Tuesday, April 14, 2026
Homeರಾಜ್ಯಮಳೆಗಾಲಕ್ಕೂ ಮುನ್ನ ಪೈಪ್‌ಲೈನ್‌ ಗ್ಯಾಸ್‌‍ ಕಾಮಗಾರಿ ಪೂರ್ಣಗೊಳಿಸಾಲು ಸೂಚನೆ

ಮಳೆಗಾಲಕ್ಕೂ ಮುನ್ನ ಪೈಪ್‌ಲೈನ್‌ ಗ್ಯಾಸ್‌‍ ಕಾಮಗಾರಿ ಪೂರ್ಣಗೊಳಿಸಾಲು ಸೂಚನೆ

Instructions to complete pipeline gas work before the monsoon

ಬೆಂಗಳೂರು,ಮಾ.25- ಮಳೆಗಾಲವನ್ನು ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ನಡೆದ ಮಹತ್ವದ ಸಭೆಯಲ್ಲಿ, ಮಳೆಗಾಲ ಮುನ್ನ ಗೇಲ್‌ ಗ್ಯಾಸ್‌‍ ಕಾಮಗಾರಿ ಪೂರ್ಣಗೊಳಿಸಿ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ರಾಜೇಂದ್ರ.ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮಳೆಗಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಮನ್ವಯದಿಂದ ಕಾರ್ಯ ನಿರ್ವಹಿಸುವುದು ಅತ್ಯವಶ್ಯಕ ಎಂದು ಆಯುಕ್ತರು ತಿಳಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೇಲ್‌ ಹಾಗೂ ಗೇಲ್‌ ಗ್ಯಾಸ್‌‍ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗಳು, ರಸ್ತೆ ತೋಡು ಕೆಲಸಗಳು ಮತ್ತು ಇತರೆ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಚರ್ಚೆ ನಡೆಯಿತು. ಮಳೆಗಾಲದ ವೇಳೆ ಯಾವುದೇ ಅನಾಹುತ ಉಂಟಾಗದಂತೆ ಎಲ್ಲಾ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.

ವಿಭಾಗ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಭಿಯಂತರರು ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಡ್ರೆನೇಜ್‌ ವ್ಯವಸ್ಥೆ ಸರಿಯಾಗಿರಲು, ಮುಚ್ಚಿದ ಕೊಳವೆಗಳು ಮತ್ತು ಕಾಲುವೆಗಳ ಸ್ವಚ್ಛತೆ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ಅಭಿಯಂತರರಾದ ಸ್ವಯಂಪ್ರಭ, ವಿಶ್ವನಾಥ್‌ ಸೇರಿದಂತೆ ಅಧಿಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

RELATED ARTICLES

Latest News