Home Blog Page 1887

ಇಸ್ರೋ ಕೈಯಲ್ಲಿದೆ ಸರಣಿ ಕಾರ್ಯಚರಣೆಗಳು

ಚೆನ್ನೈ, ಅ 16 (ಪಿಟಿಐ) ಮೊದಲ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಹೊರತಾಗಿ ಮಂಗಳ, ಶುಕ್ರ ಮತ್ತು ಚಂದ್ರನ ಅನ್ವೇಷಣೆಯ ಜತೆಗೆ ಇತರ ಕೆಲವು ಸರಣಿ ಕಾರ್ಯಾಚರಣೆಗಳನ್ನು ಇಸ್ರೋ ಸಿದ್ಧಪಡಿಸಿದೆ ಎಂದು ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಭೂಮಿಯ ಹವಾಮಾನ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆಯು ಯೋಜನೆಗಳನ್ನು ರೂಪಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಅಲ್ಲದೆ, ಸಂವಹನ, ದೂರಸಂವೇದಿ ಉಪಗ್ರಹಗಳು ಸೇರಿದಂತೆ ನಿಯಮಿತ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿಯೂ ಇಸ್ರೋ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.ಗಗನ್‍ಯಾನ್ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಚೊಚ್ಚಲ ಟಿವಿ-ಡಿ1 ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಿಗದಿಪಡಿಸಲಾಗಿದೆ ಎಂದರು.

ಬೆಂಗಳೂರು ಕೇಂದ್ರ ಕಛೇರಿಯ ಬಾಹ್ಯಾಕಾಶ ಸಂಸ್ಥೆ ಕೈಗೊಂಡಿರುವ ಮುಂಬರುವ ಕಾರ್ಯಾಚರಣೆಗಳ ಕುರಿತು ವಿವರಿಸಿದ ಅವರು, ನಮ್ಮಲ್ಲಿ ಪರಿಶೋಧನಾ ಕಾರ್ಯಾಚರಣೆಗಳಿವೆ. ಮಂಗಳ, ಶುಕ್ರ, ಮತ್ತೆ ಚಂದ್ರನ ಕಡೆಗೆ ಹೋಗಲು ನಾವು ಯೋಜಿಸಿದ್ದೇವೆ. ಹವಾಮಾನ ಮತ್ತು ಹವಾಮಾನವನ್ನು ನೋಡುವ ಕಾರ್ಯಕ್ರಮಗಳನ್ನು ಸಹ ನಾವು ಹೊಂದಿದ್ದೇವೆ.

ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ! : ಹೆಚ್‌ಡಿಕೆ

ಇಸ್ರೋದ ವಿಜ್ಞಾನಿಗಳು ಸಂವಹನ ಮತ್ತು ರಿಮೋಟ್ ಸೆನ್ಸಿಂಗ್‍ಗಾಗಿ ಉಪಗ್ರಹಗಳನ್ನು ಉಡಾವಣೆ ಮಾಡುವಂತಹ ನಿಯಮಿತ ಕಾರ್ಯಾಚರಣೆಗಳನ್ನು ತೆಗೆದುಕೊಳ್ಳುವಲ್ಲಿ ಗಮನಹರಿಸುತ್ತಾರೆ ಎಂದು ಒತ್ತಿಹೇಳಿರುವ ಅವರು, ಏರೋನಮಿ, ಥರ್ಮಲ್ ಇಮೇಜಿಂಗ್ ಮತ್ತು ಹವಾಮಾನ ಬದಲಾವಣೆಯ ಪ್ರಭಾವದ ಮೌಲ್ಯಮಾಪನದಂತಹ ಸಮಸ್ಯೆಗಳನ್ನು ನೋಡಲು ವೈಜ್ಞಾನಿಕ ಕಾರ್ಯಾಚರಣೆಗಳನ್ನು ಸಿದ್ದಗೊಳಿಸಲಾಗುತ್ತಿದೆ ಎಂದು ಹೇಳಿದರು.

ಹಲವು ವಿಷಯಗಳಿವೆ ಮತ್ತು ನಾವು ಇದನ್ನೆಲ್ಲ ಮಾಡುವುದರಲ್ಲಿ ನಿರತರಾಗಿದ್ದೇವೆ ಎಂದು ಅವರು ಹೇಳಿದರು.ಕಳೆದ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಮಾಡಿದ ಚಂದ್ರಯಾನ -3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್‍ನಿಂದ ವಿಜ್ಞಾನಿಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಮರ್ಥರಾಗಿದ್ದಾರೆಯೇ ಎಂಬ ಪ್ರಶ್ನೆಗೆ, ವಿಕ್ರಮ್ ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ ಎಂದು ಹೇಳಿದರು.

ಚಂದ್ರನ ದಿನದಲ್ಲಿ (14 ಭೂಮಿಯ ದಿನಗಳಿಗೆ ಸಮನಾಗಿರುತ್ತದೆ) ಆ ಸಮಯದಲ್ಲಿ ಅದರ ಕಾರ್ಯಗಳನ್ನು ನಿರ್ವಹಿಸಲು ಪ್ರೋಗ್ರಾಮ್ ಮಾಡಲಾಗಿದೆ. ಇದು ಚಂದ್ರನ ಮೇಲೆ ಸಂತೋಷದಿಂದ ನಿದ್ರಿಸುತ್ತಿದೆ. ಅದು ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ. ಬಹುಶಃ ಅದು ಏಳಲು ಬಯಸಿದರೆ, ಅದು ಎಚ್ಚರಗೊಳ್ಳಲಿ. ಅಲ್ಲಿಯವರೆಗೆ ನಾವು ಕಾಯುತ್ತೇವೆ ಎಂದು ಅವರು ಹೇಳಿದರು. ಚಂದ್ರನ ಮೇಲೆ ರಾತ್ರಿಯ ಆರಂಭದ ನಂತರ ಸೆಪ್ಟೆಂಬರ್‍ನಲ್ಲಿ ಸ್ಲೀಪ್ ಮೋಡ್‍ಗೆ ಒಳಗಾದ ನಂತರ ರೋವರ್ ಪ್ರಗ್ಯಾನ್ ಮತ್ತು ಲ್ಯಾಂಡರ್ ವಿಕ್ರಮ್ ಅವರೊಂದಿಗೆ ಸಂವಹನವನ್ನು ಮರುಸ್ಥಾಪಿಸಲು ಇಸ್ರೋ ಪ್ರಯತ್ನಗಳನ್ನು ಮಾಡಿತು.

ಅದರಿಂದ ಯಾವುದೇ ಸಿಗ್ನಲ್‍ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರೆಯುತ್ತವೆ ಎಂದು ಇಸ್ರೋ ಹೇಳಿದೆ. ಆಗಸ್ಟ್ 23 ರ ಐತಿಹಾಸಿಕ ಲ್ಯಾಂಡಿಂಗ್ ನಂತರ, ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ವಿಭಿನ್ನ ಕಾರ್ಯಗಳನ್ನು ನಿರ್ವಹಿಸಿದರು, ಇದರಲ್ಲಿ ಗಂಧಕದ ಉಪಸ್ಥಿತಿಯನ್ನು ಪತ್ತೆಹಚ್ಚುವುದು ಮತ್ತು ಸಾಪೇಕ್ಷ ತಾಪಮಾನವನ್ನು ದಾಖಲಿಸುವುದು ಸೇರಿದಂತೆ.

ಸೂರ್ಯನನ್ನು ಅಧ್ಯಯನ ಮಾಡುವ ಇಸ್ರೋದ ಮೊದಲ ಕಾರ್ಯಾಚರಣೆಯ ಕುರಿತು ಸೋಮನಾಥ್ ಅವರು ಬಾಹ್ಯಾಕಾಶ ನೌಕೆಯು ತುಂಬಾ ಆರೋಗ್ಯಕರವಾಗಿದೆ ಮತ್ತು 110 ದಿನಗಳ ಲಾಗ್ರೇಂಜ್ ಪಾಯಿಂಟ್ ಎಲ್1 ಗೆ ಪ್ರಯಾಣಿಸುತ್ತಿದೆ ಮತ್ತು ಜನವರಿ ಮಧ್ಯದ ವೇಳೆಗೆ ಉದ್ದೇಶಿತ ಗಮ್ಯಸ್ಥಾನವನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.

ಅಮೆರಿಕದ ರಸ್ತೆ ಅಪಘಾತದಲ್ಲಿ ಭಾರತೀಯ ವ್ಯಕ್ತಿ ಸಾವು

ವಾಷಿಂಗ್ಟನ್, ಅ. 16- ಇಂಡಿಯಾನಾಪೊಲಿಸ್ ಸಮೀಪದ ಗ್ರೀನ್‍ವುಡ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಭಾರತ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮೃತರನ್ನು ಭಾರತದ ಪಂಜಾಬ್‍ನ ಹೋಶಿಯಾರ್‍ಪುರ ಜಿಲ್ಲೆಯವರಾದ ಸುಖ್ವಿಂದರ್ ಸಿಂಗ್ ಎಂದು ಗೊತ್ತಾಗಿದೆ. ಅವರು ಚಲಾಯಿಸುತ್ತಿದ್ದ ಹೋಂಡಾ ಕಾರು ಮತ್ತೊಂದು ಲೇನ್‍ಗೆ ತಿರುಗಿಸುವಾಗ ಎದುರಿಗೆ ಬಂದ ಟ್ರಕ್‍ಗೆ ಅಪ್ಪಳಿಸಿದೆ.

ವಿಮಾನದಲ್ಲಿ ಪಾಸ್ತಾ ಮಷೀನ್‍ನಲ್ಲಿ ಚಿನ್ನ ಸಾಗಾಟ : ಪ್ರಯಾಣಿಕನ ಬಂಧನ

ತೀವ್ರವಾಗಿ ಗಾಯಗೊಂಡದ್ದ ಅವರನ್ನು ಹೆದ್ದಾರಿ ಭದ್ರತಾ ಸಿಬ್ಬಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ,15 ವರ್ಷದ ಬಾಲಕನಾಗಿದ್ದಾಗ 1996 ರಲ್ಲಿ ಸಿಂಗ್ ಅಮೆರಿಕಕ್ಕೆ ಆಗಮಿಸಿದರು.2010 ರಿಂದ ಇಂಡಿಯಾನಾಪೊಲಿಸ್ ನಗರದಲ್ಲಿ ವಾಸವಾಗಿದ್ದರು ಮೃತರು ಪತ್ನಿ, 15 ವರ್ಷದ ಪುತ್ರ ಹಾಗೂ 10 ವರ್ಷದ ಪುತ್ರಿಯನ್ನು ಅಗಲಿದ್ದಾರೆ ಎಂದು ವರದಿ ಹೇಳಿದೆ.

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ಸಿಂಗ್ ಜೊತೆ ಮತ್ತೊಬ್ಬ ಮಹಿಳೆ ಪ್ರಯಾಣಿಸುತ್ತಿದ್ದರು ಅವರು ಕೂಡ ತೀವ್ರ ಗಾಯಗಳಾಗಿದ್ದು, ಅವರನ್ನು ಐಯು ಹೆಲ್ತ್ ಮೆಥೋಡಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಟ್ರಕ್ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-10-2023)

ನಿತ್ಯ ನೀತಿ : ಪ್ರಾರಬ್ಧ ಕರ್ಮವನ್ನು ಅನುಭವಿಸಿದ ಮೇಲೆ ನಿಶ್ಚಯವಾಗಿಯೂ ಸತ್ಕರ್ಮದ ಫಲವು ದೊರೆಯುತ್ತದೆಂಬ ದೃಢ ವಿಶ್ವಾಸ, ನಂಬಿಕೆಯನ್ನಿಟ್ಟು ಸ್ಥೈರ್ಯದಿಂದ ಬದುಕಬೇಕು.

ಪಂಚಾಂಗ ಸೋಮವಾರ 16-10-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪಾಡ್ಯ / ನಕ್ಷತ್ರ: ಚಿತ್ತಾ / ಯೋಗ: ವೈಧೃತಿ / ಕರಣ: ಕಿಂಸ್ತುಘ್ನ

ಸೂರ್ಯೋದಯ : ಬೆ.06.10
ಸೂರ್ಯಾಸ್ತ : 06.01
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳಲ್ಲಿ ತೃಪ್ತಿಕರವಾಗಲಿದೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ! : ಹೆಚ್‌ಡಿಕೆ

ಬೆಂಗಳೂರು, ಅ.15-ಬ್ರ್ಯಾಂಡ್ ಹೆಸರಿನಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಹಣ ಕೊಳ್ಳೆ ಹೊಡೆಯಲು ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್‍ಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಹೆಚ್‍ಡಿಕೆ ಪ್ರಶ್ನಿಸಿದ್ದಾರೆ. ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ಪರ್ಸಂಟೇಜ್ ಪಟಾಲಂ ಈಗ ಕಸಕ್ಕೂ ಬಾಯಿ ಹಾಕಿದೆ. ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ. ಅದರ ಒಳಗುಟ್ಟು ರಟ್ಟಾಗಿದೆ ಎಂದು ಅವರು ಟೀಕಿಸಿದ್ದಾರೆ.

ಮಂಡೂರು ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದ ಜನ ಈ ನರಕದಲ್ಲೇ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರದ ಜನರೂ ಕಸದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ.

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡಿ ಸಾವಿನ ದಿಬ್ಬಗಳನ್ನು ನಿರ್ಮಿಸಲು ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಹುನ್ನಾರ ಹೂಡಲಾಗಿದೆ. ಇದು ಘೊರ ಅಕ್ಷಮ್ಯ ಹಾಗೂ ರಾಜಧಾನಿಯ ಆಸುಪಾಸಿನಲ್ಲಿ ಈಗಾಗಲೇ ಕೆಟ್ಟಿರುವ ಪರಿಸರವನ್ನು ಮತ್ತಷ್ಟು ಹಾಳು ಮಾಡುವ ದುಷ್ಟ ತಂತ್ರವಷ್ಟೇ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಮೃದ್ಧವಾಗಿವೆ. ಅಲ್ಲಿನ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಿ, ಜನಜೀವನವನ್ನು ಸರ್ವನಾಶ ಮಾಡುವುದು ಒಂದೆಡೆಯಾದರೆ; ಹೊಸ ಡಂಪಿಂಗ್ ಯಾರ್ಡ್ ಗಳ ಮೂಲಕ ಕೋಟಿಗಟ್ಟಲೇ ಹಣವನ್ನು ಜೇಬಿಗೆ ಡಂಪ್ ಮಾಡಿಕೊಳ್ಳುವ ಖತರ್ನಾಕ್ ಐಡಿಯಾ ಇನ್ನೊಂದೆಡೆ ಅಡಗಿದೆ ಎಂದು ಆರೋಪಿಸಿದ್ದಾರೆ.

ಜಗತ್ತಿನಲ್ಲಿಯೇ ಉತ್ಕೃಷ್ಟ ಮಾವು, ರೇಷ್ಮೆ, ಹಣ್ಣು, ತರಕಾರಿ ಬೆಳೆಯುತ್ತಿರುವ ರಾಮನಗರ, ಬಿಡದಿ ಬಳಿ ನೂರು ಎಕರೆ ಪ್ರದೇಶದಲ್ಲಿ ಕಸ ಸುರಿಯಲು ಉಪ ಮುಖ್ಯಮಂತ್ರಿಗಳ ದೊಡ್ಡ ಹುನ್ನಾರದ ಒಳ ಉದ್ದೇಶ ಸ್ಪಷ್ಟ. ಈಗಾಗಲೇ ವೃಷಭಾವತಿ ಸೇರಿ ರಾಮನಗರ ಜಿಲ್ಲೆಯ ಜಲಮೂಲಗಳು ಪೂರ್ಣ ಹಾಳಾಗಿ ಅಂತರ್ಜಲವೂ ಕಲುಷಿತವಾಗಿದೆ ಎಂದಿದ್ದಾರೆ.

ರೋಹಿತ್ ಶರ್ಮಾ ಒನ್ ಮ್ಯಾನ್ ಆರ್ಮಿ : ಅಖ್ತರ್ ಬಣ್ಣನೆ

ನೂರು ಎಕರೆ ಸರ್ಕಾರಿ ಭೂಮಿಯನ್ನು ಅನಾಮತ್ತಾಗಿ ಎಗರಿಸಿಬಿಡುವ ರಿಯಲ್ ಎಸ್ಟೇಟ್ ಬ್ರ್ಯಾಂಡೆಡ್ ಪರಿಕಲ್ಪನೆ ಇದಲ್ಲದೆ ಮತ್ತೇನು ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಕಾಂಗ್ರೆಸ್ ಸರ್ಕಾರವು ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಬೀದಿಗಿಳಿಯುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ವಿಮಾನದಲ್ಲಿ ಪಾಸ್ತಾ ಮಷೀನ್‍ನಲ್ಲಿ ಚಿನ್ನ ಸಾಗಾಟ : ಪ್ರಯಾಣಿಕನ ಬಂಧನ

ಬೆಂಗಳೂರು,ಅ.15- ದುಬೈ ವಿಮಾನದ ಮೂಲಕ ಪಾಸ್ತಾ ಮಾಡುವ ಮಷೀನ್‍ನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ನಗರಕ್ಕೆ ಬಂದ ಪ್ರಯಾಣಿಕನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ 35.37 ಲಕ್ಷ ಮËಲ್ಯದ 598 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪಾಸ್ತಾ ಮಾಡುವ ಮಷೀನ್ ಪತ್ತೆಯಾಗಿದೆ. ಆ ಮಷೀನ್‍ನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿದಾಗ ಮಷೀನ್ ಮೂಲಕ ಅಕ್ರಮ ಚಿನ್ನ ಸಾಗಾಟ ಮಾಡುತ್ತಿರುವುದು ತಿಳಿದು ಮಷೀನ್‍ಗೆ ಅಳವಡಿಸಿದ್ದ ಬೋಲ್ಟ್ ಮತ್ತು ಸ್ಕ್ರೂ ಕೂಲಂಕುಷವಾಗಿ ಪರಿಶೀಲಿಸಿದಾಗ ಚಿನ್ನದಲ್ಲಿ ಅವುಗಳನ್ನು ಮಾಡಿಸಿ ಸಿಲ್ವರ್ ಕೋಟ್ ಮಾಡಿರುವುದು ಕಂಡುಬಂದಿದೆ.

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಕೂಡಲೆ ಆ ಮಷೀನ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ತೆರೆದು ಬರೊಬ್ಬರಿ 35,37,768 ರು. ಮೌಲ್ಯದ 598 ಗ್ರಾಂ ಚಿನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಪ್ರಯಾಣಿಕನನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಹಾರ ತಜ್ಞ ಕೆ.ಸಿ.ರಘು ಅನಾರೋಗ್ಯದಿಂದ ನಿಧನ

ಬೆಂಗಳೂರು- ವಿಜ್ಞಾನ ಲೋಕ, ರಘು ಬುಕ್ಸ್ , ಜ್ಞಾನ, ತತ್ವಶಾಸ್ತ್ರ ಮತ್ತು ಧರ್ಮ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದ ನಾಡಿನ ಹೆಸರಾಂತ ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.

ಕೆ.ಸಿ. ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವಲ್ರ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆಗ್ರ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು.

ಶಾಹೀನ್ ಶಾ ಆಫ್ರಿದಿಗೆ ರವಿಶಾಸ್ತ್ರಿ ಹಿಗ್ಗಾಮುಗ್ಗಾ ಕ್ಲಾಸ್

ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು.ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಇದಾಗಿತ್ತು. ಕೆ.ಸಿ.ರಘು, ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕೆ.ಸಿ. ರಘು, ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ಆಹಾರ ರಾಜಕೀಯ ಮತ್ತು ತುತ್ತು ತತ್ವ ಪುಸ್ತಕಗಳನ್ನು ಪ್ರಕಟಿಸಿದ್ದರು.

ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ

ಮೈಸೂರು, ಅ.15- ದಸರಾ ಮಹೋತ್ಸವದ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ ರಾಜ ಮನೆತನದಿಂದ ಖಾಸಗಿ ದರ್ಬಾರ್ ನಡೆಯಿತು. ಮೈಸೂರು ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಬಹಳ ವಿಶೇಷವಾಗಿತ್ತು. ಇಂದು ಬೆಳಿಗ್ಗೆಯಿಂದಲೇ ಅರಮನೆ ಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.

ಆನಂತರ ಅರಮನೆಯ ದರ್ಬಾರ್ ಹಾಲಿನಲ್ಲಿ ಇರಿಸಲಾಗಿರುವ ಸಿಂಹಾಸನಕ್ಕೆ ಯದುವೀರ್ ಅವರು ಮೊದಲು ಪೂಜೆ ಸಲ್ಲಿಸಿದರು. ಆನಂತರ ಸಿಂಹಾಸನ ರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ಇದಕ್ಕೂ ಮುನ್ನ ಗಣಪತಿ ಪೂಜೆ, ಕಳಸ ಪೂಜೆ ನೆರವೇರಿಸಲಾಯಿತು.

ಅ.21ರಂದು ಗಗನಯಾನ ಪರೀಕ್ಷಾ ಹಾರಾಟ

ಮಧುರೈ, ಅ.15- ಮನುಷ್ಯರನ್ನು ಬಾಹ್ಯಾಕಾಶಯಾನಕ್ಕೆ ರವಾನೆ ಮಾಡುವ ಗಗನಯಾನ ಯೋಜನೆಯ ಪೂರ್ವಭಾವಿ ವಾಹನಗಳ ಪರೀಕ್ಷಾ ಪ್ರಯೋಗ ಅಕ್ಟೋಬರ್ 21ರಂದು ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.

ಗಗನ ಯಾನ್ ಯೋಜನೆಯು ಮಾನವ ಸಿಬ್ಬಂದಿಯನ್ನು 400 ಕಿಮೀ ಕಕ್ಷೆಗೆ ಉಡಾವಣೆ ಮಾಡುವ ಮತ್ತು ವಾಪಾಸ್ ಮರಳಿದ ವೇಳೆ ಸಮುದ್ರದ ನೀರಿನಲ್ಲಿ ಇಳಿಸಿ ಸುರಕ್ಷಿತವಾಗಿ ಭೂಮಿಗೆ ತರುವ ಯೋಜನೆಯಾಗಿದೆ. ಇದಕ್ಕಾಗಿ ಮಾನವ ಬಾಹ್ಯಾಕಾಶ ಹಾರಾಟದ ಸಾಮಥ್ರ್ಯದ ಪ್ರದರ್ಶನ ಪರೀಕ್ಷೆಗೆ ಮೂರು ವಾಹನಗಳ ಪರೀಕ್ಷಾ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಮಾನವ ಬಾಹ್ಯಾಕಾಶ ಯಾನದ ಸಮಯದಲ್ಲಿ ಭಾರತೀಯ ಗಗನಯಾತ್ರಿಗಳನ್ನು ಇರಿಸಲು ನಿಗದಿಪಡಿಸಲಾದ ಸಿಬ್ಬಂದಿ ಮಾಡ್ಯೂಲ್ ಅನ್ನು ಪರೀಕ್ಷಿಸಲು ಪರೀಕ್ಷಾ ವಾಹನ ಅಭಿವೃದ್ಧಿ ಹಾರಾಟವನ್ನು (ಟಿವಿ-ಡಿ1) ನಡೆಸಲಾಗುವುದು.

ಗಗನ್ಯಾನ್ ಮಿಷನ್‍ನ ಮೊದಲ ಪರೀಕ್ಷಾ ವಾಹನ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಾಗುವುದು. ಅದರ ನಂತರ ನಾವು ಇನ್ನೂ ಮೂರು ಪರೀಕ್ಷಾ ಕಾರ್ಯಾಚರಣೆಗಳು ನಡೆಯಲಿವೆ. ಡಿ 2, ಡಿ 3, ಡಿ 4. ನಾವು ಪರೀಕ್ಷಾ ಹಾರಾಟದ ಅನುಕ್ರಮದಲ್ಲಿ ಸಂಪೂರ್ಣ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಸೋಮನಾಥ್ ಹೇಳಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

ಟಿವಿ-ಡಿ1 ಸಿಬ್ಬಂದಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆಯಾದ ಬಳಿಕ ಮರಳಿ ಬಂಗಾಳ ಕೊಲ್ಲಿಯಲ್ಲಿ ಭೂಮಿಗೆ ಬರುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಸ್ರೋದ ಬೆಂಗಳೂರಿನ ಪ್ರಧಾನ ಕಛೇರಿಯಲ್ಲಿ ಬಾಹ್ಯಾಕಾಶ ಸಂಸ್ಥೆಯು ಅಕ್ಟೋಬರ್ 21 ರಂದು ಶ್ರೀಹರಿಕೋಟಾದಲ್ಲಿ ಗಗನಯಾನ ಮೊದಲ ಮಿಷನ್‍ಗೆ ಮುಂಚಿತವಾಗಿ ಹಲವಾರು ಪರೀಕ್ಷಾ ಹಾರಾಟಗಳನ್ನು ನಡೆಸಲಿದೆ ಎಂದು ಹೇಳಿದರು.

ಇ¸ಶ್ರೋ ಕೈಗೊಂಡಿರುವ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಕಾರ್ಯಕ್ರಮದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸೋಮನಾಥ್, 2024 ರ ಜನವರಿ ಮಧ್ಯದಲ್ಲಿ ಬಾಹ್ಯಾಕಾಶ ನೌಕೆಯು ಲಗ್ರೇಂಜ್ ಪಾಯಿಂಟ್ (ಎಲ್ 1) ತಲುಪುತ್ತದೆ ಎಂದು ಹೇಳಿದ್ದಾರೆ. ನಾವು ಅದನ್ನು ಎಲ್ 1 ಪಾಯಿಂಟ್‍ನಲ್ಲಿ ಸೇರಿಸುತ್ತೇವೆ ಮತ್ತು ಆ ಹಂತದಿಂದ ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಎನ್‍ಸಿಪಿ ಮಾಜಿ ಸಂಸದನ 315 ಕೋಟಿ ಮೌಲ್ಯದ ಅಸ್ತಿ ಜಪ್ತಿ

ನವದೆಹಲಿ, ಅ.15- ಮಹಾರಾಷ್ಟ್ರದ ಎನ್‍ಸಿಪಿಯ ಮಾಜಿ ಸಂಸದರ ವಿರುದ್ಧ ನಡೆಸಿದ ಕಾರ್ಯಚರಣೆಯಲ್ಲಿ 315 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂಮಿ, ಕೈಗಾರಿಕೆಗಳು, ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಮಾಜಿ ರಾಜ್ಯಸಭಾ ಸದಸ್ಯ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ (77) ಅವರು, ರಾಜಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್, ಆರ್.ಎಲ್.ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಮತ್ತು ಮನರಾಜ್ ಜ್ಯುವೆಲ್ಲರ್ಸ್‍ನ ಪ್ರವರ್ತಕರಾಗಿದ್ದಾರೆ.

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಮಹರಾಷ್ಟ್ರದ ಜಲಗಾಂವ್, ಮುಂಬೈ, ಥಾಣೆ, ಸಿಲ್ಲೋಡ್, ಔರಂಗಾಬಾದ್‍ನಲ್ಲಿ ಮತ್ತು ಗುಜರಾತ್‍ನ ಕಚ್‍ನಲ್ಲಿ ಅವರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ 70 ಸ್ಥಿರ ಆಸ್ತಿಗಳನ್ನುಮನಿಲ್ಯಾಂಡರಿಂಗ್ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ರಾಜ್ಮಲ್ ಲಖಿಚಂದ್ ಜ್ಯುವೆಲರ್ಸ್ ಪ್ರೈವೇಟ್ ಲಿಮಿಟೆಡ್‍ನ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಕೆಲವು ವಿಂಡ್‍ಮಿಲ್‍ಗಳು, ಬೆಳ್ಳಿ ಮತ್ತು ವಜ್ರದ ಆಭರಣಗಳು, ಬೆಳ್ಳಿ ಮತ್ತು ಭಾರತೀಯ ಕರೆನ್ಸಿ ಸೇರಿ ಒಟ್ಟು 315.60 ಕೋಟಿ ರೂ. ಜಪ್ತಿ ಮಾಡಲಾಗಿದೆ.

ಪ್ರವರ್ತಕರಾದ ಈಶ್ವರಲಾಲ್ ಶಂಕರಲಾಲ್ ಜೈನ್ ಲಾಲ್ವಾನಿ, ಮನೀಶ್ ಈಶ್ವರಲಾಲ್ ಜೈನ್ ಲಾಲ್ವಾನಿ ಮತ್ತು ಇತರರು ಸಂಪಾದಿಸಿದ ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಕಂಪನಿಗಳು ಮತ್ತು ಅದರ ನಿರ್ದೇಶಕರು, ಪ್ರವರ್ತಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 352.49 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸಿತ್ತು. ಸಾಲ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಇಡಿ ಆಗಸ್ಟ್‍ನಲ್ಲಿ ದಾಳಿ ನಡೆಸಲಾಗಿತ್ತು.

ಪಾಕಿಸ್ತಾನ ಹೋರಾಟದ ಪ್ರವೃತ್ತಿ ತೋರಿಸಿಲ್ಲ : ರಮೀಜ್ ರಾಜಾ

ಅಹಮದಾಬಾದ್, ಅ.15- ಸಂಪ್ರದಾಯಿಕ ವೈರಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಸೋಲು ಕಂಡಿರುವ ಪಾಕಿಸ್ತಾನದ ಆಟಗಾರರನ್ನು ಮಾಜಿ ನಾಯಕ ರಮೀಜ್ ರಾಜಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 1992ರಿಂದ ಇಂಡೋ- ಪಾಕ್ ನಡುವೆ ವಿಶ್ವಕಪ್ ಕದನ ಆರಂಭವಾಗಿದ್ದು, ಅಹಮದಾಬಾದ್‍ನ ಪಂದ್ಯಕ್ಕೂ ಮುನ್ನ ಪಾಕ್ 7-0 ಹಿನ್ನೆಡೆ ಅನುಭವಿಸಿತ್ತು. ಆದರೆ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ್ದ ಬಾಬರ್ ಆಝಮ್ ಪಡೆಯು ಈ ಬಾರಿ ಟೀಮ್ ಇಂಡಿಯಾವನ್ನು ಮಣಿಸಿ ಅಂತರವನ್ನು 7-1ಕ್ಕೆ ತಗ್ಗಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ಪಂದ್ಯದ ಯಾವುದೇ ಹಂತದಲ್ಲಿ ಹೋರಾಟದ ಪ್ರವೃತ್ತಿ ತೋರದೆ ಸೋಲಿನ ಹಂತವನ್ನು 8-0ಕ್ಕೆ ಹೆಚ್ಚಿಸಿಕೊಂಡ ಬೆನ್ನಲ್ಲೇ ಪಾಕ್‍ನ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್, ವಾಸಿಮ್ ಅಕ್ರಮ್ ಸೇರಿದಂತೆ ಕೆಲವು ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಛೇಡಿಸಿದ್ದರು. ಈಗ ಈ ಸಾಲಿಗೆ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಕೂಡ ಸೇರ್ಪಡೆಗೊಂಡಿದ್ದಾರೆ.

ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ

`ನೀವು ಟೀಮ್ ಇಂಡಿಯಾ ವಿರುದ್ಧ ಆಡುವಾಗ ನಿಸ್ಸಂಶಯವಾಗಿ, ಇದು ಶೇಕಡಾ 99ರಷ್ಟು ಭಾರತದ ಅಭಿಮಾನಿಗಳು ಮತ್ತು ಜನಸ್ತೋಮದಿಂದ ಕೂಡಿರುವಂತಹ ವಾತಾವರಣವಾಗಿರುತ್ತದೆ. ನೀವು ಅದರಲ್ಲಿ ಮುಳುಗಿದ್ದೀರಿ. ನನಗೆ ಇದೆಲ್ಲವೂ ಅರ್ಥವಾಗುತ್ತದೆ. ಆದರೆ ಬಾಬರ್ ಆಝಮ್ ಈ ತಂಡವನ್ನು 4-5 ವರ್ಷಗಳಿಂದ ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಹೀಗಾಗಿ ಅವರು ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗಿದೆ. ನೀವು ಗೆಲ್ಲಲು ಸಾಧ್ಯವಾಗದಿದ್ದರೆ, ಕನಿಷ್ಠ ಹೋರಾಟ ನೀಡಿ, ಪಾಕಿಸ್ತಾನಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ’ ಎಂದು ರಮೀಜ್ ರಾಜಾ ಕಿಡಿಕಾರಿದರು.