Homeರಾಜ್ಯಬಯಸಿದಂತೆ ಕನಸು ನನಸಾಗುತ್ತಿದೆ : ಡಿಕೆಶಿ ಆಪ್ತ ಶಾಸಕ ಇಕ್ಬಾಲ್‌ ಹುಸೇನ್‌

ಬಯಸಿದಂತೆ ಕನಸು ನನಸಾಗುತ್ತಿದೆ : ಡಿಕೆಶಿ ಆಪ್ತ ಶಾಸಕ ಇಕ್ಬಾಲ್‌ ಹುಸೇನ್‌

Dreams are coming true as desired: DK Shivakumar's close MLA Iqbal Hussain

ಬೆಂಗಳೂರು, ಮೇ 27- ಬಯಸಿದಂತೆ ಕನಸು ನನಸಾಗುತ್ತಿದೆ. ಭಗವಂತನಿಗೆ ಕೋಟಿ ಕೋಟಿ ನಮಸ್ಕಾರ ಎಂದು ಡಿ.ಕೆ.ಶಿವಕುಮಾರ್‌ ಅವರ ಆಪ್ತ ರಾಮನಗರದ ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯಾಗಬೇಕೆಂದು ನಾವು ಬಯಸುತ್ತಿದ್ದೆವು. ಕೊನೆಗೂ ಹೈಕಮಾಂಡ್‌ ತೆರೆ ಎಳೆದಿದೆ ಎಂದರು.
ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ನನ್ನಂತೆ
ಸಾವಿರಾರು ಕಾರ್ಯಕರ್ತರು, ನಾಯಕರು ಬಯಸಿದ್ದರು. ನಾನು ಧ್ವನಿಯೆತ್ತಿ ಮಾತನಾಡಿದ್ದೆ.

ಅದಕ್ಕೆ ಕೆಪಿಸಿಸಿಯಿಂದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರು ನೋಟಿಸ್‌‍ ನೀಡಿದ್ದರು. ನಾನು ಉತ್ತರ ನೀಡಿದ್ದೆ. ಅಧ್ಯಕ್ಷರಾಗಿ ಅವರು ತಮ ಕೆಲಸ ಮಾಡಿದ್ದರು, ನಾನು ಶಿಸ್ತು ಪಾಲನೆ ಮಾಡಿದ್ದೆ ಎಂದರು. ಇದು ನನ್ನ ಜೀವನದಲ್ಲಿ ಅತ್ಯಂತ ಸುಂದರವಾದ ಗಳಿಗೆ. ಹೀಗಾಗಿ ನಿನ್ನೆ ಇಡೀ ರಾತ್ರಿ ತಮಗೆ ನಿದ್ದೆ ಬಂದಿಲ್ಲ ಎಂದು ಹೇಳಿದರು.

RELATED ARTICLES

Latest News