Homeರಾಜ್ಯ2 ವರ್ಷದೊಳಗೆ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

2 ವರ್ಷದೊಳಗೆ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ : ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

Drug-Free Karnataka within two years: Home Minister Priyank Kharge

ಬೆಂಗಳೂರು, ಜೂ. 30- ಕರ್ನಾಟಕವನ್ನು ಮುಂದಿನ ಎರಡು ವರ್ಷಗೊಳಗಾಗಿ ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿಸಲು ಕಂಕಣ ಬದ್ಧವಾಗಿ ಕೆಲಸ ಮಾಡುವುದಾಗಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಸಾಗಾಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಬಾಽಸುತ್ತಿರುವ ಈ ಪಿಡಗನ್ನು ನಿವಾರಿಸಲು ಸರ್ಕಾರ ಮತ್ತು ಪೊಲೀಸರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸಮುದಾಯದ ಸಹಕಾರವೂ ಅಗತ್ಯ ಇದೆ ಎಂದು ಹೇಳಿದರು.

ಮಾದಕ ವ್ಯಸನ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ನಾಶ ಮಾಡುವುದಿಲ್ಲ, ಸಮಾಜ, ಕುಟುಂಬ ಮತ್ತು ಸ್ನೇಹ ಬಳಗವನ್ನು ಹದಗೆಡಿಸುತ್ತದೆ. ಸದ್ದಿಲ್ಲದೇ ಭವಿಷ್ಯವನ್ನು ನಾಶ ಮಾಡುತ್ತದೆ. ಯುವ ಜನರ ಸಾಮರ್ಥ್ಯ ಮತ್ತು ಆರ್ಥಿಕತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿದರು. ಮಾದಕ ದ್ರವ್ಯ ಪಿಡಗನ್ನು ಬೇರು ಸಮೇತ ಕಿತ್ತೆಸೆಯಲು ಸಮುದಾಯ ಮತ್ತು ಎಲ್ಲರ ಸಹಕಾರ ಹಾಗೂ ಸಹಭಾಗಿತ್ವ ಅಗತ್ಯ ಇದೆ ಎಂದು ಹೇಳಿದರು.

ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾದಕ ವಸ್ತುಗಳ ಬಳಕೆ ಮತ್ತು ಸಾಗಾಟಕ್ಕೆ ಬೇಡ ಎಂದು ಹೇಳುವ ನೋ ಬ್ರೋ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜೊತೆಗೆ ರೈಸ್‌ ಪ್ರಚಾರ ಆಂಧೋಲನವನ್ನು ಉದ್ಘಾಟಿಸಿದ್ದಾರೆ.

ರಾಜ್ಯದ ಯುವ ಜನ ಜಾಗತಿಕ ಸಾಮಾರ್ಥ್ಯಕ್ಕನುಗುಣವಾಗಿ ಬೆಳೆಯಬೇಕಾದರೆ, ಮಾದಕ ವಸ್ತುಗಳನ್ನು ಸಂಪೂರ್ಣ ನಾಶ ಮಾಡಬೇಕು. ಶಾಲಾ-ಕಾಲೇಜುಗಳಲ್ಲಿ ಅಸಹಜ ವರ್ತನೆಗಳು, ಮಾದಕ ದ್ರವ್ಯದ ಜಾಲಗಳು, ಸುಳಿವುಗಳು ಕಂಡು ಬಂದರೆ ಪೊಲೀಸರಿಗೆ, ಶಿಕ್ಷಕರಿಗೆ, ಪೋಷಕರಿಗೆ ಅಥವಾ ನೆರಹೊರೆಯವರಿಗೆ ವಿದ್ಯಾರ್ಥಿಗಳು ತಿಳಿಸಬೇಕು. ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಹೇಳಿದರು.

ಮಾದಕ ವಸ್ತುಗಳ ಬಗ್ಗೆ ಯಾರಾದರೂ ಪ್ರೇರೇಪಿಸಿದರೆ, ಅದಕ್ಕೆ ನೋ ಬ್ರೋ ಎಂದು ಹೇಳಬೇಕು. ಈಗಾಗಲೇ ವ್ಯಸನಿಗಳಾಗಿರುವವರಿಗೆ ಸಹಾನುಭೂತಿ ತೋರಿಸಿ, ಚಟದಿಂದ ಹೊರಬರಲು ಬೆಂಬಲಿಸಬೇಕೆಂದು ಹೇಳಿದರು.ವಿದ್ಯಾರ್ಥಿಗಳು ಪೊಲೀಸ್‌ ಮಾರ್ಷಲ್‌ಗಳಾಗಿ ತೊಡಗಿಸಿಕೊಳ್ಳಲು ಅವಕಾಶವಿದೆ. ಮಾದಕ ದ್ರವ್ಯ ವಿರೋಧಿ ಅಭಿಯಾನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಐಕಾನ್‌ ಆಗಬೇಕು ಎಂದು ಹೇಳಿದರು.

ಗೃಹ ಇಲಾಖೆ, ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಮಾದಕ ದ್ರವ್ಯಗಳ ಜಾಲವನ್ನು 2028ರ ವೇಳೆಗೆ ಸಂಪೂರ್ಣವಾಗಿ ನಾಶ ಪಡಿಸಲು ಕ್ರಮ ಕೈಗೊಂಡಿದೆೆ. ಮಕ್ಕಳು ಮಾದಕ ವಸ್ತುವಿನ ಚಟಕ್ಕೆ ಬಲಿಯಾಗುವ ಮೊದಲು ಅವರನ್ನು ರಕ್ಷಿಸಲಾಗುವುದು ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಪೊಲೀಸರು 800 ಕೋಟಿ ರೂ. ವೌಲ್ಯದ 28,300 ಕೆ.ಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. 31,271 ಜನರನ್ನು ಬಂಽಸಲಾಗಿದ್ದು 9,556 ಜನರಿಗೆ ಶಿಕ್ಷೆ ಯಾಗಿದೆ ಎಂದು ಹೇಳಿದರು.

RELATED ARTICLES

Latest News