್ಯೆ ತೀವ್ರವಾಗಿದೆ ಎಂದರು.

ಕಾಂಗ್ರೆಸ್ ಕೇವಲ ‘ಲೂಟಿ ಗ್ಯಾರಂಟಿ’ ಮಾತ್ರ ನೀಡಬಲ್ಲದು : ನಡ್ಡಾ

ತಾವು ಇತ್ತೀಚೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ರೈತರಿಗೆ ಐದು ಗಂಟೆ ತ್ರಿಫೇಸ್‍ನಲ್ಲಿ ವಿದ್ಯುತ್ ಪೂರೈಸುವಂತೆ ಸೂಚಿಸಿದ್ದೇನೆ. ಕೊರತೆ ಇರುವ ವಿದ್ಯುತ್ ಅನ್ನು ಬೇರೆ ಕಡೆಯಿಂದ ಖರೀದಿಸಿ ಪಾಳಿ ಆಧಾರದ ಮೇಲೆ ವಿದ್ಯುತ್ ಪೂರೈಕೆ ಮಾಡಿ ಎಂದು ತಾಕೀತು ಮಾಡಿರುವುದಾಗಿ ತಿಳಿಸಿದರು.

ಕಬ್ಬು ಅರೆಯುವಿಕೆ ಆರಂಭವಾದರೆ ಉಪ ಉತ್ಪಾದನೆಯಾಗಿ ವಿದ್ಯುತ್ ಲಭ್ಯವಾಗುತ್ತದೆ. ಅದನ್ನು ರಾಜ್ಯದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಸಂಕಷ್ಟದ ಪರಿಸ್ಥಿತಿ ರೈತರಿಗೆ ಗೊತ್ತಿದೆ. ಕನಿಷ್ಟ 4 ಗಂಟೆ ವಿದ್ಯುತ್ ಪೂರೈಸಿದರೂ ಒಪ್ಪಿಕೊಳ್ಳುತ್ತಾರೆ. ನಾವು 5 ಗಂಟೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯ 2 ನೇ ಕಂತು ಬಿಡುಗಡೆಯಾಗಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾಹಿತಿ. ಬಿಜೆಪಿಯವರು ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 216 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಸದ್ಯಕ್ಕೆ ಮೇವಿನ ಕೊರತೆಯಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಮೇವು ಪೂರೈಕೆಗೆ ಬೆಂಬಲ ನೀಡಲಾಗುತ್ತಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 32 ಸಾವಿರ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ 4,800 ಕೋಟಿ ರೂ. ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆ ಪೈಪ್‍ಲೈನ್ ಅಳವಡಿಸುವುದು, ಹೊಸ ಬೋರೆವೆಲ್ ಕೊರೆಯುವುದು, ಖಾಸಗಿ ಬೋರೆವೆಲ್‍ಗಳನ್ನು ಬಳಸಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮೇವು, ಜನರಿಗೆ ಉದ್ಯೋಗಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ

ಚಾಮುಂಡಿ ಬೆಟ್ಟಕ್ಕೆ ಶಾಶ್ವತವಾದ ದೀಪಾಲಂಕಾರ ಮಾಡುವಂತೆ ದಸರಾ ಉದ್ಘಾಟಕರಾದ ಹಂಸಲೇಖನವರು ನೀಡಿರುವ ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು.

ರಾಜ್ಯದ ಕರಾವಳಿ, ಒಳನಾಡಿನಲ್ಲಿ 2 ದಿನ ಮಳೆ ಸಾಧ್ಯತೆ

ಬೆಂಗಳೂರು, ಅ.16-ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಎರಡು ದಿನಗಳ ಕಾಲ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಮುಕ್ತಾಯದ ಅವಧಿಯಾಗಿರುವುದರಿಂದ ಸಹಜವಾಗಿ ಉತ್ತಮ ಮಳೆಯಾಗಬೇಕು. ಆದರೆ, ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಆದರೆ, ಈಶಾನ್ಯ ಹಿಂಗಾರು ಮಳೆ ಪ್ರಾರಂಭವಾಗುವ ಸ್ಪಷ್ಟ ಲಕ್ಷಣಗಳು ಈತನಕ ಗೋಚರಿಸುತ್ತಿಲ್ಲ. ಮುಂಗಾರು ಅವ ಮುಗಿಯುತ್ತಿದ್ದಂತೆ ಹಿಂಗಾರು ಆರಂಭಗೊಳ್ಳುವುದು ವಾಡಿಕೆ. ಈ ಬಾರಿ ಅಂತಹ ಯಾವ ಸುಳಿವು ಇದುವರೆಗೆ ಕಂಡುಬಂದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಕಾಂಗ್ರೆಸ್ ಕೇವಲ ‘ಲೂಟಿ ಗ್ಯಾರಂಟಿ’ ಮಾತ್ರ ನೀಡಬಲ್ಲದು : ನಡ್ಡಾ

ಅರಬ್ಬೀ ಸಮುದ್ರದ ಲಕ್ಷ ದ್ವೀಪದ ಬಳಿ ವಾಯುಭಾರ ಕುಸಿತವಾಗಿದ್ದು, ಅದರಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಚದುರಿದಂತೆ ಹಗರದಿಂದ ಸಾಧಾರಣ ಮಳೆ ನಿರೀಕ್ಷಿಸಬಹುದಾಗಿದೆ.

ಇನ್ನೆರಡು ದಿನ ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ಕಳೆದ ಎರಡು ವಾರದಲ್ಲೂ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಬಹಳಷ್ಟು ಕಡೆಗಳಲ್ಲಿ ಒಣಹವೆ ಮುಂದುವರೆದಿದ್ದು, ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.

ಮುಂಗಾರು ಮಳೆಯ ಮರಳುವಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಮುಗಿಯುವ ಸಾಧ್ಯತೆಗಳಿವೆ. ಮುಂಗಾರು ಮುಗಿಯುತ್ತಿದ್ದಂತೆ ಹಿಂಗಾರು ಮಳೆ ಆರಂಭವಾಗಬೇಕು. ಆದರೆ, ಅಂತಹ ಯಾವ ಸುಳಿವು ಈಗ ಕಂಡುಬರುತ್ತಿಲ್ಲ. ಹಿಂಗಾರು ಮಳೆ ಆರಂಭಗ್ಳೊಳ್ಳುವ ಮುನ್ನ ತಂಪಾದ ಮೇಲ್ಮೈ ಗಾಳಿ ಬೀಸಬೇಕು. ಇದರ ಬಲಿಗೆ ಒಣ ಹವೆ ಇದ್ದು, ಕೆಲವೆಡೆ ಪ್ರಖರ ಬಿಸಿಲಿರುವುದು ಕಂಡುಬರುತ್ತಿದೆ.

ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ

ಇದರಿಂದ ಹಿಂಗಾರು ಪ್ರಾರಂಭವೂ ವಿಳಂಬವಾಗುವುದನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ಹವಾಮಾನ ತಜ್ಞರು. ಮುಂಗಾರು ಮಳೆಯ ಆರಂಭವೂ ವಿಳಂಬವಾಗಿತ್ತು. ಜುಲೈ ತಿಂಗಳನ್ನು ಹೊರತುಪಡಿಸಿದರೆ, ಜೂನ್, ಆಗಸ್ಟ್, ಸೆಪ್ಟೆಂಬರ್‍ನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಕ್ಟೋಬರ್‍ನಲ್ಲೂ ಅದೇ ಪರಿಸ್ಥಿತಿ ಮುಂದುವರೆಯುತ್ತಿದೆ. ಹೀಗಾಗಿ ರೈತರು ಮಳೆಗಾಗಿ ಆಕಾಶದತ್ತ ಮುಖಮಾಡುವಂತಾಗಿದೆ.

ಪೀಣ್ಯ ಮೇಲ್ಸೇತುವೆಗೆ ಹಿಡಿದಿದ್ದ ಶಾಪ ಡಿಸಂಬರ್‌ಗೆ ಮುಕ್ತಿ

ಬೆಂಗಳೂರು,ಅ.16- ಕಳೆದ ಒಂದೂವರೆ ವರ್ಷದಿಂದ ಭಾರಿ ವಾಹನಗಳಿಗೆ ಸ್ಥಗಿತಗೊಳಿಸಲಾಗಿದ್ದ ಪೀಣ್ಯ ಮೇಲ್ಸುತೆಯನ್ನು ಬರುವ ಡಿಸಂಬರ್‌ನಿಂದ ಎಲ್ಲಾ ಮಾದರಿಯ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ರಾಜ್ಯದ 18 ಕ್ಕೂ ಹೆಚ್ಚು ಜಿಲ್ಲೆ ಹಾಗೂ ಗೋವಾ,ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕಲ್ಪಿಸುವ ಪ್ಲೈಓವರ್ ಅನ್ನು ಡಿಸಂಬರ್ ಅಂತ್ಯದ ವೇಳೆಗೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞ ಡಾ. ಚಂದ್ರ ಕಿಶನ್ ಮಾಹಿತಿ ನೀಡಿದ್ದಾರೆ.

ಪೀಣ್ಯ ಮೇಲ್ಸೇತುವೆಯ ಕೆಲ ಪಿಲ್ಲರ್‍ಗಳಲ್ಲಿ ಕಾಣಿಸಿಕೊಂಡ ದೋಷದಿಂದ ಕಳೆದ ಒಂದೂವರೆ ವರ್ಷದಿಂದ ಲಾರಿ ಬಸ್ ಗಳ ಸಂಚಾರಕ್ಕೆ ಈ ಮೇಲ್ಸೆತುವೆ ಮೇಲಿನ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಕೇವಲ ಲಘು ವಾಹನಗಳು ಮಾತ್ರ ಸಂಚರಿಸುವ ಅವಕಾಶ ನೀಡಲಾಗಿತ್ತು.

‘ಕಲೆಕ್ಷನ್ ಮಾಸ್ಟರ್’ ಸಿಎಂ ಸಿದ್ದರಾಮಯ್ಯ : ಬಿಜೆಪಿ ವಾಗ್ದಾಳಿ

ಪ್ಲೈಓವರ್ ಪೀಲ್ಲರ್ ಗಳ ಜೈಂಟ್ ನಲ್ಲಿ ಕೇಬಲ್ ತುಕ್ಕು ಹಿಡಿದಿದೆ ಅಂತ ಐಐಎಸ್‍ಸಿ ವರದಿ ನೀಡಿದ್ದ ಹಿನ್ನೇಲೆಯಲ್ಲಿ ಪ್ಲೈ ಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಈ ಭಾಗದ ರಸ್ತೆಯಲ್ಲಿ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗುತ್ತಿತ್ತು.

ಸುಮಾರು 5 ಕಿ.ಮೀ. ಉದ್ದ ನಿರ್ಮಿಸಿರುವ ಈ ಮೇಲ್ಸೇತುವೆಯಲ್ಲಿ 120 ಪಿಲ್ಲರ್‍ಗಳಿವೆ. ಸದ್ಯ ಐಐಎಸ್‍ಸಿ ವರದಿ ಆಧರಿಸಿ ಪ್ಲೈಓವರ್ ನ್ನ ಎಲ್ಲಾ ಕೇಬಲ್ ಗಳನ್ನೂ ಬದಲಿಸಲಾಗಿದೆ. ಇನ್ನೂ ಕೇಬಲ್ ಬದಲಿಸಿದ ನಂತರ ಭಾರಿ ವಾಹನಗಳ ಓಡಾಟಕೆ ಈ ಮೇಲ್ಸೆತುವೆ ಯೋಗ್ಯವಾಗಿದೆ ಅಂತ ಐಐಎಸ್‍ಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಇದೆ ಡಿಸೆಂಬರ್ ಅಂತ್ಯದೋಳಗೆ ಪ್ಲೈಓವರ್ ಮೇಲೆ ಬೃಹತ್ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಈಗಾಗಲೇ ಈ ರಸ್ತೆಯಲ್ಲಿ ಭಾರಿ ವಾಹನಗಳ ಟೆಸ್ಟ್ ಡ್ರೈವ್ ಕೂಡ ನಡೆಸಲಾಗಿದೆ.

ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್

ನವದೆಹಲಿ,ಅ.16- ಇಸ್ರೇಲ್ ಪಡೆಗಳು ಗಾಜಾದ ಮೇಲೆ ಸಂಭವನೀಯ ಭೂ ಆಕ್ರಮಣಕ್ಕೆ ಸಿದ್ಧವಾಗುತ್ತಿದ್ದಂತೆ, ಇರಾನ್ ಕಟುವಾದ ಎಚ್ಚರಿಕೆಯನ್ನು ನೀಡಿದ್ದು, ಪ್ಯಾಲೆಸ್ಟೀನಿಯರ ಮೇಲಿನ ಆಕ್ರಮಣಗಳನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದೆ.

1,400 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಬಲಿತೆಗೆದುಕೊಂಡ ವಿಧ್ವಂಸಕ ಹಮಾಸ್ ದಾಳಿಯ ನಂತರ ಇರಾನ್ ವಿದೇಶಾಂಗ ಸಚಿವರು ಇಸ್ರೇಲ್‍ಗೆ ಅಚಲವಾದ ಬೆಂಬಲಕ್ಕಾಗಿ ಯುನೈಟೆಡ್ ಸ್ಟೇಟ್ಸ ಅನ್ನು ದೂಷಿಸಿದರು. ಜಿಯೋನಿಸ್ಟ್ ಆಕ್ರಮಣಗಳು ನಿಲ್ಲದಿದ್ದರೆ, ಈ ಪ್ರದೇಶದ ಎಲ್ಲಾ ಪಕ್ಷಗಳ ಕೈಗಳು ಪ್ರಚೋದಕದಲ್ಲಿರುತ್ತವೆ ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ಡೊಲ್ಲಾಹಿಯಾನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ.

ಸುಡಾನ್ ಯುದ್ಧದಲ್ಲಿ 9 ಸಾವಿರ ಮಂದಿ ಸಾವು

ಗಾಜಾದ ನಿರಂತರ ಇಸ್ರೇಲಿ ಬಾಂಬ್ ದಾಳಿಯು 700 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 2,670 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಇಸ್ರೇಲ್ ಜನನಿಬಿಡ ಕರಾವಳಿ ಪ್ರದೇಶಕ್ಕೆ ಎಲ್ಲಾ ನೀರು, ವಿದ್ಯುತ್ ಮತ್ತು ಆಹಾರವನ್ನು ಸ್ಥಗಿತಗೊಳಿಸಿತ್ತು, ಆದರೆ ನಿನ್ನೆ ದಕ್ಷಿಣ ಪ್ರದೇಶಕ್ಕೆ ನೀರನ್ನು ಮರುಸ್ಥಾಪಿಸಿದೆ.

ಇರಾನ್ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರೂ ಖಾತರಿಪಡಿಸುವುದಿಲ್ಲ ಎಂದು ಅಮಿರಾಬ್ಡೊಲ್ಲಾಹಿಯಾನ್ ಹೇಳಿದರು. ಯುದ್ಧ ಮತ್ತು ಬಿಕ್ಕಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ತಡೆಯಲು ಆಸಕ್ತಿ ಹೊಂದಿರುವವರು, ಗಾಜಾದಲ್ಲಿ ನಾಗರಿಕರು ಮತ್ತು ನಾಗರಿಕರ ವಿರುದ್ಧ ಪ್ರಸ್ತುತ ಅನಾಗರಿಕ ದಾಳಿಗಳನ್ನು ತಡೆಯುವ ಅಗತ್ಯವಿದೆ ಎಂದಿದ್ದಾರೆ.

ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ವಾಷಿಂಗ್ಟನ್‍ನಲ್ಲಿ ಇಸ್ರೇಲ್‍ನಲ್ಲಿ ಯುದ್ಧವು ಉಲ್ಬಣಗೊಳ್ಳುವ ಸಾಧ್ಯತೆಯ ಬಗ್ಗೆ ಮತ್ತು ಇಸ್ರೇಲ್‍ನ ದೀರ್ಘಕಾಲದ ಪ್ರತಿಸ್ಪರ್ಧಿ ಮತ್ತು ಹಮಾಸ್ ಬೆಂಬಲಿಗರಾದ ಇರಾನ್ ನೇರವಾಗಿ ಭಾಗಿಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ತನ್ನ ಉತ್ತರದ ಗಡಿಯಾದ ಲೆಬನಾನ್‍ಗೆ ಸೈನಿಕರು ಮತ್ತು ಟ್ಯಾಂಕ್‍ಗಳನ್ನು ಕಳುಹಿಸಿದೆ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಗುಂಪಿನೊಂದಿಗೆ ಗಡಿಯುದ್ದಕ್ಕೂ ನಡೆದ ಸಂಘರ್ಷದ ನಂತರ ನಾಲ್ಕು ಕಿಲೋಮೀಟರ್ (2.5-ಮೈಲಿ) ಅಗಲದ ಪ್ರದೇಶವನ್ನು ಬಂದ್ ಮಾಡಲಾಗಿದೆ.

ಕೃತಕ ಕೊಳದಲ್ಲಿದ್ದ 59 ಆಮೆಗಳ ರಕ್ಷಣೆ

ಮುಂಬೈ, ಅ 16 (ಪಿಟಿಐ) – ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಕೃತಕ ಕೊಳದಿಂದ ಐವತ್ತೊಂಬತ್ತು ಆಮೆಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಥಾಣೆ ಅರಣ್ಯ ಇಲಾಖೆಯು ರೆಸ್ಕಿಂಕ್ ಅಸೋಸಿಯೇಷನ್ ವೈಲ್ಡ್ ಲೈಫ್ ವೆಲೇರ್ (ರಾಡಬ್ಲ್ಯೂ) ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಆಮೆಗಳನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.

59 ಆಮೆಗಳಲ್ಲಿ, 22 ಸ್ಥಳೀಯ ಜಾತಿಗಳಾದ ಇಂಡಿಯನ್ ಪ್ಲಾಪ್-ಶೆಲ್, ಕಪ್ಪು ಕೊಳ ಮತ್ತು ಭಾರತೀಯ ಡೇರೆ ಆಮೆಗಳು, ಇವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ರಕ್ಷಿಸಲಾಗಿದೆ ಮತ್ತು ಉಳಿದ 37 ಕೆಂಪು-ಇಯರ್ಡ್ ಸ್ಲೈಡರ್‍ಗಳು, ವಿಲಕ್ಷಣ ಜಾತಿಗಳು ಸೇರಿವೆ ಎಂದು ಪವನ್ ಶರ್ಮಾ ಹೇಳಿದರು.

ಇಸ್ರೋ ಕೈಯಲ್ಲಿದೆ ಸರಣಿ ಕಾರ್ಯಚರಣೆಗಳು

ಪಶುವೈದ್ಯರು ಆಮೆಗಳನ್ನು ಪರೀಕ್ಷಿಸಿದರು. ಸ್ಥಳೀಯ ತಳಿಗಳನ್ನು ಕಾಡಿಗೆ ಬಿಡಲಾಗುವುದು ಎಂದು ಥಾಣೆ ಅರಣ್ಯ ಇಲಾಖೆಯ ಸುತ್ತಿನ ಅಧಿಕಾರಿ ಅಶೋಕ್ ಕಾಟೇಸ್ಕರ್ ತಿಳಿಸಿದ್ದಾರೆ.

ಜನರು ವಿಲಕ್ಷಣ ಆಮೆಗಳನ್ನು ಚಿಕ್ಕದಾಗಿ ಮತ್ತು ನಿರ್ವಹಿಸಲು ಸುಲಭವಾದಾಗ ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಆದರೆ ಅವು ವಯಸ್ಸಾದಾಗ ಮತ್ತು ದೊಡ್ಡದಾದಾಗ, ಅವುಗಳನ್ನು ನೋಡಿಕೊಳ್ಳುವುದು ಕಷ್ಟಕರವಾಗುತ್ತದೆ ಮತ್ತು ಜನರು ಅವುಗಳನ್ನು ನೈಸರ್ಗಿಕ ಅಥವಾ ಕೃತಕ ಜಲಮೂಲಗಳಲ್ಲಿ ತ್ಯಜಿಸುತ್ತಾರೆ, ಇದು ಅನೈತಿಕ ಮತ್ತು ಕಾನೂನುಬಾಹಿರವಾಗಿದೆ ಎಂದು ಶರ್ಮಾ ಹೇಳಿದರು.

ಎಲ್ಲಾ ಮಾದರಿಯ ಏರ್‌ಫೀಲ್ಡ್ ಬಳಸುವ ಸಾಮರ್ಥ್ಯ ಅಭಿವೃದ್ಧಿಪಡಿಸುತ್ತಿದ್ದೇವೆ : ಧನ್‍ಕರ್

ಗುವಾಹಟಿ,ಅ 16 (ಪಿಟಿಐ)- ಲ್ಯಾಂಡಿಂಗ್ ಸೌಲಭ್ಯಗಳ ಕೊರತೆಯನ್ನು ತಗ್ಗಿಸಲು ದೇಶದ ಪೂರ್ವ ಭಾಗದಲ್ಲಿ ನಾಗರಿಕರು ಸೇರಿದಂತೆ ಲಭ್ಯವಿರುವ ಯಾವುದೇ ಏರ್‌ಫೀಲ್ಡ್ ಅನ್ನು ಬಳಸುವ ಸಾಮಥ್ರ್ಯವನ್ನು ಭಾರತೀಯ ವಾಯುಪಡೆ ಅಭಿವೃದ್ಧಿಪಡಿಸುತ್ತಿದೆ ಎಂದು ಏರ್ ಮಾರ್ಷಲ್ ಎಸ್‍ಪಿ ಧನ್‍ಕರ್ ಹೇಳಿದ್ದಾರೆ.

ಈಸ್ಟರ್ನ್ ಏರ್ ಕಮಾಂಡ್ ದೇಶದ ವಾಯುಪ್ರದೇಶ ಮತ್ತು ಗಡಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸಲು ಸಾಧ್ಯವಾಗುವಂತೆ ಎಲ್ಲಾ ಇತ್ತೀಚಿನ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದರು. ನಮ್ಮ ಸುತ್ತಲೂ ಹಲವಾರು ಏರ್‍ಫೀಲ್ಡ್‍ಗಳಿವೆ. ನಮ್ಮಲ್ಲಿ ಸಾಮಥ್ರ್ಯವಿದೆ ಮತ್ತು ಈ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊಂದು ಏರ್‌ಫೀಲ್ಡ್ ಅನ್ನು ಬಳಸಿಕೊಳ್ಳುವ ಸಾಮಥ್ರ್ಯವನ್ನು ನಾವು ನಿರ್ಮಿಸುತ್ತಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಅಗತ್ಯವಿದ್ದಲ್ಲಿ ನಾಗರಿಕ ವಾಯುನೆಲೆ ಅಥವಾ ಮಿಲಿಟರಿ ವಾಯುನೆಲೆ ಅಥವಾ ಸುಧಾರಿತ ಲ್ಯಾಂಡಿಂಗ್ ಮೈದಾನವನ್ನು ಬಳಸಲು IAF ತನ್ನ ಪರಾಕ್ರಮವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದರು. ನಾವು ಆ ಸಾಮಥ್ರ್ಯವನ್ನು ಹೊಂದಿದ್ದೇವೆ ಮತ್ತು ನಾವು ಯೋಜನೆಯನ್ನು ಉಳಿಸಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ನಿರಂತರ ಸುಧಾರಣೆ ನಡೆಯುತ್ತಿದೆ ಎಂದು ಅವರ ತಿಳಿಸಿದರು.

ಗಾಜಾದಲ್ಲಿ ಗಾಯಾಳುಗಳ ನರಳಾಟ, ಚಿಕಿತ್ಸೆ ಸಿಗದೆ ಪರದಾಟ

ಈ ಕಾರ್ಯತಂತ್ರದಿಂದಾಗಿ, IAF ಈ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯ ವಾಯುನೆಲೆಗಳನ್ನು ಹೊಂದಿರುತ್ತದೆ, ಅದೇ ರೀತಿಯಲ್ಲಿ ಯಾವುದೇ ನೆರೆಯ ರಾಷ್ಟ್ರ ಅಂತಹ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದರು. IAFನ ಪೂರ್ವ ಕಮಾಂಡ್‍ನ ತಾಂತ್ರಿಕ ಪ್ರಗತಿಯ ಬಗ್ಗೆ ಕೇಳಿದಾಗ, ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಿದಾಗ, ನಾವು ಅದನ್ನು ಇಲ್ಲಿ ಸೇರಿಸುತ್ತಿದ್ದೇವೆ ಎಂದು ಅವರು ಹೇಳಿದರು.

‘ಕಲೆಕ್ಷನ್ ಮಾಸ್ಟರ್’ ಸಿಎಂ ಸಿದ್ದರಾಮಯ್ಯ : ಬಿಜೆಪಿ ವಾಗ್ದಾಳಿ

ಬೆಂಗಳೂರು, ಅ.16- ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆದಾರರು ಹಾಗೂ ಬಿಲ್ಡರ್ಸ್ ಬಳಿ 100 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ.

ಇದೀಗ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಗಂಭೀರ ಆರೋಪ ಮಾಡಿದೆ. ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯ್ಯಲ್ಲೊಂದು ಬ್ರೀಫ್‍ಕೇಸ್ ಹಿಡಿದುಕೊಂಡಿದ್ದು, ಅದರ ಮುಂಭಾಗದಲ್ಲಿ ಕಲೆಕ್ಷನ್ ಮಾಸ್ಟರ್ ಎಂದು ದೂರಿದೆ.

ಗಾಜಾದಲ್ಲಿ ಗಾಯಾಳುಗಳ ನರಳಾಟ, ಚಿಕಿತ್ಸೆ ಸಿಗದೆ ಪರದಾಟ

ಮತ್ತೊಂದು ಪೋಸ್ಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲ ಹಂತದ ಒಂದು ಸಾವಿರ ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು ಎಂದು ಪ್ರಶ್ನಿಸಿದೆ. ತೆಲಂಗಾಣ ಕಾಂಗ್ರೆಸ್‍ಗೆ 300 ಕೋಟಿ, ಮಿಜೊರಾಂ ಕಾಂಗ್ರೆಸ್‍ಗೆ 100 ಕೋಟಿ, ಛತ್ತೀಸ್‍ಗಡ ಕಾಂಗ್ರೆಸ್‍ಗೆ 200 ಕೋಟಿ, ರಾಜಸ್ಥಾನ ಕಾಂಗ್ರೆಸ್‍ಗೆ 200 ಕೋಟಿ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್‍ಗೆ 200 ಕೋಟಿ ನೀಡಿರಬಹುದೇ ಎಂದು ಪ್ರಶ್ನೆ ಮಾಡಿದೆ.

ಕಮಿಷನ್ ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿಬಿದ್ದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಕೃಷ್ಣಪ್ಪ ಅವರ ಫ್ಲಾಟ್‍ನಲ್ಲಿ ಸಂಗ್ರಹಿಸಿಟ್ಟಿದ್ದ 45 ಕೋಟಿ ರೂ. ಹಣವನ್ನು ಐಟಿ ವಶಪಡಿಸಿಕೊಂಡಿದೆ.

ಇಸ್ಲಾಮಿಕ್ ರಾಷ್ಟ್ರಗಳ ವಿರುದ್ಧ ಹರಿಹಾಯ್ದ ನಿಕ್ಕಿ ಹ್ಯಾಲೆ

ಮೂರು ದಿನಗಳ ಹಿಂದೆಯಷ್ಟೇ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇದೇ ಐಟಿ ತಂಡ 42 ಕೋಟಿ ರೂ. ಹಣವನ್ನು ಪತ್ತೆಹಚ್ಚಿ ಜಪ್ತಿ ಮಾಡಿಕೊಂಡಿದೆ. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಐಟಿ ದಾಳಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ ಸಮರಕ್ಕೆ ನಾಂದಿ ಹಾಡಿದೆ.

ಕಾಂಗ್ರೆಸ್ ಕೇವಲ ‘ಲೂಟಿ ಗ್ಯಾರಂಟಿ’ ಮಾತ್ರ ನೀಡಬಲ್ಲದು : ನಡ್ಡಾ

ನವದೆಹಲಿ,ಅ.16 (ಪಿಟಿಐ)- ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕಾಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುವ ಕರ್ನಾಟಕವನ್ನು ಎಟಿಎಂ ಆಗಿ ಪರಿವರ್ತಿಸಿದೆ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಕೇವಲ ಲೂಟಿಯ ಗ್ಯಾರಂಟಿ ನೀಡಬಲ್ಲದು ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯಲ್ಲಿ ಕೆಲವು ಗುತ್ತಿಗೆದಾರರಿಂದ 100 ಕೋಟಿ ರೂ.ಗೂ ಹೆಚ್ಚು ವಸೂಲಿ ಮಾಡಿರುವುದನ್ನು ಉಲ್ಲೇಖಿಸಿದ ನಡ್ಡಾ, ಇದು ಮತದಾರರೊಂದಿಗೆ ನಾಚಿಕೆಗೇಡಿನ ಮತ್ತು ಅಸಹ್ಯಕರ ವಿಷಯವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ರಸ್ತೆ ಅಪಘಾತದಲ್ಲಿ ಭಾರತೀಯ ವ್ಯಕ್ತಿ ಸಾವು

ಇಂತಹ ಅಸಹ್ಯಗಳು ಕೇವಲ ಕಾಂಗ್ರೆಸ್‍ನ ಭ್ರಷ್ಟ ಡಿಎನ್‍ಎ ಮಾದರಿಯಾಗಿದೆ ಎಂದು ಅವರು ಎಕ್ಸ್‍ನಲ್ಲಿ ಹೇಳಿದ್ದಾರೆ. ಅದೇ ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರು ಇತ್ತೀಚಿನ ಕರ್ನಾಟಕ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಸುಳ್ಳುಗಳನ್ನು ಹೊರಹಾಕಿದರು, ಅದರ ಆಡಳಿತದಲ್ಲಿ ಗುತ್ತಿಗೆದಾರರು ಭಾರಿ ಕಮಿಷನ್ ಪಾವತಿಸಲು ಒತ್ತಾಯಿಸಿದರು ಎಂದು ಅಂದಿನ ಬಿಜೆಪಿ ಸರ್ಕಾರದ ವಿರುದ್ಧದ ಆರೋಪವನ್ನು ಉಲ್ಲೇಖಿಸಿದರು.

ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು, ಕಾಂಗ್ರೆಸ್ ಸರ್ಕಾರಗಳು ಛತ್ತೀಸ್‍ಗಢ ಮತ್ತು ರಾಜಸ್ಥಾನದ ಎಟಿಎಂಗಳನ್ನು ಭ್ರಷ್ಟಾಚಾರದ ಎಟಿಎಂಗಳನ್ನು ಮಾಡಿವೆ. ಇದು ಜನರ ಹಣವನ್ನು ಲೂಟಿ ಮಾಡಲು ತೆಲಂಗಾಣ ಮತ್ತು ಮಧ್ಯಪ್ರದೇಶದ ಎಟಿಎಂಗಳನ್ನು ಮಾಡಲು ಬಯಸಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಕನಸು ಕಾಣುತ್ತಿದ್ದು, ಇದರಿಂದ ಬಡವರ ಕಲ್ಯಾಣ ಮತ್ತು ರಾಜ್ಯಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಲೂಟಿ ಮಾಡಬಹುದು ಎಂದು ನಡ್ಡಾ ಆರೋಪಿಸಿದ್ದಾರೆ. ಕಾಂಗ್ರೆಸ್ ಲೂಟಿಯ ಗ್ಯಾರಂಟಿಯನ್ನು ಮಾತ್ರ ನೀಡಬಲ್ಲದು ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.

ಕಾಂಗ್ರೆಸ್ ಅ„ಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಭ್ರಷ್ಟಾಚಾರವು ಘಾತೀಯವಾಗಿ ಬೆಳೆದಿದೆ ಎಂದು ಬಿಜೆಪಿ ಮುಖ್ಯಸ್ಥರು ಪ್ರತಿಪಾದಿಸಿದ್ದಾರೆ.