Thursday, April 30, 2026
Homeರಾಜ್ಯಜವಳಿ ಪಾರ್ಕ್‌ ಸ್ಥಾಪನೆಗೆ 15 ಎಕರೆ ಜಮೀನಿಗಾಗಿ ಕೇಂದ್ರಕ್ಕೆ ಪತ್ರ : ಸಚಿವ ಶಿವಾನಂದ ಪಾಟೀಲ್‌

ಜವಳಿ ಪಾರ್ಕ್‌ ಸ್ಥಾಪನೆಗೆ 15 ಎಕರೆ ಜಮೀನಿಗಾಗಿ ಕೇಂದ್ರಕ್ಕೆ ಪತ್ರ : ಸಚಿವ ಶಿವಾನಂದ ಪಾಟೀಲ್‌

Minister Shivanand Patil writes to the Center for 15 acres of land for textile park

ಬೆಂಗಳೂರು,ಮಾ.10- ಸಿಂಧನೂರು ತಾಲ್ಲೂಕಿನಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಮಾಡಲು 15 ಎಕರೆ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ವಿಧಾನಪರಿಷತ್‌ಗಿಂದು ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಸನಗೌಡ ಬಾದರ್ಲಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸೆಂಟ್ರಲ್‌ ಸೀಡ್‌್ಸ ಫಾರಂನಲ್ಲಿರುವ 7,500 ಎಕರೆಯಷ್ಟು ಜಮೀನಿನಲ್ಲಿ 15 ಎಕರೆ ನೀಡುವಂತೆ ಪತ್ರ ಬರೆಯಲಾಗಿದೆ. ಜಮೀನು ದೊರೆತರೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಕಲಬುರಗಿಯಲ್ಲಿ ಪಿಎಂ ಮಿತ್ರ ಪಾರ್ಕ್‌ ಅನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಪತ್ರ :
ಸಿಂಧನೂರು ತಾಲ್ಲೂಕಿನಲ್ಲಿ ಜವಳಿ ಪಾರ್ಕ್‌ ಸ್ಥಾಪನೆ ಮಾಡಲು 15 ಎಕರೆ ಜಮೀನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಿವಾನಂದ ಪಾಟೀಲ್‌ ತಿಳಿಸಿದರು. ಬಸನಗೌಡ ಬಾದರ್ಲಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರಿಸಿದರು.

RELATED ARTICLES

Latest News