Saturday, April 11, 2026
Homeಕ್ರೀಡಾ ಸುದ್ದಿಆರ್‌ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟವರ ನೆನಪಿನಲ್ಲಿ 11 ಸೀಟುಗಳು ಮೀಸಲು

ಆರ್‌ಸಿಬಿ ವಿಜಯೋತ್ಸವದಲ್ಲಿ ಮೃತಪಟ್ಟವರ ನೆನಪಿನಲ್ಲಿ 11 ಸೀಟುಗಳು ಮೀಸಲು

11 Reserved Seats, Memorial Plaque - RCB, KSCA To Honour Bengaluru Stampede Victims

ಬೆಂಗಳೂರು, ಮಾ. 24- ಆರ್‌ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ 11 ಮಂದಿಯನ್ನು ಸ್ಮರಿಸುವ ಸಲುವಾಗಿ ತಂಡವು ಆಡುವ ಪ್ರತಿಯೊಂದು ಪಂದ್ಯದಲ್ಲೂ 11 ಸೀಟುಗಳನ್ನು ಮೀಸಲಿಡುವ ಮೂಲಕ ಗೌರವ ಸೂಚಿಸಲಾಗುವುದು ಎಂದು ಕೆಎಸ್‌ಸಿಎ ಅಽಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಜೂನ್‌ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಿಂದ ಸಾವನ್ನಪ್ಪಿದ 11 ಮಂದಿಗೆ ಗೌರವ ಸಲ್ಲಿಸುವ ಅಂಗವಾಗಿ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದ ವೇಳೆ ಒಂದು ನಿಮಿಷ ವೌನಚರಣೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನು ಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌, ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ನ ಪ್ರತಿಯೊಂದು ಪಂದ್ಯದ ವೇಳೆಯೂ 11 ಸೀಟುಗಳನ್ನು ಮಾರಾಟ ಮಾಡದೆ ವಿಜಯೋತ್ಸವದ ವೇಳೆ ಮೃತಪಟ್ಟ 11 ಮಂದಿ ಹೆಸರಿನಲ್ಲಿ ಮೀಸಲಿಡಲಾಗುವುದಲ್ಲದೆ, ಮುಖ್ಯದ್ವಾರದ ಬಳಿ ಅಳವಡಿಸುವ ಬೋರ್ಡ್‌ ನಲ್ಲಿ ಮೃತರ ಹೆಸರನ್ನು ನಮೂದಿಸಲಾಗುವುದು ಎಂದು ಕೆಎಸ್‌ಸಿಎ ಅಽಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಆರ್‌ ಸಿಬಿ ತಂಡದ ಆಟಗಾರರು ಅಭ್ಯಾಸ ನಡೆಸುವ ವೇಳೆ 11 ನಂಬರಿನ ಜೆರ್ಸಿ ಧರಿಸಿ ಮೃತಪಟ್ಟ ಆರ್‌ ಸಿಬಿ ತಂಡದ ಅಭಿಮಾನಿಗಳಿಗೆ ಗೌರವ ಸಲ್ಲಿಸಲಾಗುವುದು ಎಂದು ಆರ್‌ ಸಿಬಿ ತಂಡ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ.

ಮಾರ್ಚ್‌ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ 2016ರ ಚಾಂಪಿಯನ್‌ ಸನ್‌ ರೈಸರ್ನ್‌ ಹೈದ್ರಾಬಾದ್‌ ನಡುವೆ ನಡೆಯುವ ಪಂದ್ಯದ ಮೂಲಕ 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದೆ.

RELATED ARTICLES

Latest News