Thursday, November 6, 2025
Home Blog Page 1901

ಬಸ್ ಶೆಲ್ಟರ್ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಪೊಲೀಸರು

ಬೆಂಗಳೂರು,ಅ.10- ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಬಸ್ ಶೆಲ್ಟರ್ ಕಳುವಾಗಿಲ್ಲ, ಶೆಲ್ಟರ್‌ನ್ನು ಬಿಬಿಎಂಪಿ ಅಧಿಕಾರಿಗಳೇ ತೆರವುಗೊಳಿಸಿದ್ದಾರೆ ಎಂಬುವುದು ಹೈಗ್ರೌಂಡ್ಸ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ನಗರ ಕೇಂದ್ರ ವಿಭಾಗದ ಹೌಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಡೇ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಸೈನ್‍ಪೋಸ್ಟ್ ಇಂಡಿಯಾ ಏಜೆನ್ಸಿಯವರು ನಿರ್ಮಿಸಿದ್ದ ಬಸ್ ಶೆಲ್ಟರ್‍ನ್ನು ಯಾರೋ ಕಳವು ಮಾಡಿರುತ್ತಾರೆಂದು, ಅವರ ಕಂಪನಿ ವತಿಯಿಂದ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ತನಿಖೆಯ ಸಲುವಾಗಿ ಬಿಬಿಎಂಪಿ ಶಿವಾಜಿನಗರ ವಲಯ, ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿ ವಿಚಾರಣೆ ಮಾಡಿದಾಗ, ಬಸ್ ಶೆಲ್ಟರ್ ಕಳುವಾಗಿಲ್ಲ ಅದನ್ನು ತೆರವುಗೊಳಿಸಿರುವುದು ಗೊತ್ತಾಗಿದೆ.

ಬಿಬಿಎಂಪಿ ಅಧಿಕಾರಿಗಳ ಪತ್ರದ ಅನುಸಾರ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಅಳವಡಿಸಿದ್ದ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿದೆ ಎಂದು ಮುಂಜಾಗ್ರತಾ ಕ್ರಮ ವಹಿಸಿ ಅದನ್ನು ಶಿವಾಜಿನಗರ ವಾರ್ಡ್‍ನ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿ ಶೆಲ್ಟರ್ ಸಾಮಾಗ್ರಿಗಳನ್ನು ವಾರ್ಡ್ ಕಛೇರಿಯ ಉಗ್ರಾಣದಲ್ಲಿರಿಸಲಾಗಿದೆ ಎಂದು ಬಿಬಿಎಂಪಿ ವಸಂತನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟಪಡಿಸಿದ್ದಾರೆ.

ಸೈಬರ್ ಕ್ರೈಂ ಪ್ರಕರಣಗಳ ಕಾಲಮಿತಿ ತನಿಖೆಗೆ ಕಟ್ಟುನಿಟ್ಟಿನ ಕ್ರಮ : ದಯಾನಂದ

ಅಧಿಕಾರಿಗಳೊಂದಿಗೆ ಅವರು ವಾರ್ಡ್ ಪರಿವೀಕ್ಷಣಾ ಸಮಯದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಈ ಬಸ್ ಶೆಲ್ಟರ್ ಕಾಮಗಾರಿಯು ಅಸಮರ್ಪಕವಾಗಿ, ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ವಹಿಸದ ನಿರ್ಮಾಣ ಮಾಡಿರುವುದು ಕಂಡು ಬಂದಿತ್ತು. ಹಾಗಾಗಿ ಸಾರ್ವಜನಿಕರ ಬಸ್ ನಿಲ್ದಾಣವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುವುದರಿಂದ ನಿರ್ಮಾಣ ಮಾಡುತ್ತಿರುವ ಬಸ್ ಶೆಲ್ಟರ್ ಕುಸಿದು ಬಿದ್ದಲ್ಲಿ ಹಲವಾರು ಪ್ರಯಾಣಿಕರಿಗೆ ಪ್ರಾಣ ಹಾನಿಯಾಗುವ ಸಂಭವವಿರುವುದನ್ನು ಗಮನಿಸಿ ಬಸ್ ಶೆಲ್ಟರ್ ನಿರ್ಮಾಣ ಮಾಡುತ್ತಿರುವ ಸೈನ್‍ಪೋಸ್ಟ್ ಏಜೆನ್ಸಿಯ ಪ್ರತಿನಿಧಿ ರವಿರೆಡ್ಡಿ ಎಂಬುವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.

ಬಸ್ ಶೆಲ್ಟರ್ ನಿರ್ಮಿಸಲು ಪಾಲಿಕೆಯಿಂದ ಪಡೆದಿರುವ ಕಾರ್ಯಾದೇಶ ಪ್ರತಿಯನ್ನು ತಮ್ಮ ಕಛೇರಿಗೆ ಸಲ್ಲಿಸುವಂತೆ ತಿಳಿಸಿ ಕಾಮಗಾರಿಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಂಡು ನಿರ್ಮಿಸಲು ಸೂಚಿಸಲಾಗಿತ್ತು.

ಬಿಗ್‍ಬಾಸ್‍ನಿಂದ ಹೊರಬಂದು ಪ್ರದೀಪ್ ಈಶ್ವರ್ ಹೇಳಿದ್ದೇನು..?

ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ, ಕಾಮಗಾರಿಯನ್ನು ಅಪೂರ್ಣಗೊಳಿಸಿ ಸಂಬಂಧಪಟ್ಟ ಕಾರ್ಯಾದೇಶ ಪತ್ರದ ದಾಖಲೆಗಳನ್ನು ಕಛೇರಿಗೆ ಸಲ್ಲಿಸದೇ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಸಮರ್ಪಕವಾಗಿ ನಿರ್ಮಾಣ ಮಾಡಿದ್ದ ಹಾಗೂ ಅಪೂರ್ಣಗೊಂಡಿರುವ ಬಸ್ ಶೆಲ್ಟರ್ ತೆರವುಗೊಳಿಸಲಾಗಿದ್ದು, ಬಸ್ ಶೆಲ್ಟರ್ ಸಾಮಾಗ್ರಿಗಳನ್ನು ವಾರ್ಡ್ ಕಛೇರಿಯ ಉಗ್ರಾಣದಲ್ಲಿರಿಸಲಾಗಿದೆ ಎಂದು ಅವರು ತಿಳಿಸಿರುತ್ತಾರೆ.

470 ಕೋಟಿ ರೂ. ಸೈಬರ್ ವಂಚನೆ ಪತ್ತೆ, 27.68 ಕೋಟಿ ರೂ.ವಾರಸುದಾರರಿಗೆ ಹಸ್ತಾಂತರ

ಬೆಂಗಳೂರು,ಅ.10- ನಗರ ಪೊಲೀಸರು ವಿವಿಧ ಆನ್‍ಲೈನ್ ಸೈಬರ್ ವಂಚನೆ ಪ್ರಕರಣಗಳ ತನಿಖೆ ಕೈಗೊಂಡು 470 ಕೋಟಿ ರೂ. ಸೈಬರ್ ವಂಚನೆ ಮಾಡಿರುವುದು ಪತ್ತೆ ಹಚ್ಚಿ ಆರೋಪಿಗಳ ಖಾತೆಯಲ್ಲಿದ್ದ 201 ಕೋಟಿ ರೂ. ಜಪ್ತಿ ಮಾಡಿ, ಪಿರ್ಯಾದುದಾರರಿಗೆ 27.68 ಕೋಟಿ ಹಣವನ್ನು ಹಿಂದಿರುಗಿಸಿದ್ದಾರೆ.

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ, ಪ್ರಸಕ್ತ ಸಾಲಿನ ಜನವರಿಯಿಂದ ಸೆಪ್ಟಂಬರ್ ತಿಂಗಳ ಅಂತ್ಯದವರಿಗೆ ಒಟು ್ಟ 18 ವಿವಿಧ ಶೀರ್ಷಿಕೆಗಳ ಅಡಿಯಲ್ಲಿ 12,615 ಆನ್‍ಲೈನ್ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ.

ಈ ಬಗ್ಗೆ ತನಿಖಾಧಿಕಾರಿಗಳು ತನಿಖೆ ಕೈಗೊಂಡಾಗ ದಾಖಲಾದ ಸೈಬರ್ ವಂಚನೆ ಪ್ರಕರಣಗಳಲ್ಲಿ 470,53,92,258 ರೂ. ಮೊತ್ತದ ವಂಚನೆಯಾಗಿರುವುದು ಕಂಡು ಬಂದಿದ್ದು ಈ ಪೈಕಿ 201,83,28,534 ರೂ. ಮೊತ್ತದ ಹಣವನ್ನು ವಿವಿಧ ಬ್ಯಾಂಕ್‍ಗಳಲ್ಲಿ ಪ್ರೀಜ್ ಮಾಡಿರುತ್ತಾರೆ.

ಅಲ್ಲದೆ 28,40,38,422 ರೂ. ಮೊತ್ತದ ಹಣªನ್ನು ವಶಪಡಿಸಿಕೊಂಡಿದ್ದು ಈ ಹಣದ ಪೈಕಿ 27,68,72,273 ರೂ. ಮೊತ್ತದ ಹಣವನ್ನು ಪಿರ್ಯಾದುದಾರರಿಗೆ ಹಿಂದಿರುಗಿಸಲಾಗಿದೆ. ಆನ್‍ಲೈನ್ ಉದ್ಯೋಗ ವಂಚನೆ 3346 ಪ್ರಕರಣಗಳಲ್ಲಿ 204,75,73,321ರೂ. ಕಳೆದುಕೊಂಡಿದ್ದು, 73,71,52,567 ರೂ. ಪ್ರೀಜ್ ಮಾಡಿ 7,34,90,991 ರೂ. ವಶಕ್ಕೆ ಪಡೆದು ದೂರುದಾರರಿಗೆ 7,67,98,572 ರೂ. ಹಿಂದಿರುಗಿಸಲಾಗಿದೆ.

ಡೆಬಿಟ್-ಕ್ರೆಡಿಟ್ ಕಾರ್ಡ್ ವಂಚನೆ 3102 ಪ್ರಕರಣಗಳಲ್ಲಿ 60,86,29,258 ರೂ. ಕಳೆದುಕೊಂಡಿದ್ದು, 25,15,38,168 ರೂ. ಪ್ರೀಜ್ ಮಾಡಿ 3,38,25,252 ರೂ. ವಶಕ್ಕೆ ಪಡೆದು ದೂರುದಾರರಿಗೆ 3,55,70,898 ರೂ. ಹಿಂದಿರುಗಿಸಲಾಗಿದೆ.

ಪುರಾತನ ದೇವರ ವಿಗ್ರಹ ಕದ್ದಿದ್ದ ಕಳ್ಳನ ಬಂಧನ

ಇತರೆ ವಿವಿಧ 2351 ಪ್ರಕರಣಗಳಲ್ಲಿ 54,79,28,349 ರೂ. ಕಳೆದುಕೊಂಡಿದ್ದು,10,32,26,364 ರೂ. ಪ್ರೀಜ್ ಮಾಡಿ 1,65,22,357 ರೂ. ವಶಕ್ಕೆ ಪಡೆದು ದೂರುದಾರರಿಗೆ 2,18,58,514 ರೂ. ಹಿಂದಿರುಗಿಸಲಾಗಿದೆ.
ವ್ಯಾಪಾರ ಅವಕಾಶ ವಂಚನೆ 1133 ಪ್ರಕರಣಗಳಲ್ಲಿ 60,53,87,250 ರೂ. ಕಳೆದುಕೊಂಡಿದ್ದು, 9,69,11,726 ರೂ. ಪ್ರೀಜ್ ಮಾಡಿ 13,37,08,306 ರೂ. ವಶಕ್ಕೆ ಪಡೆದು ದೂರುದಾರರಿಗೆ 11,82,08,075 ರೂ. ಹಿಂದಿರುಗಿಸಲಾಗಿದೆ.

ಉಡುಗೊರೆಗಳು, ಐ ಫೋನ್, ಓಎಲ್‍ಎಕ್ಸ್ , ಸಾಲ 1132 ಪ್ರಕರಣಗಳಲ್ಲಿ 22,40,84,839 ರೂ. ಕಳೆದುಕೊಂಡಿದ್ದು, 6,39,09,912 ರೂ. ಪ್ರೀಜ್ ಮಾಡಿ 1,09,71,379 ರೂ. ವಶಕ್ಕೆ ಪಡೆದು ದೂರುದಾರರಿಗೆ 97,37,526 ರೂ. ಹಿಂದಿರುಗಿಸಲಾಗಿದೆ.

ಸಾಮಾಜಿಕ ಮಾಧ್ಯಮ 511 ಪ್ರಕರಣಗಳಲ್ಲಿ 3,12,69,804 ರೂ. ಕಳೆದುಕೊಂಡಿದ್ದು, 2,55,25,368 ರೂ. ಪ್ರೀಜ್ ಮಾಡಿ, 18,29,915 ರೂ. ವಶಕ್ಕೆ ಪಡೆದು ದೂರುದಾರರಿಗೆ 20,23,540 ರೂ. ಹಿಂದಿರುಗಿಸಲಾಗಿದೆ.
ಸಾಲದ ಅಪ್ಲಿಕೇಶನ್ 277 ಪ್ರಕರಣಗಳಲ್ಲಿ , 3,40,56,371 ರೂ. ಕಳೆದುಕೊಂಡಿದ್ದು, 52,22,828 ರೂ. ಪ್ರೀಜ್ ಮಾಡಿ, 1,02,878 ರೂ. ವಶಕ್ಕೆ ಪಡೆದು ದೂರುದಾರರಿಗೆ 3,00,878 ರೂ. ಹಿಂದಿರುಗಿಸಲಾಗಿದೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ಬಿಟ್ ಕಾಯಿನ್ 195 ಪ್ರಕರಣಗಳಲ್ಲಿ 20,24,22,100 ರೂ. ಕಳೆದುಕೊಂಡಿದ್ದು, 4,34,63,227 ರೂ. ಪ್ರೀಜ್ ಮಾಡಿ, 72,52,317 ರೂ. ವಶಕ್ಕೆ ಪಡೆದು ದೂರುದಾರರಿಗೆ 46,52,317 ರೂ. ಹಿಂದಿರುಗಿಸಲಾಗಿದೆ.
ಕಾರ್ಡ್ ಸ್ಕಿಮ್ಮಿಂಗ್, ಸೆಕ್ಸ್ಟಾರ್ಶನ್ , ಡೇಟಾ ಕಳ್ಳತನ , ಇತರೆ ಮುಂಗಡ ಶುಲ್ಕ ವಂಚನೆಗಳು, ಆಮದು ಮತ್ತು ರಫ್ತು ಹಗರಣಗಳು, ವೈವಾಹಿಕ ವಂಚನೆ ಇಮೇಲ್ ವಂಚನೆ, ಲಾಟರಿ ವಂಚನೆ ,ಆನ್‍ಲೈನ್ ಗೇಮಿಂಗ್ ಹಾಗೂ ಸಿಮ್ ಕ್ಲೋನಿಂಗ್ ಪ್ರಕರಣಗಳನ್ನು ಪತ್ತೆ ಹಚ್ಚಿ ಕೋಟ್ಯಾಂತರ ಹಣ ವಶಪಡಿಸಿಕೊಳ್ಳಲಾಗಿದೆ.

ಐಸಿಸಿ ಪ್ರಶಸ್ತಿಗಾಗಿ ಗಿಲ್-ಸಿರಾಜ್ ಫೈಟ್

ನವದೆಹಲಿ,ಅ.10- ಐಸಿಸಿ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ ಪ್ರತಿಷ್ಠಿತ ಪ್ರಶಸ್ತಿಗಾಗಿ ಟೀಮ್ ಇಂಡಿಯಾದ ಯುವ ಆಟಗಾರರಾದ ಶುಭಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇಂಗ್ಲೆಂಡ್‍ನ ಆರಂಭಿಕ ಆಟಗಾರ ಡೇವಿಡ್ ಮಾಲನ್ ಅವರು ಕೂಡ ಭಾರತದ ಆಟಗಾರರಿಗೆ ಪೈಪೋಟಿ ನೀಡಲು ಐಸಿಸಿ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ ಅಟಗಾರನ ಪ್ರಶಸ್ತಿ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಅವರು ಈ ಪ್ರದರ್ಶನದಿಂದಾಗಿಯೇ ಸೆಪ್ಟೆಂಬರ್ ತಿಂಗಳ ಆಟಗಾರನ ಪ್ರಶಸ್ತಿ ರೇಸ್‍ನಲ್ಲಿದ್ದಾರೆ. 2023ರ ವಿಶ್ವಕಪ್‍ನ ಸಮಯದಲ್ಲಿ ಡೆಂಗ್ಯು ಜ್ವರದಿಂದ ಬಳಲುತ್ತಿರುವ ಗಿಲ್ , ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಈಗ ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಂದ ಅವರು ತಂಡದಿಂದ ಹೊರಗುಳಿಯಲಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ ಪಡೆದು ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದರಲ್ಲದೆ ಐಸಿಸಿ ಪ್ರಶಸ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಗಿಲ್ ಸೆಪ್ಟೆಂಬರ್ ತಿಂಗಳಲ್ಲಿ ಆಡಿದ 8 ಪಂದ್ಯಗಳಿಂದ 1 ಶತಕ ಸೇರಿದಂತೆ 480 ರನ್ ಗಳಿಸಿದ್ದಾರೆ. ಮಲಾನ್ 277 ರನ್ ಬಾರಿಸಿದ್ದಾರೆ. ಮೊಹಮ್ಮದ್ ಸಿರಾಜ್ 11 ವಿಕೆಟ್ ಪಡೆದಿದ್ದಾರೆ.

ಸೈಬರ್ ಕ್ರೈಂ ಪ್ರಕರಣಗಳ ಕಾಲಮಿತಿ ತನಿಖೆಗೆ ಕಟ್ಟುನಿಟ್ಟಿನ ಕ್ರಮ : ದಯಾನಂದ

ಬೆಂಗಳೂರು, ಅ. 10-ಸೈಬರ್ ಕ್ರೈಂ ಪ್ರಕರಣಗಳ ತನಿಖೆ ಮತ್ತು ಸಾಮಥ್ರ್ಯ ವೃದ್ಧಿಗೆ ಆದ್ಯತೆ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಬರ್ ಕ್ರೈಂ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಪೊಲೀಸರು ಮತ್ತು ಸರ್ಕಾರ ಈ ವಿಷಯವಾಗಿ ಸಾಕಷ್ಟು ಜಾಗೃತಿ ಮೂಡಿಸಿದೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಾವು ಕಾಲಮಿತಿಯ ತನಿಖೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಹೇಳಿದರು.

ಈಗಿರುವ ಕಾನೂನಿನ ಪ್ರಕಾರ 60 ರಿಂದ 90 ದಿನಗಳವರೆಗೆ ಸೈಬರ್ ಕ್ರೈಂ ಪ್ರಕರಣಗಳ ತನಿಖೆ ಪೂರ್ಣಗೊಳ್ಳಬೇಕು. ಒಂದು ವೇಳೆ ವಿಳಂಬವಾದರೆ ಎಸಿಪಿ, ಡಿಸಿಪಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಇದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇನ್ನು ಮುಂದೆ ಕಾಲಮಿತಿ ತನಿಖೆಯನ್ನು ಕಡ್ಡಾಯಗೊಳಿಸಿದ್ದೇವೆ.

ವಿಳಂಬವಾದರೆ ಸಕಾರಣಗಳೊಂದಿಗೆ ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಸೂಚಿಸಿದರು. ಸೈಬರ್ ಕ್ರೈಂ ಪ್ರಕರಣಗಳಲ್ಲಿ ತಡವಾಗಿ ಪ್ರತಿಕ್ರಿಯಿಸಲಾಗುತ್ತಿದೆ ಎಂಬ ಆಕ್ಷೇಪಗಳಿವೆ. ಇದನ್ನು ಸರಿಪಡಿಸಲು ಪ್ರತಿ ಠಾಣೆಯ ಸಿಬ್ಬಂದಿಗಳಿಗೆ ಸೈಬರ್ ಕ್ರೈಂ ಮತ್ತು ಸಿಐಡಿ ಸೈಬರ್ ಕ್ರೈಂ ಘಟಕದಿಂದ ಅಗತ್ಯ ತರಬೇತಿ ಕೊಡಿಸಿ ಸಾಮಥ್ರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ಆಧಾರ್ ಸಂಖ್ಯೆಯಲ್ಲಿ ಬಯೊಮೆಟ್ರಿಕ್ ಆಧಾರಿತ ಪಾವತಿ ಲಭ್ಯತೆ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಆಧಾರ್ ವೆಬ್‍ಸೈಟ್‍ಗೆ ಹೋಗಿ ಬಯೊಮೆಟ್ರಿಕ್ ಸಂಪರ್ಕಿತ ಪಾವತಿ ವ್ಯವಸ್ಥೆಯನ್ನು ಅಗೋಚರವಾಗಿಟ್ಟುಕೊಳ್ಳಲು ಅವಕಾಶವಿದೆ. ಅಗತ್ಯವಿಲ್ಲದ ಹೊರತು ಈ ಸೆಟ್ಟಿಂಗ್ ಅನ್ನು ಬಳಸಿಕೊಳ್ಳಬೇಕು ಎಂದು ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿ ದರು.

ಸೈಬರ್ ಕ್ರೈಂ ನಡೆದ ಒಂದು ಗಂಟೆ ಒಳಗಿನ ಸಮಯ ವನ್ನು ಗೋಲ್ಡನ್ ಹವರ್ ಎಂದು ಕರೆಯುತ್ತೇವೆ. ಈ ಕಾಲಮಿತಿಯಲ್ಲಿ ರಾಷ್ಟ್ರವ್ಯಾಪಿ ಇರುವ 1930 ಸಹಾಯವಾಣಿಗೆ ಮಾಹಿತಿ ನೀಡಿದರೆ ವಂಚನೆ ಮಾಡಿ ಹಣ ಲಪಟಾಯಿಸಿದ ಖಾತೆಯನ್ನು ಜಪ್ತಿ ಮಾಡಲು ಮತ್ತು ಹಣವನ್ನು ವಾಪಸ್ ಕೊಡಿಸಲು ಸಾಧ್ಯತೆಗಳು ಹೆಚ್ಚಿರುತ್ತವೆ.

ಈ ಮೊದಲು ಅಂತರಾಷ್ಟ್ರೀಯ ಮಟ್ಟದ ವಂಚನೆ ಪ್ರಕರಣದಲ್ಲಿ 854 ಕೋಟಿ ರೂ.ಗಳ ಹಗರಣವನ್ನು ಪತ್ತೆ ಹಚ್ಚಲಾಗಿತ್ತು. ಅದರಲ್ಲಿ 5,903 ಪ್ರಕರಣಗಳಿದ್ದವು. ಈ ವರ್ಷದ 9 ತಿಂಗಳಲ್ಲಿ 18 ಸ್ವರೂಪದ 12,615 ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 470 ಕೋಟಿ ರೂ.ಗಳ ವಂಚನೆಯಾಗಿದೆ. ತನಿಖಾಧಿಕಾರಿಗಳು 201 ಕೋಟಿ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಈವರೆಗೂ ದೂರುದಾರರಿಗೆ 27 ಕೋಟಿ ರೂ.ಗಳನ್ನು ವಾಪಸ್ ನೀಡಲಾಗಿದೆ. ಉಳಿದಂತೆ ಪ್ರಕರಣಗಳ ಆಧಾರಿತವಾಗಿ ನ್ಯಾಯಾಲಯದಿಂದ ಆದೇಶ ಪಡೆದು ಹಣವನ್ನು ಫಲಾನುಭವಿಗಳಿಗೆ ಹಿಂದಿರುಗಿಸಲಾಗುವುದು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಪಸ್ವರ ; ಸ್ಥಳೀಯ ನಾಯಕರಿಗೆ ಹೈ ಎಚ್ಚರಿಕೆ

ಉದ್ಯೋಗದ ಭರವಸೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಲೈಕ್ ಮಾಡಿಸುವುದು, ಕೊರಿಯರ್‍ನಲ್ಲಿ ಮಾದಕ ವಸ್ತುಗಳು ಬಂದಿವೆ ಎಂದು ಬೆದರಿಸುವುದು, ಅನಾಮಿಕವಾದಂತಹ ಲಿಂಕ್‍ಗಳನ್ನು ಕ್ಲಿಕ್ ಮಾಡುವುದು, ಒಟಿಪಿ ಹಂಚಿಕೊಳ್ಳುವುದು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಆರೋಪಿಗಳು ಸೈಬರ್ ಅಪರಾಧಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಹೆಚ್ಚುತ್ತಿದೆ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸೈಬರ್ ಕ್ರೈಂನ ವ್ಯಾಪ್ತಿ ವಿಸ್ತಾರಗೊಂಡಿದೆ. ಕಾಲಕಾಲಕ್ಕೆ ಪಾತಾಳ ಗರಡಿ ಹಾಗೂ ಇತರ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದೇವೆ ಎಂದರು.

ಶತಕ ಸಿಡಿಸಿ ವಿಶಿಷ್ಟ ದಾಖಲೆ ಬರೆದ ಡೇವಿಡ್ ಮಲಾನ್

ಧರ್ಮಶಾಲಾ,ಅ.10- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‍ನ ಆರಂಭಿಕ ಆಟಗಾರ ಡೇವಿಡ್ ಮಲಾನ್ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ 8ನೇ ಆಟಗಾರನಾಗಿ ಹೊರಹೊಮ್ಮಿದ ಮಲಾನ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 6ನೇ ಏಕದಿನ ಶತಕ ಕೂಡ ಪೂರೈಸಿದರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಲಾನ್, 91 ಎಸೆತಗಳಲ್ಲೇ 12 ಮನಮೋಹಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿ ಮೂರಂಕಿ ದಾಟುವ ಮೂಲಕ ಭಾರತದಲ್ಲಿ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಶತಕ ಬಾರಿಸಿದ 3ನೇ ಇಂಗ್ಲೆಂಡ್ ಆಟಗಾರ ಎಂಬ ದಾಖಲೆಯನ್ನು ಮಲಾನ್ ನಿರ್ಮಿಸಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

1987ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಗ್ರಾಹಂ ಗೂಚ್ 115 ರನ್ ಗಳಿಸಿದ್ದರೆ, 2011ರ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಆ್ಯಂಡ್ರೂ ಸ್ಟ್ರಾಸ್ ಸಿಡಿಲಬ್ಬರದ 158 ರನ್ ಗಳಿಸಿದ್ದರು.

ಒಡಿಐ ವಿಶ್ವಕಪ್‍ನಲ್ಲಿ ಶತಕ ಸಿಡಿಸಿದ ಆರಂಭಿಕ ಆಟಗಾರರು:

ಡಿ.ಎಲ್.ಅಮೀಸ್- 137 ರನ್- 1875

  • ಗ್ರಾಹಂ ಗೂಚ್- 115 ರನ್- 1987
  • ಆಂಡ್ರ್ಯೂ ಸ್ಟ್ರಾಸ್- 158 ರನ್- 2011
  • ಮೊಹಿನ್ ಅಲಿ- 128 ರನ್- 2015
  • ಜೇಸನ್ ರಾಯ್- 153 ರನ್- 2019
  • ಜೋ ರೂಟ್- 100- 2019
  • ಜಾನಿ ಬೈರೆಸ್ಟೋವ್- 111 ಹಾಗೂ 116 ರನ್- 2019
  • ಡೇವಿಡ್ ಮಾಲನ್- 140 ರನ್- 2023

ಮಳೆ ನಡುವೆಯೇ ಅಂಬಾರಿ ತಾಲೀಮು

ಮೈಸೂರು,,ಅ.10- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಈ ಬಾರಿ ಅಂಬಾರಿ ಹೊರಲಿರುವ ಆನೆಗಳ ತಾಲೀಮು ಭರದಿಂದ ಸಾಗಿದ್ದು, ಮಳೆಯ ನಡುವೆಯೂ ಕ್ಯಾಪ್ಟನ್ ಅಭಿಮನ್ಯು ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದೆ.

ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ನಗರದ ವಿವಿಧೆಡೆ ತಾಲೀಮುಗಾಗಿ ಅರ್ಚಕರಾದ ಪ್ರಹ್ಲಾದ್‍ರಾವ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ವರುಣನ ಸಿಂಚನವಾಗಿದ್ದು, ಇದೊಂದು ಶುಭ ಸಂಕೇತವೆಂದು ಮಳೆಯ ನಡುವೆಯೇ ಗಜಪಡೆ ತಾಲೀಮು ನಡೆಸಿದವು.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಅಭಿಮನ್ಯುವಿನ ಬಲ ಹಾಗೂ ಎಡ ಭಾಗದಲ್ಲಿ ಹೆಣ್ಣು ಆನೆಗಳು ಸಾಥ್ ನೀಡಿದರೆ ಹಿಂದೆ ಹನ್ನೊಂದು ಆನೆಗಳು ಹೆಜ್ಜೆ ಹಾಕುತ್ತಾ ನಗರದ ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪಕ್ಕೆ ಯಶಸ್ವಿಯಾಗಿ ತಲುಪಿದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಮಾವುತರು ಸಹ ಆನೆಗಳೊಂದಿಗೆ ಸಾಗಿದರು.

ಬಿಗ್‍ಬಾಸ್‍ನಿಂದ ಹೊರಬಂದು ಪ್ರದೀಪ್ ಈಶ್ವರ್ ಹೇಳಿದ್ದೇನು..?

ಬೆಂಗಳೂರು,ಅ.10-ಬಿಗ್‍ಬಾಸ್‍ಗೆ ನಾನು ಸ್ರ್ಪಧಿಯಾಗಿ ಹೋಗಿರಲಿಲ್ಲ. ಖಾಸಗಿ ಚಾನೆಲ್‍ನ ಸ್ನೇಹಿತರು ಆಹ್ವಾನಿಸಿದ್ದಕ್ಕಾಗಿ ಎರಡು ಮೂರು ಗಂಟೆ ಭಾಗವಹಿಸಿದ್ದೆ. ಆದರೆ ನಾನೇ ಸ್ರ್ಪಧಿ ಎಂದು ಉದ್ದೇಶಪೂರ್ವಕವಾಗಿಯೇ ಫ್ರಾಂಕ್ ಮಾಡಲಾಗಿತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಮಾಜಿ ಸಚಿವ ಡಾ. ಸುಧಾಕರ್ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಶಾಸಕರು ಬಿಗ್‍ಬಾಸ್‍ಗೆ ಹೋಗಿದ್ದರಿಂದಾಗಿ ನಗೆಪಾಟಲಿನ ವಾತಾವರಣ ನಿರ್ಮಾಣವಾಗಿದೆ ಎಂದು ಟೀಕೆ ಮಾಡಿದರು. ಇದಕ್ಕೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, ಈ ಹಿಂದೆ ಚಿಕ್ಕಬಳ್ಳಾಪುರ ಉತ್ಸವ ಮಾಡಿ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಿದ್ದ ಸುಧಾಕರ್‌ರವರು  ಸೋಲು ಕಂಡಿದ್ದಾರೆ. ಈಗ ನಾನು ಬಿಗ್‍ಬಾಸ್‍ಗೆ ಹೋಗಿದ್ದಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಕನಿಷ್ಠ ಸರಿಯಾಗಿ ವಿಮರ್ಶೆ ಮಾಡಲು ಅವರಿಗೆ ಬರುತ್ತಿಲ್ಲ ಎಂದರು.

ಟೀಕೆ ಮಾಡುವುದು ವಿರೋಧಪಕ್ಷದವರ ಹಕ್ಕು. ಒಂದು ವೇಳೆ ನಾನೇ ಸುಧಾಕರ್ ಅವರ ಸ್ಥಾನದಲ್ಲಿದ್ದರೆ ಆಟವೇ ಬೇರೆಯಾಗಿರುತ್ತಿತ್ತು. ನನ್ನ ಪ್ರಕಾರ ಸುಧಾಕರ್ ಅವರು ಬೆಳಿಗ್ಗೆಯಿಂದ ಸಂಜೆವರೆಗೂ ಚಾನಲ್‍ನಲ್ಲೇ ಕುಳಿತುಕೊಂಡಿರಬೇಕಿತ್ತು. ಬಿಗ್‍ಬಾಸ್‍ಗೆ ಹೋಗಿರುವುದು ನಗೆಪಾಟಲು ಎಂದಿದ್ದಾರೆ. ಅದೊಂದು ದೊಡ್ಡ ವೇದಿಕೆ. ಕೋಟ್ಯಂತರ ಜನ ನೋಡುತ್ತಾರೆ. ನಾನು ಯುವಜನರಿಗೆ ಒಂದಷ್ಟು ಸಕಾರಾತ್ಮಕ ಸಂದೇಶಗಳನ್ನು ನೀಡಬೇಕಿತ್ತು. ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಬಿಗ್‍ಬಾಸ್ ಕೂಡ ದೊಡ್ಡ ವೇದಿಕೆಯಾದ್ದರಿಂದ ಅದರಲ್ಲಿ ಭಾಗವಹಿಸಿದ್ದೆ ಎಂದರು.

ಪುರಾತನ ದೇವರ ವಿಗ್ರಹ ಕದ್ದಿದ್ದ ಕಳ್ಳನ ಬಂಧನ

ಶೋ ನಡೆಸುವ ಖಾಸಗಿ ಚಾನಲ್‍ನಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರ ಮನವಿ ಮೇರೆಗೆ ಸೌಜನ್ಯದಿಂದ ನಾನು ಬಿಗ್‍ಬಾಸ್‍ಗೆ ಹೋಗಿದ್ದೆ. ಬೆಳಿಗ್ಗೆಯಿಂದ ಕ್ಷೇತ್ರದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ್ದೆ. ಸಂಜೆ ಬೆಂಗಳೂರಿಗೆ ಬಂದು 8.30 ರ ವೇಳೆಗೆ ಶೋಗೆ ಹೋದೆ. 11.30 ರ ವೇಳೆಗೆ ವಾಪಸ್ ಬಂದೆ. ಚಾನಲ್‍ನವರು ಮಾರುಕಟ್ಟೆ ದೃಷ್ಟಿಯಿಂದ ನನ್ನನ್ನು ಸ್ರ್ಪಧಿ ಎಂದು ಫ್ರಾಂಕ್ ಮಾಡುವುದಾಗಿ ಹೇಳಿದರು. ಅನುಕೂಲವಾಗುವುದಾದರೆ ಆಗಲಿ ಎಂದು ನಾನು ಸುಮ್ಮನಿದ್ದೆ ಎಂದು ಹೇಳಿದರು.

ನಾನು ಬಿಗ್‍ಬಾಸ್‍ಗೆ ಅತಿಥಿಯಾಗಿ ಹೋಗಿದ್ದೇನೆ ಹೊರತು ಸ್ರ್ಪಧಿಯಲ್ಲ. ಅಲ್ಲಿರುವ ಸ್ರ್ಪಧಿಗಳು 100 ದಿನ ಮನೆಯವರಿಂದ ದೂರ ಇರುತ್ತಾರೆ. ಅವರನ್ನು ಪ್ರೇರೇಪಿಸುವ ಸಂದೇಶ ನೀಡುವುದು ನನ್ನ ಉದ್ದೇಶವಾಗಿತ್ತು. ನಾನು ಬಿಗ್‍ಬಾಸ್‍ಗೆ ಹೋಗಿದ್ದು ಏಕೆ ಎಂದು ಮಾಜಿ ಶಾಸಕರಿಗೆ ಅರ್ಥವಾಗಿಲ್ಲ. ಹೋಗಲಿ ಅವರು ಅಂದುಕೊಂಡತೆಯಾದರೂ ಸರಿಯಾಗಿ ಟೀಕೆ ಮಾಡಿಲ್ಲ. ಇನ್ನು ಕೆಲವು ಸಂಘಟನೆಗಳು ನನ್ನ ವಿರುದ್ಧ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಇದು ಅವರ ಅಸ್ತಿತ್ವದ ಪ್ರಶ್ನೆ. ನನ್ನ ಆಕ್ಷೇಪವೇನಿಲ್ಲ. ಟೀಕೆಗಳನ್ನು ಎದುರಿಸಲು ಸಿದ್ಧವಾಗಿಯೇ ರಾಜಕಾರಣಕ್ಕೆ ಬಂದಿದ್ದೇನೆ. ಇಂತವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಬಿಗ್‍ಬಾಸ್‍ಗೆ ತೆರಳುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದೆ. ಪ್ರತಿಯೊಂದಕ್ಕೂ ಸರ್ಕಾರದ ಅನುಮತಿ ಕೇಳುವ ಅಗತ್ಯವಿಲ್ಲ. ನಮಗೂ ವೈಯಕ್ತಿಕ ಸ್ವಾತಂತ್ರವಿದೆ. ಕ್ಷೇತ್ರ ಬಿಟ್ಟು ಬಿಗ್‍ಬಾಸ್‍ನಲ್ಲಿ ಕುಳಿತುಕೊಳ್ಳಬೇಕೇ, ಬೇಡವೇ ಎಂಬುದರ ಅರಿವಿದೆ ಎಂದು ಹೇಳಿದರು.

ವಿದ್ಯುತ್ ಸಮಸ್ಯೆ ಕುರಿತು ಶ್ವೇತಪತ್ರಕ್ಕೆ ಹೆಚ್‍ಡಿಕೆ ಆಗ್ರಹ

ಬೆಂಗಳೂರು, ಅ.10- ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ.

ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ರಾಜ್ಯಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಆಗ್ರಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ. ಶೀಘ್ರವೇ 6ನೇ ಗ್ಯಾರಂಟಿ ಕೊಡಲು ಸಿದ್ಧತೆ ನಡೆಸಿದೆ. ಅದರ ಹೆಸರು ಕತ್ತಲೆಭಾಗ್ಯ ಎಂದು ಅವರು ಟೀಕಿಸಿದ್ದಾರೆ.

ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ. ಇದು ಸತ್ಯ ಎಂದಿದ್ದಾರೆ. ಕಾವೇರಿ ಬಗ್ಗೆ ಸರ್ಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು ಪ್ರದರ್ಶಿಸಿದೆ.

ಸರ್ಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು ಎಂದು ವಾಗ್ದಾಳಿ ನಡೆಸಿದ್ದಾರೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ನೀರು ಹರಿಸಲಾಗದೇ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್‍ವೆಲ್‍ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಅವರು ಆರೋಪಿಸಿದ್ದಾರೆ. ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್‍ಉತ್ಪಾದನೆಯಲ್ಲಿ ಕೊರತೆಯಾಗಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ.

ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯ ಎಂದು ಟೀಕಿಸಿದ್ದಾರೆ. ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರ್ಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರ್ಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರ್ಕಾರ.ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರ್ಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟ ಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ ಎಂದು ಟೀಕಿಸಿದ್ದಾರೆ.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ, ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರ್ಕಾರದ್ದು. ಆ ಕಾರಣಕ್ಕಾಗಿಯೇ ಸರ್ಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ.ಆದರೆ, ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ. ಬೇಡ ಎಂದವರು ಯಾರು? ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರ್ಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ ಆರೇಳು ತಿಂಗಳಿಂದ ಬಾಕಿ ಹಣ ನೀಡಿಲ್ಲ ಎನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ ಎಂದು ವ್ಯಂಗ್ಯವಾಡಿದ್ದಾರೆ.

ಇದು ಹೌದು ಎಂದಾದರೆ, ರಾಜ್ಯದ ಭವಿಷ್ಯದ ಗತಿ ಏನು? ಕೃಷಿ, ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರ್ಕಾರದ ಉತ್ತರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಕೃತಕ ಕತ್ತಲು ಸೃಷ್ಟಿಸಿ ಕಬ್ಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಪಸ್ವರ ; ಸ್ಥಳೀಯ ನಾಯಕರಿಗೆ ಹೈ ಎಚ್ಚರಿಕೆ

ಬೆಂಗಳೂರು,ಅ.10- ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಪಸ್ವರ ಎತ್ತುತ್ತಿರುವ ನಾಯಕರ ಬಾಯಿಗೆ ಬೀಗ ಹಾಕಲು ಮುಂದಾಗಿರುವ ರಾಷ್ಟ್ರೀಯ ನಾಯಕರು ಪಕ್ಷದ ತೀರ್ಮಾನವನ್ನು ಪ್ರತಿಯೊಬ್ಬರೂ ಗೌರವಿಸದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ಕೊಟ್ಟಿದೆ. ರಾಷ್ಟ್ರ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಇಷ್ಟವಿಲ್ಲದಿದ್ದರೂ ಕೆಲವು ರಾಜಕೀಯ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಏನೇ ಅಪಸ್ವರ, ಟೀಕೆಗಳು ಇದ್ದರೂ ಹೈಕಮಾಂಡ್ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದೆ. ಸಂಸದರಾದ ಬಿ.ಎನ್.ಬಚ್ಚೇಗೌಡ, ಡಿ.ವಿ.ಸದಾನಂದಗೌಡ, ಶಾಸಕರಾದ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರಾದ ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹೈಕಮಾಂಡ್ ಈ ಸಂದೇಶ ಮಹತ್ವ ಪಡೆದುಕೊಂಡಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ನಮಗೆ ಒಂದೊಂದು ಕ್ಷೇತ್ರವೂ ಕೂಡ ಅತಿ ಮುಖ್ಯವಾಗಿರುತ್ತದೆ. ಕಾಂಗ್ರೆಸ್ ತನ್ನ ವೈಮನಸ್ಸು ಮರೆತು ಬಿಟ್ಟು ಹೋಗಿದ್ದ ಪಕ್ಷಗಳನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುತ್ತಿದೆ. ಅಲ್ಲಿ ಸಣ್ಣ ಅಪಸ್ವರವೂ ಇಲ್ಲದಿರುವಾಗ ಇಲ್ಲಿ ಇಷ್ಟು ದೊಡ್ಡ ವಿರೋಧವೇಕೆ ಎಂದು ದೆಹಲಿ ನಾಯಕರು ಪ್ರಶ್ನಿಸಿದ್ದಾರೆ.

ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೆ ಕೆಸಿಆರ್ ಅಧಿಕಾರಕ್ಕೆ : ಕೆಟಿಆರ್ ವಿಶ್ವಾಸ

ಮಹಾರಾಷ್ಟ್ರದಲ್ಲಿ ಶಿವಸೇನೆ ವಿರುದ್ಧ ಕಾಂಗ್ರೆಸ್ ಎನ್‍ಸಿಪಿ ಅನೇಕ ದಶಕಗಳಿಂದ ಹೋರಾಟ ಮಾಡಿಕೊಂಡೇ ಬಂದಿತ್ತು. ಉಗ್ರ ಹಿಂದುತ್ವದ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯನ್ನು ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಅನೇಕರು ಟೀಕೆ ಮಾಡಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅದೇ ಶಿವಸೇನೆ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಹಾಗೂ ಎನ್‍ಸಿಪಿ ಜೊತೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿತು. ಅಲ್ಲಿನ ಯಾವುದಾದರೂ ಸ್ಥಳೀಯ ನಾಯಕರು ಅಪಸ್ವರ ತೆಗೆದರೆ ಎಂದು ರಾಜ್ಯ ನಾಯಕರಿಗೆ ಪ್ರಶ್ನಿಸಿದೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೆಳಹಂತದ ಕಾರ್ಯಕರ್ತರು ಒಪ್ಪಿಕೊಳ್ಳುತ್ತಿಲ್ಲ ಎಂದು ನಮ್ಮ ಗಮನಕ್ಕೂ ಬಂದಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ಪ್ರವರ್ಧಮಾನಕ್ಕೆ ಬರುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಂತೇ ಲೋಕಸಭೆ ಚುನಾವಣೆಯಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾದರೆ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೂ ಅಚ್ಚರಿ ಪಡಬೇಕಾಗಿಲ್ಲ. ಇದೀಗ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಿರಂದ ಕನಿಷ್ಟ ಪಕ್ಷ ನಮಗೆ 18 ರಿಂದ 20 ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಬಾರದು, ಜೊತೆಗೆ ಬಹಿರಂಗ ಹೇಳಿಕೆ ನೀಡಬಾರದು ಎಂದು ನಿರ್ಬಂಧ ಹಾಕಿದೆ.

ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಮೈತ್ರಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ಮರ್ಮವನ್ನು ಮೊದಲು ತಿಳಿದುಕೊಳ್ಳಿ. ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಬಹುತೇಕ ಖಚಿತ.

ಶಾಸಕ ಶಿವರಾಂ ಹೆಬ್ಬಾರ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮಾಜಿ ಸಚಿವರಾದ ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಕಾಂಗ್ರೆಸ್ ಕದ ತಟ್ಟಿದ್ದಾರೆ. ಇವರ ಹೇಳಿಕೆಗೆ ಹೆಚ್ಚಿನ ಗಮನ ಕೊಡಬೇಡಿ. ಶೀಘ್ರದಲ್ಲೇ ಎರಡು ಪಕ್ಷಗಳ ವತಿಯಿಂದ ಬೃಹತ್ ಸಮಾವೇಶವನ್ನು ನಡೆಸಲಾಗುವುದು. ಪಕ್ಷವಿರೋಧಿ ಹೇಳಿಕೆ ಕೊಟ್ಟರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾಷ್ಟ್ರೀಯ ನಾಯಕರು ಎಚ್ಚರಿಕೆ ಕೊಟ್ಟಿದ್ದಾರೆ.

ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!

ಕರ್ನಾಟಕದ ವಾಸ್ತವ ಸ್ಥಿತಿ ಏನೆಂಬುದನ್ನು ತಿಳಿದೇ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿ-ಜೆಡಿಎಸ್ ಬೆಂಬಲಕ್ಕೆ ನಿಂತಿರುವ ಪ್ರಬಲ ಎರಡು ಸಮುದಾಯಗಳು ಕೈ ಹಿಡಿದರೆ ಫಲಿತಾಂಶ ಏನು ಬೇಕಾದರೂ ಆಗಬಹುದು. ಕೆಳಹಂತದ ನಾಯಕರನ್ನು ಮನವೊಲಿಸಬೇಕು. ಮಾಧ್ಯಮಗಳ ಮುಂದೆ ಅತಿಯಾದ ಹೇಳಿಕೆ ಕೊಡಬೇಕಾದ ಅಗತ್ಯವಿಲ್ಲ ಎಂದು ರಾಷ್ಟ್ರೀಯ ನಾಯಕರು ಕಟ್ಟಪ್ಪಣೆ ವಿಸಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

ನವದೆಹಲಿ,ಅ.10- ಇದೇ 14 ರಂದು ಗುಜರಾತ್‍ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹಿಂದೆಂದೂ ಕಾಣದ ಅಭೂತಪೂರ್ವ ಭದ್ರತೆಯನ್ನು ಒದಗಿಸಲಾಗಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರೀಡಾಂಗಣ ಸುತ್ತಮುತ್ತ ಏಳು ಸುತ್ತಿನ ಸರ್ಪಗಾವಲಿನ ಭದ್ರತೆಯನ್ನು ಒದಗಿಸಲಾಗಿದೆ.

ಸುಮಾರು 11 ಸಾವಿರ ಎನ್‍ಎಸ್‍ಜಿ ಕ್ಷಿಪ್ರ ಕಾರ್ಯಾಪಡೆ, ಗೃಹರಕ್ಷಕ ದಳ, ಗುಜರಾತ್ ಪೊಲೀಸರು ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ಕಳೆದ 20 ವರ್ಷಗಳಿಂದ ಅಹಮ್ಮದಾಬಾದ್ ನಗರದಲ್ಲಿ ಒಂದೇ ಒಂದು ಸಣ್ಣ ಕೋಮುಗಲಭೆ ಸಂಭವಿಸಿಲ್ಲ. ಅದೇ ರೀತಿ ಇದೇ 14 ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ನಾವು ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಜಿ.ಎಸ್.ಮಲ್ಲಿಕ್ ಹೇಳಿದ್ದಾರೆ.

ಪ್ರತಿ ಕ್ಷಣವೂ ಅಲರ್ಟ್ ಆಗಿರುತ್ತಿದ್ದ ಇಸ್ರೇಲ್ ಎಡವಿದ್ದೆಲ್ಲಿ..?, ಮೊಸಾದ್ ವಿಫಲವಾಗಿದ್ದೇಕೆ..?

ಪಂದ್ಯ ವೀಕ್ಷಿಸಲು ಅಂದಾಜು ಒಂದು ಲಕ್ಷ ಪ್ರೇಕ್ಷಕರು ಆಗಮಿಸುವ ಸಾಧ್ಯತೆ ಇದೆ. ನಮಗೆ ನಿಖರವಾಗಿ ಬೆದರಿಕೆ ಕರೆ ಬಂದಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಪಂದ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಗುಜರಾತ್ ಪೊಲೀಸ್ ಮೀಸಲು ಪಡೆಯ 13 ಕಂಪನಿಗಳ ಜೊತೆಗೆ ಕ್ಷಿಪ್ರ ಕಾರ್ಯಾಪಡೆ ಕಾರ್ಯ ನಿರ್ವಹಿಸಲಿದೆ. ಬೆದರಿಕೆ ಕರೆಯಿಂದ ಕೆಲವು ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗುವ ಸಂಭವವಿದೆ. ಹೀಗಾಗಿ ನಾವು ಇದಕ್ಕಾಗಿಯೇ ವಿಶೇಷ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜನೆ ಮಾಡಿದ್ದೇವೆ. ಒಂದೇ ಒಂದು ಸಣ್ಣ ಅಹಿತಕರ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಿದ್ಧರಾಗಿದ್ದೇವೆ ಎಂದಿದ್ದಾರೆ.

ನಗರ ಇಲ್ಲವೇ ಕ್ರೀಡಾಂಗಣದ ಅಕ್ಕಪಕ್ಕ ಶಂಕಿತ ಉಗ್ರರು ರಾಸಾಯನಿಕ ವಿಕರಣಗಳನ್ನು ಚೆಲ್ಲಿ ಸ್ಪೋಟಿಸುವ ಬೆದರಿಕೆಯೊಡ್ಡಿದ್ದಾರೆ. ಇದಕ್ಕಾಗಿ ನಾವು ನುರಿತ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ತಂಡವನ್ನು ನಿಯೋಜನೆ ಮಾಡಿದ್ದೇವೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ ನುರಿತ ಶ್ವಾನಗಳು ಸೇರಿದಂತೆ ಹಲವು ಶ್ರೇಣಿಯ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ

ಗ್ಯಾಂಗ್‍ಸ್ಟಾರ್ ಲಾರೆನ್ಸ್ ಬಿಶ್ಣೋಯ್ ಅವರನ್ನು ಬಿಡುಗಡೆ ಮಾಡಬೇಕೆಂದು ವಿದೇಶದಿಂದ ಬೆದರಿಕೆ ಕರೆಯೊಂದು ಕೆಲದಿನಗಳ ಹಿಂದೆ ಬಂದಿತ್ತು. 500 ಕೋಟಿ ರೂ. ನಗದು ನೀಡುವಂತೆ ಬೇಡಿಕೆ ಇಡಲಾಗಿದೆ. ಈ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಸಣ್ಣದೊಂದು ಅಹಿತಕರ ಘಟನೆ ಉಂಟಾಗದಂತೆ ಗುಜರಾತ್ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.