Homeರಾಜ್ಯನೀತಿ ಸಂಹಿತೆ ಜಾರಿ ಹಿನ್ನೆಲೆ : ಕಾರಿನಲ್ಲಿ ದಾಖಲೆ ಇಲ್ಲದೆ 2.30 ಲಕ್ಷ ಹಣ ಜಪ್ತಿ

ನೀತಿ ಸಂಹಿತೆ ಜಾರಿ ಹಿನ್ನೆಲೆ : ಕಾರಿನಲ್ಲಿ ದಾಖಲೆ ಇಲ್ಲದೆ 2.30 ಲಕ್ಷ ಹಣ ಜಪ್ತಿ

2.30 lakhs seized in car without documents

ಹುಬ್ಬಳ್ಳಿ,ಮಾ.25- ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.30 ಲಕ್ಷ ಹಣವನ್ನು ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

ಇಂದು ಬೆಳಿಗ್ಗೆ ಕಾರಿನಲ್ಲಿ 2.30 ಲಕ್ಷ ಹಣವನ್ನು ತೆಗೆದುಕೊಂಡು ಬಾಗಲಕೋಟೆ ಜಿಲ್ಲೆ ಇಳಕಲ್‌ ತಾಲ್ಲೂಕಿನ ಗುಗ್ಗಲಮರಿ ಚೆಕ್‌ಪೋಸ್ಟ್‌ ಬಳಿ ಈ ಕಾರು ಬಂದಿದೆ.ಆ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರ ಎಂ.ಎಚ್‌.ಕೋತ್ವಾಲ ಅವರ ನೇತೃತ್ವದ ಎಫ್‌.ಎಸ್‌‍.ಟಿ ತಂಡ ಕಾರನ್ನು ತಪಾಸಣೆ ನಡೆಸಿದಾಗ ಹಣ ಕಂಡುಬಂದಿದೆ. ಹಣದ ಬಗ್ಗೆ ಮಾಹಿತಿ ಮತ್ತು ದಾಖಲೆ ಕೇಳಿದಾಗ ಯಾವುದೇ ಸೂಕ್ತ ದಾಖಲೆ ಸಲ್ಲಿಸದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ.

RELATED ARTICLES

Latest News