Monday, April 20, 2026
Homeರಾಜಕೀಯಫೈರ್ ಬ್ರಾಂಡ್ ಅನಂತಕುಮಾರ್‌ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ..?!

ಫೈರ್ ಬ್ರಾಂಡ್ ಅನಂತಕುಮಾರ್‌ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ..?!

Fire brand Ananthkumar Hegde returns to active politics..?!

ಬೆಂಗಳೂರು,ಮಾ.3- ಉಗ್ರ ಹಿಂದೂತ್ವದ ಮೂಲಕವೇ ರಾಜ್ಯಾದ್ಯಂತ ಮನೆಮಾತಾಗಿರುವ ಕೇಂದ್ರದ ಮಾಜಿ ಸಚಿವ ಹಾಗೂ ಉತ್ತರಕನ್ನಡ ಜಿಲ್ಲೆಯ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಬಗ್ಗೆ ಮತ್ತೆ ಸಕ್ರೀಯ ರಾಜಕರಾಣಕ್ಕೆ ಮರಳುವ ಮೂಲಕ ತಮ ಎರಡನೇ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ತಾವು ರಾಜಕೀಯಕ್ಕೆ ಬರುವ ಬಗ್ಗೆ ಇಲ್ಲವೇ ದೂರ ಇರುವ ಬಗ್ಗೆಯೂ ಅವರು ಎಲ್ಲಿಯೂ ಬಾಯಿ ಬಿಡದೆ ಮೌನಕ್ಕೆ ಶರಣಾಗಿದ್ದಾರೆ.

ಪಕ್ಷದಲ್ಲಿ ಹಿಂದೂತ್ವ ಪ್ರತಿಪಾದನೆ ಮಾಡುವ ಒಂದು ವರ್ಗ ಅನಂತುಮಾರ್‌ರವರು ಸಕ್ರೀಯ ರಾಜಕಾರಣಕ್ಕೆ ಬರಬೇಕು ಎಂದು ಬಯಸಿದರೆ, ಮತ್ತೊಂದು ವರ್ಗ ಆಂತರಿಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆಯೇ ವಿನಾಃ ಬಹಿರಂಗವಾಗಿ ಏನನ್ನೂ ಹೇಳದೆ ದೆಹಲಿಯತ್ತ ಕೈ ತೋರಿಸುತ್ತಿದೆ.

ಈ ಸುದ್ದಿ ಚಾಲ್ತಿಯಲ್ಲಿರುವಾಗಲೇ ಅನಂತಕುಮಾರ್‌ ಹೆಗಡೆ ಅವರು ಭಟ್ಕಳ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಅಭಿಮಾನಿಗಳು, ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮಸ್ಸಿಗೆ ಕಾರಣವಾಗಿದೆ.

1993ರಲ್ಲಿ ಭಟ್ಕಳದಲ್ಲಿ ಹೋರಾಟ ಮಾಡಿದ್ದ ಅನಂತಕುಮಾರ್‌ಹೆಗಡೆ ಅವರು ಅಲ್ಲಿಂದಲೇ ಹೆಚ್ಚು ಹೆಸರುವಾಸಿಯಾಗಿದ್ದರು. ಬಳಿಕ 1994ರ ಆ.15ರಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮೂಲಕ ಜನಪ್ರಿಯರಾಗಿದ್ದರು. ಅವರನ್ನು ಇದು ಮುಂದೆ ಆರು ಬಾರಿ ಸಂಸದ, ಒಂದು ಬಾರಿ ಕೇಂದ್ರ ಸಚಿವ ಸ್ಥಾನದವರೆಗೂ ಏರಲು ಕಾರಣವಾಗಿತ್ತು. 35 ವರ್ಷಗಳ ಹಿಂದೆ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಭಾಷಣ ಮಾಡಿದ ಜಾಗದಲ್ಲೇ ಅವರು ಮಾ.8ರಂದು ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಅನಂತಕುಮಾರ್‌ ಹೆಗಡೆ ಆಗಮಿಸುತ್ತಿರುವುದು ಖಚಿತಗೊಂಡ ಬಳಿಕ ಇದೊಂದು ದೊಡ್ಡ ಕಾರ್ಯಕ್ರಮವಾಗಿ ಸಾವಿರಾರು ಜನರು ಸೇರುವ ಸಾಧ್ಯತೆ ಇದೆ. ಈ ಕಾರ್ಯಕ್ರಮವೇ ಮತ್ತೊಮೆ ಅವರ ರಾಜಕೀಯ ಸಕ್ರಿಯತೆಗೆ ಕಾರಣವಾಗಲಿದೆಯೇ? ಎಂಬ ಕುತೂಹಲ ಉಂಟಾಗಿದೆ.

ಮಾರ್ಚ್‌ 8ರ ಅನಂತಕುಮಾರ ಹೆಗಡೆ ಅವರ ದಿಕ್ಸೂಚಿ ಭಾಷಣದತ್ತ ಎಲ್ಲರ ಚಿತ್ತ ಇದೆ. ಅಂದು ಸಂಜೆ 5 ಗಂಟೆಗೆ ಭಟ್ಕಳ ಹಳೇ ಬಸ್‌‍ ನಿಲ್ದಾಣದ ಬಳಿಯ ಆಟೋ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ನಗರ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ವಹಿಸುತ್ತಾರೆ. ಅನಂತಕುಮಾರ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಅನಂತಕುಮಾರ್‌ಹೆಗಡೆ ಅವರು 2024ರ ಲೋಕಸಭೆ ಚುನಾವಣೆ ನಂತರ ಮತ್ತೆ ರಾಜಕೀಯ ಕ್ಷೇತ್ರದಿಂದ ದೂರ ಉಳಿದಿದ್ದರು. ತಮ ಕದಂಬ ಸಂಸ್ಥೆಗೆ ಸಂಬಂಧಿಸಿದ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈಗಲೂ ಅವರು ಎಲ್ಲಿಯೂ ತಾನು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಹೇಳಿಲ್ಲ.

RELATED ARTICLES

Latest News