ಪಟಿಯಾಲಾ, ಮಾ.25- ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದಂತೆ ಪರಾರಿಯಾಗಿದ್ದ ಆಮ್ ಆದಿ ಪಕ್ಷದ ಶಾಸಕ ಹರ್ಮೀತ್ ಸಿಂಗ್ ಪಠಾಣಜ್ರಾ ಅವರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಲಾಗಿದೆ.
ಪಂಜಾಬ್ ಸನೌರ್ ಕ್ಷೇತ್ರದ ಮೊದಲ ಬಾರಿಗೆ ಶಾಸಕರಾಗಿದ್ದ ಪಠಾಣಜ್ರಾ ಅವರನ್ನು ಅತ್ಯಾತಾರ ಪ್ರಕರಣದಲ್ಲಿ ಗ್ವಾಲಿಯರ್‌ನಲ್ಲಿ ಬಂಧಿಸಿ ಪಟಿಯಾಲಾಕ್ಕೆ ಕರೆತರಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ವರುಣ್ ಶರ್ಮಾ ತಿಳಿಸಿದ್ದಾರೆ.
ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.ಕಳೆದ 2025ರ ಸೆ.1ರಂದು ಪಟಿಯಾಲಾದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪಠಾಣಜ್ರಾ ವಿರುದ್ಧ ಅತ್ಯಾಚಾರ, ಮೋಸ ಮತ್ತು ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಜಿರಾಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು. ಆಕೆ, ಪಠಾಣಜ್ರಾ ತಾನು ವಿಚ್ಛೇದಿತನೆಂದು ತಪ್ಪು ಮಾಹಿತಿ ನೀಡಿ ತನ್ನೊಂದಿಗೆ ಸಂಬಂಧ ಬೆಳೆಸಿ, ಈಗಾಗಲೇ ವಿವಾಹಿತನಾಗಿದ್ದರೂ 2021ರಲ್ಲಿ ತನ್ನೊಂದಿಗೆ ಮದುವೆಯಾಗಿದ್ದನೆಂದು ಆರೋಪಿಸಿದ್ದಾಳೆ.
ಅಲ್ಲದೆ, ನಿರಂತರ ಲೈಂಗಿಕ ಶೋಷಣೆ, ಬೆದರಿಕೆ ಹಾಗೂ ಅಶ್ಲೀಲ ವಿಷಯಗಳನ್ನು ಕಳುಹಿಸಿದ್ದನೆಂದು ಕೂಡ ದೂರಿನಲ್ಲಿ ಹೇಳಲಾಗಿದೆ.ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಕಾರಣ, ಪಠಾಣ್ಮಜ್ರಾ ಅವರನ್ನು ಪ್ರಕಟಿತ ಅಪರಾಧಿ ಎಂದು ಘೋಷಿಸಲಾಗಿತ್ತು. ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು.
ಸೆಪ್ಟೆಂಬರ್ 2ರಿಂದ ಅವರು ಪರಾರಿಯಾಗಿದ್ದರು. ಹರಿಯಾಣದ ಕರ್ಣಾಲ್ ಜಿಲ್ಲೆಯಲ್ಲಿ ಬಂಧಿಸಲು ಹೋದಾಗ ಅವರು ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದರು.ಆ ವೇಳೆ ಅವರ ಬೆಂಬಲಿಗರು ಗುಂಡಿನ ದಾಳಿ ನಡೆಸಿ ಕಲ್ಲು ತೂರಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ ಪಠ್ಮಾಜ್ರಾ ಈ ಆರೋಪವನ್ನು ನಿರಾಕರಿಸಿ, ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಬಹುದು ಎಂಬ ಭಯದಿಂದ ಪರಾರಿಯಾದೆ ಎಂದು ಹೇಳಿಕೊಂಡಿದ್ದರು.
