Tuesday, April 14, 2026
Homeಕ್ರೀಡಾ ಸುದ್ದಿಉಸೇನ್‌ ಬೋಲ್ಟ್ ದಾಖಲೆ ಮುರಿದ 18ರ ಪೋರ

ಉಸೇನ್‌ ಬೋಲ್ಟ್ ದಾಖಲೆ ಮುರಿದ 18ರ ಪೋರ

Gout Gout breaks national record and wins 200m final

ಸಿಡ್ನಿ, ಏ. 12- ಆಸ್ಟ್ರೇಲಿಯನ್‌ ಅಥ್ಲೆಟಿಕ್ಸ್ 200 ಮೀಟರ್‌ ಓಟದ ಗುರಿಯನ್ನು ಕೇವಲ 19.67 ಸೆಕೆಂಡ್‌ನಲ್ಲೇ ಪೂರ್ಣಗೊಳಿಸಿದ ಗೌಟ್‌ ಗೌಟ್‌, ಟ್ರ್ಯಾಕ್‌ ವೀರ ಉಸೇನ್‌ ಬೋಲ್ಟ್ ಅವರ ಮಹತ್ತರ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಉಸೇನ್‌ ಬೋಲ್ಟ್ ಅವರು ತಮಗೆ 23 ವರ್ಷ ತುಂಬುವ ಮುನ್ನವೇ ಉಸೇನ್‌ ಬೋಲ್ಟ್ ಅವರು 200 ಮೀಟರ್‌ ಓಟವನ್ನು 19.93 ಸೆಕೆಂಡ್‌ ನಲ್ಲೇ ಕ್ರಮಿಸಿದ್ದರು. ಈ ವಿಶ್ವ ದಾಖಲೆಯನ್ನು ಈಗ ಗೌಟ್‌ ಗೌಟ್‌ ಮುರಿದಿದ್ದು, ಈ ಸಾಧನೆ ಮಾಡಿದ ಮೊದಲ ಆಸ್ಟ್ರೇಲಿಯಾ ಅಥ್ಲೆಟಿಕ್‌ ಎಂಬ ದಾಖಲೆಗೂ ಭಾಜನರಾಗಿದ್ದಾರೆ.

ಕಳೆದ ವರ್ಷ ನಡೆದಿದ್ದ ಚಾಂಪಿಯನ್‌ ಶಿಪ್‌ ನಲ್ಲಿ ಗೌಟ್‌ ಗೌಟ್‌ ಅವರು 200 ಮೀಟರ್‌ ಓಟವನ್ನು 20.02 ಸೆಕೆಂಡ್‌ ಗಳಲ್ಲಿ ಪೂರ್ಣಗೊಳಿಸಿದ್ದಾಗಲೇ ಉಸೇನ್‌ ಬೋಲ್ಟ್ ಅವರ ದಾಖಲೆಯತ್ತ ಗುರಿ ಇಟ್ಟಿದ್ದರು. ಅವರ ಕನಸು ಈಗ ನೆರವೇರಿದೆ.

ಇಂದು ನಡೆದ ಆಸ್ಟ್ರೇಲಿಯನ್‌ ಅಥ್ಲೆಟಿಕ್ಸ್ 200 ಮೀಟರ್‌ ಓಟದ ಫೈನಲ್‌ ಸ್ಪರ್ಧಿಯಲ್ಲಿ ಅಡಿನಂ ಮಾರ್ಫಿ (19.88) ಹಾಗೂ ಕ್ಯಾಲನ್‌ ಲಾ (20.21) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಅಲಂಕರಿಸಿದ್ದಾರೆ.

RELATED ARTICLES

Latest News