Homeರಾಜ್ಯಖದೀಮರ ಸಂತೆಯಾಗಿರುವ ಕೆಪಿಎಸ್‌ಸಿ ಮುಚ್ಚಬೇಕು : ಸಿಎಂ ಡಿ.ಕೆ.ಶಿವಕುಮಾರ್

ಖದೀಮರ ಸಂತೆಯಾಗಿರುವ ಕೆಪಿಎಸ್‌ಸಿ ಮುಚ್ಚಬೇಕು : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು ಸೆ. 22- ಕರ್ನಾಟಕ ಲೋಕಸೇವಾ ಆಯೋಗ ಖದೀಮರ ಸಂತೆಯಾಗಿದೆ. ಅದನ್ನು ಮುಚ್ಚಲು ಕಾನೂನಾತಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೆಪಿಎಸ್ಸಿಯಲ್ಲಿ ಮುಚ್ಚುವುದು ಅಗತ್ಯ ಇದೆ. ಆದರೆ ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಬೇಕು ಎಂದರು.

ಹೈಕೋರ್ಟ್‌ನ ನ್ಯಾಯಾಧೀಶರು ತಪ್ಪು ಮಾಡಿದಾಗ ಕ್ರಮ ತೆಗೆದುಕೊಳ್ಳಲು ಅನುಸರಿಸಬೇಕಾದ ಪದ್ಧತಿಗಳನ್ನೇ, ಕೆಪಿಎಸ್ಸಿ ಸದಸ್ಯರಿಗೂ ಪಾಲಿಸಬೇಕಾಗುತ್ತದೆ. ಎಲ್ಲವೂ ಕಾನೂನಾತಕವಾಗಿ ಪರಿಶೀಲನೆಯಲ್ಲಿವೆ ಎಂದು ಹೇಳಿದರು. ಅಧಿಕಾರಿಗಳನ್ನು ವಿಶ್ವಾಸದ ಮೇಲೆ ಕೆಪಿಎಸ್‌‍ಸಿಗೆ ನೇಮಿಸಲಾಗುತ್ತದೆ. ಅವರೇ ತಪ್ಪು ಮಾಡಿದರೆ ಇನ್ನು ಯಾರನ್ನು ನಂಬುವುದು. ಆಯೋಗದ ಸದಸ್ಯರಂತೂ ಅಂಗಡಿ ತೆರೆದು ಕುಳಿತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 16 ಸದಸ್ಯರನ್ನು ನೇಮಿಸಲಾಗಿತ್ತು, ಆ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಕೂಡ ಚರ್ಚೆಯಾಗಿತ್ತು ಎಂದು ತಿಳಿಸಿದರು.ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚುವುದು ತಮ ಆದ್ಯತೆ. ಅದಕ್ಕಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಈ ಹಿಂದೆ ತಾವು ಇಂಧನ ಸಚಿವರಾಗಿದ್ದಾಗ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದ್ದು. ಅದರಲ್ಲೂ ಕೆಲವರು ಒ ಎಂ ಆರ್‌ ಸೀಟುಗಳನ್ನು ಪೆನ್ಸಿಲ್‌ ನಲ್ಲಿ ಬರೆದು, ಆನಂತರ ತಿದ್ದುವ ಪ್ರಯತ್ನವನ್ನು ಮಾಡಿದ್ದರು. ಅದಕ್ಕೆ ತಾವು ಅವಕಾಶ ನೀಡಲಿಲ್ಲ ಎಂದು ವಿವರಿಸಿದರು.

ಕೆಪಿಎಸ್‌‍ಸಿ ಹಗರಣದ ತನಿಖೆಗಾಗಿ ಹೈಕೋರ್ಟ್‌ ಎಸ್‌‍ಐಟಿ ರಚಿಸಿರುವುದು ಸ್ವಾಗತರ್ಹಾ. ಆದರೆ ತನಿಕಾಧಿಕಾರಿಗಳು ಯಾರು ಇರಬೇಕು ಎಂಬುದನ್ನು ಹೈಕೋರ್ಟ್‌ ನಿರ್ಧರಿಸಿವುದು ಸರಿಯಲ್ಲ ಎಂದರು.ಈಗಾಗಲೇ ಸಿಐಡಿ ಅಧಿಕಾರಿಗಳು ಉತ್ತಮವಾದ ತನಿಖೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ತನಿಖೆ ಆರಂಭಿಸಿದ್ದಾರೆ.

ಹಂತದಲ್ಲಿ ಹೈಕೋರ್ಟ್‌ ನೇರವಾಗಿ ತನಿಖೆಯ ಮೇಲುಸ್ತುವಾರಿಯನ್ನು ನೋಡಬಹುದಿತ್ತು. ತನಿಖೆ ಸರಿ ಇಲ್ಲ ಎಂದರೆ, ಆಗ ಅದರ ಪ್ರಶ್ನೆ ಬೇರೆ ಎಂದರು. ಎಸ್‌‍ಐಟಿ ರಚಿಸಿರುವುದು ತಪ್ಪಲ್ಲ ಆದರೆ ಇಂತಹದೇ ಅಧಿಕಾರಿಗಳಿರಬೇಕು ಎಂದು ನಿರ್ದೇಶಿಸಿರುವುದು ರಾಜ್ಯ ಸರ್ಕಾರದ ಅಧಿಕಾರಿ ವ್ಯಾಪ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ. ದೆಹಲಿಯಿಂದಲೂ ತಮಗೆ ಈ ಬಗ್ಗೆ ಫೋನ್‌ ಗಳು ಬರುತ್ತಿದೆ ನಾನು ಕಾನೂನಾತಕವಾಗಿ ವಿಚಾರವನ್ನು ಪರಿಶೀಲಿಸುತ್ತೇನೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣಕಾಸಿನ ಕೊರತೆ ಇರುವುದರಿಂದ ಹೊಸ ಯೋಜನೆ ಘೋಷಿಸಬಾರದು ಎಂದು ಸಲಹೆ ಮಾಡಿದೆ. ಅವರಿಗೆ ಸಲಹೆ ಮಾಡಲು ಅಧಿಕಾರವಿದೆ. ಆದರೆ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು.

ನಾವು ಅಧಿಕಾರದಲ್ಲಿರುವವರೆಗೂ ಅದನ್ನು ನೋಡಿಕೊಳ್ಳುತ್ತೇವೆ ಎಂದರು ಜನಪರವಾದ ಯೋಜನೆಗಳನ್ನು ಯಾವುದು ಉಳಿಸಿಕೊಳ್ಳಬೇಕು ಯಾವುದನ್ನು ಕಡಿತ ಮಾಡಬೇಕು ಎಂಬುದನ್ನು ನಮಗೆ ಗೊತ್ತಿದೆ. ಕೇಂದ್ರದ ಪ್ರಧಾನಿಯವರು ರೈತರಿಗೆ 5ಸಾವಿರ ಕೊಡುತ್ತೇವೆ ಎಂದಿದ್ದರಲ್ಲ, ಅದಕ್ಕೆ ಭಿಕ್ಷೆ ಬೇಡುವಂತಾಗಿದೆ. ಮೊದಲು ಆ ಹಣವನ್ನು ಬಿಡುಗಡೆ ಮಾಡಲಿ ಎಂದು ಸಲಹೆ ನೀಡಿದರು ಮತ್ತು ರಾಜ್ಯದ ಪ್ರಾಮಾಣಿಕ ತೆರಿಗೆ ಪಾಲನ್ನು ನೀಡಬೇಕು ಎಂದು ಒತ್ತಾಯಿಸಿದರು. ಬರ ಘೋಷಣೆಯಾಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಒತ್ತಾಯಿಸಿರುವುದರಲ್ಲಿ ತಪ್ಪಿಲ್ಲ. ಆದರೆ ತಾಂತ್ರಿಕ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು ಎಂದರು.

RELATED ARTICLES
spot_img

Latest News