Thursday, April 16, 2026
Homeರಾಜ್ಯಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ

ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶ

Freedom fighter, former minister Bhimanna Khandre passes away

ಬೆಂಗಳೂರು, ಜ.17- ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆಯವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.ಕಾಂಗ್ರೆಸ್ಸಿನ ಹಿರಿಯ ನಾಯಕರು ಆಗಿದ್ದ ಭೀಮಣ್ಣ ಖಂಡ್ರೆಯವರ ಅಂತ್ಯಕ್ರಿಯೆ ಬೀದರ್‌ ಜಿಲ್ಲೆಯ ಭಾಲ್ಕಿಯ ಚಿಕ್ಕಲಸಂದ್ರ ರಸ್ತೆಯಲ್ಲಿರುವ ಶಾಂತಿಧಾಮದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು, ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಬೀದರ್‌ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದಿದ್ದಾರೆ.

ಬದುಕು ಕೊಟ್ಟ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನಗಳು ಎಂದಿರುವ ಅವರು, ಅಗಲಿದ ಹಿರಿಯರ ಆತಕ್ಕೆ ಶಾಂತಿ ದೊರೆಯಲಿ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್‌‍ನ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ, ಜನರಿಗಾಗಿ ಹಾಗೂ ಸಮಾಜಕ್ಕಾಗಿ ತಮ ಬದುಕನ್ನೇ ಮೀಸಲಿಟ್ಟಿದ್ದ ಭೀಮಣ್ಣ ಅಗಲಿಕೆಯಿಂದ ಇಂದು ರಾಜ್ಯವು ಒಬ್ಬ ಮಹಾನ್‌ ಸಾರ್ವಜನಿಕ ಸೇವಕನನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದ್ಧಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ ಶೋಕ ಸಂದೇಶದಲ್ಲಿ, ಭೀಮಣ್ಣ ಖಂಡ್ರೆ ಅವರು ಹೋರಾಟಗಾರರಾಗಿ, ಸಮಾಜ ಸಂಘಟಕರಾಗಿ ಮತ್ತು ರಾಜಕಾರಣಿಯಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣದಂತಹ ಪ್ರಮುಖ ಚಳುವಳಿಗಳ ಮುಂಚೂಣಿ ವಹಿಸಿ ಕನ್ನಡ ನಾಡಿನ ಹಿತಕ್ಕೆ ಶ್ರಮಿಸಿದ್ದಾರೆ. ಅಲ್ಲದೇ, ಶಾಸಕ-ಸಚಿವರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷರಾಗಿ ಸಹ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಎಂದು ಸರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ, ಭೀಮಣ್ಣ ಖಂಡ್ರೆ ಅವರು ಹಿರಿಯ ಮಾರ್ಗದರ್ಶಕರಾಗಿದ್ದರು, ಆದರ್ಶದ ಬದುಕು ಮತ್ತು ಹೋರಾಟದ ಬದುಕು ನಡೆಸಿದ್ದಾರೆ. ವಿಶೇಷವಾಗಿ ರೈತರಿಗೆ ದೀನ ದಲಿತರಿಗೆ ಮತ್ತು ಬೀದರಿನ ಅಭಿವೃದ್ಧಿಯಲ್ಲಿ ಅವರು ಮಾಡಿರುವ ಕೆಲಸ ಕಾರ್ಯಗಳು ಸ್ಥಿರಸ್ಥಾಯಿಯಾಗಿವೆ ಎಂದಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದ್ದರು. ಗಟ್ಟಿ ಧ್ಬನಿಯಾಗಿದ್ದರು. ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆ ಉಸಿರು ಇರುವವರೆಗೂ ಹೋರಾಟ ಮಾಡಿದ್ದರು. ಅವರ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಬಡವಾಗಿದೆ. ನಮ್ಮ ತಂದೆಯವರೊಂದಿಗೆ ಬಹಳ ನಿಕಟವಾದ ಸಂಬಂಧ ಇಟ್ಟುಕೊಂಡಿದ್ದ ನಾಯಕರು ಅಗಲಿರುವುದು ವಯಕ್ತಿಕವಾಗಿ ನನಗೆ ತುಂಬ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, 12 ನೇ ಶತಮಾನದ ಶರಣರ ಚಿಂತನೆಗಳನ್ನು ನಾಡಿನಾದ್ಯಂತ ಕ್ರಿಯಾಶೀಲವಾಗಿ ಪ್ರಚುರಪಡಿಸುವಲ್ಲಿ ಭೀಮಣ್ಣ ಖಂಡ್ರೆ ಅವರ ಪಾತ್ರ ದೊಡ್ಡದಾಗಿತ್ತು. ರಾಜಕಾರಣಿಯಾಗಿಯೂ ಸಹ ಅನೇಕ ಹುದ್ದೆಗಳನ್ನು ನಿಭಾಯಿಸಿದ ಅವರು ಸಮಾಜದ ಮೇಲೆ ಅಪಾರವಾದ ಕಾಳಜಿ ಉಳ್ಳವರಾಗಿದ್ದರು ಎಂದಿದ್ದಾರೆ. ಸಚಿವೆ ಲ್ಸ್ಕ್ಷ್ಮಿ ಹೆಬ್ಬಾಳಕರ್‌ ಕೂಡ ಸಂತಾಪ ಸೂಚಿಸಿದ್ದಾರೆ.

ಭೀಮಣ್ಣ ಖಂಡ್ರೆ ನಿಧನಕ್ಕೆ ಗಣ್ಯರ ಸಂತಾಪ
ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆಯವರ ನಿಧನಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ಸಿನ ಹಿರಿಯ ನಾಯಕರು ಆಗಿದ್ದ ಭೀಮಣ್ಣ ಖಂಡ್ರೆಯವರ ಅಂತ್ಯಕ್ರಿಯೆ ಬೀದರ್‌ ಜಿಲ್ಲೆಯ ಭಾಲ್ಕಿಯ ಚಿಕ್ಕಲಸಂದ್ರ ರಸ್ತೆಯಲ್ಲಿರುವ ಶಾಂತಿಧಾಮದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ತಮ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು, ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಮಹಾತ್ಮಗಾಂಧಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಭೀಮಣ್ಣ ಖಂಡ್ರೆಯವರು ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ಬೀದರ್‌ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಂತು, ಆ ಪ್ರಯತ್ನದಲ್ಲಿ ಕೂಡ ಸಫಲರಾದ ಹುಟ್ಟು ಹೋರಾಟಗಾರ. ಭೀಮಣ್ಣ ಖಂಡ್ರೆಯವರ ಬದುಕಿನ ಹೆಜ್ಜೆಗಳು ಈ ಮಣ್ಣಿನಲ್ಲಿ ಚಿರಸ್ಥಾಯಿ ಎಂದಿದ್ದಾರೆ.

ಬದುಕು ಕೊಟ್ಟ ಎಲ್ಲಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕಾಗಿ ದುಡಿದ ಸಾರ್ಥಕ ಜೀವಕ್ಕೆ ಅಂತಿಮ ನಮನಗಳು ಎಂದಿರುವ ಅವರು, ಅಗಲಿದ ಹಿರಿಯರ ಆತಕ್ಕೆ ಶಾಂತಿ ದೊರೆಯಲಿ ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್‌‍ನ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ, ಜನರಿಗಾಗಿ ಹಾಗೂ ಸಮಾಜಕ್ಕಾಗಿ ತಮ ಬದುಕನ್ನೇ ಮೀಸಲಿಟ್ಟಿದ್ದ ಭೀಮಣ್ಣ ಅಗಲಿಕೆಯಿಂದ ಇಂದು ರಾಜ್ಯವು ಒಬ್ಬ ಮಹಾನ್‌ ಸಾರ್ವಜನಿಕ ಸೇವಕನನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದ್ಧಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಮ ಶೋಕ ಸಂದೇಶದಲ್ಲಿ, ಭೀಮಣ್ಣ ಖಂಡ್ರೆ ಅವರು ಹೋರಾಟಗಾರರಾಗಿ, ಸಮಾಜ ಸಂಘಟಕರಾಗಿ ಮತ್ತು ರಾಜಕಾರಣಿಯಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣದಂತಹ ಪ್ರಮುಖ ಚಳುವಳಿಗಳ ಮುಂಚೂಣಿ ವಹಿಸಿ ಕನ್ನಡ ನಾಡಿನ ಹಿತಕ್ಕೆ ಶ್ರಮಿಸಿದ್ದಾರೆ. ಅಲ್ಲದೇ, ಶಾಸಕ-ಸಚಿವರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷರಾಗಿ ಸಹ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಎಂದು ಸರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ, ಭೀಮಣ್ಣ ಖಂಡ್ರೆ ಅವರು ಹಿರಿಯ ಮಾರ್ಗದರ್ಶಕರಾಗಿದ್ದರು, ಆದರ್ಶದ ಬದುಕು ಮತ್ತು ಹೋರಾಟದ ಬದುಕು ನಡೆಸಿದ್ದಾರೆ. ವಿಶೇಷವಾಗಿ ರೈತರಿಗೆ ದೀನ ದಲಿತರಿಗೆ ಮತ್ತು ಬೀದರಿನ ಅಭಿವೃದ್ಧಿಯಲ್ಲಿ ಅವರು ಮಾಡಿರುವ ಕೆಲಸ ಕಾರ್ಯಗಳು ಸ್ಥಿರಸ್ಥಾಯಿಯಾಗಿವೆ ಎಂದಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಕಟ್ಟಿ ಬೆಳೆಸಿದ್ದರು. ಗಟ್ಟಿ ಧ್ಬನಿಯಾಗಿದ್ದರು. ಸಮಾಜಕ್ಕೆ ನ್ಯಾಯ ಒದಗಿಸಲು ಕೊನೆ ಉಸಿರು ಇರುವವರೆಗೂ ಹೋರಾಟ ಮಾಡಿದ್ದರು. ಅವರ ಅಗಲಿಕೆಯಿಂದ ಕರ್ನಾಟಕ ಬಡವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಬಡವಾಗಿದೆ. ನಮ್ಮ ತಂದೆಯವರೊಂದಿಗೆ ಬಹಳ ನಿಕಟವಾದ ಸಂಬಂಧ ಇಟ್ಟುಕೊಂಡಿದ್ದ ನಾಯಕರು ಅಗಲಿರುವುದು ವಯಕ್ತಿಕವಾಗಿ ನನಗೆ ತುಂಬ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, 12 ನೇ ಶತಮಾನದ ಶರಣರ ಚಿಂತನೆಗಳನ್ನು ನಾಡಿನಾದ್ಯಂತ ಕ್ರಿಯಾಶೀಲವಾಗಿ ಪ್ರಚುರಪಡಿಸುವಲ್ಲಿ ಭೀಮಣ್ಣ ಖಂಡ್ರೆ ಅವರ ಪಾತ್ರ ದೊಡ್ಡದಾಗಿತ್ತು. ರಾಜಕಾರಣಿಯಾಗಿಯೂ ಸಹ ಅನೇಕ ಹುದ್ದೆಗಳನ್ನು ನಿಭಾಯಿಸಿದ ಅವರು ಸಮಾಜದ ಮೇಲೆ ಅಪಾರವಾದ ಕಾಳಜಿ ಉಳ್ಳವರಾಗಿದ್ದರು ಎಂದಿದ್ದಾರೆ.
ಸಚಿವೆ ಲಕ್ಷಿ ೕ ಹೆಬ್ಬಾಳಕರ್‌ ಕೂಡ ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News