Saturday, April 18, 2026
Homeರಾಜ್ಯಜಿಬಿಎಯಲ್ಲಿ ಸಿಎಂಗೆ ರೆಡಿಯಾಯ್ತು ಹೈಟೆಕ್‌ ಕಚೇರಿ

ಜಿಬಿಎಯಲ್ಲಿ ಸಿಎಂಗೆ ರೆಡಿಯಾಯ್ತು ಹೈಟೆಕ್‌ ಕಚೇರಿ

Hi-tech office ready for CM in GBA

ಬೆಂಗಳೂರು, ಏ.8- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ದಲ್ಲಿ ಮುಖ್ಯಮಂತ್ರಿಗಳಿಗಾಗಿ ನಿರ್ಮಿಸಲಾದ ಹೈಟೆಕ್‌ ಕಚೇರಿ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ. ಕಳೆದ ಆರು ತಿಂಗಳಿನಿಂದ 98 ಲಕ್ಷ ರೂ. ವೆಚ್ಚದಲ್ಲಿ ಈ ಕಚೇರಿ ನಿರ್ಮಾಣ ಮಾಡಲಾಗಿದೆ.

70 ವರ್ಷಗಳ ಇತಿಹಾಸ ಹೊಂದಿದ್ದ ಮೇಯರ್‌ ಕೊಠಡಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಜಿಬಿಎ ಅಧ್ಯಕ್ಷರ ಕಚೇರಿಯನ್ನಾಗಿ ರೂಪಿಸಲಾಗಿದೆ. ಈ ಕೊಠಡಿ 1948ರಿಂದ 2020ರವರೆಗೆ ಮೇಯರ್‌ ಆಡಳಿತದ ಕೇಂದ್ರವಾಗಿದ್ದು, ಸುಮಾರು 52 ಮೇಯರ್‌ಗಳು ಇಲ್ಲಿ ಕಾರ್ಯನಿರ್ವಹಿಸಿದ್ದರು.

1949ರಿಂದ 1995ರವರೆಗೆ ಬೆಂಗಳೂರು ನಗರಸಭೆ, 1996ರಿಂದ 2007ರವರೆಗೆ ಬೆಂಗಳೂರು ಮಹಾನಗರ ಪಾಲಿಕೆ, ಮತ್ತು 2010ರಿಂದ 2020ರವರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಈ ಕೊಠಡಿಯಿಂದಲೇ ನಡೆಯುತ್ತಿತ್ತು. ಈಗ ಅದೇ ಐತಿಹಾಸಿಕ ಸ್ಥಳವನ್ನು ಸಿಎಂ ಕಚೇರಿಯಾಗಿ ಪರಿವರ್ತಿಸಲಾಗಿದೆ.

ಕಚೇರಿಗೆ ಹೈಟೆಕ್‌ ಸೌಲಭ್ಯ;
ಸಂಪೂರ್ಣ ಸೌಂಡ್‌ ಪ್ರೂಫ್‌ ವ್ಯವಸ್ಥೆ ಮಾಡಲಾಗಿದೆ. ಐದು ನಗರಪಾಲಿಕೆ ಆಯುಕ್ತರೊಂದಿಗೆ ನೇರ ವರ್ಚುವಲ್‌ ಸಭೆ ನಡೆಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ. ರೌಂಡ್‌ ಟೇಬಲ್‌ ಮೀಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ ಹಾಗೂ ಅಧಿಕಾರಿಗಳಿಗಾಗಿ ಆಧುನಿಕ ಕುರ್ಚಿ ಮತ್ತು ಸೀಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

ತಂತ್ರಜ್ಞಾನ ಆಧಾರಿತ ವಾರ್‌ ರೂಮ್‌ ಸಂಪರ್ಕ ವ್ಯವಸ್ಥೆ ರೂಪಿಸಲಾಗಿದ್ದು, ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸಿದಲ್ಲಿ, ವಾರ್‌ ರೂಮ್‌ನಿಂದ ನೇರವಾಗಿ ಪರಿಸ್ಥಿತಿ ವೀಕ್ಷಣೆ ಮಾಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ.

ಒಟ್ಟಾರೆ, ಆಡಳಿತ ಕಾರ್ಯಕ್ಷಮತೆ ಹೆಚ್ಚಿಸಲು ಈ ಕಚೇರಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.ಲೋಕಾರ್ಪಣೆಯ ನಂತರ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಾರ್ಯಚಟುವಟಿಕೆಗಳು ಇನ್ನಷ್ಟು ವೇಗ ಮತ್ತು ಪಾರದರ್ಶಕತೆಯೊಂದಿಗೆ ಸಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

Latest News