Thursday, April 16, 2026
Homeರಾಜ್ಯಗ್ಯಾಸ್‌‍ ಅಭಾವ : ಆಟೋ ಚಾಲಕರ ಪರದಾಟ

ಗ್ಯಾಸ್‌‍ ಅಭಾವ : ಆಟೋ ಚಾಲಕರ ಪರದಾಟ

Gas shortage: Auto drivers protest

ಬೆಂಗಳೂರು, ಏ.3- ಗ್ಯಾಸ್‌‍ ಅಭಾವದಿಂದ ಲಕ್ಷಾಂತರ ಆಟೋಗಳು ಬೀದಿಗಿಳಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿ ನೇರವಾಗಿ ನಗರ ಜೀವನದ ಮೇಲೆ ಪರಿಣಾಮ ಬೀರಿದ್ದು, ಅದರ ಹೊಡೆತ ಆಟೋ ಸಂಚಾರಕ್ಕೆ ತಟ್ಟಿದೆ.

ನಗರದಲ್ಲಿ ಸುಮಾರು 2 ಲಕ್ಷ ಆಟೋಗಳು ಓಡಾಡುತ್ತಿದ್ದರೆ, ಗ್ಯಾಸ್‌‍ ಕೊರತೆಯಿಂದ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಆಟೋಗಳು ಶೆಡ್‌ ಸೇರಿವೆ. ಗ್ಯಾಸ್‌‍ ಸಿಗದೇ ಅನೇಕ ಆಟೋಗಳು ರಸ್ತೆಗಿಳಿಯದೆ ಮನೆ ಮುಂದೆ ನಿಂತಿವೆ.

ಗ್ಯಾಸ್‌‍ ಕೊರತೆಯಿಂದ ನಗರದ ಹಲವು ಆಟೋ ಗ್ಯಾಸ್‌‍ ಬಂಕ್‌ಗಳಲ್ಲಿ ದಿನಗಟ್ಟಲೆ ಸಾಲಿನಲ್ಲಿ ನಿಂತಿರುವ ಚಾಲಕರು ಆದರೆ ಅನೇಕ ಕಡೆ ನೋ ಸ್ಟಾಕ್‌ ಬೋರ್ಡ್‌ ಮಾತ್ರ ಕಾಣಿಸುತ್ತಿದೆ. ಆಟೋ ಸಂಚಾರ ಅರ್ಧಕ್ಕೆ ಕುಸಿತ:ಗ್ಯಾಸ್‌‍ ಸಮಸ್ಯೆಯಿಂದ ನಗರದಲ್ಲಿ ಆಟೋ ಸಂಚಾರ ಶೇ.50 ರಷ್ಟು ಕಡಿಮೆಯಾಗಿದೆ.

ಇದರಿಂದ ಸಾರ್ವಜನಿಕರು ಬಿಎಂಟಿಸಿ ಬಸ್‌‍ಗಳತ್ತ ಮುಖ ಮಾಡಿದ್ದಾರೆ.ಅಟೋ ಲೋನ್‌ ಕಟ್ಟಿ ಬದುಕು ಸಾಗಿಸೋದು ಕಷ್ಟ. ಮಕ್ಕಳ ಶಾಲಾ ಫೀಸ್‌‍ ಕಟ್ಟಲು ಸಾಧ್ಯವಾಗುತ್ತಿಲ್ಲ. ದಿನಸಿ ಖರ್ಚಿಗೂ ಹಣ ಇಲ್ಲದ ಪರಿಸ್ಥಿತಿ ಬಂದಿರುವುದರಿಂದ ಅನೇಕ ಚಾಲಕರು ಅಟೋ ಬಿಟ್ಟು ಬೇರೆ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.

ಸರ್ಕಾರದ ವಿರುದ್ಧ ಚಾಲಕರ ಅಸಮಾಧಾನ :ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಅಥವಾ ಸರ್ಕಾರದಿಂದ ಸ್ಪಷ್ಟ ಕ್ರಮಗಳಿಲ್ಲವೆಂದು ಚಾಲಕರು ಆರೋಪಿಸುತ್ತಿದ್ದಾರೆ. ದರ ಏರಿಕೆ, ಗ್ಯಾಸ್‌‍ ಕೊರತೆ ಎರಡೂ ಸೇರಿ ಬದುಕು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯ ಜನರಿಗೂ ಆಟೋಗಳ ಕೊರತೆಯಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದೈನಂದಿನ ಜೀವನಕ್ಕೂ ತೊಂದರೆ ಉಂಟಾಗಿದೆ.ಸಮಸ್ಯೆ ಹೀಗೆ ಮುಂದುವರಿದರೆ ಆಟೋ ಚಾಲಕರ ಬದುಕು ಅತಂತ್ರವಾಗುವ ಸಾಧ್ಯತೆ ಇದೆ ಎಂಬ ಆತಂಕ ಹೆಚ್ಚಾಗಿದ್ದು ಬೆಂಗಳೂರಿನ ಆಟೋ ಚಾಲಕರ ಕಣ್ಣೀರಿನ ಕಥೆ ಈ ಮಟ್ಟಕ್ಕೆ ತಲುಪಿದೆ.

RELATED ARTICLES

Latest News