ಹಾಸನ,ನ. 11- ಕಳೆದ ಹನ್ನೊಂದು ದಿನಗಳಿಂದ ಭಕ್ತರಿಗೆ ದರ್ಶನ ನೀಡಿದ್ದ ಶಕ್ತಿದೇವತೆ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಶಾಸ್ರೋಕ್ತವಾಗಿ ಮುಚ್ಚಲಾಗಿದ್ದು ದೇವಿ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕಿದೆ.
ಇಂದು ಬೆಳಗ್ಗೆ 6 ಗಂಟೆಯವರೆಗೂ ಸಾರ್ವಜನಿಕರು ನಿರಂತರ ದರ್ಶನ ಪಡೆದರು. 12 ಗಂಟೆಯ ನಂತರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೈವೇದ್ಯವಿಟ್ಟು ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು.ಜಾತ್ರಾಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಯ ಕೆಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ:ಈ ಭಾರಿ ಹಾಸನಾಂಬ ಜಾತ್ರಾಮಹೋತ್ಸವ ವಿಶೇಷವಾಗಿ ಹೊಸ ಇತಿಹಾಸ ಬರೆದಿದೆ. ಸಾರ್ವಜನಿಕ ದರ್ಶನವಾದ ಅ. 30 ರಿಂದ ಇಂದು ಬೆಳಗ್ಗೆವರೆಗೂ 30 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದು ಪುನೀತರಾಗಿದ್ದಾರೆ. 25 ಕೋಟಿ ರೂ. ಆದಾಯ: 1000 ರೂ. ಹಾಗೂ 300 ರೂ. ನ ವಿಶೇಷ ದರ್ಶನ ಹಾಗೂ ಲಾಡು ಪ್ರಸಾದ ಮಾರಾಟದಿಂದ 25.36 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಕಳೆದ 11 ದಿನಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಸಹ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ತಾಳ್ಮೆಯಿಂದ ಸರದಿ ಸಾಲಿನಲ್ಲಿ ನಿಂತು ಶಕ್ತಿದೇವತೆಯನ್ನು ಕಣ್ತುಂಬಿ ಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ , ಪೊಲೀಸ್ ,ಕಂದಾಯ. ಸೇರಿದಂತೆ ವಿವಿಧ ಇಲಾಖೆಯ ಅ ಕಾರಿಗಳು, ಸಿಬ್ಬಂದಿಗಳು, ದೇವಾಲಯದ ಅರ್ಚಕರು, ಸ್ವಯಂ ಸೇವಕರು ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ಈ ಭಾರಿಯ ಹಾಸನಾಂಬ ದೇವಿಯ ಜಾತ್ರಾಮಹೋತ್ಸವನ್ನು ಯಶಸ್ವಿಗೊಳಿಸಿದ್ದಾರೆ.
