Thursday, April 16, 2026
Homeರಾಜ್ಯನೆಲಮಂಗಲ ಸುತ್ತಮುತ್ತಲಿನ ಈ ಏರಿಯಾಗಳಲ್ಲಿ ಫೆ.7ರಂದು ವಿದ್ಯುತ್‌ ವ್ಯತ್ಯಯ

ನೆಲಮಂಗಲ ಸುತ್ತಮುತ್ತಲಿನ ಈ ಏರಿಯಾಗಳಲ್ಲಿ ಫೆ.7ರಂದು ವಿದ್ಯುತ್‌ ವ್ಯತ್ಯಯ

Power disruption in these areas around Bangalore on Feb. 7

ಬೆಂಗಳೂರು, ಫೆ.4- ದಾಬಸ್‌‍ಪೇಟೆ, ನೆಲಮಂಗಲ, ತ್ಯಾಮಗೊಂಡ್ಲು, ಟಿ.ಬೇಗೂರು, ಅವ್ವೇರಹಳ್ಳಿ ವಿದ್ಯುತ್‌ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ವಿದ್ಯುತ್‌ ಸರಬರಾಜಾಗುತ್ತಿರುವ ನೆಲಮಂಗಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಕೆಳಕಂಡ ಗ್ರಾಮಗಳಲ್ಲಿ ಫೆ.7 ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್‌ ಅಡಚಣೆ ಬಗ್ಗೆ ಹೆಚ್‌ಟಿ ಮತ್ತು ಎಲ್‌ಟಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ. ವಿದ್ಯುತ್‌ ಅಡಚಣೆ ಉಂಟಾಗುವ ಪ್ರದೇಶಗಳು: ನೆಲಮಂಗಲ ತಾಲ್ಲೂಕಿನ ದಾಬಸ್‌‍ಪೇಟೆ, ಲಕ್ಕೂರು, ದೇವರ ಹೊಸಹಳ್ಳಿ, ಹಳೆ ನಿಜಗಲ್‌, ಹೊನ್ನೇನಹಳ್ಳಿ, ವೀರಸಾಗರ, ಕಮಲಾಪುರ, ವೀರಗೊಂಡನಹಳ್ಳಿ, ಕೆಂಗಲ್‌ ಕೆಂಪೋಹಳ್ಳಿ, ಕುಲುವನಹಳ್ಳಿ, ಕೆರೆಕತ್ತಿಗನೂರು, ಮೇಳೆಕತ್ತಿಗನೂರು, ತ್ಯಾಮಗೊಂಡ್ಲು, ಕಾರೆಹಳ್ಳಿ, ಗೂಳಾಪುರ, ಗುಡ್ಡೆಗೌಡನಚನ್ನೋಹಳ್ಳಿ, ಚಿಕ್ಕನಹಳ್ಳಿ, ಇಸುವನಹಳ್ಳಿ, ಲಕ್ಕೇನಹಳ್ಳಿ, ಬಿದಲೂರು, ಮರಳುಕುಂಟೆ, ದಾಸೇನಹಳ್ಳಿ, ತಾವರೆಕೆರೆ, ಗುಂಡೇನಹಳ್ಳಿ, ತೋಟನಹಳ್ಳಿ, ಲಕ್ಷ್ಮೀಪುರ ಕೈಗಾರಿಕಾ ಪ್ರದೇಶಗಳು, ತ್ಯಾಮಗೊಂಡ್ಲು, ಗೂಳಾಪುರ, ಗುಡ್ಡೇಗೌಡನಚನ್ನೋಹಳ್ಳಿ, ಚಿಕ್ಕನಹಳ್ಳಿ, ಇಸುವನಹಳ್ಳಿ, ಲಕ್ಕೇನಹಳ್ಳಿ, ಬಿದಲೂರು, ಮರಳುಕುಂಟೆ, ದಾಸೇನಹಳ್ಳಿ, ತಾವರೆಕೆರೆ ಸೇರಿದಂತೆ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಅಡಚಣೆ ಉಂಟಾಗಲಿದೆ.

RELATED ARTICLES

Latest News