ನಗೋಯಾ, ಸೆ.30- ಏಷ್ಯನ್ ಗೇಮ್ಸೌನ ಆರ್ಚರಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಚಿನ್ನದ ಪದಕ ಗೆದ್ದು, ವಿಶ್ವ ದಾಖಲೆಯನ್ನೂ ಸರಿಗಟ್ಟಿದೆ. ಜ್ಯೋತಿ ಸುರೇಖಾ ವೆನ್ನಂ, ಚಿಕಿಥಾ ತನಿಪರ್ತಿ ಹಾಗೂ ಪೃಥಿಕಾ ಪ್ರದೀಪ್ ಒಳಗೊಂಡ ಭಾರತ ತಂಡ ಫೈನಲ್ನಲ್ಲಿ ಚೀನಾವನ್ನು 238-234 ಅಂಕಗಳಿಂದ ಮಣಿಸಿ ಅಗ್ರಸ್ಥಾನಕ್ಕೇರಿತು.
ಆರಂಭದಿಂದಲೇ ಪ್ರಭುತ್ವ ಸಾಧಿಸಿದ ಭಾರತೀಯರು ಚೀನಾದ ವುನಿಯರ್, ಯುಯೆ ವಾಂಗ್ ಹಾಗೂ ಫಾಂಗ್ಯಾವೊ ವೇಯ್ ಅವರ ತಂಡವನ್ನು ಮೀರಿಸಿದರು. ಈ ಮೂಲಕ ಸತತ ಎರಡನೇ ಏಷ್ಯನ್ ಗೇಮ್ಸೌನಲ್ಲಿ ಮಹಿಳಾ ಕಾಂಪೌಂಡ್ ತಂಡದ ಚಿನ್ನದ ಪದಕವನ್ನು ಭಾರತ ಉಳಿಸಿಕೊಂಡಿತು.
ಭಾರತ ತಂಡ ಗಳಿಸಿದ 238 ಅಂಕಗಳು ಕೊರಿಯಾ ಹೆಸರಿನಲ್ಲಿದ್ದ ವಿಶ್ವ ದಾಖಲೆಯ ಅಂಕಗಳಿಗೆ ಸಮನಾಗಿವೆ.ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಭಾರತ ದಕ್ಷಿಣ ಕೊರಿಯಾವನ್ನು 234-233 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಕಂಚಿನ ಪದಕದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಚೈನೀಸ್ ತೈಪೆಯನ್ನು ಮಣಿಸಿ ಕಂಚು ಗೆದ್ದಿತು.
