Sunday, April 12, 2026
Homeರಾಜ್ಯಆತ್ಮಹತ್ಯೆಗೆ ಶರಣಾದ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಶ್ರೀ ದೇವೇಂದ್ರಪ್ಪ ಸ್ವಾಮಿಜಿ

ಆತ್ಮಹತ್ಯೆಗೆ ಶರಣಾದ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಶ್ರೀ ದೇವೇಂದ್ರಪ್ಪ ಸ್ವಾಮಿಜಿ

Jagadguru Shivananda Mutt's Sri Devendrappa Swamiji committed suicide

ರಾಯಚೂರು,ಮಾ.20 – ಶಿವಾನಂದ ಮಠದ ಪೀಠಾಧಿಪತಿ ಶ್ರೀ ದೇವೇಂದ್ರಪ್ಪ ಸ್ವಾಮಿ (58) ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ.ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಇಜೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗದಗದ ಗಜೇಂದ್ರಗಡದ ಗುಳಗುಳಿ ಗ್ರಾಮದವರಾದ ದೇವೇಂದ್ರಪ್ಪ ಸ್ವಾಮಿ ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಮಠವನ್ನ ಕಟ್ಟಿದ್ದರು. ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲುತ್ತಿದ್ದ ದೇವೇಂದ್ರಪ್ಪ ಜೀವನದಲ್ಲಿ ವೈರಾಗ್ಯ ಮೂಡಿ ಮಠಕಟ್ಟಿಕೊಂಡಿದ್ದರು.

ಶಾಲಾ ಅವಧಿ ಬಳಿಕ ಸಂಜೆ ಮಠದಲ್ಲಿ ಧಾರ್ಮಿಕ ಪ್ರವಚನ ಮಾಡುತ್ತಿದ್ದರು. ಕುಟುಂಬದಿಂದ ದೂರ ಉಳಿದಿದ್ದ ದೇವೇಂದ್ರಪ್ಪ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರ ಭಕ್ತರು, ಗ್ರಾಮಸ್ಥರು ಖಿನ್ನತೆ ಕಾರಣ ಎನ್ನುತ್ತಿದ್ದಾರೆ.

ಮಠದ ಭೋಜನಾ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಕಳೆದ 20 ವರ್ಷದಿಂದ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಭಕ್ತರು ತಿಳಿಸಿದ್ದಾರೆ.ತುರುವಿಹಾಳ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News