Homeರಾಜ್ಯತುಮಕೂರು-ಬೆಂಗಳೂರು ನಡುವೆ 10 ಏಸಿ ಬಸ್‌‍ ಸೇವೆಗೆ ಸಿಎಂ ಚಾಲನೆ

ತುಮಕೂರು-ಬೆಂಗಳೂರು ನಡುವೆ 10 ಏಸಿ ಬಸ್‌‍ ಸೇವೆಗೆ ಸಿಎಂ ಚಾಲನೆ

CM launches 10 AC bus services between Tumkur-Bengaluru

ತುಮಕೂರು,ಮೇ 20- ತುಮಕೂರು ಮತ್ತು ಬೆಂಗಳೂರು ನಡುವೆ ಪ್ರತಿನಿತ್ಯ ಸಂಚರಿಸಲಿರುವ 10 ನೂತನ ಏಸಿ ಬಸ್‌‍ಗಳ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್‌, ಸಚಿವ ಕೆ.ಜೆ. ಜಾರ್ಜ, ಕೆಎಸ್‌‍ಆರ್‌ಟಿಸಿ ನಿಗಮ ಮಂಡಳಿ ಉಪಾಧ್ಯಕ್ಷ ನಿಖಿತ್‌ ರಾಜ್‌ ಮೌರ್ಯ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು .

ತುಮಕೂರು-ಬೆಂಗಳೂರು ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ, ಆರಾಮದಾಯಕ ಹಾಗೂ ವೇಗದ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಏಸಿ ಬಸ್‌‍ ಸೇವೆಯನ್ನು ಆರಂಭಿಸಲಾಗಿದೆ.

ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಚಿಕಿತ್ಸಾ ಅಗತ್ಯಕ್ಕಾಗಿ ಪ್ರತಿದಿನ ಬೆಂಗಳೂರು ತೆರಳುವ ಜನರಿಗೆ ಈ ಸೇವೆ ಹೆಚ್ಚಿನ ಅನುಕೂಲ ಒದಗಿಸಿದಂತಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌‍ಆರ್‌ಟಿಸಿ ನಿಗಮ ಮಂಡಳಿ ಉಪಾಧ್ಯಕ್ಷ ನಿಖಿತ್‌ ರಾಜ್‌ ಮೌರ್ಯ, ನಾನು ಹುಟ್ಟಿದ ಊರಿನ ಜನರಿಗೆ ನನ್ನ ಕೈಲಾದ ಪುಟ್ಟ ಸೇವೆಯನ್ನು ಒದಗಿಸಿದ ತೃಪ್ತಿಯ ಭಾವ ನನ್ನದು. ತುಮಕೂರುಬೆಂಗಳೂರು ನಡುವೆ ನಿತ್ಯ ಸಂಚರಿಸುವ ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

RELATED ARTICLES

Latest News