Thursday, April 16, 2026
Homeರಾಷ್ಟ್ರೀಯಒಗ್ಗಟ್ಟಾದರೆ 2028ರಲ್ಲಿ ಬಿಜೆಪಿ ಗತವೈಭವ ಮರುಕಳಿಸಲಿದೆ : ವಿಜಯೇಂದ್ರ

ಒಗ್ಗಟ್ಟಾದರೆ 2028ರಲ್ಲಿ ಬಿಜೆಪಿ ಗತವೈಭವ ಮರುಕಳಿಸಲಿದೆ : ವಿಜಯೇಂದ್ರ

If we unite, BJP will repeat its past glory in 2028: Vijayendra

ಬೆಂಗಳೂರು,ಫೆ.19- ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿದರೆ 2028ಕ್ಕೆ ಬಿಜೆಪಿ ಗತವೈಭವ ಮರುಕಳಿಸಲಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ನಗರದ ಅರಮನೆ ಮೈದಾನದ ಗಾಯತ್ರೀ ಗ್ರ್ಯಾಂಡ್‌ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಜನಾಕ್ರೋಶವಿದ್ದು, ನಾವು ಒಟ್ಟಾಗಿ ಈ ಸರ್ಕಾರಕ್ಕೆ ಚಳಿ ಬಿಡಿಸಿದ್ದೇವೆ, ಮುಂದಿನ ಆರೇಳು ತಿಂಗಳು ಚುನಾವಣಾ ಪರ್ವ ಸರಣಿ ಆರಂಭವಾಗಲಿದೆ. ಚುನಾವಣೆಗಳಲ್ಲಿ ಒಂದಾಗಿ ಒಂದು ದನಿಯಾಗಿ ಕೆಲಸ ಮಾಡೋಣ. 2028 ಕ್ಕೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಗತ ವೈಭವ ಮರುಕಳಿಸಬೇಕಾದರೆ ಕಾರ್ಯಕರ್ತರು ಒಗ್ಗಟ್ಟಾಗಬೇಕೆಂದು ಕಿವಿಮಾತು ಹೇಳಿದರು.

ರಾಜ್ಯದ ಜನರು ಈ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಎಲ್ಲಾ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. 2 ಲಕ್ಷ 85 ಸಾವಿರ ಉದ್ಯೋಗಗಳು ಖಾಲಿ ಇದ್ದರೂ, ನೇಮಕಾತಿ ಮಾಡಿಲ್ಲ. ಜನ ವಿರೋಧಿ, ಬಡವರ ವಿರೋಧಿ, ಮಹಿಳೆಯರ ವಿರೋಧ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಪರಿಸ್ಥಿತಿ ಬಂದಿದೆ. ಅನುದಾನ ಕೊಡಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಶಾಸಕರನ್ನು ವಿದೇಶಕ್ಕೆ ಕಳುಹಿಸಿಕೊಟ್ಟು ಸಮಾಧಾನ ಮಾಡುತ್ತ್ತಿದ್ದಾರೆ. ಇದೆಲ್ಲದರ ನಡುವೆ ನಮ ಮೇಲೆ ಜವಾಬ್ದಾರಿ ಹೆಚ್ಚಿದೆ. ಜನರು ನಮನ್ನು ನೋಡುತ್ತಿದ್ದು, ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಿದ್ದೇವೆ ಎಂದರು.

ಈ ಸರ್ಕಾರದಿಂದ ಸಮುದಾಯಗಳಿಗೆ ನ್ಯಾಯ ಕೊಡಲು ಆಗಿಲ್ಲ. ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಿಗಮಗಳಿಗೆ ಅನುದಾನ ನೀಡಿದ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದಿದೆ. ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳನ್ನು ಕಾಂಗ್ರೆಸ್‌‍ ಕೇವಲ ಓಟ್‌ ಬ್ಯಾಂಕ್‌ ಮಾಡಿಕೊಂಡಿದೆ. ಹಿಂದುಳಿದ ಸಮಾಜಗಳ ನಿಗಮ ಮಂಡಳಿಗಳಿಗೆ ಕನಿಷ್ಠ 3 ಸಾವಿರ ಕೋಟಿ ಬಜೆಟ್‌ನಲ್ಲಿ ಘೋಷಿಸಲಿ ಎಂದು ಸವಾಲು ಹಾಕಿದರು.

ಇದು ಜನ ವಿರೋಧಿ, ರೈತ ವಿರೋಧಿ, ಮಹಿಳಾ ವಿರೋಧಿ, ಯುವ ವಿರೋಧಿ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್‌‍ ಅರಾಜಕತೆ ಸೃಷ್ಟಿಸುತ್ತಿದೆ. ಕೇಂದ್ರದ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕಾಲಹರಣ ಮಾಡುತ್ತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತನ್ನ ಹಳೆ ಚಾಳಿಯನ್ನೇ ಮುಂದುವರಿಸಿರುವ ಕಾಂಗ್ರೆಸ್‌‍ ಬರೀ ಮೂರು ರಾಜ್ಯಗಳಲ್ಲಿ ಮಾತ್ರ ಉಸಿರಾಡುತ್ತಿದೆ. ತೆಲಂಗಾಣ, ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಸಿದ್ದರಾಮಯ್ಯ ಬಂದ ಮೇಲೆ ಅಭಿವೃದ್ಧಿ ನಿಂತಿದೆ. ಪ್ರತಿಪಕ್ಷವಾಗಿ ನಾವು ಜನರ ಧ್ವನಿಯಾಗಿ ಕೆಲಸ ಮಾಡಬೇಕೆಂದು ಕರೆ ಕೊಟ್ಟರು.

ಕಾಂಗ್ರೆಸ್‌‍ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಲೇ ಇದೆ. ಕಾರವಾರದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದರೂ ಸರ್ಕಾರ ಪರಿಹಾರ ಕೊಡುವ ಕೆಲಸ ಮಾಡಿಲ್ಲ. ಅದೇ ರೀತಿ ಕೊಪ್ಪಳದಲ್ಲಿ ದಲಿತ ಯುವಕನ ಹತ್ಯೆಯಾಗಿದೆ. ಸ್ವತಃ ಸಿಎಂ ತವರು ಜಿಲ್ಲೆಯಲ್ಲೇ ಡ್ರಗ್‌್ಸಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.

ವಾಲೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದು ನಮ ಹೋರಾಟದಿಂದಲೇ. ಮುಡಾ ಹಗರಣದಲ್ಲಿ ನಾವು ಮೈಸೂರು ಪಾದಯಾತ್ರೆ ನಡೆಸಿದ ಪರಿಣಾಮ 14 ನಿವೇಶನ ಗಳನ್ನು ಸಿಎಂ ವಾಪಸ್ಸುನೀಡಿದರು. ಇದು ನಮ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದರು.

RELATED ARTICLES

Latest News