Saturday, April 18, 2026
Homeರಾಜ್ಯಇಂದು ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ

ಇಂದು ಮತ್ತೆ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ

Gold and silver prices rise again today

ಬೆಂಗಳೂರು,ಫೆ.4- ನಿರಂತರ ಇಳಿಕೆಯ ನಂತರ ಇಂದು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಕೆಯಾಗಿದೆ. ಇಂದು 24 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 660 ರೂ., 22 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 605 ರೂ., 18 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 495 ರೂ. ಏರಿಕೆಯಾಗಿದೆ. ಅದೇ ರೀತಿ ಬೆಳ್ಳಿ ಪ್ರತೀ ಕೆಜಿಗೆ 40 ಸಾವಿರ ರೂ. ಹೆಚ್ಚಾಗಿದೆ. ಗ್ರಾಂಗೆ 40 ರೂ. ಹೆಚ್ಚಳ ಕಂಡಿದೆ.
ಇಂದು ಬೆಳ್ಳಿದರ ಕೆಜಿಗೆ 3,20,000 ರೂ. ತಲುಪಿದೆ.

24 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 16,053 ರೂ ಇದ್ದರೆ, 22 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 14,715 ರೂ. ಹಾಗೂ 18 ಕ್ಯಾರೆಟ್‌ ಚಿನ್ನ ಪ್ರತೀ ಗ್ರಾಂಗೆ 12,040 ರೂ. ಗಳಷ್ಟಿದೆ.
ಜ.30 ರಿಂದ ಇಳಿಮುಖವಾಗಿದ್ದ ಚಿನ್ನ, ಬೆಳ್ಳಿ ದರಗಳು ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೆ ಬೇಸರ ಉಂಟಾಗಿದೆ.

ಹೂಡಿಕೆದಾರರು ಸುರಕ್ಷಿತಾ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೆಚ್ಚು ತೊಡಗಿಸುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿತವಾಗುತ್ತಿವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆ ಮೇಲೂ ಪರಿಣಾಮ ಉಂಟಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.ಮುಂದೆಯೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತವಾದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲೇ ಇರುತ್ತವೆ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.

RELATED ARTICLES

Latest News