Homeಕ್ರೀಡಾ ಸುದ್ದಿಭಾರತದಲ್ಲಿ ಆಡಲು ಒಪ್ಪದಿದ್ದರೆ ಬಾಂಗ್ಲಾ ಟಿ20 ವಿಶ್ವಕಪ್‌ನಿಂದ ಔಟ್‌

ಭಾರತದಲ್ಲಿ ಆಡಲು ಒಪ್ಪದಿದ್ದರೆ ಬಾಂಗ್ಲಾ ಟಿ20 ವಿಶ್ವಕಪ್‌ನಿಂದ ಔಟ್‌

Bangladesh out of T20 World Cup if they don't agree to play in India

ನವದೆಹಲಿ, ಜ19- ಭಾರತ ದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ದೇಶದ ತಂಡ ಆಡಲೇಬೇಕು ಇಲ್ಲದಿದ್ದರೆ ನಿಮ ಸ್ಥಾನದಲ್ಲಿ ಕೆಳ ಶ್ರೇಯಾಂಕದ ತಂಡವನ್ನು ಆಡಿಸಬೇಕಾಗುತ್ತದೆ ಎಂದು ಐಸಿಸಿ ಎಚ್ಚರಿಸಿದೆ.

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು ಭಾರತದಲ್ಲಿ ಆಡು ವಂತೆ ಅಥವಾ ಟಿ20 ವಿಶ್ವಕಪ್‌ನಲ್ಲಿ ಕೆಳ ಶ್ರೇಯಾಂಕದ ತಂಡದಿಂದ ಬದಲಾಯಿಸಲ್ಪಡುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಎಚ್ಚರಿಸಿದೆ.

ಜ. 21 ರವರೆಗೆ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಬಾಂಗ್ಲಾದೇಶಕ್ಕೆ ಸಮಯ ನೀಡಿದೆ, ಅದರ ನಂತರ ಜಾಗತಿಕ ಕ್ರಿಕೆಟ್‌ ಸಂಸ್ಥೆ ಬಾಂಗ್ಲಾದೇಶವನ್ನು ಬದಲಿಸಲು ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶವು ಭಾರತದಲ್ಲಿ ಆಡುವುದನ್ನು ತಪ್ಪಿಸಲು ಟಿ20 ವಿಶ್ವಕಪ್‌ನಲ್ಲಿ ತಮ್ಮ ಗುಂಪನ್ನು ಬದಲಾಯಿಸುವಂತೆ ಜಾಗತಿಕ ಸಂಸ್ಥೆಯನ್ನು ಒತ್ತಾಯಿಸುವ ಒಂದು ಆಮೂಲಾಗ್ರ ಕಲ್ಪನೆಯನ್ನು ಪ್ರಸ್ತಾಪಿಸಿದ ಒಂದು ದಿನದ ನಂತರ ಐಸಿಸಿಯಿಂದ ಅಂತಿಮ ಎಚ್ಚರಿಕೆ ಬಂದಿದೆ.

ಟಿ20 ವಿಶ್ವಕಪ್‌ ಫೆ. 7 ರಿಂದ ಮಾ. 8 ರವರೆಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ. ಭಾರತದಲ್ಲಿ ತಮ್ಮ ಲೀಗ್‌ ಹಂತದ ನಾಲ್ಕು ಪಂದ್ಯಗಳನ್ನು (ಮೂರು ಕೋಲ್ಕತ್ತಾದಲ್ಲಿ, ಒಂದು ಮುಂಬೈನಲ್ಲಿ) ಆಡಲಿರುವ ಬಾಂಗ್ಲಾದೇಶ, ಭಾರತದಲ್ಲಿನ ತಮ್ಮ ಆಟಗಾರರು ಮತ್ತು ಅಭಿಮಾನಿಗಳಿಗೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಯನ್ನು ವಿನಂತಿಸಿತ್ತು.

RELATED ARTICLES

Latest News