Friday, May 3, 2024
Homeರಾಜ್ಯರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಅಜ್ಞಾತ ಸ್ಥಳದಲ್ಲಿ ನಾಲ್ವರ ವಿಚಾರಣೆ

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ : ಅಜ್ಞಾತ ಸ್ಥಳದಲ್ಲಿ ನಾಲ್ವರ ವಿಚಾರಣೆ

ಬೆಂಗಳೂರು,ಮಾ.2- ಸಿಲಿಕಾನ್ ಸಿಟಿಯ ಜನರನ್ನು ಬೆಚ್ಚಿ ಬೀಳಿಸಿದ್ದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಹೋಟೆಲ್ ಹಾಗೂ ಅಕ್ಕಪಕ್ಕದ ರಸ್ತೆಯಲ್ಲಿರುವ ಸಿಸಿಟಿವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅದರಲ್ಲಿ ಸೆರೆಯಾಗಿದ್ದ ಶಂಕಿತ ಆರೋಪಿಯ ಫೋಟೋ ಆಧಾರದ ಮೇಲೆ ಆತನನ್ನೇ ಹೋಲುವ ನಾಲ್ವರನ್ನು ತಡರಾತ್ರಿಯೇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಸ್ಥಳದಲ್ಲಿ ದೊರೆತ ಸಿಸಿಟಿವಿ ಟವರ್ ಲೊಕೇಶನ್ ಹಾಗೂ ಪೊಲೀಸರ ಶಂಕೆ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

ಕೇರಳ, ತಮಿಳು ನಾಡಿನಲ್ಲಿ ಶೋಧ : ಘಟನೆ ಸಂಭವಿಸುತ್ತಿದ್ದಂತೆ ಆರೋಪಿಗಳ ಪತ್ತೆಗಾಗಿ 10 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ಹೋಗಿ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ರಾಮೇಶ್ವರಂ ಕೆಫೆಯ ಪ್ರಮುಖ ಬ್ರಾಂಚ್ ತಮಿಳುನಾಡಿನಲ್ಲಿದ್ದು, ಅಲ್ಲಿಯೂ ಆಡಳಿತ ಮಂಡಳಿಯ ಕೆಲ ಸಿಬ್ಬಂದಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಈ ಹಿಂದೆ ನಗರದಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನೂ ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಬ್ದುಲ್ ಕಲಾಂ ಅವರ ಸ್ಪೂರ್ತಿಯಿಂದ ರಾಮೇಶ್ವರಂ ಕೆಫೆಯನ್ನು ತೆರೆಯಲಾಗಿದ್ದು, ಭಾರತದಾದ್ಯಂತ ಬ್ರಾಂಚ್‍ಗಳನ್ನು ಹೊಂದಿದೆ. ಈ ರಾಮೇಶ್ವರಂ ಕೆಫೆ ದೇಗುಲದ ಮಾದರಿಯಲ್ಲಿ ನಿರ್ಮಾಣವಾಗಿದೆ. ನಗರದಲ್ಲೂ ಹಲವು ಬ್ರಾಂಚ್‍ಗಳಿದ್ದು, ಈ ಕೆಫೆ ಜನಸಾಮಾನ್ಯರ ಹಾಗೂ ಐಟಿಬಿಟಿ ಉದ್ಯೋಗಿಗಳ ಫೇವರಿಟ್ ಸ್ಪಾಟ್ ಎಂದೇ ಹೇಳಲಾಗುತ್ತದೆ.

ಈ ಕೆಫೆಗೆ ನಿನ್ನೆ ಮಧ್ಯಾಹ್ನ ಊಟದ ಸಮಯಕ್ಕೆ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ಗಮನದಲ್ಲಿಟ್ಟುಕೊಂಡು ಆರೋಪಿಯು ಬಹಳ ಚಾಣಾಕ್ಷತೆಯಿಂದ ಹೋಟೆಲ್ ಒಳಗೆ ಪ್ರವೇಶಿಸಿ ಬ್ಯಾಗ್ ಇಟ್ಟು ಹೋದ 1 ಗಂಟೆಯ ಅಂತರದಲ್ಲಿ ಬ್ಯಾಗ್ ಸ್ಪೋಟಗೊಂಡ ಪರಿಣಾಮ ಮಹಿಳೆ ಸೇರಿದಂತೆ 9 ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

RELATED ARTICLES

Latest News