Sunday, April 19, 2026
Homeರಾಜ್ಯಶತಮಾನಗಳ ಪ್ರಸಿದ್ಧ ಹೋಟೆಲ್‌ಗಳಿಗೂ ತಟ್ಟಿದ ಗ್ಯಾಸ್‌‍ ಸಿಲಿಂಡರ್‌ ಕೊರತೆ ಬಿಸಿ

ಶತಮಾನಗಳ ಪ್ರಸಿದ್ಧ ಹೋಟೆಲ್‌ಗಳಿಗೂ ತಟ್ಟಿದ ಗ್ಯಾಸ್‌‍ ಸಿಲಿಂಡರ್‌ ಕೊರತೆ ಬಿಸಿ

Gas cylinder shortage hits even centuries-old hotels

ಬೆಂಗಳೂರು,ಮಾ.15- ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್‌‍ ಸಿಲಿಂಡರ್‌ ಕೊರತೆಯ ಪರಿಣಾಮ ಇದೀಗ ಶತಮಾನಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಹೋಟೆಲ್‌ಗಳಿಗೂ ಬಿಸಿ ತಟ್ಟಿದೆ. ಲಾಲ್‌ಬಾಗ್‌ ರಸ್ತೆಯಲ್ಲಿರುವ ಪ್ರಸಿದ್ಧ ಮಾವಳ್ಳಿ ಟಿಫಿನ್‌ ರೂಮ್‌(ಎಂಟಿಆರ್‌) ಹೋಟೆಲ್‌ ಗ್ಯಾಸ್‌‍ ಸಿಲಿಂಡರ್‌ ಅಭಾವದಿಂದ ಕಾರ್ಯಾಚರಣೆ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಿಸಿದೆ.

ಸುಮಾರು 100 ವರ್ಷಗಳ ಇತಿಹಾಸವಿರುವ ಈ ಹೋಟೆಲ್‌ ಕನ್ನಡ ಚಿತ್ರರಂಗದ ಹಿರಿಯ ನಟ ಡಾ:ರಾಜಕುಮಾರ್‌ ಅವರಿಗೂ ಅತಿ ನೆಚ್ಚಿನ ದೋಸೆ ಹೋಟೆಲ್‌ ಆಗಿತ್ತು. ಪ್ರತಿದಿನ ಹೋಟೆಲ್‌ ನಡೆಸಲು ಸುಮಾರು 15 ವಾಣಿಜ್ಯ ಗ್ಯಾಸ್‌‍ ಸಿಲಿಂಡರ್‌ಗಳ ಅಗತ್ಯವಿದೆ. ಆದರೆ ಪ್ರಸ್ತುತ ಎಲ್ಲಾ ಸಿಲಿಂಡರ್‌ಗಳು ಖಾಲಿಯಾಗಿದ್ದು, ಇಂದು ಉಳಿದಿರುವ ಸ್ಟಾಕ್‌ನಿಂದ ಸೇವೆ ನೀಡಲಾಗುತ್ತಿದೆ.

ಸೋಮವಾರ ಹೋಟೆಲ್‌ಗೆ ನಿಯಮಿತ ರಜೆ ಇರುವುದರಿಂದ ನಾಳೆ ಕಾರ್ಯಾಚರಣೆ ಇರುವುದಿಲ್ಲ. ನಾಳೆಯೊಳಗೆ ಗ್ಯಾಸ್‌‍ ಪೂರೈಕೆ ಆಗದಿದ್ದರೆ ಮಂಗಳವಾರದಿಂದ ಹೋಟೆಲ್‌ ಸಂಪೂರ್ಣವಾಗಿ ಬಂದ್‌ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೋಟೆಲ್‌ ಮಾಲೀಕರಾದ ರಾಘವೇಂದ್ರ ತಿಳಿಸಿದ್ದಾರೆ.

ಇದೀಗ ಗ್ಯಾಸ್‌‍ ಕೊರತೆಯಿಂದಾಗಿ ಹೋಟೆಲ್‌ನಲ್ಲಿ ಐಟಂಗಳ ಸಂಖ್ಯೆಯನ್ನೂ ಕಡಿಮೆ ಮಾಡಿ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ರಾಜಧಾನಿಯಲ್ಲಿ ಉಂಟಾದ ವಾಣಿಜ್ಯ ಗ್ಯಾಸ್‌‍ ಸಮಸ್ಯೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

RELATED ARTICLES

Latest News